Asianet Suvarna News Asianet Suvarna News

Narayana Guru Tableau ತಿರಸ್ಕಾರ ಅಕ್ಷಮ್ಯ: ಪ್ರಧಾನಿ ಕ್ಷಮೆ ಕೇಳಲಿ: ಕಾಂಗ್ರೆಸ್‌

*   ಕೇಂದ್ರ ಸರ್ಕಾರದ ನಡೆಗೆ ಸಿದ್ದು, ಡಿಕೆಶಿ, ಹರಿಪ್ರಸಾದ್‌ ಖಂಡನೆ
*   ನಾರಾಯಣ ಗುರುಗಳ ‘ಸ್ವಾಭಿಮಾನ ನಡಿಗೆ’ಗೆ ವ್ಯಾಪಕ ಜನಬೆಂಬಲ
*   ಬಿಜೆಪಿ ನಾಯಕರ ಮೌನವೇಕೆ:  ಹರಿಪ್ರಸಾದ್‌

Let the PM Narendra Modi Should Be Apologize for Rejection of Narayana Guru Tableau  grg
Author
Bengaluru, First Published Jan 27, 2022, 5:58 AM IST

ಬೆಂಗಳೂರು(ಜ.27):  ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ(Republic Day Parade) ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ(Central Government) ನಡೆಯನ್ನು ರಾಜ್ಯ ಕಾಂಗ್ರೆಸ್‌(Congress) ತೀವ್ರವಾಗಿ ಖಂಡಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಕೂಡಲೇ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ನಾರಾಯಣ ಗುರು ಒಬ್ಬ ದಾರ್ಶನಿಕರು. ಕೇರಳದಲ್ಲಿ ಹೆಚ್ಚಾಗಿದ್ದ ಜಾತೀಯತೆ, ನಂಬೂದರಿಗಳ ದೌರ್ಜನ್ಯದ ವಿರುದ್ಧ ಹಿಂದುಳಿದ, ತಳ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದವರು. ನಿಮ್ಮನ್ನು ದೇವಾಲಯಗಳಿಗೆ ಬಿಡದಿದ್ದರೆ ಹೋಗಬೇಡಿ, ಬದಲಿಗೆ ನೀವೇ ದೇವಾಲಯ ಕಟ್ಟಿ ಪೂಜೆ ಮಾಡಿ ಎಂದು ಚಳವಳಿ ಮಾಡಿದವರು. ಅಂತಹ ಮಹಾನ್‌ ವ್ಯಕ್ತಿಯ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರದ ಕ್ರಮ ಅಕ್ಷಮ್ಯ ಎಂದು ಕಿಡಿ ಕಾರಿದರು. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.

Narayana Guru Tableau: ನಾರಾಯಣ ಗುರು ಟ್ಯಾಬ್ಲೋಗೆ ಕೇಂದ್ರ ತಿರಸ್ಕಾರ: ತೀವ್ರ ವಿವಾದ

ಸರ್ಕಾರ ಮಾತು ಉಳಿಸಿಕೊಂಡಿಲ್ಲ​​-ಡಿಕೇಶಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಮಾತನಾಡಿ, ಸ್ತಬ್ಧಚಿತ್ರ(Tableau) ಪ್ರದರ್ಶನಕ್ಕೆ ಆಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ರಾಜೀನಾಮೆ ನೀಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಜನರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನಾವು ನಾರಾಯಣ ಗುರು ಜಯಂತಿ ಮಾಡಿದ್ದೆವು. ಈಗ ಈ ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯದವರು ಹೋರಾಟ ಮಾಡುತ್ತಿದ್ದು, ಅವರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಹೋದರೆ ರಾಜಕೀಯ ಬಣ್ಣ ಬರಬಹುದು ಎನ್ನುವ ಕಾರಣಕ್ಕೆ ಹೋಗಿಲ್ಲ ಎಂದು ಹೇಳಿದರು.
ಕೇವಲ ನಾರಾಯಣ ಗುರುಗಳಿಗೆ ಮಾತ್ರವಲ್ಲ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರಿಗೆ ಪದ್ಮಶ್ರೀ ನೀಡುವ ಬಗ್ಗೆಯೂ ಮುಖ್ಯಮಂತ್ರಿಗಳು ಮಾತನಾಡಿದ್ದರು. ಆದರೆ, ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿಲ್ಲ ಎಂದರು.

ಬಿಜೆಪಿ ನಾಯಕರ ಮೌನವೇಕೆ- ಹರಿಪ್ರಸಾದ್‌:

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌(BK Hariprasad) ಮಾತನಾಡಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾರಾಯಣ ಗುರು ಅನುಯಾಯಿ. ಮಂಗಳೂರಿನಲ್ಲಿ ನಾರಾಯಣ ಗುರುಗಳ ಮತದಿಂದಲೇ ಗೆಲ್ಲುತ್ತಿರುವ ನಳಿನ್‌ಕುಮಾರ್‌ ಕಟೀಲ್‌ ಸಹ ಮೌನ ವಹಿಸಿದ್ದಾರೆ. ಬಿಜೆಪಿ ನಾಯಕರು ಈ ಕುರಿತು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

Narayana Guru Tableau: ಕೇಂದ್ರದ ವಿರುದ್ಧ ಜನಾರ್ದನ ಪೂಜಾರಿ ಪ್ರತಿಭಟನೆ: ಬಜರಂಗದಳವೂ ಬೆಂಬಲ..!

ನಾರಾಯಣ ಗುರುಗಳ ‘ಸ್ವಾಭಿಮಾನ ನಡಿಗೆ’ಗೆ ವ್ಯಾಪಕ ಜನಬೆಂಬಲ

ಮಂಗಳೂರು(Mangaluru): ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಬಿಲ್ಲವ ಸಂಘಟನೆಗಳು ಹಾಗೂ ಬಿಲ್ಲವ ಸಮಾಜ ಕರೆ ನೀಡಿದ್ದ ರಾಜಕೀಯ ರಹಿತ ‘ಸ್ವಾಭಿಮಾನ ನಡಿಗೆ’ ಬುಧವಾರ ಕರಾವಳಿಯಾದ್ಯಂತ ನಡೆದು ಸಾವಿರಾರು ಜನರು ಪಾಲ್ಗೊಂಡಿದ್ದರು.

ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಪಕ್ಷ, ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ನಾರಾಯಣ ಗುರುಗಳ ಸ್ತಬ್ಧಚಿತ್ರಗಳೊಂದಿಗೆ ಮಂಗಳೂರಿಗೆ ಆಗಮಿಸಿದರು. ಹಳದಿ ಪಂಚೆ, ಶರ್ಟ್‌, ಶಾಲುಗಳನ್ನು ಹೊರತುಪಡಿಸಿದರೆ ಯಾವುದೇ ಪಕ್ಷದ ಧ್ವಜ, ಚಿಹ್ನೆ, ಶಾಲುಗಳು ಕಂಡುಬರಲಿಲ್ಲ. ಮಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕುದ್ರೋಳಿ ದೇವಾಲಯ ನೇತೃತ್ವದ ರಾರ‍ಯಲಿಗೆ ಕಂಕನಾಡಿ ಗರೋಡಿಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ(Janardhana Poojary) ಚಾಲನೆ ನೀಡಿದರು. ನಾರಾಯಣ ಗುರುಗಳ ಹತ್ತಾರು ಟ್ಯಾಬ್ಲೋಗಳೂ ಈ ಮೆರವಣಿಗೆಯಲ್ಲಿದ್ದವು. ಇನ್ನು ಉತ್ತರ ಕನ್ನಡದ ದಾಂಡೇಲಿ, ಮೈಸೂರು, ಶಿವಮೊಗ್ಗದಲ್ಲೂ ವಿವಿಧ ಸಂಘಟನೆಗಳು ಸ್ವಾಭಿಮಾನ ನಡಿಗೆ ನಡೆಸಿದವು.
 

Follow Us:
Download App:
  • android
  • ios