ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಬಿಜೆಪಿ, ಸಂಘಪರಿವಾರದವರಿಗೆ ಯಾಕಿಷ್ಟು ತಲೆಬಿಸಿ: ಮುನೀರ್ ಕಾಟಿಪಳ್ಳ ಕಿಡಿ
ಮುಸ್ಲಿಂ ಹೆಣ್ಣುಮಕ್ಕಳ ವಿಚಾರವಾಗಿ ಬಿಜೆಪಿ, ಸಂಘಪರಿವಾರದವರು ಯಾಕಿಷ್ಟು ತಲೆಬಿಸಿ ಮಾಡಿಕೊಳ್ಳುತ್ತಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ (ಡಿ.28):: ಮುಸ್ಲಿಂ ಹೆಣ್ಣುಮಕ್ಕಳ ವಿಚಾರವಾಗಿ ಬಿಜೆಪಿ, ಸಂಘಪರಿವಾರದವರು ಯಾಕಿಷ್ಟು ತಲೆಬಿಸಿ ಮಾಡಿಕೊಳ್ಳುತ್ತಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಹೆಣ್ಣುಮಕ್ಕಳ ಕುರಿತಂತೆ ಕಲ್ಲಡ್ಕ ಪ್ರಭಾಕರ್ ಭಟ್ಟರ ವಿವಾದಾತ್ಮಕ ಹೇಳಿಕೆ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಹಿಳೆಯರ ಅವಮಾನ ಮಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಆದ್ರೆ ಗಲಾಟೆ ಆಗುತ್ತದೆ ಅಂತಾ ಜನ ಮಾತನಾಡಿಕೊಳ್ಳುತ್ತಾರೆ. ಇಂತ ಗಲಾಟೆಯನ್ನು ಬಿಜೆಪಿ , ಸಂಘಪರಿವಾರ ಮಾಡುತ್ತದೆ. ಗಲಾಟೆಯನ್ನು ಮಾಡಿ ರಾಜಕೀಯ ಲಾಭ ಪಡೆಯುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳ ಸಮಸ್ಯೆ ಬಗ್ಗೆ ಬಿಜೆಪಿ,ಸಂಘಪರಿವಾರದ ಮುಖಂಡರಿಗೆ ಯಾಕೆ ತಲೆಬಿಸಿ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಬೇಕು - ಸಿಎಂ ಸಿದ್ದರಾಮಯ್ಯ
ಮೋದಿ ತ್ರಿಬಲ್ ತಲಾಖ್ ತಂದ ಉದ್ದೇಶ ಏನು? ಭಟ್ ಹೇಳಿದ ಕಾರಣಕ್ಕಾಗಿಯೇ ಮೋದಿ ಕಾನೂನು ತಂದಿದ್ದಾ? ಕಲ್ಲಡ್ಕ ಭಟ್ ಬಂಧನ ಆದ್ರೆ ಯಾವುದೇ ಸಮಸ್ಯೆ ಆಗಲ್ಲ. ಭಟ್ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಕಲ್ಲಡ್ಕ ಭಟ್ ಕಲ್ಲಡ್ಲದಲ್ಲಿ ಆದ ರಸ್ತೆ ಸಮಸ್ಯೆ ಬಗ್ಗೆ ಎಂದಾದರೂ ಮಾತನಾಡಿದ್ದಾರಾ? ಅಕ್ರಮ ಟೋಲ್ ಬಗ್ಗೆ ಮಾತನಾಡಿದ್ದಾರಾ? ಜಿಲ್ಲೆಯ ಜನರಿಗೆ ಕಂಪೆನಿಗಳಲ್ಲಿ ಕೆಲಸ ಸಿಗದಿದ್ದಾಗ ಪ್ರಭಾಕರ್ ಭಟ್ ಯಾಕೆ ಮಾತನಾಡಿಲ್ಲ? ಪ್ರಭಾಕರ್ ಭಟ್ ರಾಜಕೀಯ ಲಾಭ ಪಡೆಯಲು ಈ ಹೇಳಿಕೆ ನೀಡಿದ್ದಾರೆ. ಪ್ರಭಾಕರ್ ಭಟ್ ಭಾಷಣದಿಂದ ಬೀದಿಯಲ್ಲಿ ರಕ್ತ ಹರಿದಿದೆ. ಸರ್ಕಾರ ಪ್ರಭಾಕರ್ ಭಟ್ ರನ್ನು ಬಂಧನ ಮಾಡಬೇಕು. ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದು ಒತ್ತಾಯಿಸಿದರು.
ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ