ಬಾಗಲಕೋಟೆ ವೀಣಾ ಕಾಶಪ್ಪನವರ ಬಂಡಾಯ; ಕಾಂಗ್ರೆಸ್ ವಿರುದ್ಧ ಸ್ಪರ್ಧೆಗೆ 2 ದಿನದಲ್ಲಿ ತೀರ್ಮಾನ
ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹೊರಗಿನ ಜಿಲ್ಲೆಯ ಅಭ್ಯರ್ಥಿಯನ್ನು ತಂದು ನಿಲ್ಲಿಸಲಾಗುತ್ತಿದೆ. ಎರಡು ದಿನಗಳಲ್ಲಿ ನಾನು ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ವೀಣಾ ಕಾಶಪ್ಪನವರ ಹೇಳಿದರು.
ಬೆಂಗಳೂರು (ಮಾ.29): ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹೊರಗಿನ ಜಿಲ್ಲೆಯ ಅಭ್ಯರ್ಥಿಯನ್ನು ತಂದು ನಿಲ್ಲಿಸಲಾಗುತ್ತಿದೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದೆ. ಬೇರೆ ಅಭ್ಯರ್ಥಿ ಹಾಕಿದ್ದಕ್ಕೆ ಬೇಸರವಾಗಿದೆ. ಬೇರೆ ಅಭ್ಯರ್ಥಿ ಪರ ನಾನು ಕೆಲಸ ಮಾಡಲ್ಲ. ಎರಡು ದಿನಗಳಲ್ಲಿ ನಾನು ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಸಭೆಯ ಏನು ಭಾರವಸೆ ಕೊಟ್ಟಿಲ್ಲ. ಜೈಪುರನಲ್ಲಿ ಟಿಕೆಟ್ ಬದಲಾವಣೆ ಆಗಿದೆ. ಅದೆ ರೀತಿಯಲ್ಲಿ ಟಿಕೆಟ್ ಬದಲಾವಣೆ ಮಾಡಿ ಎಂದಿದ್ದೇನೆ. ಅದಕ್ಕೆ ಆಗಲ್ಲ ಅಂತ ನಾಯಕರು ಹೇಳಿದ್ದರು. ನನಗೆ ನಿರ್ಧಿಷ್ಟ ಭರವಸೆ ಕೊಟ್ಟಿಲ್ಲ. ನಮ್ಮ ಬೆಂಬಲಿಗರಿಗೆ ನಿರಾಸೆಯಾಗಿದೆ. ನಾನು ವಿಧಾನಸಭೆ ಟಿಕೆಟ್ ಕೂಡ ಕೇಳಿರಲಿಲ್ಲ. ನಾನು ಸಂಸತ್ ಸ್ಥಾನಕ್ಕೆ ನಿಲ್ಲಬೇಕು ಅಂತ ಕೆಲಸ ಮಾಡಿದೆ. ಜಿಲ್ಲಾ ನಾಯಕರು ನನ್ನ ಹೆಸರು ಹೇಳಿಲ್ಲ ಅಂತ ಹೇಳಿದ್ದರು. ಇನ್ನು ನಮ್ಮ ಜಿಲ್ಲೆಗೆ 11 ಜನರು ಅಪ್ಲಿಕೇಶನ್ ಹಾಕಿದ್ದರು. ಆದರೆ, ಶಾರ್ಟ್ ಲಿಸ್ಟ್ ನಲ್ಲಿ ನನ್ನ ಹೆಸರು ತೆಗೆದಿದ್ದಾರೆ. ಹೊರ ಜಿಲ್ಲೆಯವರಿಗೆ ಟಿಕೆಟ್ ಕೊಡುವ ಅವಶ್ಯಕತೆ ಏನಿತ್ತು ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ...
ಜೊತೆಗೆ, ಪಕ್ಷ ನನಗೆ ಮುಂದಿನ ಸ್ಥಾನಮಾನ ನೀಡುವ ಬಗ್ಗೆಯೂ ಯಾವುದೇ ಭರವಸೆ ಕೊಟ್ಟಿಲ್ಲ. ಅಭ್ಯರ್ಥಿ ಗೆಲ್ಲಿಸಿ ಅಂತ ಮಾತ್ರ ಹೇಳಿದ್ದಾರೆ. ಮುಖ್ಯವಾಗಿ ನಮ್ಮ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದೆ. ಬೇರೆ ಅಭ್ಯರ್ಥಿ ಹಾಕಿದ್ದಕ್ಕೆ ಬೇಸರವಾಗಿದೆ. ಬೇರೆ ಅಭ್ಯರ್ಥಿ ಪರ ನಾನು ಕೆಲಸ ಮಾಡಲ್ಲ. ಎರಡು ದಿನಗಳಲ್ಲಿ ನಾನು ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ನಿರ್ಧಾರ ಮಾಡುತ್ತೇನೆ. ಬೆಂಬಲಿಗರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.
ಈಗಾಗಲೇ ದೇಶದಲ್ಲಿ ರಾಜಸ್ಥಾನದ ಒಬ್ಬ ಲೋಕಸಭಾ ಅಭ್ಯರ್ಥಿಗೆ ನೀಡಿದ್ದ ಹೆಸರನ್ನು ಬದಲಿಸಿ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿಯೂ ಈಗ ಘೋಷಣೆ ಮಾಡಿದ ಪಟ್ಟಿಯನ್ನು ಬದಲಾವಣೆ ಮಾಡಿ ಅಂತ ನಾನು ಕೇಳಿದ್ದೆನು. ಆದರೆ, ನಾಯಕರು ಅಭ್ಯರ್ಥಿ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ನನ್ನ ಪರವಾಗಿ ನ್ಯಾಯ ಕೇಳುವುದಕ್ಕೆ ಬೇರೆ ಬೇರೆ ಸಮುದಾಯದ ಮುಖಂಡರೆಲ್ಲ ಬಂದಿದ್ದರು. ಆಶಾ ಮನೊಭಾವನೆಯಿಂದ ನಾವು ಸಿಎಂ ಭೇಟಿಗೆ ಬಂದಿದ್ದೆವು. ಎಲ್ಲರಿಗೂ ನಿರಾಸೆ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ನಡೆಯುತ್ತಿಲ್ಲ: ಡಾ.ಕೆ.ಸುಧಾಕರ್
ರಾಜ್ಯದಲ್ಲಿ 2019ರಲ್ಲಿ ನಾನು ಬೇರೆ ಬೇರೆ ಗಾಳಿ ಇದ್ದಾಗಲೂ ಸ್ಪರ್ಧೆ ಮಾಡಿದ್ದೆನು. ಜೊತೆಗೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗೆ ನಿಲ್ಲಿ ಅಂದಾಗಲೂ ನಾನು ಒಪ್ಪಿರಲಿಲ್ಲ. ಸಂಸತ್ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧರಿಸಿದ್ದೆನು. ಈಗ ಟಿಕೇಟ್ ಕೊಟ್ಟಿಲ್ಲ ಅಂದಾಗ ಶಾಸಕರು ಹೆಸರು ಹೇಳಿಲ್ಲ,ಅದಕ್ಕೆ ಟಿಕೇಟ್ ಕೊಟ್ಟಿಲ್ಲ ಅಂದಿದ್ದಾರೆ. ನಾನೇನು ಅಸಮರ್ಥಳಾ? ಸಂಯುಕ್ತಾ ಪಾಟೀಲ್ ಹೊರ ಜಿಲ್ಲೆಯವರು. ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೇಟ್ ಪಡೆಯೋದು ಅನ್ಯಾಯದ ಸ್ಥಿತಿ ಎಂದು ಕಿಡಿಕಾರಿದರು.