ನನ್ನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ನಿರಾಸೆ ಆಗಿದೆ. ನಿನ್ನೆ ಸಭೆ ಮಾಡಿದ್ದು ಕಾಂಗ್ರೆಸ್ಸಿಗರು, ಕಾಂಗ್ರೆಸ್ ಪಕ್ಷದ ಬಂಜಾರ ಮುಖಂಡರು. ನೂರಕ್ಕೆ ನೂರು ಬಂಜಾರ ಸಮುದಾಯದವರು ನನಗೆ ಬೆಂಬಲ ಕೊಡ್ತಾರೆ ಎಂದು ತಿಳಿಸಿದ ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ್‌ ಜಿಗಜಿಣಗಿ 

ವಿಜಯಪುರ(ಮಾ.29): ನಾನು ಬಂಜಾರ ಸಮುದಾಯಕ್ಕೆ ಬೈದಿಲ್ಲ. ಮತ ಹಾಕಬೇಡಿ ಎಂದಿದ್ದೇನೆ ಎನ್ನುವುದು ಸುಳ್ಳು ಸುದ್ದಿ. ಬಂಜಾರ ಸಮುದಾಯದ ಅನೇಕರು ಕರೆ ಮಾಡಿ ನನಗೆ ಬೆಂಬಲ ನೀಡಿದ್ದಾರೆ. ನನ್ನ ವಿರುದ್ಧ ಟಿಕೆಟ್ ಕೇಳಿದ ಬಾಬುರಾಜೇಂದ್ರ ನಾಯ್ಕ ನಮ್ಮ ಜಿಲ್ಲೆಯವನಲ್ಲ. ನಾಯ್ಕ ಬಾಗಲಕೋಟೆ ಜಿಲ್ಲೆಯವ, ನಮ್ಮ ಜಿಲ್ಲೆಗೂ ಅವನಿಗೆ ಏನೂ ಸಂಬಂಧ ಇಲ್ಲ ಎಂದ ಹಾಲಿ ಬಿಜೆಪಿ ಸಂಸದ ಹಾಗೂ ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ. 

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿ ಅವರು, ಹೊರಗಿನಿಂದ ಬಂದು ಟಿಕೆಟ್‌ ಕೇಳಿದ್ದಾನೆ, ಅವನನ್ನ ಹೊರಗೆ ಹಾಕಿ ಎಂದಿದ್ದೇನೆ. ಇದರ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಅಡಗಿದೆ ಎಂದ ಜಿಗಜಿಣಗಿ ಆರೋಪಿಸಿದ್ದಾರೆ . 

ಪಕ್ಷ ಕರೆದು ಟಿಕೆಟ್ ಕೊಟ್ಟರೆ ನಾನೇಕೆ ಬೇಡ ಅನ್ನಲಿ: ವಿಜಯಪುರ ಸಂಸದ ಜಿಗಜಿಣಗಿ

ನನ್ನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ನಿರಾಸೆ ಆಗಿದೆ. ನಿನ್ನೆ ಸಭೆ ಮಾಡಿದ್ದು ಕಾಂಗ್ರೆಸ್ಸಿಗರು, ಕಾಂಗ್ರೆಸ್ ಪಕ್ಷದ ಬಂಜಾರ ಮುಖಂಡರು. ನೂರಕ್ಕೆ ನೂರು ಬಂಜಾರ ಸಮುದಾಯದವರು ನನಗೆ ಬೆಂಬಲ ಕೊಡ್ತಾರೆ ಎಂದು ತಿಳಿಸಿದ್ದಾರೆ.