Asianet Suvarna News Asianet Suvarna News

ಹಿಜಾಬ್‌, ಹಲಾಲ್‌ ಆಯ್ತು ಇದೀಗ ಮುಸ್ಲಿಂ ಚಾಲಕರ ನಿಷೇಧಕ್ಕೆ ಕೂಗು

*  ಧಾರ್ಮಿಕ ಪ್ರವಾಸಗಳಿಗೆ ಮುಸ್ಲಿಂ ವಾಹನ ಚಾಲಕ ಬೇಡ
*  ಗೋಮಾಂಸ ಸೇವಿಸಿರುವರಿಂದ ಧಾರ್ಮಿಕ ಕ್ಷೇತ್ರ ಅಪವಿತ್ರ
*  ಭಾರತ ರಕ್ಷಣಾ ವೇದಿಕೆ ಕರೆ
 

Muslim Drivers Boycott Starts After Hijab Halal in in Karnataka grg
Author
Bengaluru, First Published Apr 9, 2022, 5:55 AM IST

ಬೆಂಗಳೂರು(ಏ.09):  ಮುಸ್ಲಿಂ(Muslim) ಸಮುದಾಯ ಆರ್ಥಿಕವಾಗಿ ನಷ್ಟಉಂಟು ಮಾಡಲು ನಿತ್ಯ ಹೊಸದೊಂದು ಅಭಿಯಾನ ಹುಡುಕುತ್ತಿರುವ ಹಿಂದೂ ಪರ ಸಂಘಟನೆಗಳು ಈಗ ಹಿಂದೂ ಧಾರ್ಮಿಕ ಪ್ರವಾಸಗಳಿಗೆ ಮುಸ್ಲಿಂ ಚಾಲಕರ(Muslim Drivers) ಬಾಯ್ಕಾಟ್‌ ಅಭಿಯಾನ ಆರಂಭಿಸಿವೆ.

ಭಾರತ ರಕ್ಷಣಾ ವೇದಿಕೆಯು(Bhatrat Rakshana Vedike) ಈ ಹೊಸ ಅಭಿಯಾನಕ್ಕೆ(Boycott Campaign) ಕರೆಕೊಟ್ಟಿದ್ದು, ಹಿಂದೂ(Hindu) ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವಾಗ ಭಕ್ತಾದಿಗಳು ಯಾವುದೇ ಕಾರಣಕ್ಕೂ ಮುಸ್ಲಿಂ ಚಾಲಕರನ್ನು ಕರೆದುಕೊಂಡು ಹೋಗಬಾರದು ಎಂದು ಮನವಿ ಮಾಡಿದೆ. ಈ ಕುರಿತು ಹಿಂದೂ ಧಾರ್ಮಿಕ ಕ್ಷೇತಗಳ ಆಡಳಿತ ಮಂಡಳಿ, ಇತರೆ ಹಿಂದೂ ಪರ ಸಂಘಟನೆಗಳ ನೆರವು ಕೋರಿದೆ.
ಈ ಕುರಿತು ಮಾತನಾಡಿದ ಭಾರತ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಬಂಗೇರಾ, ‘ಮುಸ್ಲಿಂ ಸಮುದಾಯದವರು ಗೋ ಮಾಂಸ(Beef) ಸೇವನೆ ಮಾಡಿರುತ್ತಾರೆ. ಹಿಂದೂ ದೇವರನ್ನು(HIndu God) ನಂಬುವುದಿಲ್ಲ. ಮೂರ್ತಿ ಪೂಜೆ ಮಾಡುವುದಿಲ್ಲ. ಅಂತಹವರನ್ನು ವಾಹನ ಚಾಲಕರಾಗಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಬಾರದು. ಇದರಿಂದ ನಮ್ಮ ಶಕ್ತಿ ದೇವರು ಅಪವಿತ್ರವಾಗುತ್ತವೆ. ಜತೆಗೆ ಧಾರ್ಮಿಕ ನಂಬಿಕೆ ಪಾಲನೆ ಎಂದು ಹಿಜಾಬ್‌ ವಿಚಾರದಲ್ಲಿಯೂ ಈ ನೆಲದ ಕಾನೂನು ಪಾಲಿಸುತ್ತಿಲ್ಲ. ಅಂತಹ ಧರ್ಮ ಪಾಲಕರಿಗೆ ಹಿಂದೂ ಪುಣ್ಯಕ್ಷೇತ್ರಕ್ಕೆ ಪ್ರವೇಶ ನೀಡುವುದೇಕೆ’ ಎಂದು ಪ್ರಶ್ನಿಸಿದರು.

Dandeli: ಹಿಜಾಬ್‌ ವಿವಾದದಿಂದ ಎಚ್ಚೆತ್ತ ಹಿಂದೂಗಳು: ಚಕ್ರವರ್ತಿ ಸೂಲಿಬೆಲೆ

ಮುಸ್ಲಿಮರು ತಮ್ಮ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಸಂದರ್ಭದಲ್ಲಿ ಹಿಂದೂ ವಾಹನ ಚಾಲಕರನ್ನು ಬಳಸುವುದಿಲ್ಲ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಸಾಕಷ್ಟುಮಂದಿ ಹಿಂದೂ ವಾಹನ ಚಾಲಕರು ನಷ್ಟದಲ್ಲಿದ್ದಾರೆ. ಅವರಿಗೆ ಹೆಚ್ಚಿನ ಬಾಡಿಗೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಶ್ರೀರಾಮ ಸೇನೆ ಬೆಂಬಲ ನೀಡಿದೆ. ಮಠಗಳ ಸ್ವಾಮೀಜಿಗಳು, ಧಾರ್ಮಿಕ ಕ್ಷೇತ್ರದ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗುವುದು. ಅಭಿಯಾನ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮುಸ್ಲಿಂ ವಾಹನ ಚಾಲಕರನ್ನು ಹಿಂದೂ ಧಾರ್ಮಿಕ ಕ್ಷೇತ್ರದಿಂದ ಸಂಪೂರ್ಣ ನಿಷೇಧಿಸಲಾಗುವುದು ಎಂದರು.

ಶೀಘ್ರದಲ್ಲೇ ವಕ್ಫ್ ಬೋರ್ಡ್‌ ಬ್ಯಾನ್‌ಗೆ ಅಭಿಯಾನ: ಮುತಾಲಿಕ್‌

ಬೆಳಗಾವಿ: ಹಿಜಾಬ್‌(Hijab), ಹಲಾಲ್‌(Halal), ಆರ್ಥಿಕ ನಿರ್ಬಂಧದ ಬಳಿಕ ಹಿಂದೂಪರ ಸಂಘಟನೆಗಳು ಇದೀಗ ವಕ್ಫ್ಬೋರ್ಡ್‌ ಮತ್ತು ವಕ್ಫ್ ಬೋರ್ಡ್‌ ಕಾನೂನಿನ ವಿರುದ್ಧ ಅಭಿಯಾನಕ್ಕೆ ಮುಂದಾಗಿದೆ. 

'ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು'

ಈ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌(Pramod Mutalik) ಮುತಾಲಿಕ್‌, 1991ರಲ್ಲಿ ಕಾಂಗ್ರೆಸ್‌ ಪ್ರಾರಂಭ ಮಾಡಿದ ವಕ್ಫ್ ಕಾನೂನು ಇಡೀ ದೇಶದಲ್ಲಿ ವಕ್ಫ್ಬೋರ್ಡ್‌ ಆಸ್ತಿ ಇರುವುದು. ನಂಬರ್‌ ಒನ್‌ ರೇಲ್ವೆ ಮತ್ತು ಮಿಲಿಟರಿ ವಿಭಾಗದ ಆಸ್ತಿ, ಎರಡನೇ ಸ್ಥಾನದಲ್ಲಿ ವಕ್ಫ್ ಬೋರ್ಡ್‌ದ್ದು ಇದೆ. ವಕ್ಫ್ ಬೋರ್ಡ್‌ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸುತ್ತೇನೆ. ಯಾವ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಕೊಂಡಿದೆ ಎಂಬ ಬಗ್ಗೆ ಆರ್‌ಟಿಐನಲ್ಲಿ ದಾಖಲೆ ತೆಗೆದುಕೊಂಡಿದ್ದು ದೊಡ್ಡ ಅಭಿಯಾನ ಮಾಡಲಾಗುವುದು. ಎವ್ವ ದಾಖಲೆಗಳನ್ನು ಸುಪ್ರೀಂ ಕೋರ್ಚ್‌ಗೆ ಸಲ್ಲಿಸುತ್ತೇವೆ. ವಕ್ಫ್ ಬೋರ್ಡ್‌ ಕಾನೂನು ಹಿಂಪಡೆಯುವಂತೆ ಒತ್ತಾಯ ಮಾಡುತ್ತೇವೆ ಎಂದರು.

ಹಿಂದು ಸಮಾಜ ಜಾಗೃತವಾಗಿದೆ

ಹಿಂದೂಗಳು ಹಿಂದೂಗಳ ವಾಹನದಲ್ಲೇ ದೇವಸ್ಥಾನಕ್ಕೇ(Temple) ತೆರಳಲಿ ಎಂಬ ಭಾರತ ರಕ್ಷಣಾ ವೇದಿಕೆ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಈ ರೀತಿಯ ಅಭಿಯಾನಗಳನ್ನು ನಾವೇನೂ ಹುಟ್ಟುಹಾಕ್ತಿಲ್ಲ. ಹಿಂದೂ ಸಮಾಜ ಜಾಗೃತವಾಗಿದೆ. ಹಿಂದೂಗಳಿಗೆ ಮುಸ್ಲಿಂ ಮಾನಸಿಕತೆ ಅರ್ಥವಾಗಿದೆ ಅಂತ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios