Dandeli: ಹಿಜಾಬ್‌ ವಿವಾದದಿಂದ ಎಚ್ಚೆತ್ತ ಹಿಂದೂಗಳು: ಚಕ್ರವರ್ತಿ ಸೂಲಿಬೆಲೆ

*   ಹಿಜಾಬ್‌ ವಿಷಯವಾಗಿ ನ್ಯಾಯಾಲಯದಿಂದ ಆದೇಶ ಹೊರಬಿದ್ದ ಬಳಿಕವೂ ಹಟ ಮಾಡುವುದು ಸರಿಯಲ್ಲ
*  ಕೆಲವು ರಾಜಕೀಯ ಪಕ್ಷದವರು ಸಮುದಾಯದ ಒಲೈಕೆಗಾಗಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ
*  ಇತಿಹಾಸ ತೆರೆದು ನೋಡಿದಾಗ ಭಾರತದಲ್ಲಿ ಮತಾಂತರ ಮುಸ್ಲಿಮರೇ ತುಂಬಿದ್ದಾರೆ

Hindus awakened by hijab controversy Says Chakravarty Sulibele grg

ದಾಂಡೇಲಿ(ಏ.09):  ರಾಷ್ಟ್ರೀಯತೆಗಾಗಿ ನಾವು ಒಂದಾಗಲೇಬೇಕಾದ ಅನಿವಾರ್ಯತೆ ಇದೆ. ಏಳಿ ಎದ್ದೇಳಿ ಹಿಂದೂಗಳೇ(Hindu) ಎಂದು ಬೊಬ್ಬೆ ಇಟ್ಟರೂ ತಲೆ ಕೆಡಿಸಿಕೊಳ್ಳದ ನಾವು, ಹಿಜಾಬ್‌(Hijab) ವಿಷಯದಿಂದಾಗಿ ಎಚ್ಚೆತ್ತುಕೊಳ್ಳಬೇಕಾಯಿತು ಎಂದು ಚಕ್ರವರ್ತಿ ಸೂಲಿಬೆಲೆ(Chakravarty Sulibele) ಹೇಳಿದರು. ದಾಂಡೇಲಿ(Dandeli) ಸುಭಾಸ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಯುಗಾದಿ ಪ್ರಯುಕ್ತ ಗುರುವಾರ ಹಿಂದೂ ಸಮಾಜೋತ್ಸವ ಸಮಿತಿ ಹಮ್ಮಿಕೊಂಡಿದ್ದ ಬೃಹತ್‌ ಹಿಂದೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹಿಜಾಬ್‌ ವಿಷಯವಾಗಿ ನ್ಯಾಯಾಲಯದಿಂದ(Court) ಆದೇಶ ಹೊರಬಿದ್ದ ಬಳಿಕವೂ ಹಟ ಮಾಡುವುದು ಸರಿಯಲ್ಲ. ಕೆಲವು ರಾಜಕೀಯ ಪಕ್ಷದವರು ಸಮುದಾಯದ ಒಲೈಕೆಗಾಗಿ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ವಿಚಾರಗಳ ವಿರುದ್ಧ ಜಾತಿಯೆನ್ನದೇ ಎಲ್ಲರೂ ಹಿಂದೂಗಳೆಂದು ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದರು.

Halal Row: ಹಲಾಲ್ ಮಾಂಸ ಬಹಿಷ್ಕರಿಸಿದ್ರೆ ತಪ್ಪೇನಿದೆ..? ಚಕ್ರವರ್ತಿ ಸೂಲಿಬೆಲೆ

ಮುಸ್ಲಿಮರು(Muslim) ಜತೆಗೆ ಬಂದರೆ ಸೌಹಾರ್ದ ಭಾರತ(India) ಕಟ್ಟಲು ಸಿದ್ಧ. ಬಾರದೇ ಇದ್ದರೆ ನವಭಾರತ ಕಟ್ಟುವ ತಾಕತ್ತು ನಮಗೆ ಸಿದ್ಧಿಸಿದೆ. ಹಿಜಾಬ್‌, ಹಲಾಲ್‌(Halal) ಮುಂತಾದ ವಿಷಯಗಳಿಂದ ಹಿಂದೂ ಧರ್ಮದವರಲ್ಲಿ ಒಡಕು ಉಂಟು ಮಾಡುವ ಪ್ರತ್ಯೇಕತೆಯ ಶಕ್ತಿಗಳಿಗೆ ನಾವು ಶೆಡ್ಡು ಹೊಡೆಯುವ ಹಾಗೆ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಇತಿಹಾಸ ತೆರೆದು ನೋಡಿದಾಗ ಭಾರತದಲ್ಲಿ ಮತಾಂತರ ಮುಸ್ಲಿಮರೇ ತುಂಬಿದ್ದಾರೆ. ಸಮೃದ್ಧ ಸಂಸ್ಕೃತಿಯ ಮೇಲೆ ನಿರಂತರವಾಗಿ 700 ವರ್ಷಕ್ಕೂ ಅಧಿಕ ಕಾಲ ದಾಳಿಯಾದರೂ ಗಟ್ಟಿಯಾಗಿ ನಿಂತದ್ದು ಹಿಂದೂ ಧರ್ಮ ಎಂದು ತಿಳಿಸಿದರು. ಸುರಿಯುವ ಮಳೆಯಲ್ಲೇ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದರು.

ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಪ್ರಭು, ವೀರಸಂಗಯ್ಯ ಕುಲಕರ್ಣಿ, ವಿಠ್ಠಲ ಬೈಲೂರಕರ, ಚಂದ್ರು ಮಾಳಿ, ರಾಜೇಶ ತಿವಾರಿ, ವೆಂಕಟೇಶ ಪಾಂಡೆ, ರಾಜಶೇಖರ ಪಾಟೀಲ, ಸುರೇಶ ಕಾಮತ, ಅರ್ಜುನ ನಾಯಕ, ಎಸ್‌.ಎಂ. ಪಾಟೀಲ, ಗಣೇಶ ರಾಣೆ, ಪ್ರಮೋದ ಕುಡ್ತರಕರ, ಗೋವರ್ಧಸಿಂಗ್‌ ರಾಥೋಡ ಮುಂತಾದವರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಬಜರಂಗದಳದ ಚಂದ್ರು ಮಾಲಿ ಸ್ವಾಗತಿಸಿದರು. ಶಿಕ್ಷಕ ಗಣೇಶ ಹೆಗಡೆ ನಿರೂಪಿಸಿದರು.

ನಮ್ಮಲ್ಲಿರುವ ತಾಲಿಬಾನ್‌ ಬೆಂಬಲಿಗರೇ ಭಾರತದ ಪಾಲಿಗೆ ಸಮಸ್ಯೆ: ಸೂಲಿಬೆಲೆ

ಶಿವಮೊಗ್ಗ: ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಯಿಂದ ಭಾರತಕ್ಕೆ ಆಗುವ ಸಮಸ್ಯೆಗಿಂತ ಭಾರತದಲ್ಲಿನ ಆಫ್ಘನ್‌ ತಾಲಿಬಾನಿಗಳನ್ನು ಬೆಂಬಲಿಸುವ ವ್ಯಕ್ತಿಗಳ ಸಮಸ್ಯೆಯೇ ದೊಡ್ಡದು ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದರು. 

ಕಳೆದ ವರ್ಷದ ಆ.19 ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಆರ್‌ಎಸ್‌ಎಸ್‌(RSS) ಅನ್ನು ತಾಲಿಬಾನಿಗಳು(Taliban) ಎಂದು ವ್ಯಂಗ್ಯವಾಡುವ ಕಾಂಗ್ರೆಸಿಗರು ಈಗ ಅಫ್ಘಾನಿಸ್ತಾನದ ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥ ಬೆಂಬಲ ಭವಿಷ್ಯದಲ್ಲಿ ಭಾರತಕ್ಕೆ ಗಂಡಾಂತರ ತರಬಲ್ಲದು ಎಂದು ವಿಶ್ಲೇಷಿಸಿದ್ದರು. 

Shivamogga: ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು: ಸೂಲಿಬೆಲೆ

ಆರ್ಟಿಕಲ್‌ 370 ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ತೆಗೆದಿರುವ ಕಾರಣದಿಂದ ಭಾರತಕ್ಕೆ ದೊಡ್ಡ ಅಪಾಯ ಆಗುವುದಿಲ್ಲ. ಈಗಾಗಲೇ ಭಾರತೀಯ ಸೇನೆ ಅಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಿದೆ. ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆ ಬಳಿಕ ಭಾರತ ಅಲ್ಲಿನ ದೇಶ ತ್ಯಜಿಸುವ ಅಷ್ಘಾನಿಸ್ತಾನಿಗಳಿಗೆ ಆಶ್ರಯ ಕಲ್ಪಿಸಲು ಮುಂದಾಗಿರುವುದು ಒಳ್ಳೆಯದೇ. ಆದರೆ ಈ ಬಗ್ಗೆ ಎಚ್ಚರ ಇರಬೇಕೆಂದರು

ಅಮೆರಿಕ ಅಧ್ಯಕ್ಷ ಜೋಬೈಡನ್‌ ಅವರು ಅಫ್ಘಾನಿಸ್ತಾನದಿಂದ ಸೇನೆ ವಾಪಸು ಪಡೆಯುವ ನಿರ್ಧಾರ ಕೈಗೊಂಡಿದ್ದರಿಂದ ಈ ಪರಿಸ್ಥಿತಿ ಉದ್ಭವವಾಗಿದೆ. ಈ ಕಾರಣಕ್ಕಾಗಿ ಅಮೆರಿಕ ವಿಶ್ವಮಟ್ಟದಲ್ಲಿ ದೊಡ್ಡಣ್ಣನ ಸ್ಥಾನ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಈ ಮಧ್ಯೆ, ತಾಲಿಬಾನ್‌ ಭಾರತದ ಜತೆಗೆ ಕೆಟ್ಟದಾಗಿ ವರ್ತಿಸಲು ಸಾಧ್ಯವಾಗಲಾರದು ಎಂದು ಇದೇ ವೇಳೆ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದರು. 
 

Latest Videos
Follow Us:
Download App:
  • android
  • ios