* ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯಿಂದ ಎಎಸ್ಪಿ ವರೆಗೆ ಏರಿದ್ದ ಶೋಭಾ* ಮನೆಯಲ್ಲಿ ಹೃದಯಾಘಾತದಿಂದ ಎಎಸ್ಸಿ ಶೋಭಾ ಖಟಾವಕರ್‌ ನಿಧನ* ಮನೆಯ ಕೋಣೆಯಲ್ಲಿ ಮೃತ ಪಟ್ಟಸ್ಥಿತಿಯಲ್ಲಿ ಶೋಭಾ ಪತ್ತೆ

 ಬೆಂಗಳೂರು(ಏ.16): ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಶೋಭಾ ಖಟಾವಕರ್‌ (59) ಅವರು ಮನೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ಸಾವನ್ನಪ್ಪಿದ್ದಾರೆ.

ಜೆ.ಪಿ.ನಗರದ 5ನೇ ಹಂತದಲ್ಲಿ ನೆಲೆಸಿದ್ದ ಶೋಭಾ ಅವರು, ಬೆಳಗ್ಗೆ 8ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕೆಲ ಹೊತ್ತಿನ ಬಳಿಕ ಭದ್ರತಾ ಸಿಬ್ಬಂದಿ ಮೃತರ ಮನೆಯೊಳಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!

ತಮ್ಮ ಪುತ್ರನ ಕುಟುಂಬದ ಜತೆ ಅವರು ನೆಲೆಸಿದ್ದರು. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಹಾಸನಕ್ಕೆ ಮಗ ಮತ್ತು ಸೊಸೆ ತೆರಳಿದ್ದರಿಂದ ಶುಕ್ರವಾರ ಮನೆಯಲ್ಲೇ ಶೋಭಾ ಮಾತ್ರ ಇದ್ದರು. ಆಗ ಹೃದಯಾಘಾತವಾಗಿ ಮಲಗುವ ಕೋಣೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮೃತರ ಮೊಬೈಲ್‌ಗೆ ಶುಕ್ರವಾರ ಬೆಳಗ್ಗೆ ಕಾರು ಚಾಲಕ ಕರೆ ಮಾಡಿದಾಗ ಪ್ರತಿಕ್ರಿಯೆ ಬಂದಿಲ್ಲ. ಆಗ ಅವರ ಪುತ್ರನಿಗೆ ಚಾಲಕ ಕರೆ ಮಾಡಿದಾಗ ವಿಚಾರಿಸಿದ್ದಾರೆ. ಕೂಡಲೇ ಪುತ್ರ, ತಮ್ಮ ತಾಯಿಗೆ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಿಲ್ಲ. ಇದರಿಂದ ಅನುಮಾನಗೊಂಡ ಮೃತರ ಪುತ್ರ, ಮನೆಯ ಭದ್ರತಾ ಸಿಬ್ಬಂದಿಗೆ ಮನೆಯೊಳಗೆ ಹೋಗಿ ವಿಚಾರಿಸುವಂತೆ ಸೂಚಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ರಾಗಿದ್ದ ತಮ್ಮ ಪತಿ ಸಾವಿನ ಬಳಿಕ ಅನುಕಂಪದ ಆಧಾರದಡಿ ಶೋಭಾ ಅವರು, 1990ರಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಪೊಲೀಸ್‌ ಇಲಾಖೆಗೆ ಸೇರಿದರು. ಬೆಂಗಳೂರು ಸಿಸಿಬಿ ಎಸಿಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ 32 ವರ್ಷಗಳು ಸುದೀರ್ಘ ಸೇವೆ ಸಲ್ಲಿಸಿದ್ದ ಅವರು, ಕೆಲ ದಿನಗಳ ಹಿಂದಷ್ಟೇ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾಗಿ ಮುಂಬಡ್ತಿ ಪಡೆದು ಹುಬ್ಬಳ್ಳಿಯ ಹೆಸ್ಕಾಂ ಎಸ್ಪಿ ಹುದ್ದೆಗೆ ನಿಯೋಜಿತರಾಗಿದ್ದರು. ಬೆಂಗಳೂರು ನಗರ ವಿಶೇಷ ಶಾಖೆ (ಎಸ್‌ಬಿ) ಎಸಿಪಿ ಹುದ್ದೆಯಲ್ಲಿ ಅವರಿಗೆ ಗುರುವಾರ ಅಷ್ಟೇ ಬೀಳ್ಕೊಡುಗೆ ನೀಡಲಾಗಿತ್ತು. ಮೃತರು ಇಬ್ಬರು ಮಕ್ಕಳು, ಸ್ನೇಹಿತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?

Bengaluru: ಜಿಮ್‌ನಲ್ಲಿ ಮಹಿಳೆ ದಿಢೀರ್‌ ಸಾವಿಗೆ ಮಿದುಳಿನಲ್ಲಿ ರಕ್ತಸ್ರಾವ ಕಾರಣ!

ಇತ್ತೀಚೆಗೆ ಜಿಮ್‌ನಲ್ಲಿ (Gym) ದೈಹಿಕ ಕಸರತ್ತು (Physical Exercise) ಮಾಡುವಾಗ ಮಹಿಳೆಯೊಬ್ಬರು (Woman) ದಿಢೀರ್‌ ಕುಸಿದು ಮೃತಪಡಲು, ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ (Post Mortem Report) ಬೆಳಕಿಗೆ ಬಂದಿದೆ. ಮಾ.26ರಂದು ಮಲ್ಲೇಶ್‌ಪಾಳ್ಯದ ಚಾಲೆಂಜಿಂಗ್‌ ಹೆಲ್ತ್‌ ಕ್ಲಬ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಮಂಗಳೂರು ಮೂಲದ ವಿನಯಾ ಕುಮಾರಿ ವಿಠ್ಠಲ್‌(34) ದಿಢೀರ್‌ ಕುಸಿದು ಮೃತಪಟ್ಟಿದ್ದರು. ಆರಂಭದಲ್ಲಿ ದಿಢೀರ್‌ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. 

ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ವಿನಯಾ ಅವರ ಮಿದುಳಿನ ರಕ್ತನಾಳ ಛಿದ್ರವಾಗಿ ತೀವ್ರ ಸ್ರಾವವಾಗಿದ್ದೇ ಸಾವಿಗೆ ನಿಖರ ಕಾರಣ ಎಂಬುದು ಬೆಳಕಿಗೆ ಬಂದಿದೆ. ಭಾರದ ವಸ್ತುಗಳನ್ನು ಎತ್ತುವಾಗ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ವಿನಯಾ ಅವರು ದೈಹಿಕ ಕಸರತ್ತು ಮಾಡುವಾಗ ಮಿದುಳಿನ ರಕ್ತನಾಳಗಳು ಛಿದ್ರವಾಗಿ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾಗಿ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್‌ ತಿಳಿಸಿದ್ದಾರೆ.