MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Karnataka Districts
  • ವಿಜಯಪುರ ರೈತರಿಗೆ ಒಣದ್ರಾಕ್ಷಿ ಬಂಪರ್; ಆನ್‌ಲೈನ್ ಟ್ರೇಡಿಂಗ್ ಯಶಸ್ಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!

ವಿಜಯಪುರ ರೈತರಿಗೆ ಒಣದ್ರಾಕ್ಷಿ ಬಂಪರ್; ಆನ್‌ಲೈನ್ ಟ್ರೇಡಿಂಗ್ ಯಶಸ್ಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!

ವಿಜಯಪುರದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದ್ದ ಒಣದ್ರಾಕ್ಷಿ ವಹಿವಾಟಿನಿಂದ ರೈತರಿಗೆ ಆಗುತ್ತಿದ್ದ ವಂಚನೆಗೆ ಕಡಿವಾಣ ಹಾಕಲು ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ನೀಡಲಾಗಿದೆ. ಇದರಿಂದ ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಏರಿಕೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಲಭ್ಯವಾಗಿದೆ.

2 Min read
Author : Kannadaprabha News| Kannada Prabha
Published : Aug 10 2026, 08:33 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : stockPhoto

ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗಾಗಿ ಆರಂಭಿಸಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ಕಲ್ಪಿಸಲು ಈಚೆಗೆ ಸಭೆ ನಡೆಸಿ, ಸೂಚನೆ ನೀಡಿದ ನಂತರ ನಡೆದ ಒಣದ್ರಾಕ್ಷಿ ವಹಿವಾಟಿನಲ್ಲಿ ಈವರೆಗೆ ನಡೆಯುತ್ತಿದ್ದ ಸರಾಸರಿ ₹5 ಕೋಟಿಯಿಂದ ₹12 ಕೋಟಿಗೆ ಏರಿಕೆ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : pixabay

ವಿಜಯಪುರ ನಗರದಲ್ಲಿ ಒಣದ್ರಾಕ್ಷಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡರೂ, ಕೆಲ ವ್ಯಕ್ತಿಗಳು ಖಾಸಗಿ ಅಸೋಷಿಯನ್ ರಚಿಸಿ ಎಪಿಎಂಸಿಗೆ ಸಂಬಂಧವೇ ಇಲ್ಲದಂತೆ ತಮ್ಮದೆಯಾದ ನಿಯಮಾವಳಿ ಮಾಡಿಕೊಂಡು, ಕೆಲವೇ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಿ ಕಡಿಮೆ ದರದಲ್ಲಿ ಖರೀದಿ ಮಾಡಿ ರೈತರಿಗೆ ವಂಚನೆ ಮಾಡಲಾಗುತ್ತಿತ್ತು. ಅಲ್ಲದೇ, ತಮ್ಮ ಕೋಲ್ಡ್ ಸ್ಟೋರೇಜ್ ಗಳಲ್ಲಿ ರೈತರು ತಂದಿಡುವ ಉತ್ಪನ್ನಗಳಿಗೆ ಬಾಡಿಗೆ ಪಡೆದುಕೊಳ್ಳುವುದಲ್ಲದೆ, ಮಾರಾಟದ ಬಳಿಕ ಶೇ.2ರಷ್ಟು ಕಮಿಷನ್ ಸಹ ವಸೂಲಿ ಮಾಡುತ್ತಿದ್ದರು.

Related Articles

Related image1
ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!
Related image2
ವಿಜಯಪುರ: ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!
36
Image Credit : Getty

ಇದರಿಂದ ರೈತರಿಗೆ ಸೂಕ್ತ ಬೆಲೆ ಮತ್ತು ವಿನಾಕಾರಣ ಕಮಿಷನ್ ನೀಡುತ್ತಿದ್ದರಿಂದ ನಷ್ಟ ಉಂಟಾಗುತ್ತಿತ್ತು. ತೂಕದಲ್ಲಿಯೂ ವ್ಯತ್ಯಾಸವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಈಚೆಗೆ (ಜುಲೈ 28) ಎಪಿಎಂಸಿ ಪ್ರಾಂಗಣದಲ್ಲಿ ದ್ರಾಕ್ಷಿ ಬೆಳೆಗಾರರು ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಾರದಲ್ಲಿ ಎರಡು ಭಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣದ್ರಾಕ್ಷಿ ವಹಿವಾಟು ನಡೆಸಲು ಸರ್ವಾನುಮತದಿಂದ ತಿರ್ಮಾನಿಸಲಾಗಿತ್ತು.

46
Image Credit : Asianet News

ಆಗಸ್ಟ್ 1ರ ವಹಿವಾಟಿನಲ್ಲಿ ಹೊಸ ದಾಖಲೆ:

ಶಾಸಕರ ಕಟ್ಟುನಿಟ್ಟಿನ ಸೂಚನೆ ಫಲ ನೀಡಿದ್ದು, ಆಗಸ್ಟ್ 1ರ ಶನಿವಾರ ನಡೆದ ಆನ್‌ಲೈನ್ ಹರಾಜಿನಲ್ಲಿ ಬರೋಬ್ಬರಿ 4.59 ಲಕ್ಷ ಕೆ.ಜಿ ಒಣದ್ರಾಕ್ಷಿ ವಹಿವಾಟು ನಡೆದಿದೆ. ಈ ಹಿಂದೆ ಕೇವಲ 2.17 ಲಕ್ಷ ಕೆ.ಜಿ ಮಾತ್ರ ಮಾರಾಟವಾಗುತ್ತಿತ್ತು.

ಗರಿಷ್ಠ ದರ: ಪ್ರತಿ ಕೆ.ಜಿ ಒಣದ್ರಾಕ್ಷಿಗೆ ಗರಿಷ್ಠ ₹390 ವರೆಗೆ ಬೆಲೆ ಸಿಕ್ಕಿದೆ.

ಖರೀದಿದಾರರ ಸಂಖ್ಯೆ: ಹಿಂದೆ 14 ಇರುತ್ತಿದ್ದ ಖರೀದಿದಾರರ ಸಂಖ್ಯೆ ಈಗ 25ಕ್ಕೆ ಹೆಚ್ಚಿದೆ.

ದಲ್ಲಾಳಿಗಳ ಸಂಖ್ಯೆ: 5 ರಿಂದ 15ಕ್ಕೆ ಏರಿಕೆಯಾಗಿದೆ.

56
Image Credit : Asianet News

ಈ ಬೆಳವಣಿಗೆಯಿಂದ ರೈತರಿಗೆ ಈವರೆಗೆ ಆಗುತ್ತಿದ್ದ ತೂಕದಲ್ಲಿ ಮೋಸ, ಬೆಲೆಯಲ್ಲಿ ವ್ಯತ್ಯಾಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ಉತ್ಪನ್ನ ಹಾಳಾಗುತ್ತಿರುವುದು ತಪ್ಪಿದಂತಾಗಿದೆ. ಖಾಸಗಿಯವರು ನಡೆಸುತ್ತಿದ್ದ ಬಹಿರಂಗ ಹರಾಜಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ಆಗುತ್ತಿರುವುದರಿಂದ ಯಾವುದೇ ನಿಖರವಾದ ಮಾಹಿತಿ ದೊರೆಯದೇ, ಸರ್ಕಾರಕ್ಕೆ ಸೆಸ್ ಮತ್ತು ಜಿಎಸ್.ಟಿ ಮೂಲಕ ಬರಬೇಕಿದ್ದ ಆದಾಯ ಸಹ ಕೈ ತಪ್ಪುತ್ತಿತ್ತು. ಈಗ ಆನ್ ಲೈನ್ ಮಾರುಕಟ್ಟೆಯಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ.

66
Image Credit : our own

ಎಲ್ಲ ದ್ರಾಕ್ಷಿ ಬೆಳೆಯುವ ರೈತರು ಯಾರ ಲಾಭಿಗೂ ಮಣಿಯದೇ ನಿರಾಂತಕವಾಗಿ ದೊರೆತ ಇಂತಹ ಅವಕಾಶವನ್ನು ಹೆಚ್ಚು ಜನರಿಗೆ ಪ್ರಚುರಪಡಿಸಿ, ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದಲ್ಲಿ ಇಲಾಖೆಗೂ ಆದಾಯ ಮತ್ತು ರೈತರಿಗೂ ಅತೀ ಹೆಚ್ಚು ಲಾಭ ದೊರೆಯಲಿದೆ. ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ತಾತ್ಕಾಲಿಕವಾಗಿ ನಡೆಯುವ ಆಪ್ ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವಿಜಯಪುರ
ದ್ರಾಕ್ಷಿ
ಕರ್ನಾಟಕ ಸುದ್ದಿ
ಬಸನಗೌಡ ಪಾಟೀಲ್ ಯತ್ನಾಳ್

Latest Videos
Recommended Stories
Recommended image1
ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು
Recommended image2
ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ
Recommended image3
Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!
Related Stories
Recommended image1
ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!
Recommended image2
ವಿಜಯಪುರ: ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved