Asianet Suvarna News Asianet Suvarna News

ಈದ್ ಮೆರವಣಿಗೆ ತಡೆಗೆ ಸವಾಲು: ಬಿ.ಸಿ. ರೋಡ್ ಚಲೋಗೆ ಬಜರಂಗದಳ ಕರೆ!

ಸೋಮವಾರದ ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಮುಸ್ಲಿಂ ಮುಖಂಡನ ಹೆಸರಿನಲ್ಲಿ ಸವಾಲು ಹಾಕಿದ್ದ ಆಡಿಯೊ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಸೋಮವಾರ ಬಿ.ಸಿ.ರೋಡ್ ಚಲೋಗೆ ಬಜರಂಗದಳ ಕರೆ ನೀಡಿದೆ.

Mangaluru bajrangdal and vhp call for BC Raod chalo amid eid milad celebration rav
Author
First Published Sep 16, 2024, 11:50 AM IST | Last Updated Sep 16, 2024, 12:29 PM IST

ಮಂಗಳೂರು (ಸೆ.16): ಸೋಮವಾರದ ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಮುಸ್ಲಿಂ ಮುಖಂಡನ ಹೆಸರಿನಲ್ಲಿ ಸವಾಲು ಹಾಕಿದ್ದ ಆಡಿಯೊ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಸೋಮವಾರ ಬಿ.ಸಿ.ರೋಡ್ ಚಲೋಗೆ ಬಜರಂಗದಳ ಕರೆ ನೀಡಿದೆ.

ಬಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಬಿ.ಸಿ ರೋಡ್ ಚಲೋ ನಡೆಸುವ ಕುರಿತು ಪೋಸ್ಟ್ ಹಾಕಿದ್ದಾರೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ಮುಸ್ಲಿಂ ಮುಖಂಡರ ಹೆಸರಿನ ಆಡಿಯೊ ಸವಾಲು ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅನ್ಯ ಧರ್ಮದವರ ಜತೆ ವ್ಯವಹಾರ ಬೇಡ: ಹಿಂದುಗಳಿಗೆ ನಿತೇಶ್ ರಾಣೆ ಕರೆ

ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ. ನಾವು ಬರುತ್ತಿದ್ದೇವೆ. ನಿಮಗೆ ತಾಕತ್ತು ಇದ್ದರೆ ತಡೆಯಿರಿ, ನೀವು ಹೇಳಿದ ಜಾಗಕ್ಕೆ ಬರುತ್ತೇವೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಾಗಮಂಗಲದಲ್ಲಿ ಗಣೇಶ ಮೆರವಣಿಗೆಯಲ್ಲಿ ಗಲಭೆ ನಡೆದ ಹಿನ್ನೆಲೆಯಲ್ಲಿ ಈದ್ ಮೆರವಣಿಗೆ ಮೇಲೆ ದಾಳಿ ನಡೆದರೆ ಏನಾಗುತ್ತದೆ ಎಂಬರ್ಥದ ಎಚ್ಚರಿಕೆಯನ್ನು ಶರಣ್ ಪಂಪ್‌ವೆಲ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಮುಖಂಡನ ಹೆಸರಲ್ಲಿ ಅಡಿಯೊ ಹರಿಯಬಿಡಲಾಗಿದ್ದು, ತಾಕತ್ತಿದ್ದರೆ ಬಿಸಿ ರೋಡ್- ಕೈಕಂಬದ ಈದ್ ಮೆರವಣಿಗೆ ತಡೆಯುವಂತೆ ಸವಾಲು ಹಾಕಲಾಗಿತ್ತು.

Latest Videos
Follow Us:
Download App:
  • android
  • ios