ನಮ್ಮದು ಹುಲಿಗಳ ಪಡೆ, ಒಗ್ಗಟ್ಟಾಗಿ ಕೆಲಸ ಮಾಡ್ತೀವಿ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್!
ಹಳೇ ಹುಲಿ ಯಾವಾಗಾದ್ರೂ ರಿಟೈಯರ್ ಆಗಬೇಕು. ಹೊಸ ಹುಲಿ ಯಾವತ್ತಿದ್ರೂ ಜಾರ್ಜ್ ತಗೋಬೇಕು. ಹಳೇ ಹುಲಿ, ಹೊಸ ಹುಲಿಗೆ ದಾರಿ ಮಾಡಿ ಕೊಡಬೇಕು ಎಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾರ್ಮಿಕವಾಗಿ ನುಡಿದರು.
ಬಾಗಲಕೋಟೆ (ಮಾ.30): ಹಳೇ ಹುಲಿ ಯಾವಾಗಾದ್ರೂ ರಿಟೈಯರ್ ಆಗಬೇಕು. ಹೊಸ ಹುಲಿ ಯಾವತ್ತಿದ್ರೂ ಜಾರ್ಜ್ ತಗೋಬೇಕು. ಹಳೇ ಹುಲಿ, ಹೊಸ ಹುಲಿಗೆ ದಾರಿ ಮಾಡಿ ಕೊಡಬೇಕು ಎಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾರ್ಮಿಕವಾಗಿ ನುಡಿದರು.
ಇಂದು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಳೆಯದು ಹೋಗಿ ಹೊಸತು ಬರಬೇಕು. ಇದು ಸೃಷ್ಟಿ ನಿಯಮ. ಅದು ಬಾಗಲಕೋಟೆಯಲ್ಲಿ ಆಗುತ್ತೆ ಅನ್ನೋದು ನನ್ನ ನಂಬಿಕೆ. ಪಕ್ಷದ ಹಿರಿಯರೊಂದಿಗೆ ಸಮಾಲೋಚಿಸಿ ವೀಣಾ ಕಾಶಪ್ಪನವರ ಮನವೊಲಿಸುತ್ತೇವೆ. ಅವರು ನಮ್ಮ ಜೊತೆ ಬಂದೆ ಬರ್ತಾರೆ ಅನ್ನೋ ವಿಶ್ವಾಸವಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಆ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡ್ತಿದ್ದೇವೆ ಎಂದರು.
ಬಾಗಲಕೋಟೆ ವೀಣಾ ಕಾಶಪ್ಪನವರ ಬಂಡಾಯ; ಕಾಂಗ್ರೆಸ್ ವಿರುದ್ಧ ಸ್ಪರ್ಧೆಗೆ 2 ದಿನದಲ್ಲಿ ತೀರ್ಮಾನ
ಹುಲಿ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮದು ಹುಲಿಗಳ ಪಡೆ(ಕಾರ್ಯಕರ್ತರು). ಹೀಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ ಅನ್ನೋ ಭರವಸೆ ಇದೆ. ಕಾಶಪ್ಪನವರ ಕುಟುಂಬಕ್ಕೆ ಮತ್ತು ನಮ್ಮ ಪಕ್ಷಕ್ಕೆ ೫೦ ವರ್ಷಗಳ ಇತಿಹಾಸ ಇದೆ. ಅವರು ನಮ್ಮ ಪಕ್ಷದ ಅನುಯಾಯಿಗಳು. ಎಲ್ಲರ ಜೊತೆ ಕೂಡಿ ಕೆಲಸ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಟಿಕೆಟ್ ಗೊಂದಲ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಒಬ್ಬ ಮಹಿಳಾ ಅಭ್ಯರ್ಥಿ ಆಗಿರೋದ್ರಿಂದ ಎಲ್ಲರೂ ನನ್ನನ್ನ ಬೆಂಬಲಿಸ್ತಾರೆ. ಸಮಾಜವನ್ನು ರಾಮರಾಜ್ಯ ಮಾಡಬೇಕೆಂಬುದೇ ನಮ್ಮ ಆಶಯ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ. ಬಾಗಲಕೋಟೆಯಲ್ಲಿ ರಾಮರಾಜ್ಯ ಆಗಬೇಕೆಂದರೆ ಎಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕಾದ ಅಗತ್ಯವಿದೆ ಎಂದರು.
ನಾನು ಬಂಜಾರ ಸಮುದಾಯಕ್ಕೆ ಬೈದಿಲ್ಲ: ಸಂಸದ ರಮೇಶ್ ಜಿಗಜಿಣಗಿ ಸ್ಪಷ್ಟನೆ