ಯಶವಂತಪುರದಿಂದ ವಿಶ್ವಾಮಿತ್ರ ವರೆಗೆ ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು  ಓಡಿಸುತ್ತಿದ್ದು, ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ ಮೂಲಕ ನಾಗರಿಕರ ಬಹುದಿನಗಳ ಕನಸು ನನಸಾಗಿದೆ.

ವಿಜಯನಗರ (ಮೇ.29): ಕೊಟ್ಟೂರು ರೈಲು (Kotturu Train) ಮಾರ್ಗ ಹೊಂದಿ ಹಲವು ದಶಕಗಳು ಕಳೆದರೂ ಕೇವಲ ದಾವಣಗೆರೆ -ಹರಿಹರ -ಹೊಸಪೇಟೆ ಮಾರ್ಗಕ್ಕೆ ಮಾತ್ರ ಸೀಮಿತಗೊಂಡಿತ್ತು. ಇದನ್ನು ಮನಗಂಡ ಇಲ್ಲಿನ ನಾಗರಿಕರು ಕೊಟ್ಟೂರು ರೈಲು ಮಾರ್ಗದ ಮೂಲಕ ಮತ್ತಷ್ಟು ರೈಲು ಓಡಾಟ ಮಾಡಬೇಕು ಎಂಬ ಒತ್ತಾಯ ಮಾಡಲಾರಂಭಿಸಿದರು. ವರ್ಷದ ಹಿಂದೆ ಯಶವಂತಪುರ-ವಿಜಯಪುರ ರೈಲು ಸಹ ಓಡಾಟ ಆರಂಭಿಸಿದೆ. ಅದು ಇಲ್ಲಿನ ಜನತೆಯಲ್ಲಿ ಹೊಸ ಬಗೆಯ ಆಶಯಗಳು ಹುಟ್ಟಿ ಹಾಕಿದವು.

ಇದೀಗ ಯಶವಂತಪುರದಿಂದ ವಿಶ್ವಾಮಿತ್ರ ವರೆಗೆ ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು (Special Train) ಓಡಿಸುತ್ತಿದೆ. ಈ ರೈಲು (Train) ಬೆಳಗ್ಗೆ ಯಶವಂತಪುರವನ್ನು (yeshwanthpur) 8.15ಕ್ಕೆ ಬಿಟ್ಟು ತುಮಕೂರು, ಅರಸಿಕೆರೆ, ಚಿಕ್ಕಜಾಜೂರು, ದಾವಣಗೆರೆ ಮೂಲಕ ಮಧ್ಯಾಹ್ನ 2.40ಕ್ಕೆ ಬಂದು 2.42ಕ್ಕೆ ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ಮಾರ್ಗದ ಮೂಲಕ ಸಂಚರಿಸಿ ಬೆಳಗಿನ ಜಾವ 4.30ಕ್ಕೆ ವಿಶ್ವಾಮಿತ್ರವನ್ನು ತಲುಪಲಿದೆ ಎಂದು ರೈಲ್ವೆ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಯಲ್ಲೂ ನಿಲುಗಡೆಯಾಗಬೇಕು ಎಂಬ ಒತ್ತಾಯ ಪ್ರಯಾಣಿಕರದಾಗಿದ್ದು, ರೈಲ್ವೆ ಮಂಡಳಿ ಇದಕ್ಕೆ ಸ್ಪಂದಿಸಬೇಕಿದೆ.

ಬೋಗಿಗಳನ್ನೇ ಬಿಟ್ಟು ಮುಂದಕ್ಕೆ ಚಲಿಸಿದ ರೈಲ್ವೆ ಎಂಜಿನ್‌!
ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಲ್ಲಿ ಬೋಗಿಗಳನ್ನು ಬಿಟ್ಟು ಎಂಜಿನ್‌ ಮುಂದಕ್ಕೆ ಚಲಿಸಿದ ಅಪರೂಪದ ಘಟನೆ ಭದ್ರಾವತಿ ತಾಲೂಕು ಕಡದಕಟ್ಟೆರೈಲ್ವೆ ಲೆವೆಲ್‌ ಕ್ರಾಸಿಂಗ್‌ ಸಮೀಪದ ಬಿಳಕಿ ಪ್ರದೇಶದ ಬಳಿ ಮೇ.26 ರಂದು ಬೆಳಗ್ಗೆ ನಡೆದಿದೆ.

ಮುಂದಿನ ತಿಂಗಳಿಂದ ದೇಶದ 21 ರಾಜ್ಯಗಳಲ್ಲಿ ವಂದೇ ಭಾರತ ಹೈ ಸ್ಪೀಡ್ ರೈಲು ಸಂಚಾರ

ತಾಳಗುಪ್ಪದಿಂದ ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ತಾಳಗುಪ್ಪ- ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಭದ್ರಾವತಿ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು. ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್‌ ಬೋಗಿಗಳಿಂದ ಬೇರ್ಪಟ್ಟು ಮುಂದಕ್ಕೆ ಚಲಿಸಿದೆ. ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್‌ನನ್ನು, ಲೋಕೋ ಪೈಲೆಟ್‌ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಎಂಜಿನ್‌- ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡ ಈ ಘಟನೆಯಿಂದ ಕೆಲಸಮಯ ಪ್ರಯಾಣಿಕರು ಗೊಂದಲ ಹಾಗೂ ಆತಂಕ​ಕ್ಕೀ​ಡಾದರು.

ಸಾಕಾರಗೊಂಡ ಶಿವಮೊಗ್ಗ ಜನತೆಯ ರೈಲ್ವೆ ಕನಸು, ಶಿವಮೊಗ್ಗ-ಬೆಂಗಳೂರು ನಡುವೆ ಒಂದೇ ಭಾರತ ರೈಲು ಸೇವೆ

ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಹಾಗೂ ಶಿವಮೊಗ್ಗದ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಪರಿ​ಶೀ​ಲಿಸಿ ಎಂಜಿನ್‌ ಹಾಗೂ ಬೋಗಿ ನಡುವೆ ಸಂಪರ್ಕ ಕಲ್ಪಿಸಿದ ಬಳಿಕ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಭದ್ರಾವತಿ ನಿಲ್ದಾಣದಲ್ಲಿ ಹೆಚ್ಚುವರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ರೈಲು ಸಂಚಾರ ಆರಂಭಿಸಿದ್ದು, ಕೆಲಸ ಇನ್ನಿ​ತರ ಕಾರ್ಯಗಳಿ​ಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಯಿತು.

ಎಂಜಿನ್‌ ಬೋಗಿಗಳ ನಡುವೆ ಸಂಪರ್ಕ ತಪ್ಪುವುದು ಅಪರೂಪದಲ್ಲಿ ಅಪರೂಪ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಈ ರೀತಿಯ ಘಟನೆಗಳು ಜರುಗುತ್ತವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ​ದ್ದಾ​ರೆ.