ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಶಕ್ತಿ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾನೆ.

Karnataka Shakti Yojana Burkha wearing Hubli man free traveled on KSRTC bus sat

ಹುಬ್ಬಳ್ಳಿ (ಜು.06): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಕ್ತಿ ಯೋಜನೆ ಲಾಭ ಪಡೆಯಲು ಪುರುಷನೊಬ್ಬ ಬುರ್ಖಾ ಧರಿಸಿ ಪ್ರಯಾಣ ಮಾಡಿದ್ದಾನೆ. ಬುರ್ಖಾ ಧರಿಸಿದ ವ್ಯಕ್ತಿಯನ್ನು ವೀರಭದ್ರಯ್ಯ ಎಂದು ಗುರುತಿಸಲಾಗಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬುರ್ಖಾ ಹಾಕಿದ ವ್ಯಕ್ತಿ ಪತ್ತೆಯಾಗಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆ ನಿವಾಸಿಯಾಗಿರೋ ವೀರಭದ್ರಯ್ಯ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುರ್ಖಾ ಧರಿಸಿ ಉಚಿತ ಪ್ರಯಾಣ ಮಾಡಿಕೊಂಡು ಬಂದಿದ್ದಾನೆ. ಇನ್ನು ಬುರ್ಖಾ ಧರಿಸಿದ್ದ ವೀರಭದ್ರಯ್ಯನ ಬಳಿ ಮಹಿಳೆಯರ ಆಧಾರ್‌ ಕಾರ್ಡ್‌ ಕೂಡ ಪತ್ತೆಯಾಗಿದೆ. 

ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು! ದಂಗಾದ ಕಂಡಕ್ಟರ್

ಹಲವು ಪುರುಷರು ಬುರ್ಖಾ ಧರಿಸಿ ಪ್ರಯಾಣದ ಅನುಮಾನ: ಇನ್ನು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆ ಲಾಭ ಪಡೆಯಲು ಹಲವು ಪುರುಷರು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಈ ಕುರಿತು ಸಾರ್ವಜನಿಕರು ಬುರ್ಖಾ ಧರಿಸಿದ್ದರೂ ಬಸ್‌ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದರಿಂದ ಪ್ರಶ್ನೆ ಮಾಡಿದಾಗ ವೀರಭದ್ರಯ್ಯ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ತಾನು ಭಿಕ್ಷಾಟನೆ ಉದ್ದೇಶದಿಂದ ಬುರ್ಖಾ ಹಾಕಿದ್ದೇನೆ ಎಂದು ವೀರಭದ್ರಯ್ಯ ಹೇಳಿಕೊಂಡಿದ್ದಾನೆ. 

ಹೊರ ರಾಜ್ಯದ ಮಹಿಳೆಯರಿಂದಲೂ ಮೋಸ:  ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕಾಗಿ "ಶಕ್ತಿ ಯೋಜನೆ" ಜಾರಿಗೊಳಿಸಿದೆ. ಆದರೆ, ಈ ಯೋಜನೆಯ ಲಾಭವನ್ನು ಪಡೆಯುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಖತರ್ನಾಕ್‌ ಬುದ್ಧಿಯನ್ನು ತೋರಿಸಿ ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್‌ ಮೊದಲ ಗ್ಯಾರಂಟಿಯಾಗಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಂಡ ಬೆನ್ನಲ್ಲೇ ಮಹಿಳೆಯರ ಸಂಚಾರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಅನುಕೂಲವಾಗಿದ್ದು, ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ತಮ್ಮ ಖತರ್ನಾಕ್‌ ಐಡಿಯಾವನ್ನು ಉಪಯೋಗಿಸಿ ಬಸ್‌ನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಅವರ ಐಡಿಯಾ ನೋಡಿದ್ರೆ ನೀವೂ ಕೂಡ ಬೆಚ್ಚಿ ಬೀಳ್ತೀರಾ! 

ಫ್ರೀ ಬಸ್‌ ಹತ್ಕೊಂಡು ಹೆಂಡ್ತಿ ಊರಿಗೋದ್ಲು ಅಂತ, ಬಸ್‌ ಗಾಲಿಗೆ ತಲೆಕೊಟ್ಟ ಪತಿರಾಯ: ಡ್ರೈವರ್‌ ತಬ್ಬಿಬ್ಬು!

ಆಧಾರ್‌ ಕಾರ್ಡ್‌ನ ಭಾಷೆ ಬದಲಿಸಿಕೊಂಡ ಮಹಿಳೆಯರು: ಇನ್ನು ಕರ್ನಾಟಕದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್‌ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಪಡೆದುಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ, ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಪಡೆಯಲಾಗಿದೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳಿಗೆ ತಿಳಿದುಬಂದಿದೆ.

Latest Videos
Follow Us:
Download App:
  • android
  • ios