ನಂಜನಗೂಡು (ಫೆ.24):  ಭಾರತೀಯ ಜೀವ ವಿಮಾ ನಿಗಮ ಮೈಸೂರು ವಿಭಾಗವು 342 ಕೋಟಿಯ ಪ್ರೀಮಿಯಂ ಸಂಗ್ರಹಿಸಿ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದ್ದು, ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದ್ದು ಹೆಮ್ಮೆಯ ಸಾಧನೆಯಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮೈಸೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪಿ. ವಿಶ್ವೇಶ್ವರರಾವ್‌ ಹೇಳಿದರು.

ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಮೈಸೂರು ವಿಭಾಗದ ಈ ಸಾಧನೆಗಾಗಿ ನಿಗಮದಲ್ಲಿ ಕೆಲಸ ಮಾಡುವ ಪ್ರತಿನಿಧಿಗಳ ಕಾಳಜಿಯನ್ನು ಪ್ರಶಂಶಿಸಬೇಕಾಗಿದೆ ಎಂದರು.

ಅಕ್ಟೋಬರ್‌ಗೆ LIC, ಸೆಪ್ಟೆಂಬರ್‌ಗೆ ಏರಿಂಡಿಯಾ, ಬಿಪಿಸಿಎಲ್ ಷೇರು ಮಾರಾಟ! ..

ಕಳೆದ ಬಾರಿ ಕೊರೋನಾದಂತಹ ಮಹಾಮಾರಿ ಇದ್ದರು ಧೃತಿಗೆಡದೆ ಪ್ರತಿನಿಧಿ ಮಿತ್ರರು ಸಾಧನೆಗೈದಿದ್ದಾರೆ. ನಿಗಮವು ಪ್ರತಿನಿಧಿಗಳ ಕಾಳಜಿಯನ್ನು ವಹಿಸಿದ್ದು, ಪ್ರತಿನಿಧಿಗಳ ಏಳಿಗೆಗೆ ಪೂರಕವಾದ ನಿಯಮಗಳನ್ನು ಅಳವಡಿಸಿಕೊಂಡಿದೆ ಎಂದರು.

ಮೈಸೂರು ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕ ಎಚ್‌. ಶಿವಶರಣ್‌ ಮಾತಾನಾಡಿ, ನಿಗಮವು ಪ್ರತಿದಿನವು ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಕುಳಿತ ಸ್ಥಳದಿಂದಲೆ ಪಾಲಿಸಿಗಳನ್ನು ಪಡೆಯುವಂತಾಗಿದೆ. ಅದರಂತೆ ಪ್ರತಿನಿಧಿ ಮಿತ್ರರು ನೂತನ ತಂತ್ರಜ್ಞಾನವನ್ನು ಅಳವಡಿಕೊಳ್ಳಬೇಕು ಎಂದರು.

ಪ್ರತಿನಿದಿಗಳ ಒಕ್ಕೂಟದ ಮೈಸೂರು ವಿಭಾಗದ ಅಧ್ಯಕ್ಷ ವಿ.ಜಿ. ಅಶೋಕ್‌ ಮಾತನಾಡಿ. ಪ್ರತಿನಿಧಿಗಳು ಹಾಗು ನಿಗಮದ ಬಾಂಧವ್ಯವು ಸಾಮರಸ್ಯದಿಂದ ಕೂಡಿದೆ. ಇದಕ್ಕೆ ಉದಾಹರಣೆ ಎಂದರೆ ಕೊರೋನಾ ಕಾಲದಲ್ಲಿ ನಿಗಮವು ಪ್ರತಿನಿಧಿಗಳ ಕೈಹಿಡಿದಿದೆ. ಮುಂದಿನ ದಿನಗಳಲ್ಲಿ ಪ್ರತಿನಿಧಿಗಳ ಗುಂಪು ವಿಮೆಯು 15 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ಬಗ್ಗೆ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷೆ ಶ್ಯಾಮಲ ಚಕ್ರವರ್ತಿಯವರು ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ, ಇದೊಂದು ಆಶಾದಾಯಕ ಬೆಳವಣಿಗೆ ಎಂದರು.

ಎಂಡಿಆರ್‌ಟಿಗೆ ಆಯ್ಕೆಯಾದ ಕೆಂಪೇಗೌಡ ಹಾಗೂ ಕೋಟಿಗೂ ಹೆಚ್ಚು ಪ್ರೀಮಿಯಂ ತಂದ ಹಿರಿಯ ಪ್ರತಿನಿಧಿ ಸೋಮಸುಂದರ್‌ ಅವರನ್ನು ಗೌರವಿಸಿತು.

ಪ್ರತಿನಿಧಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು.

ಇದೇ ರೀತಿ 25 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ 30ಕ್ಕೂ ಹಿರಿಯ ಪ್ರತಿನಿಧಿಗಳನ್ನು ಹಾಗೂ ಹಿರಿಯ ಅಭಿವೃದ್ದಿ ಅಧಿಕಾರಿಗಳಾದ ಟಿ.ಎನ್‌. ರವಿಶಂಕರ್‌, ಎಂ. ಸಿದ್ದೇಗೌಡ, ಎಸ್‌.ಡಿ. ಪ್ರಕಾಶ್‌, ಜಿ.ಎನ್‌. ವೆಂಕಟೇಶ್‌, ಚಿನ್ನಪ್ಪ ಸಾತ್ವಿಕ್‌, ಶ್ವೇತಾ, ಜಿ.ಎನ್‌. ಮಹೇಶ್‌ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಅಭಿವೃದ್ದಿ ಅಧಿಕಾರಿಗಳಾದ ಚಿನ್ನಪ್ಪ ಸಾತ್ವಿಕ್‌, ಶ್ವೇತಾ, ಜಿ.ಎನ್‌. ಮಹೇಶ್‌ ಭಾಗವಹಿಸಿದ್ದರು. ಅಧ್ಯಕ್ಷ ಕೆ.ಎಂ. ಮಹೇಶ್‌ ಕುರಿಹುಂಡಿ ಮಾತನಾಡಿ, ಮುಂದಿನ ದಿನಗಳಲ್ಲಿ ನಂಜನಗೂಡು ಶಾಖೆಯು ಪ್ರತಿನಿಧಿಗಳ ಸಹಕಾರದೊಂದಿಗೆ ಇನ್ನು ಸಾಧನೆಗೈಯಲಿದೆ ಎಂದರು.

ಮೈಸೂರು ವಿಭಾಗದ ಅಧಿಕಾರಿ ವಿಶ್ವೇಶ್ವರರಾವ್‌, ಕೆ.ಎಂ. ಮಹೇಶ್‌ ಕುರಿಹುಂಡಿ, ಎಚ್‌. ಶಿವ ಶರಣ್‌, ಶಾಖಾಧಿಕಾರಿ ಎಸ್‌. ಗುರುರಾಜರಾವ್‌, ಪ್ರತಿನಿಧಿ ವಿಭಾಗಿಯ ಅಧ್ಯಕ್ಷ ವಿ.ಜಿ. ಅಶೋಕ್‌, ಕಾರ್ಯದರ್ಶಿ ಡಿ. ಪುಟ್ಟಸ್ವಾಮಿ, ಒಕ್ಕೂಟದ ಹಿರಿಯ ಸಲಹೆಗಾರ ಶಿವಕುಮಾರ್‌, ಖಜಾಂಚಿ ಎಂ.ಎಲ್‌. ಪ್ರಕಾಶ್‌, ನಂಜನಗೂಡು ಒಕ್ಕೂಟದ ಅಧ್ಯಕ್ಷ ಮಹೇಶ್‌ ಕುರಿಹುಂಡಿ, ಉಪಾಧ್ಯಕ್ಷ ಲಿಂಗಪ್ಪ, ಉಪ ಶಾಖಾಧಿಕಾರಿ ಎಚ್‌.ಎಂ. ಗಂಗಾಧರ್‌, ಹಿರಿಯ ಅಭಿವೃದ್ದಿ ಅಧಿಕಾರಿಗಳಾದ ಟಿ.ಎನ್‌. ರವಿಶಂಕರ್‌, ಎಂ. ಸಿದ್ದೇಗೌಡ, ಎಸ್‌.ಡಿ. ಪ್ರಕಾಶ್‌, ಜಿ.ಎನ್‌. ವೆಂಕಟೇಶ್‌, ನಂಜನಗೂಡು ಕಾರ್ಯದರ್ಶಿ ಸಿದ್ದೇಗೌಡ, ಖಜಾಂಚಿ ಇಂದಿರಾ, ಲೆಕ್ಕ ಪರಿಶೋಧಕ ಬಿ.ಆರ್‌. ಚಿಕ್ಕಣ್ಣ ಇದ್ದರು.

ರೇಖಾ ಪ್ರಾರ್ಥಿಸಿದರು. ಬಿ.ಅರ್‌. ಚಿಕ್ಕಣ್ಣ ನಿರೂಪಿಸಿದರು.