ಗುಮ್ಮಟನಗರಿ ವಿಜಯಪುರದ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್‌ ಸೆಂಟರ್‌ಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಮದ್ರಾಸ್‌ ಐ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ವರದಿ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್
ವಿಜಯಪುರ (ಆ.02): ರಾಜ್ಯದಲ್ಲಿ ಕೆಲವಡೆಗೆ ಕಾಣಿಸಿಕೊಂಡ ಡೆಂಜುರಸ್‌ ಮದ್ರಾಸ್‌ ಐ ಸೋಂಕು ಈಗ ಗುಮ್ಮಟನಗರಿ ವಿಜಯಪುರದಲ್ಲು ಹಬ್ಬುತ್ತಿದೆ. ಮದ್ರಾಸ್‌ ಐ ಸಾಂಕ್ರಾಮಿಕವಾಗಿರುವ ಕಾರಣ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಬಹುತೇಕರಲ್ಲಿ ಈ ಐ ಇನ್ಪೆಕ್ಷನ್ ಕಾಣಿಸಿಕೊಳ್ತಿದ್ದು, ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅದ್ರಲ್ಲು ಕೋಚಿಂಗ್‌ ಸೆಂಟರ್‌ಗಳೇ ಜಾಸ್ತಿ ಇರುವ ವಿಜಯಪುರ ನಗರದಲ್ಲಿ ಮದ್ರಾಸ್‌ ಐ ನ ಭಯ ಮತ್ತಷ್ಟು ಭಯ ಮೂಡಿಸಿದೆ.

ಜನರ ಕಣ್ಣಿನ ಮೇಲೆ ಅಟ್ಯಾಕ್‌ ಮಾಡಿ ಕಾಟ ನೀಡುವ ಮದ್ರಾಸ್‌ ಐ ಸೋಂಕು ಈಗ ಜಿಲ್ಲೆಯಲ್ಲು ಕಂಡು ಬಂದಿದೆ. ಈ ನಡುವೆ ಕೋಚಿಂಗ್‌ ಸೆಂಟರ್‌ಗಳೇ ಹೆಚ್ಚಾಗಿರುವ ವಿಜಯಪುರದಲ್ಲಿ ಮದ್ರಾಸ್‌ ಐ ರೋಗದ ಭಯ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೋಚಿಂಗ್‌ ಸೆಂಟರ್‌ಗಳಲ್ಲಿ ಒಟ್ಟಿಟ್ಟಿಗೆ ಕಲಿಯುವ, ಹಾಸ್ಟೆಲ್‌ ಗಳಲ್ಲಿ ಒಟ್ಟೊಟ್ಟಿಗೆ ಇರುವ ವಿದ್ಯಾರ್ಥಿಗಳಲ್ಲಿ ಮದ್ರಾಸ್‌ ಐ ಕಾಣಿಸಿಕೊಂಡಿದೆ. ಮದ್ರಾಸ್‌ ಐ ನ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಭೇಟಿ ನೀಡ್ತಿರೋ ರೋಗಿಗಳ ಪೈಕಿ ಶೇ.೩೦ ರಷ್ಟು ಕೋಚಿಂಗ್‌ ಗಾಗಿ ಬಂದ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಎನ್ನಲಾಗ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದು ಓದಲು ಬೇರೆ ಬೇರೆ ಜಿಲ್ಲೆಗಳಿಂದ ಬಂದು ಒಂದೆಡೆ ಹಾಸ್ಟೆಲ್‌ ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ರಾಸ ಕಂಡು ಬಂದಿದೆ.

ಸ್ಯಾಂಟ್ರೋ ರವಿ ಕಿರುಕುಳ ತಡ್ಕೋಳೋಕಾಗ್ತಿಲ್ಲ, ಅಳಲು ತೋಡಿಕೊಂಡ ಮೈಸೂರು ಮಹಿಳಾ ಜೈಲರ್‌ಗಳು

ಸೋಂಕಿಕು ಕೋಚಿಂಗ್‌ ಸೆಂಟರ್‌ ಗಳಿಗೇನು ಲಿಂಕ್.: ಅಷ್ಟಕ್ಕು ಮದ್ರಾಸ್‌ ಐ ಸೋಂಕಿಗು ಕೋಚಿಂಗ್‌ ಸೆಂಟರ್‌ ಗಳಿಗು ಅದೇನ್‌ ಲಿಂಕ್‌ ಅಂತಾ ನೀವು ಕೇಳಬಹುದು. ಮದ್ರಾಸ್‌ ಐ ರೋಗ ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುತ್ತದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಂತಾ ಕೋಚಿಂಗ್‌ ಸೆಂಟರ್‌ ಗಳಿಗೆ ಬರುವ ವಿದ್ಯಾರ್ಥಿಗಳು ಒಂದೆಡೆ ಕೂತು ಕಲಿಯಬೇಕಾಗುತ್ತೆ. ಜೊತೆಗೆ ಹೊರ ಜಿಲ್ಲೆಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳು ಹಾಸ್ಟೆಲ್‌, ಒಂದೆಡೆ ರೂಂಗಳಲ್ಲಿ ಉಳಿದುಕೊಳ್ಳೊದು ಅಭ್ಯಾಸ ಮಾಡೋದು ಕಾಮನ್.‌ ಇಲ್ಲಿ ವಿದ್ಯಾರ್ಥಿಗಳೆಲ್ಲ ಒಟ್ಟೊಟ್ಟಿಗೆ ಬಟ್ಟೆ, ಟವಲ್‌, ಬುಕ್ಸ್‌, ಹಾಸಿಗೆಗಳನ್ನ ಉಪಯೋಗಿಸುವ ಕಾರಣದಿಂದಾಗಿ ಮದ್ರಾಸ್‌ ಐ ಇನ್ಪೆಕ್ಷನ್‌ ಹರಡುವಿಕೆ ಪ್ರಮಾಣ ಹೆಚ್ಚಾಗ್ತಿದೆ ಎನ್ನಲಾಗಿದೆ.. ನಿತ್ಯ ಆಸ್ಪತ್ರೆಗೆ ಬರುವವ ಮದ್ರಾಸ್ ಐ ರೋಗಿಗಳ ಪೈಕಿ ಹಾಸ್ಟೆಲ್ ಸ್ಟೂಡೆಂಟ್ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಪರಸ್ಪರ ಬಟ್ಟೆ, ಹಾಸಿಗೆ, ಬುಕ್‌ ಬಳಕೆ ಬೇಡ: ಹಾಸ್ಟೆಲ್‌ ಗಳಲ್ಲಿ ವಿದ್ಯಾರ್ಥಿಗಳು ಮಾಮೂಲಾಗಿ ಪರಸ್ಪರ ಬಟ್ಟೆಗಳನ್ನ ಬಳಕೆ ಮಾಡೋದು, ಟವಲ್‌ ಬಳಸಿಕೊಳ್ಳುವುದು, ಬುಕ್‌, ಪೆನ್‌ ಬಳಕೆ ಮಾಡೋದು ಕಾಮನ್‌. ಜೊತೆಗೆ ಒಟ್ಟೊಟ್ಟಿಗೆ ಕೂತು ಸ್ಟಡಿ ಮಾಡ್ತಾರೆ. ಮದ್ರಾಸ್‌ ಐ, ಐ ಕಾಂಟಾಕ್ಟ್‌, ಸ್ಪರ್ಷದಿಂದಲು ಹರಡಬಲ್ಲದ್ದಾಗಿರುವ ಕಾರಣ ವಿದ್ಯಾರ್ಥಿಗಳು ಹಾಸ್ಟೆಲ್‌ ಗಳಲ್ಲಿ ಹಾಸಿಗೆ, ಬಟ್ಟೆ, ಬುಕ್‌ ಬಳಕೆ ಸ್ಪಲ್ಪ ದಿನ ಮಟ್ಟಿಗೆ ಅವೈಡ್‌ ಮಾಡೋದಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಮದ್ರಾಸ್‌ ಐ ಸೋಂಕಿಗೆ ಒಳಗಾದವರು ಐಸೋಲೇಶನ್‌ ಆಗಬೇಕು, ಇತರರಿಂದ ದೂರ ಉಳಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೆ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮದ್ರಾಸ್‌ ಐ ಕಂಡು ಬಂದಲ್ಲಿ ಅಂತ ವಿದ್ಯಾರ್ಥಿಗಳಿಗೆ ವಿಶ್ರಮಿಸಲು ಬಿಡಬೇಕು. ಶಿಕ್ಷಕರು ಸಹ ಮದ್ರಾಸ್‌ ಐ ಸೋಂಕಿಗೆ ಒಳಗಾದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಎಂದಿದ್ದಾರೆ.

13,000 ಕನ್ನಡಿಗರಿಗೆ ಉದ್ಯೋಗ ನೀಡಲಿದೆ ಫಾಕ್ಸ್‌ಕಾನ್‌ ಸಂಸ್ಥೆ: 5,000 ಕೋಟಿ ರೂ. ಹೂಡಿಕೆಗೆ ಒಪ್ಪಂದ

ಸೋಂಕು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನ ಸಂಪರ್ಕಿಸಿ: ಕಣ್ಣು ಕೆಂಪಗಾಗೋದು, ಕಣ್ಣಲ್ಲಿ ಉರಿಉರಿ ಕಾಣಿಸಿಕೊಳ್ಳುವುದು, ಕಣ್ಣಿಗೆ ಬಾವು ಬರೋದು ಮದ್ರಸ್ ಐ‌ನ ಲಕ್ಷಣಗಳು. ಮದ್ರಾಸ್ ಐ ಬಂದಲ್ಲಿ ಕಣ್ಣಿಂದ ತಂತಾನೆ ನೀರು ಸೋರುವುದು, ಇರಿಟೇಶನ್ ಉಂಟಾಗುತ್ತದೆ. ಮದ್ರಾಸ್‌ ಐ ಸೋಂಕು ಕಂಡು ಬಂದಲ್ಲಿ ತಕ್ಷಣವೇ ಅಂತವರು ವೈದ್ಯರನ್ನ ಸಂಪರ್ಕಿಸಬೇಕು. ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕಣ್ಣು ಕೆಂಪಾಯ್ತು, ಒಂದೆರೆಡು ದಿನದಲ್ಲಿ ಕಡಿಮೆಯಾಗುತ್ತೆ ಎಂದು ನಿಲರ್ಕ್ಷವಹಿಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮೊದಲು ಕಣ್ಣಿ ಒಳಭಾಗದ ರೆಪ್ಪೆ, ಬಿಳಿ ಗುಡ್ಡೆ ಭಾಗದಲ್ಲಿ ಕಾಣಿಸಿಕೊಳ್ಳುವ ಇನ್ಪೆಕ್ಷನ್‌ ಬಳಿಕ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತೆ. ಇದರಿಂದ ಕಪ್ಪು ದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರ್ತಿರೋದ್ರಿಂದ ಎಚ್ಚರವಹಿಸಬೇಕು, ಸೂಕ್ತ ಸಮಯದಲ್ಲಿ ವೈದ್ಯರಿಂದ ಉಪಚಾರ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.