ಕಾರವಾರದಲ್ಲಿ ಮಕ್ಕಳ ಸಂತೆ, ವಿವಿಧ ಖಾದ್ಯಗಳಿಗೆ ಮುಗಿಬಿದ್ದ ಜನತೆ

* ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಕ್ಕಳ ಸಂತೆ 
* ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಬಂದ ಮಕ್ಕಳು
* ಕಾರವಾರದ ಸ್ಟಾರ್ ಚಾಯ್ಸ್ ಕಲಾ ಕೇಂದ್ರ ಮತ್ತು ಜಿನೆಟಿಕ್ ಸ್ಮಾರ್ಟ್ ಸಂಸ್ಥೆ ಸಹಯೋಗದಲ್ಲಿ

makkala santhe organized for children in karwar rbj

ವರದಿ: ಭರತ್‌ರಾಜ್ ಕಲ್ಲಡ್ಕ

ಕಾರವಾರ, (ಏ.17):
ಹಿಂದಿನ ಕಾಲದಲ್ಲಿ ಮನೆಯಂಗಳ ಹಾಗೂ ಮೈದಾನದಲ್ಲಿ ತೊಡಗಿಕೊಳ್ಳುತ್ತಿದ್ದ ಮಕ್ಕಳು (Children), ಆಧುನಿಕ ಸಮಯದಲ್ಲಿ ಮನೆಯೊಳಗೆ ಮೊಬೈಲ್‌ನಲ್ಲೇ (Mobile) ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಮಕ್ಕಳಲ್ಲಿ ಕ್ರೀಯಾಶೀಲತೆ (Creativity) ಮತ್ತು ವ್ಯಾವಹಾರಿಕ ಜ್ಞಾನ ನೀಡಬೇಕೆಂಬ ಉದ್ದೇಶದಿಂದ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಪೋಷಕರ ಸಹಾಯದಿಂದ ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಬಂದಿದ್ದ ಮಕ್ಕಳು, ತಾವು ಕೂಡಾ ವ್ಯಾಪಾರಿಗಳಂತೆ ಜನರಿಗೆ ಮಾರಾಟ ಮಾಡುತ್ತಿದ್ದ ಪರಿ ನೋಡಲು ವಿಶೇಷವಾಗಿತ್ತು. ಈ ಕುರಿತ ಒಂದು ಸ್ಟೋರಿ ಇಲ್ಲಿದೆ... 

ಒಂದು ಕಡೆ ಸಂಭ್ರಮದಿಂದ ಮೆರವಣಿಗೆಯಲ್ಲಿ ಹೊರಟಿರುವ ಪುಟ್ಟ ಪುಟ್ಟ ಮಕ್ಕಳು. ಇನ್ನೊಂದೆಡೆ ವಿವಿಧ ಆಹಾರ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಚಿಣ್ಣರು ಹಾಗೂ ಅವರ ಪೋಷಕರು. ಮತ್ತೊಂದೆಡೆ ಜಾತ್ರೆಯಂತೆ ಸೇರಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ. ಹೌದು, ಕಾರವಾರದ ಸ್ಟಾರ್ ಚಾಯ್ಸ್ ಕಲಾ ಕೇಂದ್ರ ಮತ್ತು ಜಿನೆಟಿಕ್ ಸ್ಮಾರ್ಟ್ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಚಿಣ್ಣರ ಹೆಜ್ಜೆ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಮಕ್ಕಳ ಬೇಸಿಗೆ ಶಿಬಿರ (Summer Camp)ದಲ್ಲಿ ಪಾಲ್ಗೊಂಡು ರಜೆಯ ಮಜಾ ಅನುಭವಿಸುತ್ತಿದ್ದಾರೆ. 

ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಾಧು ಸಂತರ ಸ್ಪರ್ಧೆ

ಈ ಶಿಬಿರದ ಭಾಗವಾಗಿ ಕಾರವಾರ ನಗರದಲ್ಲಿ ಮಕ್ಕಳಿಗಾಗಿ ಸಂತೆ ಆಯೋಜಿಸಲಾಗಿದ್ದು, ಈ ಸಂತೆಯನ್ನು ಕಾರವಾರ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಉದ್ಘಾಟಿಸಿದ್ರು. ಸ್ವತಃ ಮಕ್ಕಳೇ ಚಿಕ್ಕಚಿಕ್ಕ ಅಂಗಡಿಗಳನ್ನಿಟ್ಟು, ತಮ್ಮತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು, ಮನೆಯಲ್ಲಿ ಮಾಡಿದ ತಿಂಡಿ-ತಿನಿಸು, ತಂಪು ಪಾನೀಯಗಳು ಸೇರಿದಂತೆ ವಿವಿಧ ವಸ್ತುಗಳನ್ನಿಟ್ಟು ವ್ಯಾಪಾರಕ್ಕೆ ನಡೆಸಿದ್ದಾರೆ. ಮಕ್ಕಳು ನಡೆಸುತ್ತಿದ್ದ ಈ ವ್ಯಾಪಾರವನ್ನು ನೋಡಲು ವಿಶೇಷವಾಗಿತ್ತು. 

ಅಂದಹಾಗೆ, ಮಕ್ಕಳ ಸಂತೆಯಲ್ಲಿ ವಿವಿಧ ಆಹಾರ ವಸ್ತುಗಳನ್ನು ವ್ಯಾಪಾರ ನಡೆಸಿದ ಮಕ್ಕಳು ಭರ್ಜರಿ ವ್ಯಾಪಾರ ಮಾಡಿ ಹೆಚ್ಚಿನ ಲಾಭ ಗಳಿಸಿದ್ದಾರೆ. ಮಕ್ಕಳಿಗಾಗಿ ನಡೆಸಿದ ಅಪರೂಪದ ಸಂತೆಯಲ್ಲಿ ಆಹಾರ ವಸ್ತುಗಳನ್ನು ಖರೀದಿಸಲು ನೂರಾರು ಜನರು ಸೇರಿದ್ದರು. ಕೆಲವು ತಾಸುಗಳಲ್ಲಿಯೇ ವ್ಯಾಪಾರ ನಡೆದು ಸಾವಿರಾರು ರೂಪಾಯಿ ವಹಿವಾಟು ನಡೆಯಿತು. ಪೋಷಕರ ಸಹಾಯದೊಂದಿಗೆ ವಿವಿಧ ವಸ್ತುಗಳನ್ನು ಮಾರಾಟ ಮಾಡಿದ ಮಕ್ಕಳಂತೂ ಫುಲ್ ಸಂತೋಷವಾಗಿದ್ದರು. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆಟ, ಸಂಗೀತ, ಸ್ವಿಮ್ಮಿಂಗ್ ಹಾಗೂ ಇತರ ಚಟುವಟಿಕೆಯೊಂದಿಗೆ ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ ಹೊರ ಹಾಕುವ ಜತೆಗೆ ಅವರಲ್ಲಿನ ವ್ಯಾವಹಾರಿಕ ಜ್ಞಾನ ಕೂಡಾ ಹೆಚ್ಚಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಅಂತಾರೆ ಸಂಘಟಕರು. 

ಒಟ್ಟಿನಲ್ಲಿ ಸಾಮಾಜಿಕ ಹಾಗೂ ವ್ಯವಹಾರಿಕ ಜ್ಞಾನ ಪಡೆಯುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಈ ಮಕ್ಕಳ ಸಂತೆ ಕಾರ್ಯಕ್ರಮದಲ್ಲಂತೂ ಮಕ್ಕಳು ಹಾಗೂ ಅವರ ಪೋಷಕರು ಸಕ್ಕತ್ ಎಂಜಾಯ್ ಮಾಡಿದ್ರು. ಇಷ್ಟು ದಿನಗಳ ಕಾಲ ಮೊಬೈಲ್ ಲೋಕದಲ್ಲಿದ್ದ ಮಕ್ಕಳಂತೂ ಶಿಬಿರದ ಮೂಲಕ ವ್ಯಾಪಾರ ವಹಿವಾಟುಗಳ ಜ್ಞಾನ ಪಡೆದು ಸಂತೋಷಗೊಂಡಿರೋದಂತೂ ಸತ್ಯ. 

ಮಕ್ಕಳಿಗೆ ಈ ಅಭ್ಯಾಸಗಳನ್ನು ತಪ್ಪದೇ ಕಲಿಸಿಕೊಡಬೇಕು

Latest Videos
Follow Us:
Download App:
  • android
  • ios