Asianet Suvarna News Asianet Suvarna News

ಅ.31ರವರೆಗೆ ಕೊಂಕಣ ರೈಲು ಮಾರ್ಗದಲ್ಲಿನ ಎಲ್ಲಾ ರೈಲಿನ ವೇಳಾಪಟ್ಟಿ ಬದಲಾವಣೆ, ಯಾವೆಲ್ಲ ಜಿಲ್ಲೆಯಲ್ಲಿದೆ ಕೊಂಕಣ ರೈಲು

ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ  ಅಕ್ಟೋಬರ್‌ 31ರ ವರೆಗೆ ಮುಂಗಾರು ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಯಾವೆಲ್ಲ ಜಿಲ್ಲೆಯಲ್ಲಿ ಕೊಂಕಣ ರೈಲ್ವೆ ಯಾವ ಸಮಯದಲ್ಲಿ ಹಾದು ಹೋದಲಿದೆ ಎಂಬ ಮಾಹಿತಿ ಇಲ್ಲಿದೆ.

Konkan Railway will follow Monsoon Time Table from June to august kannada news gow
Author
First Published Jun 12, 2023, 4:58 PM IST

ಮಂಗಳೂರು (ಜೂ.12): ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ  ಅಕ್ಟೋಬರ್‌ 31ರ ವರೆಗೆ ಮುಂಗಾರು ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಜೂನ್‌ 10ರಿಂದ ಅ.31ರ ವರೆಗೆ ಹೊರಡುವ ಎಲ್ಲ ರೈಲುಗಳಿಗೆ ಇದು ಅನ್ವಯವಾಗಲಿದೆ. ಈ ವೇಳೆ ರೈಲುಗಳ ಆಗಮನ ನಿರ್ಗಮನದಲ್ಲಿ ಪರಿಷ್ಕರಣೆಯಾಗಲಿದೆ. ಕೊಂಕಣ ಮೂಲಕ ಸಂಚರಿಸುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿಇಲ್ಲಿ ಕೊಡಲಾಗಿದೆ.

ನಂ.12620 ಮಂಗಳೂರು ಸೆಂಟ್ರಲ್‌ ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 12.45(ಪ್ರಸ್ತುತ 2.20)ಕ್ಕೆ 1.35 ಗಂಟೆ ಮೊದಲು ಹೊರಡಲಿದೆ. ನಂ.12619 ಲೋಕಮಾನ್ಯ ತಿಲಕ್‌ ಟರ್ಮಿನಸ್‌-ಮಂಗಳೂರು ಸೆಂಟ್ರಲ್‌ ಮತ್ಸ್ಯಗಂಧ ಮಂಗಳೂರು ಸೆಂಟ್ರಲ್‌ಗೆ 2.30 ಗಂಟೆ ತಡವಾಗಿ ಬೆಳಗ್ಗೆ 10.10ಕ್ಕೆ (7.40) ಬರಲಿದೆ.

ನಂ.12133 ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ಗೆ 2.35 ನಿಮಿಷ ತಡವಾಗಿ ಸಂಜೆ 3.40ಕ್ಕೆ(1.05) ಆಗಮಿಸಲಿದೆ. 12134 ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಎಂಟಿ ಮಂಗಳೂರು ಜಂಕ್ಷನ್‌ನಿಂದ ಸಂಜೆ 4.35ಕ್ಕೆ(2.00) 2.35 ಗಂಟೆ ತಡವಾಗಿ ಹೊರಡಲಿದೆ.

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್

ನಂ.06601 ಮಡಗಾಂವ್‌-ಮಂಗಳೂರು ಸೆಂಟ್ರಲ್‌ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಮಡಗಾಂವ್‌ನಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮಂಗಳೂರು ಜಂಕ್ಷನ್‌ನಲ್ಲಿ ಇದರ ಆಗಮನ ನಿರ್ಗಮನ ಸಮಯ ರಾತ್ರಿ 9.08/9.10(8.33/8.35). ಮಂಗಳೂರು ಸೆಂಟ್ರಲ್‌ನಲ್ಲಿ ಆಗಮನ 9.40(9.05). ಒಟ್ಟು 35 ನಿಮಿಷ ತಡವಾಗಲಿದೆ.

ನಂ.06602 ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಜಂಕ್ಷನ್‌ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಮಡಗಾಂವ್‌ಗೆ ಮಧ್ಯಾಹ್ನ 1.15ಕ್ಕೆ(1.10) ಆಗಮಿಸಲಿದೆ. ಮಂಗಳೂರು ಸೆಂಟ್ರಲ್‌ನಲ್ಲಿ ಬದಲಾವಣೆಯಿಲ್ಲ. ಮಂಗಳೂರು ಜಂಕ್ಷನ್‌ನಲ್ಲಿ ಸಮಯ 5.43/5.45 ಆಗಿದೆ.

ನಂ.12617 ಎರ್ನಾಕುಲಂ ಜಂಕ್ಷನ್‌ ಹಜ್ರತ್‌ ನಿಜಾಮುದ್ದಿನ್‌ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ ರೈಲು ಎರ್ನಾಕುಲಂ ಜಂಕ್ಷನ್‌ನಿಂದ ಬೆಳಗ್ಗೆ 10.10(1.25).3.15 ಗಂಟೆ ಮುಂಚಿತವಾಗಿ ಹೊರಡಲಿದ್ದು, ನಿಜಾಮುದ್ದಿನ್‌ಗೆ ಮಧ್ಯಾಹ್ನ 1.20ಕ್ಕೆ(1.35) ತಲಪಲಿದೆ.

ನಂ.12618 ಹಝರತ್‌ ನಿಜಾಮುದ್ದಿನ್‌ ಎರ್ನಾಕುಳಂ ಜಂಕ್ಷನ್‌ ರೈಲು ಎರ್ನಾಕುಲಂಗೆ 10.25ಕ್ಕೆ(7.30) ತಲಪಲಿದ್ದು 2.55 ಗಂಟೆ ತಡವಾಗಲಿದೆ. ಮಂಗಳೂರು ಜಂಕ್ಷನ್‌ ಆಗಮನ/ನಿರ್ಗಮನ ಸಮಯ 11.25/11.40(10.30/10.40) ಆಗಿದೆ.

ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್‌ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ

ನಂ.12431 ತಿರುವನಂತಪುರಂ ಸೆಂಟ್ರಲ್‌-ಹಝರತ್‌ ನಿಜಾಮುದ್ದಿನ್‌ ರಾಜಧಾನಿ ಎಕ್ಸ್‌ಪ್ರೆಸ್‌(ಟ್ರೈವೀಕ್ಲಿ) ಮಂಗಳವಾರ, ಗುರು, ಶುಕ್ರವಾರಗಳಂದು ತಿರುವನಂತಪುರಂ ಸೆಂಟ್ರಲ್‌ನಿಂದ ಮಧ್ಯಾಹ್ನ 2.40(ಈಗಿನ ಸಮಯ ರಾತ್ರಿ 7.15)ಕ್ಕೆ 4.35 ಗಂಟೆ ಮುಂಚಿತವಾಗಿ ಹೊರಡಲಿದೆ. 12432 Öಝರತ್‌ ನಿಜಾಮುದ್ದಿನ್‌ ತಿರುವನಂತಪುರಂ ಸೆಂಟ್ರಲ್‌ ಟ್ರೈವೀಕ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಭಾನುವಾರ, ಮಂಗಳ, ಬುಧವಾರಗಳಂದು ತಿರುವನಂತಪುರಂ ಸೆಂಟ್ರಲ್‌ಗೆ 2.15 ಗಂಟೆ ತಡವಾಗಿ ಮಧ್ಯರಾತ್ರಿ 1.50ಕ್ಕೆ(11.35) ಬರಲಿದೆ.

ನಂ.16346 ತಿರುವನಂತಪುರಂ-ಮುಂಬಯಿ ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ಸಮಯ ಬದಲಾಗದೆ 9.15ಕ್ಕೆ ಹೊರಡಲಿದೆ. ಕಾಸರಗೋಡು ಆಗಮನ/ನಿರ್ಗಮನ ರಾತ್ರಿ 8.03/8.05, ಮಂಗಳೂರು ಜಂಕ್ಷನ್‌ 8.30/8.35, ಮುಂಬಯಿ ಎಲ್‌ಟಿಟಿ ಆಗಮನ ಸಂಜೆ 5.05.

16345 ಮುಂಬಯಿ ಎಲ್‌ಟಿಟಿ ತಿರುವನಂತಪುರಂ ನೇತ್ರಾವತಿ ಮುಂಬಯಿನಿಂದ 11.40ಕ್ಕೆ ಹೊರಡಲಿದೆ. ತಿರುವನಂತಪುರಂಗೆ ರಾತ್ರಿ 7.35(6.08)ಕ್ಕೆ ತಲಪಲಿದೆ. ಮಂಗಳೂರು ಜಂಕ್ಷನ್‌ 05.45/05.50, ಕಾಸರಗೋಡು 06.34/06.35.

ನಂ.22653 ತಿರುವನಂತಪುರಂ ಹಝರತ್‌ ನಿಜಾಮುದ್ದಿನ್‌ ಸಾಪ್ತಾಹಿಕ ರೈಲು ಶುಕ್ರವಾರ ರಾತ್ರಿ 10(ಪ್ರಸ್ತುತ ಶನಿವಾರ 00.50)ಕ್ಕೆ ಹೊರಡಲಿದೆ. ನಂ.22654 ಹಝರತ್‌ ನಿಜಾಮುದ್ದಿನ್‌-ತಿರುವನಂತಪುರಂ ಸೆಂಟ್ರಲ್‌ ರೈಲು ನಿಜಾಮುದ್ದೀನ್‌ನಿಂದ ಸೋಮವಾರ ಬೆಳಗ್ಗೆ 5ಕ್ಕೆ ಹೊರಟು ತಿರುವನಂತಪುರಂಗೆ 06.50ಕ್ಕೆ(4.45) ತಲಪಲಿದೆ. www.enquiry.indianrail.gov.in. ಪ್ರಯಾಣಿಕರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಮಂಗಳೂರು, ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೈಲು ರಾಜ್ಯದಲ್ಲಿ ಹಾದುಹೋಗುತ್ತದೆ.

Follow Us:
Download App:
  • android
  • ios