ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ಯ ಖಾಸಗೀಕರಣ ವಿರೋಧಿಸಿ ಮಾರ್ಚ್ 18ರಂದು ವಿವಿಧ ಸಂಘಟನೆಗಳ ಬೆಂಬಲದಿಂದ ಮುಷ್ಕರ ನಡೆಸಲು ವಿಮಾ ಕಾರ್ಪೊರೇಷನ್‌ ನೌಕರರ ಸಂಘ ನಿರ್ಧರಿಸಿದೆ. 

ಬೆಂಗಳೂರು (ಮಾ.10): ಸಾರ್ವಜನಿಕ ವಲಯದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ಯ ಖಾಸಗೀಕರಣ ವಿರೋಧಿಸಿ ಮಾರ್ಚ್ 18ರಂದು ವಿವಿಧ ಸಂಘಟನೆಗಳ ಬೆಂಬಲದಿಂದ ಮುಷ್ಕರ ನಡೆಸಲು ವಿಮಾ ಕಾರ್ಪೊರೇಷನ್‌ ನೌಕರರ ಸಂಘ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘ ಬೆಂಗಳೂರು ವಿಭಾಗ 2ರ ಪ್ರಧಾನ ಕಾರ್ಯದರ್ಶಿ ಕೆ. ಗೋಪಾಲ್‌ ಮಾತನಾಡಿ, ಕೇಂದ್ರ ಸರ್ಕಾರ ಎಲ್‌ಐಸಿ ಅನ್ನು ಖಾಸಗೀಕರಣಗೊಳಿಸಲು ಹೊರಟಿದೆ. 

Add Asianetnews Kannada as a Preferred SourcegooglePreferred

ಇನ್ನೊಂದೆಡೆ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.49ರಿಂದ ಶೇ.74ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಒಂದು ಸಾಮಾನ್ಯ ವಿಮಾ ಕಂಪನಿ ಹಾಗೂ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಸಾರ್ವಜನಿಕ ವಲಯದ ವಿಮಾ ಉದ್ಯಮ, ಭಾರತೀಯ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ದೇಶದ ಜನರ ಹಿತದೃಷ್ಟಿಯಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಕಷ್ಟ ಕಾಲದಲ್ಲೂ ದಾಖಲೆಯತ್ತ ಎಲ್‌ಐಸಿ

ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದರೆ ಉದ್ಯಮಶೀಲತೆ ಹೆಚ್ಚಾಗಲಿದೆ ಎಂಬ ಕೇಂದ್ರ ಸರ್ಕಾರದ ವಾದ ಬರಿ ಪೊಳ್ಳು. ಈ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ವಿವಿಧ ಸಂಘಟನೆಗಳ ಜತೆಗೂಡಿ ಮುಷ್ಕರ ನಡೆಸಲಾಗುವುದು. 

ಮುಷ್ಕರಕ್ಕೆ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ಖಾಸಗಿ ವಲಯದ ವಿಮಾ ಕಂಪನಿಗಳು, ಬ್ಯಾಂಕುಗಳು, ಬಿಎಚ್‌ಇಎಲ್‌ ಇತರೆ ಸಂಘಗಳ ಬೆಂಬಲವಿದೆ ಎಂದರು.