11:31 PM (IST) Apr 18

Karnataka News Live 18th April: ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು

ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.
Read Full Story
11:12 PM (IST) Apr 18

Karnataka News Live 18th April: Dharwad - ಶೀಘ್ರದಲ್ಲಿಯೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಬೆಂಗಳೂರಿಗೆ ಸ್ಥಳಾಂತರ?

ಪ್ರಸಾರ ಭಾರತಿಯು ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರದ ಸುದ್ದಿ ಪ್ರಸಾರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. 1981ರಲ್ಲಿ ಆರಂಭವಾದ ಈ ಕೇಂದ್ರದ ಸ್ಥಳಾಂತರಕ್ಕೆ ಉತ್ತರ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಲಾಗುತ್ತಿದೆ.
Read Full Story
10:46 PM (IST) Apr 18

Karnataka News Live 18th April: ಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆಗೆ ಚಾಲನೆ

ಹಾವೇರಿಯಲ್ಲಿ ಹೈನುಗಾರರ ಹಿತದೃಷ್ಟಿಯಿಂದ ‘ರಾಸು ವಿಮೆ’ ಯೋಜನೆಗೆ ಚಾಲನೆ ನೀಡಲಾಗಿದೆ. ಹಸು ಅಥವಾ ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡಿ, ಹೈನುಗಾರಿಕೆಯನ್ನು ಮುಂದುವರಿಸಲು ಈ ಯೋಜನೆ ಸಹಕಾರಿಯಾಗಿದೆ.
Read Full Story
09:09 PM (IST) Apr 18

Karnataka News Live 18th April: ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ, ಚೆನ್ನೈ

ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
Read Full Story
08:26 PM (IST) Apr 18

Karnataka News Live 18th April: ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬ - ತಹಸೀಲ್ದಾರ್‌ಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ.

Read Full Story
07:40 PM (IST) Apr 18

Karnataka News Live 18th April: ದಾವಣಗೆರೆ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ನಾಯಕ ಸೈಯದ್ ಸೈಫುಲ್ಲಾ ಸಾಬ್ ನಿಧನ

ದಾವಣಗೆರೆಯ ಹಿರಿಯ ಕಾಂಗ್ರೆಸ್ ನಾಯಕ, ಶಿಕ್ಷಣ ತಜ್ಞ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ಸೈಯದ್ ಸೈಫುಲ್ಲಾ ಸಾಬ್ (79) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

Read Full Story
06:56 PM (IST) Apr 18

Karnataka News Live 18th April: ಅಂದು ದೇವೇಂದ್ರ ಮಹಾಲಕ್ಷ್ಮೀಗೋಸ್ಕರ ಹೇಳಿದ್ದ ಈ ಮಂತ್ರ ಹೇಳಿ; ಕೋಟ್ಯಧಿಪತಿ ಆಗ್ತೀರಾ! ಯಾವಾಗ? ಹೇಗೆ?

Mantra Chant ಬಡತನವನ್ನು ದೂರ ಮಾಡಿ ಕೋಟ್ಯಾಧಿಪತಿ ಯೋಗ ಪಡೆಯಲು, ಮಹಾಲಕ್ಷ್ಮಿ, ಶುಕ್ರ ಮತ್ತು ಕುಬೇರರ ಶಕ್ತಿಶಾಲಿ ಮಂತ್ರಗಳನ್ನು ಪಠಿಸುವುದು ಬಹಳ ಮುಖ್ಯ. ಈ ಮಂತ್ರಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಂಬಿಕೆಯಿಂದ ಜಪಿಸಿದರೆ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಿ, ಸಂಪತ್ತು ವೃದ್ಧಿಯಾಗುತ್ತದೆ.

Read Full Story
06:42 PM (IST) Apr 18

Karnataka News Live 18th April: ಮಹಿಳೆಯರ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿ ಜಾರಿ ಮಾಡಿ - ಸೌಮ್ಯ ರೆಡ್ಡಿ ಆಗ್ರಹ

ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ.

Read Full Story
06:25 PM (IST) Apr 18

Karnataka News Live 18th April: ಪಶ್ಚಿಮ ಘಟ್ಟಗಳು ಭವಿಷ್ಯದ ಪೀಳಿಗೆಯ ಜೀವನಾಡಿ - ಸಚಿವ ಈಶ್ವರ್ ಖಂಡ್ರೆ

ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Read Full Story
06:11 PM (IST) Apr 18

Karnataka News Live 18th April: ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲು - ಗೃಹ ಸಚಿವ ಪರಮೇಶ್ವರ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Read Full Story
06:03 PM (IST) Apr 18

Karnataka News Live 18th April: ಮನೇಲಿ ತರಕಾರಿ ಇಲ್ಲದಿರುವಾಗ ಮಾಡಿ ಘಮ ಘಮಿಸುವ ರುಚಿಯಾದ ಜೀರೋ ವೆಜಿಟೇಬಲ್ ಬಿರಿಯಾನಿ

ಮನೇಲಿ ಯಾವುದೇ ತರಕಾರಿ ಇಲ್ಲದಿದ್ದಾಗಲೂ ಹೋಟೆಲ್ ಸ್ಟೈಲ್‌ನ ಘಮಘಮಿಸುವ ವೆಜಿಟೆಬಲ್ ಬಿರಿಯಾನಿ ಮಾಡಬಹುದು ಗೊತ್ತಾ? ಬ್ಯಾಚುಲರ್‌ಗಳಿಗೆ ಇದು ಬೆಸ್ಟ್ ಚಾಯ್ಸ್. ಸಮಯ ಇಲ್ಲದಿದ್ದಾಗ ಬೇಗನೆ ಅಡುಗೆ ಮುಗಿಸಬೇಕು ಅನ್ನೋರಿಗೆ ಇದು ಪರ್ಫೆಕ್ಟ್ ಆಯ್ಕೆ. ಇದನ್ನು ಮಾಡೋದು ಹೇಗೆ ಅಂತ ಇಲ್ಲಿ ನೋಡೋಣ ಬನ್ನಿ.
Read Full Story
05:58 PM (IST) Apr 18

Karnataka News Live 18th April: ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮತ್ತೆ ನೇಪಥ್ಯಕ್ಕೆ, ಕನಸು ಹಳಿ ತಪ್ಪಿತೇ?

ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ನೇಪಥ್ಯಕ್ಕೆ ಸರಿಯುವ ಆತಂಕ ಎದುರಾಗಿದೆ. ಕೇಂದ್ರ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಬೆಂಬಲದ ಕೊರತೆಯ ನಡುವೆಯೂ, ಹೋರಾಟ ಸಮಿತಿಯು ಕಾಮಗಾರಿ ಪೂರ್ಣಗೊಳ್ಳುವವರೆಗೂ ನಿರಂತರ ಹೋರಾಟ ನಡೆಸಲು ಸಜ್ಜಾಗಿದೆ.
Read Full Story
05:49 PM (IST) Apr 18

Karnataka News Live 18th April: ವರ್ಷಗಟ್ಟಲೇ ಉಪ್ಪಿನಕಾಯಿ ಫ್ರಿಡ್ಜ್‌ನಲ್ಲಿಟ್ರೆ ಏನಾಗುತ್ತೆ? ಈ ಹಿಂದೆ ಅಜ್ಜಿಯಂದಿರು ಏನು ಮಾಡ್ತಿದ್ರು?

ಅಮ್ಮ ಮತ್ತು ಉಪ್ಪಿನಕಾಯಿ ಎಂದಿಗೂ ಬೋರ್ ಹೊಡೆಯಲ್ಲ. ಆದರೆ ನಾವೇ ಅದರ ಅಸಲಿ ಸ್ವಾದವನ್ನು ಹಾಳು ಮಾಡುತ್ತಿದ್ದೇವೆ. ಉಪ್ಪಿನಕಾಯಿ ತಯಾರಿಸುವ ಹಳೆಯ ಸಂಪ್ರದಾಯಗಳನ್ನು ಬದಿಗಿಟ್ಟು, ಫ್ರಿಡ್ಜ್‌ನಲ್ಲಿ ಇಟ್ಟು ಅದರ ರುಚಿಯನ್ನು ನಾಶ ಮಾಡುತ್ತಿದ್ದೇವೆ.

Read Full Story
05:43 PM (IST) Apr 18

Karnataka News Live 18th April: ಪರವಾನಗಿ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ಸಂಕಷ್ಟ, ಭೂ ವ್ಯವಹಾರಕ್ಕೆ ಬಿದ್ದ ಬೀಗ! ಏನಿದು ಬಿಕ್ಕಟ್ಟು?

 ಪರವಾನಗಿ ಭೂಮಾಪಕರು ಖಾಯಮಾತಿಗಾಗಿ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಭೂಮಾಪನ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ತಾಲೂಕಿನಲ್ಲಿ 710ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಾಗಿದ್ದು, ಜಮೀನು ನೋಂದಣಿ, ಖರೀದಿ-ಮಾರಾಟದಂತಹ ಪ್ರಮುಖ ವ್ಯವಹಾರಗಳು ನಿಂತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story
05:35 PM (IST) Apr 18

Karnataka News Live 18th April: 46 ಮನೆ ಮಾಲೀಕ ಜೊತೆ ಜೊತೆಯಲಿ ಧಾರಾವಾಹಿ ನಟ ಶಿವಾಜಿ ಜಾಧವ್;‌ ಮೈಸೂರು ಅರಮನೆಯ ಪೀಠೋಪಕರಣವೂ ಇದೆ!

Actor Shivaji Jadhav: ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶಿವಾಜಿರಾವ್ ಜಾಧವ್ ಅವರು ಸುಮಾರು 45 ಮನೆಗಳ ಮಾಲೀಕರು. ಒಟ್ಟಾರೆಯಾಗಿ 4 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಕಲಾ ಮಾಧ್ಯಮ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Read Full Story
05:35 PM (IST) Apr 18

Karnataka News Live 18th April: ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ

KSRTC Pallakki AC Bus Mangaluru To Mantralaya ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು-ಮಂತ್ರಾಲಯ ಮಾರ್ಗದ ನಡುವೆ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಕಾರ್ಯಾಚರಣೆ ಆರಂಭವಾಗಿದೆ.

Read Full Story
05:20 PM (IST) Apr 18

Karnataka News Live 18th April: ಪತಿ ಶವಕ್ಕಾಗಿ ಮಹಿಳೆಯರ ಕಿತ್ತಾಟ; ಅನಾಥವಾಯ್ತು ಇಬ್ಬರು ಹೆಂಡ್ತಿಯರ ಮುದ್ದಿನ ಗಂಡನ ಹೆಣ

ಶಿವಮೊಗ್ಗದಲ್ಲಿ, ಹನುಮಂತಪ್ಪ ಎಂಬವರ ಮರಣದ ನಂತರ ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ. ಈ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನದ ಮೂಲಕ ಅಂತ್ಯಸಂಸ್ಕಾರವನ್ನು ಮೃತರ ಹುಟ್ಟೂರಿನಲ್ಲಿ ನಡೆಸಲು ಒಪ್ಪಿಗೆಯಾಯಿತು.
Read Full Story
05:20 PM (IST) Apr 18

Karnataka News Live 18th April: ಕೇರಳ ಬಾಲಕಿ ಆತ್ಮ*ಹತ್ಯೆ ಹಿನ್ನೆಲೆ - ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್, ಕಠಿಣ ಪೊಲೀಸ್ ಬಂದೋಬಸ್ತ್!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇರಳ ಮೂಲದ ಬಾಲಕಿಯ ಅಸಹಜ ಸಾವಿನ ಘಟನೆ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Read Full Story
05:18 PM (IST) Apr 18

Karnataka News Live 18th April: ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಎಲ್ಎಚ್ ಬಿ ಬೋಗಿಗಳ ಅಳವಡಿಕೆ, ಪ್ರಯಾಣಿಕರ ಹೊಸ ಪಯಣದ ರಹಸ್ಯ!

ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ, ಹೆಚ್ಚು ಸುರಕ್ಷಿತವಾದ ಎಲ್ಎಚ್‌ಬಿ ಬೋಗಿಗಳಾಗಿ ಬದಲಾಯಿಸಲಾಗುತ್ತಿದೆ. ಏಪ್ರಿಲ್ 26 ರಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆಯು 20 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.
Read Full Story
04:51 PM (IST) Apr 18

Karnataka News Live 18th April: ಬೆಂಗಳೂರು - ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!

ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್‍ಯಾಪಿಡೋ ಚಾಲಕ ನಾಗರಾಜ್‌ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story