ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು! ದಂಗಾದ ಕಂಡಕ್ಟರ್

ಕರ್ನಾಟಕದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವ ಹಿನ್ನೆಲೆಯಲ್ಲಿ ಹೊರ ರಾಜ್ಯದ ಮಹಿಳೆಯರು ತಮ್ಮ ಖತರ್ನಾಕ್‌ ಬುದ್ಧಿಯನ್ನು ತೋರಿಸಿ ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ.

Bengali women change language on Aadhaar card to get free bus ride in Karnataka sat

ಬೆಂಗಳೂರು (ಜೂ.13): ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕಾಗಿ "ಶಕ್ತಿ ಯೋಜನೆ" ಜಾರಿಗೊಳಿಸಿದೆ. ಆದರೆ, ಈ ಯೋಜನೆಯ ಲಾಭವನ್ನು ಪಡೆಯುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಖತರ್ನಾಕ್‌ ಬುದ್ಧಿಯನ್ನು ತೋರಿಸಿ ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ.

ರಾಜ್ಯಾದ್ಯಂತ ಕಾಂಗ್ರೆಸ್‌ ಮೊದಲ ಗ್ಯಾರಂಟಿಯಾಗಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಂಡ ಬೆನ್ನಲ್ಲೇ ಮಹಿಳೆಯರ ಸಂಚಾರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಅನುಕೂಲವಾಗಿದ್ದು, ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ತಮ್ಮ ಖತರ್ನಾಕ್‌ ಐಡಿಯಾವನ್ನು ಉಪಯೋಗಿಸಿ ಬಸ್‌ನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಅವರ ಐಡಿಯಾ ನೋಡಿದ್ರೆ ನೀವೂ ಕೂಡ ಬೆಚ್ಚಿ ಬೀಳ್ತೀರಾ!  ಇದನ್ನು ನೋಡಿದ ಬಸ್‌ ಕಂಡಕ್ಟರ್‌ಗಳು ಶಾಕ್‌ ಆಗಿದ್ದು, ಹಣ ಕೊಟ್ಟು ಪ್ರಯಾಣ ಮಾಡುವಂತೆ ತಾಕೀತು ಮಾಡಿದ್ದಾರೆ.

ಸ್ಟೂಡೆಂಟ್‌ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಕೆ ಆರಂಭ: ಪಾಸ್‌ನ ಹೊಸ ದರ ಹೀಗಿದೆ

ಆಧಾರ್‌ ಕಾರ್ಡ್‌ನ ಭಾಷೆ ಬದಲಿಸಿಕೊಂಡ ಮಹಿಳೆಯರು: ಇನ್ನು ಕರ್ನಾಟಕದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್‌ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಪಡೆದುಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ, ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಪಡೆಯಲಾಗಿದೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳಿಗೆ ತಿಳಿದುಬಂದಿದೆ. 

ಬಂಗಾಳಿ ವಿಳಾಸವನ್ನು ಕನ್ನಡದಲ್ಲಿ ಮುದ್ರಿಸಿಕೊಂಡರು: ತಮಿಳುನಾಡಿನ ಹಾಗೂ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಕನ್ನಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಲಾಗಿದೆ. ಇಂತಹ ಆಧಾರ್ ಕಾರ್ಡ್ ತೋರಿಸಿದ ಇಬ್ಬರೂ ಮಹಿಳೆಯರು, ಕಂಡಕ್ಟರ್‌ ಬಳಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಫೊಟೋಗಳನ್ನು ತೆಗೆದುಕೊಂಡು ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶಕ್ತಿ ಯೋಜನೆ ಕೇವಲ ರಾಜ್ಯದ ಮಹಿಳೆಯರಿಗೆ ಅನ್ವಯವಾಗಲಿದ್ದು, ಎಲ್ಲ ನಿರ್ವಾಹಕರು ಕಡ್ಡಾಯವಾಗಿ ಸರ್ಕಾರದಿಂದ ವಿತರಣೆ ಮಾಡಲಾದ ಭಾವಚಿತ್ರವಿರುವ ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ. 

ಮಹಿಳೆಯರ ಖತರ್ನಾಕ್‌ ಐಡಿಯಾದಿಂದ ಎಚ್ಚೆತ್ತುಕೊಂಡು ದಾಖಲೆಗಳನ್ನು ಎರಡೆರಡು ಬಾರಿ ಪರಿಶೀಲನೆ ಮಾಡಿ ಟಿಕೆಟ್‌ ವಿತರಣೆ ಮಾಡುತ್ತಿದ್ದಾರೆ. ಒಂದು ವೇಳೆ ಸರಿಯಾಗಿ ಪರಿಶೀಲನೆ ಮಾಡದೇ ಟಿಕೆಟ್‌ ನೀಡದರೆ ಕಂಡಕ್ಟರ್‌ಗಳಿಗೆ ದಂಡ ಬೀಳುವುದು ಗ್ಯಾರಂಟಿಯಾಗಿದೆ. ಆದ್ದರಿಂದ, ನಿರ್ವಾಹಕರು ಎಚ್ಚೆತ್ತುಕೊಂಡಿ ಪರಿಶೀಲನೆ ಕಾರ್ಯವನ್ನು ಮುಂದುವರೆಸಿದ್ದಾರೆ. ಇನ್ನು ಸರ್ಕಾರವೂ ಕೂಡ ಈ ಬಗ್ಗೆ ಬಸ್‌ ನಿರ್ವಾಹಕರಿಗೆ ಎಚ್ಚರಿಕೆಯ ಟಿಪ್ಪಣಿಯನ್ನು ಹೊರಡಿಸುವ ಸಾಧ್ಯತೆಯಿದೆ. 

BENGALURU: ಅತ್ತೆಯೊಂದಿಗೆ ಜಗಳವಾಡ್ತಿದ್ದ ಅಮ್ಮನನ್ನೇ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ಶವ ತಂದ ಮಗಳು

ಧರ್ಮಸ್ಥಳದಲ್ಲಿ ಹೆಚ್ಚಾದ ಮಹಿಳಾ ಭಕ್ತರ ದಂಡು: 
ದಕ್ಷಿಣ ಕನ್ನಡ:  ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಭಕ್ತರ ದಂಡು ಹೆಚ್ಚಾಗಿದೆ ಎಂದು ಧರ್ಮಸ್ಥಳದ ಪಾರುಪತ್ಯಗಾರರಾದ ಲಕ್ಷ್ಮಿ ನಾರಾಯಣ್ ರಾವ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಪಯೋಗ ಆಗಿದೆ. ಧರ್ಮಸ್ಥಳಕ್ಕೂ ಮಹಿಳಾ ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಮೊನ್ನೆಯಿಂದ ಕ್ಷೇತ್ರಕ್ಕೆ ಬರೋ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮಹಿಳೆಯರಿಗೆ ಉಪಯೋಗ ಆಗಿದೆ. ಕ್ಷೇತ್ರಗಳಿಗೆ ಬರೋ ಮಹಿಳೆಯರ ಸಂಖ್ಯೆ ಇನ್ನೂ ಹೆಚ್ಚಬಹುದು. ಹಳ್ಳಿಯ ಮತ್ತು ಹಿಂದುಳಿದ ವರ್ಗದವರು ಕ್ಷೇತ್ರಕ್ಕೆ ಬರಲು‌ ಅನುಕೂಲವಾಗಿದೆ. ಈ ಯೋಜನೆ ಉತ್ತಮವಾಗಿದ್ದು, ಇದು ಹೀಗೆಯೇ ಮುಂದುವರೆಯಲಿ ಎಂದು ಹೇಳಿದರು. 

Latest Videos
Follow Us:
Download App:
  • android
  • ios