11:34 PM (IST) Aug 16

Karnataka News Live 16 August 2026Exclusive - ಕರಾವಳಿಯ ಮಹಾಬಲ ಪಾತ್ರ ನನಗೆ ಬಲ ತುಂಬಿದೆ - ನಟ ಮಿತ್ರ ಸಂದರ್ಶನ

‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.

Read Full Story
11:07 PM (IST) Aug 16

Karnataka News Live 16 August 2026Rocking - ಯಶ್‌ ಜತೆ ಫೋಟೋ ತೆಗೆಸಿಕೊಳ್ಳುವಾಗ ಕಣ್ಣೀರಿಟ್ಟ ಅಭಿಮಾನಿ! ಒಂದೇ ಹೃದಯ ಸರ್‌, ಎಷ್ಟು ಬಾರಿ ಗೆಲ್ತೀರಿ? ಎಂದಾಗ ರಾಕಿ ಭಾಯ್ ಭಾವುಕ; ವೈರಲ್‌ ಆಯ್ತು ಪೋಸ್ಟ್!

'ಆಪ್‌ ಕೀ ಅದಾಲತ್‌' ಕಾರ್ಯಕ್ರಮದ ನಂತರ ನಟ ಯಶ್‌ ಜೊತೆ ಫೋಟೋ ತೆಗೆಸಿಕೊಳ್ಳುವಾಗ ಅಭಿಮಾನಿಯೊಬ್ಬರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. "ನಮಗಿರೋದು ಒಂದೇ ಹೃದಯ ಸರ್‌, ಅದನ್ನ ಎಷ್ಟು ಬಾರಿ ಗೆಲ್ತೀರಿ?" ಎಂಬ ಅಭಿಮಾನಿಯ ಮಾತಿಗೆ ಯಶ್ ಕೂಡ ಭಾವುಕರಾದರು. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
10:49 PM (IST) Aug 16

Karnataka News Live 16 August 2026ಶಾಲಾ-ಕಾಲೇಜುಗಳು ಸೇರಿ ಉಡುಪಿ ಜಿಲ್ಲೆಗೆ ನಾಳೆ ಸಾರ್ವತ್ರಿಕ ರಜೆ ಘೋಷಣೆ..!

ನಾಗರಪಂಚಮಿ ಹಬ್ಬದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ನಾಳೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

Read Full Story
10:22 PM (IST) Aug 16

Karnataka News Live 16 August 2026Hanuru - ಚಾಮರಾಜನಗರ ಎನ್‌ಕೌಂಟರ್‌ ಪ್ರಕರಣಕ್ಕೆ ತಮಿಳುನಾಡು ಸಿಎಂ ಎಂಟ್ರಿ; ಕೇಸ್‌ಗೆ ಬಿಗ್‌ ಟ್ವಿಸ್ಟ್‌!

ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪ್ರತಿಕ್ರಿಯಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯು ಪ್ರಕರಣಕ್ಕೆ ರಾಜಕೀಯ ಆಯಾಮವನ್ನು ನೀಡಿದ್ದು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಮನ ಸೆಳೆದಿದೆ.
Read Full Story
09:34 PM (IST) Aug 16

Karnataka News Live 16 August 2026ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜು ಸೇರಿ ಸರ್ಕಾರಿ ಕಚೇರಿಗಳಿಗೆ ರಜೆ, ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡದಲ್ಲಿ ನಾಳೆ (ಆ.17) ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

Read Full Story
09:30 PM (IST) Aug 16

Karnataka News Live 16 August 2026ಚಾಮರಾಜನಗರ ಎನ್‌ಕೌಂಟರ್ ಕೇಸ್‌ಗೆ ಬಿಗ್ ಟ್ವಿಸ್ಟ್! ಬರೋಬ್ಬರಿ 30 ಕೆಜಿ ಮಾಂಸ ಪತ್ತೆ..!

ಚಾಮರಾಜನಗರ ಶೂಟೌಟ್‌ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅರಣ್ಯಾಧಿಕಾರಿಗಳು ಇವತ್ತು ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಇರುವ ವಿಚಾರಗಳು ಪ್ರಕರಣಕ್ಕೆ ಮೇಜರ್ ತಿರುವು ನೀಡುವ ಸಾಧ್ಯತೆಗಳು ದಟ್ಟವಾಗಿವೆ.

Read Full Story
09:21 PM (IST) Aug 16

Karnataka News Live 16 August 2026Bollywood - ಆ ಖಡಕ್ ಆಫೀಸರ್‌ ಮಾತಿಗೆ ಬಾಲಿವುಡ್ ಶೇಕ್? ಶಾರುಖ್‌, ಅಜಯ್ ದೇವಗನ್‌, ಟೈಗರ್‌ಗೆ ಎದುರಾಯ್ತು ಕಾನೂನು ಸಂಕಷ್ಟ! ಏನು ಶಿಕ್ಷೆ?

ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರು ಪಾನ್ ಮಸಾಲಾ ಬ್ರ್ಯಾಂಡ್‌ನ ಪರೋಕ್ಷ ಪ್ರಚಾರದ (ಸರೋಗೇಟ್ ಜಾಹೀರಾತು) ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಎಫ್‌ಡಿಎ ಮುಖ್ಯಸ್ಥ ತುಕಾರಾಮ್ ಮುಂಢೆ ಅವರು ಈ ನಟರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದು, 15 ದಿನಗಳಲ್ಲಿ ಉತ್ತರಿಸಲು ಗಡುವು ನೀಡಿದ್ದಾರೆ.
Read Full Story
09:14 PM (IST) Aug 16

Karnataka News Live 16 August 2026ಮದುವೆ ಮನೆಯಲ್ಲಿ ಡಿ-ಬಾಸ್ ಜೈಕಾರ - ಅಭಿಮಾನಿಗಳಿಗೆ ಪ್ರೀತಿಯಿಂದಲೇ ವಾರ್ನಿಂಗ್ ಕೊಟ್ರು ವಿಜಯಲಕ್ಷ್ಮಿ!

ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್‌ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು ‘ಡಿ-ಬಾಸ್’ ಎಂದು ಜೈಕಾರ ಹಾಕುವುದು ಸಾಮಾನ್ಯ.

Read Full Story
08:45 PM (IST) Aug 16

Karnataka News Live 16 August 2026Cricket - ಮ್ಯಾಚ್‌ ನಡೆಯುತ್ತಿರುವಾಗಲೇ ದಿಗ್ಗಜ ಆಟಗಾರನ ಅಸಮಾಧಾನ ಸ್ಫೋಟ! ಟೀಮ್‌ಗೆ ನನ್ನ ಮೇಲೆ ನಂಬಿಕೆಯಿಲ್ಲ, ಒಳೊಳಗೆ ತಾರತಮ್ಯ ನಡಿತಿದೆ ಎಂದ ಸ್ಟಾರ್‌ ಪ್ಲೇಯರ್!

ಟೀಮ್ ಇಂಡಿಯಾದ ದಿಗ್ಗಜ ಆಟಗಾರರೊಬ್ಬರು ರವೀಂದ್ರ ಜಡೇಜಾ ಅವರು ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿನ ಹಿನ್ನಡೆ ಮತ್ತು ತಂಡದಲ್ಲಿನ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಶ್ವಿನ್‌ಗಿಂತಲೂ ಕೆಳ ಕ್ರಮಾಂಕಕ್ಕೆ ತಳ್ಳಿದ್ದು ತಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.

Read Full Story
08:36 PM (IST) Aug 16

Karnataka News Live 16 August 2026ಅತ್ಯಂತ ವಿದ್ಯಾವಂತೆ.. ನಲಪಾಡ್ ಕೈಹಿಡಿದ ಮಲಿಹಾ ಫಾತಿಮಾ ಯಾರು?

ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಕೊಡಗಿನ ಮಡಿಕೇರಿಯಲ್ಲಿ ಕಾನೂನು ಪದವೀಧರೆ ಹಾಗೂ ಎಂಎನ್‌ಸಿ ಉದ್ಯೋಗಿ ಮಲಿಹಾ ಫಾತಿಮಾ ಅವರನ್ನು ವಿವಾಹವಾದರು. ಯಾರು ಈ ಮಲಿಹಾ ಫಾತಿಮಾ?

Read Full Story
08:15 PM (IST) Aug 16

Karnataka News Live 16 August 2026ಮದುವೆ ಸಂಭ್ರಮದಲ್ಲಿ ನಲಪಾಡ್.. ಅದ್ದೂರಿ ಕಾರ್‍ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್, ಸುದೀಪ್, ಯಶ್ ಭಾಗಿ

ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಕೊಡಗಿನ ಮಡಿಕೇರಿಯ ರೆಸಾರ್ಟ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಾನೂನು ಪದವೀಧರೆ ಮಲಿಹಾ ಫಾತಿಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹೈ-ಪ್ರೊಫೈಲ್ ಮದುವೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ನಟರಾದ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

Read Full Story
08:06 PM (IST) Aug 16

Karnataka News Live 16 August 2026‘ನಮ್ಮದೇ ಸರ್ಕಾರ ಅಂತ ಕಾನೂನು ದುರ್ಬಳಕೆ ಮಾಡೋಕೆ ಆಗಲ್ಲ’ - RSS ವಿವಾದದಲ್ಲಿ ಡಿಕೆಶಿ ಸ್ಪಷ್ಟನೆ

ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ.

Read Full Story
08:02 PM (IST) Aug 16

Karnataka News Live 16 August 2026Police - ಹಾಡು ಹಗಲೇ ಖಾಕಿ ದರ್ಪ; ಜಗಳ ಬಿಡಿಸಲು ಹೋದ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಪಿಎಸ್‌ಐ! ಅತಂತ್ರವಾದ ಸಂತ್ರಸ್ತರು!

ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೊಳಗಾದ ಯುವಕನ ದೂರು ನಿರ್ಲಕ್ಷಿಸಿ, ಪಿಎಸ್‌ಐ ದೂರಿನ ಮೇರೆಗೆ ಯುವಕರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಮಹಿಳಾ ಪಿಎಸ್‌ಐ

Read Full Story
07:52 PM (IST) Aug 16

Karnataka News Live 16 August 2026‘35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ’ ಎಂದ ಸಿಎಂ ಡಿಕೆಶಿ - ಕೊಡಗಿನಲ್ಲಿ ಮಹತ್ವದ ಘೋಷಣೆಗಳೇನು?

ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು..

Read Full Story
07:46 PM (IST) Aug 16

Karnataka News Live 16 August 2026ಸೋನಿಯಾ ಗಾಂಧಿ ವಿರುದ್ಧ ಮಂಗಳೂರಲ್ಲಿ ಕೇಸ್! FIR ದಾಖಲಿಸದಿದ್ದರೆ ಹೈಕೋರ್ಟ್‌ಗೆ ಹೋಗುವ ಎಚ್ಚರಿಕೆ

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಆರೋಪದ ಮೇಲೆ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸದಿದ್ದರೆ ಹೈಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಚ್ಚರಿಸಿದ್ದಾರೆ.

Read Full Story
07:19 PM (IST) Aug 16

Karnataka News Live 16 August 2026Cinema - ಬೆಂಗಳೂರಿನಿಂದ ನಟನಾದವನ 90ರ ದಶಕದ ಚಿತ್ರ ರೀ-ರಿಲೀಸ್; ಹಳೇ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡಲು ಥಿಯೇಟರ್‌ಗೆ ಮುಗಿಬಿದ್ದ ಜನ!

ಬೆಂಗಳೂರಿನಿಂದ ಸ್ಟಾರ್ ಆದ ಖ್ಯಾತ ನಟನ ಅಭಿನಯದ 1995ರ ಚಿತ್ರವನ್ನು ಹಳೆಯ ಫಿಲ್ಮ್ ರೀಲ್ ಮತ್ತು ಪ್ರೊಜೆಕ್ಟರ್ ಬಳಸಿ ಮರು ಪ್ರದರ್ಶಿಸಲಾಯಿತು. ಈ ವಿಶಿಷ್ಟ ಪ್ರದರ್ಶನವು ಪ್ರೇಕ್ಷಕರಿಗೆ ಡಿಜಿಟಲ್ ಯುಗದ ಮೊದಲು ಇದ್ದ ಥಿಯೇಟರ್ ಅನುಭವವನ್ನು ಮರಳಿ ನೀಡಿತು, ಮತ್ತು ಜನರು ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಥಿಯೇಟರ್‌ಗೆ ಮುಗಿಬಿದ್ದರು.

Read Full Story
07:16 PM (IST) Aug 16

Karnataka News Live 16 August 2026ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗಧಿ - ಸಿಎಂ ಶಿವಕುಮಾರ್ ಮಹತ್ವದ ಘೋಷಣೆ

ಮಡಿಕೇರಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಡಿಸೆಂಬರ್ ಒಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂ. ಅನುದಾನ ಹಾಗೂ 'ಭಾರತ್ ಜೋಡೋ ಯುವ ಘಟಕ'ಗಳ ಸ್ಥಾಪನೆಯ ಮೂಲಕ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.

Read Full Story
06:45 PM (IST) Aug 16

Karnataka News Live 16 August 202690% ಮಂದಿಗೆ ಗೊತ್ತಿಲ್ಲದ ವಾಷಿಂಗ್ ಮೆಷಿನ್ ಕ್ಲೀನಿಂಗ್ ಟ್ರಿಕ್ - ಮನೆಯಲ್ಲೇ ಸ್ವಚ್ಛಗೊಳಿಸುವ ಸುಲಭ ವಿಧಾನ!

ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆದ ಬಳಿಕ ಅವುಗಳಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಡ್ರಮ್ ಒಳಗೆ ಕೊಳೆ, ಡಿಟರ್ಜೆಂಟ್ ಅವಶೇಷ ಅಥವಾ ಗಾರ ಜಮೆಯಾಗಿದೆಯೇ? ಹಾಗಾದರೆ ಮೆಷಿನ್‌ನ್ನೇ ದೂಷಿಸುವ ಮೊದಲು..

Read Full Story
06:20 PM (IST) Aug 16

Karnataka News Live 16 August 2026ಅಂದಕ್ಕೆ ಕಡಿಮೆಯೇ ಇಲ್ಲ, ಆದರೆ ಅವಕಾಶಗಳೇ ಇಲ್ಲವೇ? ಮುಂಗಾರು ಮಳೆ ಸುಂದರಿ ನೇಹಾ ಶೆಟ್ಟಿಗೆ ಏನಾಯ್ತು?

ನೇಹಾ ಶೆಟ್ಟಿ ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ. ಸದ್ಯ ಟಾಲಿವುಡ್‌ನಲ್ಲಿ ಕೆಲವೇ ಸಿನಿಮಾಗಳ ಮೂಲಕವೇ ಭಾರೀ ಕ್ರೇಜ್ ಸಂಪಾದಿಸಿದ ನಟಿಯರ ಪೈಕಿ ನೇಹಾ ಶೆಟ್ಟಿ ಕೂಡ ಒಬ್ಬರು.

Read Full Story
06:15 PM (IST) Aug 16

Karnataka News Live 16 August 2026Bihar Boy Success Story - ಕನ್ನಡದ ಕಂಪು ಬೀರಿದ ಬಿಹಾರಿ ಕಂದ; ಹೆತ್ತವರಿಗೆ ಕನ್ನಡ ಬರಲ್ಲ, ಆದರೆ ಮಗ ಮಾತ್ರ ಕನ್ನಡ ಕ್ಲಾಸ್ ಟಾಪರ್!

ಬಿಹಾರದಿಂದ ವಲಸೆ ಬಂದ ಕೂಲಿ ಕಾರ್ಮಿಕ ದಂಪತಿಯ 14 ವರ್ಷದ ಮಗ ಸತ್ಯಕುಮಾರ್ ಪಾಸ್ವಾನ್, ಭಾಷೆಯ ತಡೆಗೋಡೆ, ಬಡತನದಂತಹ ಎಲ್ಲಾ ಅಡೆತಡೆಗಳನ್ನು ಮೀರಿ ಕಾರವಾರದ ಕನ್ನಡ ಮಾಧ್ಯಮ ಶಾಲೆಯಲ್ಲಿ ತರಗತಿಯ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಬರಿಗಾಲಲ್ಲಿ ಶಾಲೆಗೆ ನಡೆದು ಹೋಗುತ್ತಿದ್ದ ಈತನ ಕಲಿಕೆಯ ಹಸಿವನ್ನು ಕಂಡು, ಸ್ಥಳೀಯರು ಬೈಸಿಕಲ್ ಕೊಡುಗೆ ನೀಡಿ ಪ್ರೋತ್ಸಾಹಿಸಿದ್ದಾರೆ.
Read Full Story