ವಿಷಕಂಠನ ಸನ್ನಿಧಿಯಲ್ಲಿ ಧಾರ್ಮಿಕ ಅಪಚಾರ; ಸಹಿ ಸಂಗ್ರಹಕ್ಕೆ ಮುಂದಾದ ಭಕ್ತರು!

ನಂಜನಗೂಡು ನಂಜುಂಡೇಶ್ವರ ದೇವಾಲಯದ ಮುಂಭಾಗ ಮಹಿಷಾಸುರನ ರಂಗೋಲಿ ಬಿಡಿಸಿ ಕಾಲಿನಿಂದ ತುಳಿದು ಅಳಿಸಿಹಾಕುವ ಮೂಲಕ ಆಚರಿಸುವ ಅಂಧಾಕಾಸುರ ಸಂಹಾರ ವಿಚಾರವಾಗಿ ನಂಜುಂಡೇಶ್ವರ ಭಕ್ತರು ಹಾಗು ದಲಿತ ಭುಗಿಲೆದ್ದ ಸಂಘರ್ಷ ಸಮಿತಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

Mahisha Dasara celebration issue conflict between Dalit organization and Nanjundeshwar devotees at mysuru rav

ನಂಜನಗೂಡು (ಡಿ.28): ನಂಜನಗೂಡು ನಂಜುಂಡೇಶ್ವರ ದೇವಾಲಯದ ಮುಂಭಾಗ ಮಹಿಷಾಸುರನ ರಂಗೋಲಿ ಬಿಡಿಸಿ ಕಾಲಿನಿಂದ ತುಳಿದು ಅಳಿಸಿಹಾಕುವ ಮೂಲಕ ಆಚರಿಸುವ ಅಂಧಾಕಾಸುರ ಸಂಹಾರ ವಿಚಾರವಾಗಿ ನಂಜುಂಡೇಶ್ವರ ಭಕ್ತರು ಹಾಗು ದಲಿತ ಭುಗಿಲೆದ್ದ ಸಂಘರ್ಷ ಸಮಿತಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದವರನ್ನು ಬಂಧಿಸುವಂತೆ ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಂಜುಂಡೇಶ್ವರ ಭಕ್ತರು. ಪ್ರಕರಣ ಸಂಬಂಧ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ದೇವಾಲಯ ಮುಂಭಾಗ ದೊಡ್ಡ ಬ್ಯಾನರ್ ಅಳವಡಿಸಿ ಸಹಿ ಸಂಗ್ರಹ ಮೂಲಕ ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸುತ್ತಿರುವ ಭಕ್ತರು. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸಹಿ ಹಾಕಿದ್ದಾರೆ. ಆರೋಪಿಗಳನ್ನ ಕೂಡಲೇ ಬಂಧಿಸಬೇಕು.ಇಲ್ಲದಿದ್ದರೆ ಹೋರಾಟವನ್ನ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಭಕ್ತರು.

 

ಮಹಿಷಾಸುರನ ವಿಚಾರವಾಗಿ ಮತ್ತೆ ಭುಗಿಲೆದ್ದ ಸಂಘರ್ಷ; ನಂಜನಗೂಡು ನಂಜುಡೇಶ್ವರ ಭಕ್ತರು ದಲಿತ ಸಂಘಟನೆ ನಡುವೆ ಮಾತಿನ ಚಕಮಕಿ!

 ನಂಜುಂಡೇಶ್ವರನಿಗೆ ಮಾಜಿ ಪ್ರಧಾನಿ ಹೆಚ್‌ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪರಮ ಭಕ್ತರಾಗಿದ್ದಾರೆ. ಹೀಗಾಗಿ ಈ ಪ್ರಕರಣದ ಕುರಿತಂತೆ ಅವರ ಗಮನಕ್ಕೂ ತರುತ್ತೇವೆ. ಆರೋಪಿಗಳ ವಿರುದ್ಧ ಕ್ರಮ ವಹಿಸದಿದ್ದರೆ. ಮುಂದಿನ ಹೋರಾಟ ತೀವ್ರಗೊಳಿಸುತ್ತೇವೆ ಎಂದಿರುವ ಭಕ್ತರು.

ಭಕ್ತರ ವಿರುದ್ಧವೇ ಎಫ್‌ಐಆರ್!

ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಂಜುಂಡೇಶ್ವರ ದೇವಾಲಯದ ಮುಂಭಾಗ ಪ್ರತಿಭಟನೆಗಿಳಿದ ಭಕ್ತರ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಕ್ತರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವ ಪೊಲೀಸರ ನಡೆ ಖಂಡಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆದಿದೆ. ಪೊಲೀಸರ ವಿರುದ್ಧ ಧಿಕ್ಕಾರದ ಘೊಷಣೆ ಕೂಗಿದ ಭಕ್ತರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ಆರೋಪಿಗಳನ್ನು ಬಂಧಿಸುವ ಬದಲಾಗಿ ಪ್ರತಿಭಟನಕಾರರ ಮೇಲೆಯೇ ಎಫ್‌ಐಆರ್ ದಾಖಲಿಸುವ ಮೂಲಕ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಬಿಜೆಪಿ, ಸಂಘಪರಿವಾರದವರಿಗೆ ಯಾಕಿಷ್ಟು ತಲೆಬಿಸಿ: ಮುನೀರ್ ಕಾಟಿಪಳ್ಳ ಕಿಡಿ

ನಂಜುಂಡೇಶ್ವರ ದೇವಾಲಯದ ಮುಂದೆ ಮಹಿಷಾಸುರನ ಚಿತ್ರ ಬಿಡಿಸಿ ಅಳಿಸಿಹಾಕುವ ಮೂಲಕ ಅಂಧಾಕಾಸುರ ಸಂಹಾರ ಮಾಡುವ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಆಚರಣೆಯಾಗಿದೆ. ಆದರೆ ಇಂಥ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುತ್ತಿರುವ ದಲಿತ ಒಕ್ಕೂಟ ಸಮಿತಿ. ನಾವು ಮಹಿಷಾಸುರನ್ನು ಆರಾಧಿಸುತ್ತೇವೆ. ಇಂಥ ಆಚರಣೆಗಳಿಂದ ಮಹಿಷಾ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತೆ ಹೀಗಾಗಿ ಆಚರಣೆಗೆ ಬಿಡುವುದಿಲ್ಲ ಎನ್ನುತ್ತಿರುವ ದಲಿತರ ಸಂಘಟನೆಗಳು. ಆದರೆ ಈ ಆಚರಣೆ ಹಿಂದಿನಿಂದಲೂ ನಡೆದುಕಂಡು ಬಂದಿದ್ದು ಈ ಬಾರಿಯೂ ನಡೆಸಿಯೇ ಸಿದ್ಧ ಎನ್ನುತ್ತಿರುವ ನಂಜುಂಡೇಶ್ವರ ಭಕ್ತರು. ಈ ಪ್ರಕರಣ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ನಿನ್ನೆ ಪೊಲೀಸರು ದಲಿತ ಸಂಘರ್ಷ ಸಮಿತಿಯ ಐವರು ಹಾಗೂ ನಂಜುಂಡೇಶ್ವರನ ಭಕ್ತರ ಆರು ಜನರ ಮೇಲೆ ಎಫ್ಐಆರ್ ದಾಖಲು ಮಾಡಿರುವ ಪೊಲೀಸರು.  

Latest Videos
Follow Us:
Download App:
  • android
  • ios