10:24 PM (IST) Aug 10

Karnataka news live Cars - ₹3.35 ಲಕ್ಷ ಕಡಿಮೆ ಬೆಲೆಗೆ Tata Curvv EV! 585 ಕಿ.ಮೀ. ರೇಂಜ್‌ನ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕೂಪ್-ಎಸ್‌ಯುವಿ, ಕರ್ವ್ ಇವಿ ಮೇಲೆ ₹3.35 ಲಕ್ಷದವರೆಗೆ ಭಾರಿ ರಿಯಾಯಿತಿ ನೀಡುತ್ತಿದೆ. ಈ ಕಾರು 585 ಕಿ.ಮೀ. ರೇಂಜ್, 5-ಸ್ಟಾರ್ ಸುರಕ್ಷತೆ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದ್ದು, ಆಫರ್‌ನ ನಿಖರ ವಿವರಗಳು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾಗಬಹುದು.
Read Full Story
09:57 PM (IST) Aug 10

Karnataka news live ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಕ್ರೂರ ಕೃತ್ಯ.. ಇಬ್ಬರು ಮದ್ದಾದ ಮಕ್ಕಳ ಜೀವ ತೆಗೆದ ಅಪ್ಪ

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಘೋರ ಕೃತ್ಯವೊಂದು ನಡೆದಿದೆ. ಪಾಪಿ ತಂದೆಯೊಬ್ಬ ತನ್ನಿಬ್ಬರು ಹೆಣ್ಮಕ್ಕಳನ್ನು ಬರ್ಬರವಾಗಿ ಜೀವ ತೆಗೆದಿದ್ದಾನೆ. ಆತ ಯಾಕೆ ಹಾಗೆ ಮಾಡಿದ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
09:47 PM (IST) Aug 10

Karnataka news live ಬೆಂಗಳೂರಲ್ಲಿ ಜಿಟಿಜಿಟಿ ಮಳೆ - ಈ ವೆದರ್‌ನಲ್ಲಿ ಮಜಾ ಮಾಡಲು 5 ಸೂಪರ್ ಐಡಿಯಾಗಳು!

ಬೆಂಗಳೂರಲ್ಲಿ ಮಳೆ ಸುರಿಯುತ್ತಿದೆಯಾ? ಈ ಚಂದದ ವಾತಾವರಣದಲ್ಲಿ ಸುಮ್ಮನೆ ಕೂರಬೇಡಿ. ಕೆಫೆಗೆ ಹೋಗುವುದರಿಂದ ಹಿಡಿದು, ಬುಕ್‌ಸ್ಟೋರ್‌ ಅಲೆಯುವವರೆಗೆ, ಈ ಮಳೆಗಾಲವನ್ನು ಎಂಜಾಯ್ ಮಾಡಲು ಇಲ್ಲಿದೆ ಕೆಲವು ಮಸ್ತ್ ಐಡಿಯಾಗಳು.

Read Full Story
09:10 PM (IST) Aug 10

Karnataka news live ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ - 16 ಗಂಟೆಯಲ್ಲಿ ಪಯಣ

ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ನೈಋತ್ಯ ರೈಲ್ವೆ (SWR) ಈಗಾಗಲೇ 16 ಕೋಚ್‌ಗಳ ಎರಡು ರೈಲು ಸೆಟ್‌ಗಳನ್ನು ಪಡೆದುಕೊಂಡಿದೆ.

Read Full Story
08:40 PM (IST) Aug 10

Karnataka news live ನಾಂಪಳ್ಳಿಯ ಈ ಸುರಂಗ ನೋಡಿದ್ರೆ ಅಚ್ಚರಿಯಾಗುತ್ತೆ! ಒಳಗೆ ನಿಧಿ ಇದೆಯಂತೆ - ರಹಸ್ಯ ಮಾತ್ರ ಬಯಲಾಗಿಲ್ಲ

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ನಾಂಪಳ್ಳಿಯಲ್ಲಿ ಪುರಾತನ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಬೃಹತ್‌ ಸುರಂಗವೊಂದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Read Full Story
08:10 PM (IST) Aug 10

Karnataka news live ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ - ಚೆಸ್ ನೋಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಏಕಾಏಕಿ ಕುಸಿದು ಸಾವು

ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

Read Full Story
08:03 PM (IST) Aug 10

Karnataka news live Viral News - ಕೈಯಲ್ಲಿ ಪೊರಕೆ, ಕಣ್ಣಲ್ಲಿ ನೀರು! ಮಹಿಳೆಗೆ ಸಹೋದ್ಯೋಗಿಗಳು ಮಾಡಿದ್ದೇನು? ವಿಡಿಯೋ ವೈರಲ್!

ಕಝಕಿಸ್ತಾನ್‌ನಲ್ಲಿ, ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯೊಬ್ಬರಿಗೆ ಅವರ ಸಹೋದ್ಯೋಗಿಗಳು ಸಿಹಿ ಅಚ್ಚರಿ ನೀಡಿದ್ದಾರೆ. ಕೋಣೆಯನ್ನು ಸ್ವಚ್ಛಗೊಳಿಸಲು ಕರೆದಿದ್ದಾರೆಂದು ಭಾವಿಸಿ ಬಂದ ಆಕೆಗೆ, ಕೃತಜ್ಞತೆಯ ಸಂಕೇತವಾಗಿ ಚಾಕೊಲೇಟ್‌ ಮತ್ತು ಸಿಹಿತಿಂಡಿಗಳ ದೊಡ್ಡ ಉಡುಗೊರೆಯನ್ನು ನೀಡಿ ಗೌರವಿಸಲಾಗಿದೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Read Full Story
07:41 PM (IST) Aug 10

Karnataka news live ದೀಪಾ-ದಿಶಾಗೆ ವಿದಾಯ ಹೇಳಿ ಭಾವುಕರಾದ ದಿಯಾ ಪಾಲಕ್ಕಲ್ - ‘ಬ್ರಹ್ಮಗಂಟು’ ನೆನೆದು ಏನಂದ್ರು?

Brahmagantu Serial: ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ಗುಡ್‌ಬೈ ಹೇಳಿದ್ದಾರೆ.

Read Full Story
07:16 PM (IST) Aug 10

Karnataka news live Cricket - ನೀವೆಲ್ಲ ಚೀಟರ್ಸ್, ನಿಮ್ ತಂದೆ-ತಾಯಿ ಇದನ್ನೇ ಕಲಿಸಿದ್ದಾ?’ - ಭಾರತದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಸಂಗಕ್ಕಾರ ಗರಂ ಆಗಿದ್ದೇಕೆ?

ಪಂದ್ಯದಲ್ಲಿ ಗೆಲ್ಲುವ ಉತ್ಸಾಹ, ಒತ್ತಡ ಮತ್ತು ಪೈಪೋಟಿ ನಡುವೆ ಕೆಲವೊಮ್ಮೆ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಾರೆ. ಕೆಲವು ಘಟನೆಗಳು ನೇರ ಪ್ರಸಾರದ ಕ್ಯಾಮೆರಾಗಳಲ್ಲಿ ಸೆರೆಯಾದರೆ, ಇನ್ನೂ ಕೆಲವು ಘಟನೆಗಳು ಆಟಗಾರರ ನೆನಪುಗಳಲ್ಲೇ ಉಳಿಯುತ್ತವೆ. ಅಂತಹ ಒಂದು ಹಳೆಯ ಘಟನೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
06:47 PM (IST) Aug 10

Karnataka news live ಗ್ಲಾಮರ್ ಅಲ್ಲ, ಖಡಕ್ ಆ್ಯಕ್ಷನ್ - ದುನಿಯಾ ವಿಜಯ್ ಸಿನಿಮಾದಲ್ಲಿ ನಟಿ ಟಬು ಹೊಸ ಅವತಾರ

ನಟಿ ಟಬು ಎಂದಾಕ್ಷಣ ವಿಭಿನ್ನ ಪಾತ್ರಗಳು, ಗಂಭೀರ ಅಭಿನಯ ಮತ್ತು ಪರದೆಯ ಮೇಲಿನ ಅವರ ವಿಶಿಷ್ಟ ಛಾಪು ನೆನಪಾಗುತ್ತದೆ. ಇದೀಗ ಮತ್ತೊಮ್ಮೆ ಅಂಥದ್ದೇ ಒಂದು ಪವರ್‌ಫುಲ್‌ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ.

Read Full Story
06:34 PM (IST) Aug 10

Karnataka news live ಗುರುತೇ ಸಿಗದಂತಾದ ಕರ್ನಾಟಕದ ಪಾರಂಪರಿಕ ತಾಣಗಳ 314 ಸಂರಕ್ಷಿತ ಸ್ಮಾರಕಗಳು!

ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿ ನಡೆಸಿದ 3D ಲೇಸರ್ ಸ್ಕ್ಯಾನಿಂಗ್ ಸರ್ವೇಯಲ್ಲಿ, ರಾಜ್ಯದ 848 ಸಂರಕ್ಷಿತ ಸ್ಮಾರಕಗಳ ಪೈಕಿ 314 ಕಣ್ಮರೆಯಾಗಿರುವುದು ಬಹಿರಂಗವಾಗಿದೆ.

Read Full Story
06:23 PM (IST) Aug 10

Karnataka news live ಅಡುಗೆ ಮನೆಯ ಟೈಲ್ಸ್‌ ಮೇಲೆ ಎಣ್ಣೆ ಜಿಡ್ಡು, ಅಂಟು ಪದರ ಕಾಡುತ್ತಿದೆಯಾ? ಈ ಸರಳ ಟಿಪ್ಸ್‌ ಟ್ರೈ ಮಾಡಿ!

Kitchen Tips: ಹೊಸದಾಗಿ ಬಿದ್ದ ಎಣ್ಣೆ ಕಲೆಗಳಿಗೆ ದುಬಾರಿ ಕ್ಲೀನಿಂಗ್‌ ಉತ್ಪನ್ನಗಳ ಅಗತ್ಯವಿಲ್ಲ. ಬೆಚ್ಚಗಿನ ನೀರಿಗೆ ಕೆಲವು ಹನಿ ಡಿಶ್‌ವಾಶ್‌ ಲಿಕ್ವಿಡ್‌ ಹಾಕಿ ಮೈಕ್ರೋಫೈಬರ್‌ ಬಟ್ಟೆಯಿಂದ ಟೈಲ್ಸ್‌ ಒರೆಸಿ.

Read Full Story
04:58 PM (IST) Aug 10

Karnataka news live ‘ಕಾಲವನ್ನು ತಡೆಯೋರು ಯಾರು ಇಲ್ಲ’.. ಜಗ್ಗೇಶ್‌ರ ಬುಲೆಟ್‌ ಕಥೆ ಹೇಳಿದ ಜೀವನ ಪಾಠವೇನು?

ತಮ್ಮ ಹಳೆಯ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿರುವ ಜಗ್ಗೇಶ್‌, ಆ ಬೈಕ್‌ನೊಂದಿಗೆ ಬೆಸೆದುಕೊಂಡಿರುವ ತಮ್ಮ ಬದುಕಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಚ್ಚಿಟ್ಟಿದ್ದಾರೆ.

Read Full Story
04:51 PM (IST) Aug 10

Karnataka news live ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಏಕೆ ಕರೆಯುತ್ತಾರೆ? ಈ ನಗರ ದೇಶದ ಐಟಿ ಹಬ್ ಆಗಿದ್ದು ಹೇಗೆ?

ಬೆಂಗಳೂರು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಪ್ರಸಿದ್ಧವಾಗಿದೆ. ಐಟಿ, ನವೋದ್ಯಮ, ಮತ್ತು ಸಂಶೋಧನೆಯ ಕೇಂದ್ರವಾಗಿರುವ ಈ ನಗರದ ಬೆಳವಣಿಗೆಯು, ಐತಿಹಾಸಿಕ ಶೈಕ್ಷಣಿಕ ಅಡಿಪಾಯ ಮತ್ತು ಜಾಗತಿಕ ಕಂಪನಿಗಳ ಆಗಮನದಿಂದ ಸಾಧ್ಯವಾಗಿದೆ. ಇದು ಇಂದು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಜಾಗತಿಕ ಮನ್ನಣೆ ಗಳಿಸಿದೆ.
Read Full Story
04:47 PM (IST) Aug 10

Karnataka news live ಅಣ್ಣನ ನೋಡಲು ಓಡೋಡಿ ಬಂದ ತಂಗಿ.. ಸ್ಕೂಲ್‌ ಬಸ್ಸಿಗೆ ಸಿಲುಕಿ 3 ವರ್ಷದ ಕಂದಮ್ಮ ಸಾವು

ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Read Full Story
04:45 PM (IST) Aug 10

Karnataka news live ನಮ್ಮ ಮೆಟ್ರೋ ‘ಆರೆಂಜ್ ಲೈನ್’ಗೆ ಕೇಂದ್ರದ ಬ್ರೇಕ್ - ಡಬಲ್-ಡೆಕ್ಕರ್ ಸೌಲಭ್ಯ 11 ಕಿ.ಮೀಗೆ ಸೀಮಿತ?

ಪ್ರಧಾನಿ ಮೋದಿಯವರಿಂದ ಶಂಕುಸ್ಥಾಪನೆಗೊಂಡು ವರ್ಷವಾದರೂ, ಬೆಂಗಳೂರು ಮೆಟ್ರೋ 3ನೇ ಹಂತದ ‘ಆರೆಂಜ್ ಲೈನ್’ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಪೂರ್ಣ ಪ್ರಮಾಣದ ‘ಡಬಲ್-ಡೆಕ್ಕರ್’ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story
04:39 PM (IST) Aug 10

Karnataka news live ‘ಟಾಕ್ಸಿಕ್’ನಲ್ಲಿ ಮೆಲಿಸ್ಸಾ ಪಾತ್ರಕ್ಕೆ ರುಕ್ಮಿಣಿ ವಸಂತ್ ಪಡೆದ ಸಂಭಾವನೆ ಎಷ್ಟು ಕೋಟಿ?

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ಇನ್ನೂ ತೆರೆಕಾಣಬೇಕಿದೆ. ಆದರೆ, ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರುಕ್ಮಿಣಿ ವಸಂತ್ ಮಾತ್ರ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

Read Full Story
04:24 PM (IST) Aug 10

Karnataka news live Independence Day Essay in Kannada - ಸ್ವಾತಂತ್ರ್ಯ ದಿನದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ 10 ಸಾಲುಗಳ, ಚಿಕ್ಕ ಹಾಗೂ ದೀರ್ಘ ಪ್ರಬಂಧಗಳನ್ನು ಇಲ್ಲಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ತ್ಯಾಗ, ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.

Read Full Story
04:17 PM (IST) Aug 10

Karnataka news live ಅಮೃತ್ ಭಾರತ್ ಯೋಜನೆ - ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ

ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಗುರುತಿಸಲಾದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ದೇಶಾದ್ಯಂತ ಕೇವಲ ಶೇ. 19ರಷ್ಟು ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 61 ನಿಲ್ದಾಣಗಳ ಪೈಕಿ 12 ಪೂರ್ಣಗೊಂಡಿದ್ದು, ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಕಾಮಗಾರಿ ಬಾಕಿ ಇದೆ.

Read Full Story
04:15 PM (IST) Aug 10

Karnataka news live ಕರ್ನಾಟಕದಲ್ಲಿ ಕಳವಳ ಮೂಡಿಸಿದ ರೈತರಿಗೆ ಬರೋ ನಿಗೂಢ ಕಿಡ್ನಿ ಕಾಯಿಲೆ, ಸೂಕ್ತ ತನಿಖೆಗೆ ಸರ್ಕಾರ ನಿರ್ದೇಶನ

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾರ್ಮಿಕರಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu) ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.

Read Full Story