Asianet Suvarna News Asianet Suvarna News

Narayana Guru Tableau: ಕೇಂದ್ರದ ವಿರುದ್ಧ ಜನಾರ್ದನ ಪೂಜಾರಿ ಪ್ರತಿಭಟನೆ: ಬಜರಂಗದಳವೂ ಬೆಂಬಲ..!

*   ಜ.26ರಂದು ಮಂಗಳೂರಿನಲ್ಲಿ ಪ್ರತಿಭಟನೆ 
*  ನಾರಾಯಣ ಗುರುಗಳು ಯಾವ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರಲ್ಲ
*  ವಿಶ್ವ ಹಿಂದೂಪರಿಷತ್- ಬಜರಂಗದಳ ಬೆಂಬಲ 

Bajrang Dal Support to Janardhana Poojary Protest Against Central Government grg
Author
Bengaluru, First Published Jan 23, 2022, 1:07 PM IST

ಮಂಗಳೂರು(ಜ.23):  ಕೇಂದ್ರ ಸರ್ಕಾರದಿಂದ(Central Government) ಗಣರಾಜ್ಯೋತ್ಸವಕ್ಕೆ(Republic Day) ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಜ.26ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ‌ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ(Janardhana Poojary) ಅವರು ಕರೆ ಕೊಟ್ಟಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ(Mangaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳ ಟ್ಯಾಬ್ಲೋ(Narayana Guru Tableau) ಮೆರವಣಿಗೆ ಮೂಲಕ ಪ್ರತಿಭಟನೆ ‌ನಡೆಸಲು ಕರೆ ನೀಡಲಾಗಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನಗೆ ನೋವು ಕೊಟ್ಟಿದೆ. ಆ ದಿನ ನನಗೆ ನಿದ್ದೆಯೂ ಬಂದಿಲ್ಲ, ಇಡೀ ರಾತ್ರಿ ‌ಕಣ್ಣೀರು ಹಾಕಿದ್ದೇನೆ. ನಾರಾಯಣ ಗುರುಗಳು ಯಾವ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರಲ್ಲ. ಅವರು ಎಲ್ಲರಿಗೂ ಸೇರಿದ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾರೆ. ಈ ದುಷ್ಕೃತ್ಯವನ್ನ ಖಂಡಿಸಿ ಜ.26ರಂದು ಗುರುಗಳ ಭಾವಚಿತ್ರ ಮೆರವಣಿಗೆ ನಡೆಸುತ್ತೇವೆ ಅಂತ ತಿಳಿಸಿದ್ದಾರೆ. 

Republic Day Parade Tableau : ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

ಮಂಗಳೂರಿನ ಕಂಕನಾಡಿ ಗರೋಡಿಯಿಂದ ಕುದ್ರೋಳಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುವುದು. ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ಸಮಾಜದವರು ಸೇರಿ ಪ್ರತಿಭಟನೆ(Protest) ನಡೆಸಲಿದ್ದಾರೆ. ಜಾತಿ, ಮತ, ಧರ್ಮ ಲೆಕ್ಕಿಸದೆ ಎಲ್ಲರೂ ಭಾಗವಹಿಸುವಂತೆ ಪ್ರಾರ್ಥನೆಯನ್ನ ಮಾಡುತ್ತೇನೆ. ಅದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ನಾರಾಯಣ ಗುರುಗಳ ಭಾವಚಿತ್ರ‌ ಮೆರವಣಿಗೆ ನಡೆಸಲಾಗುವುದು. ಅದು ಸಂಜೆ ವೇಳೆ‌ ಕುದ್ರೋಳಿ ದೇವಸ್ಥಾನಕ್ಕೆ ಬಂದು ಸೇರಲಿದೆ ಅಂತ ಮಾಹಿತಿ ನೀಡಿದ್ದಾರೆ. 

ವಿಶ್ವ ಹಿಂದೂಪರಿಷತ್- ಬಜರಂಗದಳ ಬೆಂಬಲ 

ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಖಂಡಿಸಿ ಜನಾರ್ದನ ಪೂಜಾರಿ ಅವರ ಪ್ರತಿಭಟನೆಗೆ ವಿಶ್ವ ಹಿಂದೂಪರಿಷತ್(Vishva Hindu Parishad) ಹಾಗೂ ಬಜರಂಗದಳ(Bajrang Dal) ಬೆಂಬಲ ಸೂಚಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ನಾರಾಯಣ ಗುರು ಅವರು ಅಸಮಾನತೆಯ ವಿರುದ್ಧ ಹೋರಾಡಿ, ದೇಶ ಕಂಡ ಮಹಾನ್ ಸಂತ ಗುರುಗಳಾಗಿದ್ದಾರೆ. ಪೂಜನೀಯ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ಚಿತ್ರದ ಮೆರವಣಿಗೆ ಜ.26ರಂದು ನಡೆಯಲಿದೆ. ಹಿರಿಯರಾದ ಜನಾರ್ಧನ ಪೂಜಾರಿಯವರು ಪ್ರತಿಭಟನೆಗೆ ಕರೆ ನೀಡಿದ್ದು, ಈ ಸ್ತಬ್ಧಚಿತ್ರದ ಮೆರವಣಿಗೆಗೆ ವಿಶ್ವ ಹಿಂದೂ ಪರಿಷತ್  ಸಂಪೂರ್ಣ ಬೆಂಬಲ ನೀಡಲಿದೆ. ಸಂಘಟನೆಯ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಅಂತ ಸ್ಪಷ್ಟಪಡಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು  ಕೇಂದ್ರದ ಗಣರಾಜ್ಯೋತ್ಸವ (Republic Day Parade) ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದರು.

Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿ ಜಾತಿ, ಮತಭೇದಗಳನ್ನು ಧಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು, "ಮನುಷ್ಯರೆಲ್ಲ ಒಂದೇ ಎಂದು ಹೇಳಿ ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು" ಎಂದು ಸಾರಿ ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು. ಅಂಥವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ. ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ ಎಂದಿದ್ದರು.

ಕೂಡಲೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ʼಗೆ ಸಮಿತಿಯು ಅಂಗೀಕಾರ ಮಾಡಬೇಕು. ಕೂಡಲೇ ಸಂಬಂಧಪಟ್ಟ ಕೇಂದ್ರದ ಸಚಿವಾಲಯ ಮತ್ತು ಅಧಿಕಾರಿಗಳು ಈ ಅಚಾತುರ್ಯವನ್ನು ಸರಿ ಮಾಡಬೇಕು ಎಂದು ಆಗ್ರಹಿಸಿದ್ದರು. 
 

Follow Us:
Download App:
  • android
  • ios