* ಭಗವದ್ಗೀತೆ ಪಠ್ಯದಲ್ಲಿ ಅಳವಡಿಸುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸಾಹಿತಿಗಳು* ‘ನಿಮ್ಮೆಲ್ಲರ ಸಾವು ಯಾವಾಗ ಬೇಕಾದರೂ ಬರಬಹುದು’ ಎಂಬ ಬೆದರಿಕೆ* ರಕ್ಷಣೆಗೆ ಎಚ್‌ಡಿಕೆ ಆಗ್ರಹ
ಹೊಸಪೇಟೆ(ಏ.09): ಹಿಂದು ವಿರೋಧಿ ನಿಲುವು ತಳೆದಿದ್ದಾರೆಂದು ಆರೋಪಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(Siddaramaiah), ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹಾಗೂ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ(K Veerabhadrappa) ಅವರಿಗೆ ಜೀವ ಬೆದರಿಕೆ(Life Threatening) ಪತ್ರವೊಂದು ಬಂದಿದೆ. ಅಲ್ಲದೆ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ 61 ಸಾಹಿತಿಗಳನ್ನು ಕೂಡ ಪತ್ರದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದ್ದು ‘ನಿಮ್ಮೆಲ್ಲರ ಸಾವು ಯಾವಾಗ ಬೇಕಾದರೂ ಬರಬಹುದು’ ಎಂದು ಬೆದರಿಕೆ ಹಾಕಲಾಗಿದೆ.
‘ಸಹಿಷ್ಣು ಹಿಂದು’ ಹೆಸರಿನಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರ ಕೊಟ್ಟೂರು ಮನೆಗೆ ಭದ್ರಾವತಿಯಿಂದ ಈ ಪತ್ರ ಬಂದಿದೆ. ಪತ್ರ ಬಂದಿರುವುದನ್ನು ಸ್ವತಃ ಕುಂ.ವೀರಭದ್ರಪ್ಪ ಅವರು ಕೊಟ್ಟೂರಿನಲ್ಲಿ ಖಚಿತಪಡಿಸಿದ್ದು, ಈ ಸಂಬಂಧ ಸೋಮವಾರ ಕೊಟ್ಟೂರಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕುಂ.ವೀರಭದ್ರಪ್ಪ ಅವರು ಇತ್ತೀಚೆಗೆ ‘ನಾನು ಹಿಂದೂ ಅಲ್ಲ ಲಿಂಗಾಯತ ಮಾತ್ರ’ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಈ 2 ಪುಟಗಳ ಪತ್ರ ಬಂದಿದೆ ಎಂದು ಹೇಳಲಾಗುತ್ತಿದೆ.
ಹಿಜಾಬ್, ಹಲಾಲ್ ಆಯ್ತು ಇದೀಗ ಮುಸ್ಲಿಂ ಚಾಲಕರ ನಿಷೇಧಕ್ಕೆ ಕೂಗು
ಪತ್ರದ ಸಾರಾಂಶ:
‘ಉಡುಪಿಯ ಗಂಗೊಳ್ಳಿಯಲ್ಲಿ ಅಮಾಯಕ ಹಿಂದು(Hindu) ಮೀನು ಮಾರಾಟಗಾರರಿಂದ ಮುಸ್ಲಿಮರು ಮೀನು ಖರೀದಿಸದೆ ಅವರನ್ನು ವ್ಯಾಪಾರದಿಂದ ಬಹಿಷ್ಕರಿಸಿದಾಗ ಬಾಯಿ ಬಿಡದೆ ಇದ್ದ ನೀವುಗಳು, ಶಿವಮೊಗ್ಗದಲ್ಲಿ(Shivamogga) ಹರ್ಷನನ್ನು ಕೊಲೆ ಮಾಡಿದಾಗ ಉಸಿರು ಬಿಡದ ಹಾಗೆ ಇದ್ದ ಊಸರುವಳ್ಳಿಗಳು, ಈಗ ಮುಸ್ಲಿಮರ ಪರವಾಗಿ, ಹಿಜಾಬ್ ಪರವಾಗಿ ಮತ್ತು ಭಗವದ್ಗೀತೆ ವಿರುದ್ಧವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೀರಾ? ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ನೀವು ಈಗಾಗಲೇ ರಾಜಕೀಯವಾಗಿ ಸರ್ವನಾಶವಾಗಿ ಹೋಗಿದ್ದೀರಾ. ಎಡಬಿಡಂಗಿ ಬುದ್ಧಿಜೀವಿಗಳೇ ಸಾಹಿತ್ಯ ಕ್ಷೇತ್ರದಲ್ಲೂ ಸರ್ವನಾಶವಾಗಿ ಹೋಗಿದ್ದೀರಾ. ನಿಮ್ಮ ಜೊತೆ ಯಾರೇ ಇದ್ದರೂ ಹಿಂದುಗಳನ್ನು, ಹಿಂದು ಸಂಪ್ರದಾಯ, ಹಿಂದು ಸಂಸ್ಕೃತಿ, ಹಿಂದು ಧಾರ್ಮಿಕತೆಯನ್ನು ನಾಶ ಮಾಡಲು ಆಗುವುದಿಲ್ಲ. ಬದಲಿಗೆ ನಿಮ್ಮೆಲ್ಲರ ಸರ್ವನಾಶವಾಗುತ್ತದೆ. ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವು ರೂಪದಲ್ಲಿ ಬೇಕಾದರೂ ಬರಬಹುದು’ ಎಂದು ಬರೆಯಲಾಗಿದೆ.
61 ಮಂದಿಗೆ ಜೀವಬೆದರಿಕೆ: ರಕ್ಷಣೆಗೆ ಎಚ್‌ಡಿಕೆ ಆಗ್ರಹ
ಬೆಂಗಳೂರು: ಸಾಹಿತಿ ಕುಂ.ವೀರಭದ್ರಪ್ಪ, ನಾನು ಸೇರಿದಂತೆ 61 ಮಂದಿಗೆ ಸಹಿಷ್ಣು ಹಿಂದೂ ಎಂಬ ಹೆಸರಲ್ಲಿ ಹಾಕಲಾಗಿರುವ ಜೀವಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
‘ಬೆದರಿಕೆ ಪತ್ರಗಳನ್ನು ಲಘುವಾಗಿ ಪರಿಗಣಿಸಬಾರದು. ಜೀವ ಬೆದರಿಕೆ ಹಾಕಿರುವ ಎಲ್ಲರಿಗೂ ತಕ್ಷಣ ಸರ್ಕಾರ(Government of Karnataka) ರಕ್ಷಣೆ ನೀಡಬೇಕು. ನನಗೆ ಈ ವಿಚಾರದಲ್ಲಿ ಭಯ ಇಲ್ಲ. ದೇವರನ್ನು(God) ನಾನು ನಂಬಿರುವೆ. ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
Dandeli: ಹಿಜಾಬ್ ವಿವಾದದಿಂದ ಎಚ್ಚೆತ್ತ ಹಿಂದೂಗಳು: ಚಕ್ರವರ್ತಿ ಸೂಲಿಬೆಲೆ
ಭಯಗೊಂಡು ಸತ್ಯವನ್ನು ಮರೆಮಾಚಲಾರೆ. ಹಣೆಯಲ್ಲಿ ಬರೆದಿರುವುದನ್ನು ತಿದ್ದಲು ಇವರಿಂದ ಆಗುವುದಿಲ್ಲ. ನೇರವಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಎಂ.ಎಂ.ಕಲಬುರಗಿ(MM Kalburgi) ಸೇರಿ ಕೆಲವರನ್ನು ಹತ್ಯೆ ಮಾಡಿದ ಉದಾಹರಣೆ ನಮ್ಮ ಮುಂದೆ ರಾಜ್ಯದಲ್ಲಿ(Karnataka) ಮತ್ತೆ ಅಂತಹ ಘಟನೆಗಳು ಮರುಕಳಿಸಬಾರದು’ ಎಂದು ಹೇಳಿದರು.
ಹಿಜಾಬ್‌ಗೆ ಅವಕಾಶ ಕೊಡಿ, ಪಠ್ಯದಲ್ಲಿ ಭಗವದ್ಗೀತೆ ಬೇಡ, ಸಿಎಂಗೆ ಸಾಹಿತಿ,ಬುದ್ಧಿಜೀವಿಗಳಿಂದ ಪತ್ರ!
ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು, ವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆಯನ್ನು ವಾಪಸ್ ಪಡೆಯಬೇಕು, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧಕ್ಕೆ ಅವಕಾಶ ನೀಡಬಾರದು, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪ ಕೈಬಿಡಬೇಕು, ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಡಿನ ಪ್ರಮುಖ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಡಾ.ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬೊಳುವಾರ ಮಹಮದ್ ಕುಂಞ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಸುಮಾರು 61 ಸಾಹಿತಿಗಳು ಸಹಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿಯವರಿಗೆ ರವಾನಿಸಲಾಗಿದ್ದು, ಹಿಜಾಬ್‌ಗೆ ಅವಕಾಶ ನೀಡದಿರುವುದರಿಂದ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಎರಡು ವರ್ಷದಿಂದ ಶಾಲೆಗಳೇ ನಡೆದಿಲ್ಲ. ಬೆಳೆಯುವ ಮಕ್ಕಳು ಹಳೆಯ ಸಮವಸ್ತ್ರಗಳನ್ನು ತೊಡಲು ಆಗುವುದಿಲ್ಲ. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿನ ದಿನ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಲಾಗಿದೆ.
