11:53 PM (IST) Apr 06

ಚೀನಾದ ಡೀಪ್‌ಸೀಕ್‌ಗೆ ಮೆಟಾ ಕೌಂಟರ್, ಅತ್ಯಾಧುನಿಕ ಲಾಮ 4 AI ಬಿಡುಗಡೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಭಾರಿ ಸದ್ದು ಮಾಡುತ್ತಿದೆ. ಒಪನ್ಎಐ, ಗೂಗಲ್ ಜೆಮಿನಿ, ಚೀನಾದ ಡೀಪ್‌ಸೀಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಾರ್ಕ್ ಜುಕರ್‌ಬರ್ಗ್ ಮೆಟಾ ಸಂಸ್ಥೆ ಹೊಸ ಮೆಟಾ ಲಾಮಾ 4 ಎಐ ಮಾದರಿ ಬಿಡುಗಡೆ ಮಾಡಿದೆ. ಮೂರು ಮಾಡೆಲ್‌ ಲಭ್ಯವಿದ್ದು, ಎಐಗೆ ಹೊಸ ಭಾಷ್ಯ ಬರೆದಿದೆ.

ಪೂರ್ತಿ ಓದಿ
11:35 PM (IST) Apr 06

ಅಂದು ಮೆಜೆಸ್ಟಿಕ್‌ನಲ್ಲಿ ಮಲಗಿದ್ದ ʼರಾಕಿಂಗ್‌ ಸ್ಟಾರ್ʼ ಯಶ್‌; ಇಂದು ಮನೆ ಮುಂದೆ ಸಾಲಾಗಿ ನಿಂತ ದುಬಾರಿ ಕಾರ್‌!

ʼರಾಕಿಂಗ್‌ ಸ್ಟಾರ್ʼ‌ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದರೆ, ಈಗ ಇವರ ಕಾರ್‌ ಕಲೆಕ್ಷನ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ಪೂರ್ತಿ ಓದಿ
11:29 PM (IST) Apr 06

ಬೆಂಗಳೂರಲ್ಲಿ ಚಿನ್ನದ ಮುಖವಾಡ ಧರಿಸಿ ಬಿಟ್‌ಕಾಯಿನ್ ಕ್ರಿಯೇಟರ್ ಸತೋಶಿ ಬರ್ತ್‌ಡೇ ಸಂಭ್ರಮ

 ಬಿಟ್‌ಕಾಯಿನ್ ಕ್ರಿಯೇಟರ್ ಸತೋಶಿ ನಕಾಮೊಟೊ ಬೆಂಗಳೂರಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಚಿನ್ನದ ಮುಖವಾಡ, ಬ್ಲಾಕ್ ಹೂಡಿ ಡ್ರೆಸ್ ಧರಿಸಿ ಬರ್ತ್‌ಡೇ ಆಚರಿಸಲಾಗಿದೆ.

ಪೂರ್ತಿ ಓದಿ
11:05 PM (IST) Apr 06

ಭಾರತೀಯ ಉದ್ಯಮಿಗಳಿಗೆ ಆಫರ್ ಕೊಟ್ಟ ನ್ಯೂಜಿಲೆಂಡ್ ಪ್ರಧಾನಿ, ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದೇನು?

ಯುವ ಉದ್ಯಮಿ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಭಾರತೀಯ ಉದ್ಯಮಿಗಳಿಗೆ ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ನೀಡಿದ ಆಫರ್ ಏನು?

ಪೂರ್ತಿ ಓದಿ
10:46 PM (IST) Apr 06

ಅನೈತಿಕ ಸಂಬಂಧ ಶಂಕೆ: ನಡು ರಸ್ತೆಯಲ್ಲಿ ಪತ್ನಿಯ ಕುತ್ತಿಗೆ ಕುಯ್ದು ಕೊಂದಿದ್ದವನ ಬಂಧನ!

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆಯನ್ನು ಕುಯ್ದು ಹತ್ಯೆಗೈದಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ
10:23 PM (IST) Apr 06

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅತೀ ದೊಡ್ಡ ಧ್ವಜಸ್ತಂಭ ನಿರ್ಮಾಣ: ಸಚಿವ ದಿನೇಶ್‌ ಗುಂಡೂರಾವ್‌

ಬಾವುಟಗುಡ್ಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗುವುದು. ಸುಮಾರು 100 ಅಡಿಗೂ ಹೆಚ್ಚಿನ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡುವ ಮೂಲಕ ದೇಶಪ್ರೇಮ ಪ್ರೇರೇಪಿಸುವ ಕೆಲಸ ಮಾಡುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. 

ಪೂರ್ತಿ ಓದಿ
10:19 PM (IST) Apr 06

ಹಸಿರು ಕ್ರಾಂತಿ 2.0: ಡ್ರ್ಯಾಗನ್ ಫ್ರೂಟ್, ಥಾಯ್ ಗೇವಾ, ಸೇಬು ಬೇಸಾಯದಿಂದ ಕೋಟ್ಯಾಧಿಪತಿಗಳಾದ ರೈತರು!

ಸಾಂಪ್ರದಾಯಿಕ ಬೆಳೆಗಳನ್ನ ಬಿಟ್ಟು ರೈತರು ಹೊಸ ಬೆಳೆಗಳತ್ತ ಮುಖ ಮಾಡಿದ್ದಾರೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶದ ರೈತರು ಡ್ರ್ಯಾಗನ್ ಫ್ರೂಟ್, ಸೇಬು, ಗೇವಾ, ಕೇಸರಿ ಬೆಳೆದು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇದು ಗ್ರೀನ್ ರೆವಲ್ಯೂಷನ್ 2.0ಗೆ ನಾಂದಿ ಹಾಡುತ್ತಿದೆ.

ಪೂರ್ತಿ ಓದಿ
10:18 PM (IST) Apr 06

10ಗ್ರಾಂ ಚಿನ್ನಕ್ಕೆ 56,000 ರೂಪಾಯಿ; ಕುಸಿತಕ್ಕೆ ಕಾರಣ ಕೊಟ್ಟು ಭವಿಷ್ಯ ನುಡಿದ ಅಮೆರಿಕ ವಿಶ್ಲೇಷಕ!

ಅಯ್ಯೋ… ಏನ್ರೀ.. ಬಂಗಾರದ ಬೆಲೆ ಇಷ್ಟೆಲ್ಲ ಹೆಚ್ಚಾಗೋಯ್ತು, ಬಂಗಾರ ತಗೋಳೋದು ಗಗನಕುಸುಮ ಆಗೋಯ್ತಲ್ರೀ ಎಂದು ಮಧ್ಯಮ ವರ್ಗದವರು ಗೋಳಿಡುತ್ತಿದ್ದರೆ, ಅತ್ತ ಹೂಡಿಕೆದಾರರು ಮಾತ್ರ ಚಿನ್ನದ ಮೇಲೆ ಹೂಡಿಕೆ ಮಾಡಿ ದುಪ್ಪಟ್ಟು ಹಣ ಮಾಡಬಹುದು ಅಂತ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ಭವಿಷ್ಯವಾಣಿಯೊಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಆಗಲಿದೆ ಎಂದು ಹೇಳಿರೋದು ಸಂಚಲನ ಮೂಡಿಸಿದೆ. 

ಪೂರ್ತಿ ಓದಿ
10:16 PM (IST) Apr 06

ಕೆಪಿಸಿಸಿ ಅಧ್ಯಕ್ಷರಾಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಚಿವ ಎಂ.ಬಿ.ಪಾಟೀಲ್

ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಅಧ್ಯಕ್ಷರಾಗ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. 

ಪೂರ್ತಿ ಓದಿ
10:07 PM (IST) Apr 06

ಹಾವೆಮುಲ್ ಎರಡು ತಲೆ‌ ಹಾವಿನಂತೆ ಆಡ್ಬೇಡಿ! ನವರಂಗಿ ಆಟ ಬಿಟ್ಟು.. ರೈತರಿಗೆ ಅರ್ಹವಾಗಿ ₹4 ಹಣ ಕೊಡಿ.!

ಹಾವೇರಿ ಹಾಲು ಒಕ್ಕೂಟದಿಂದ ರೈತರಿಗೆ ಕೊಡಬೇಕಾದ ಖರೀದಿ ಹಣದಲ್ಲಿ ಭಾರೀ ತಾರತಮ್ಯ ಮಾಡುತ್ತಿದೆ. ಹಾವೆಮುಲ್ ನಷ್ಟದಲ್ಲಿದೆ ಎಂದು 3.50 ರೂ. ಕಡಿತ ಮಾಡಿತ್ತು. ಇದೀಗ ಸರ್ಕಾರ 4 ರೂ. ಹೆಚ್ಚಳ ಮಾಡಿದರೂ ಕೇವಲ 2.50 ರೂ. ರೈತರಿಗೆ ಕೊಡಲಾಗುತ್ತಿದೆ.

ಪೂರ್ತಿ ಓದಿ
09:41 PM (IST) Apr 06

ರಾಮನ ಅನುಗ್ರಹದಿಂದ ತ್ರವಳಿ ತಲಾಖ್, ವಕ್ಫ್ ಬಿಲ್ ಪಾಸ್, ಮುಸ್ಲಿಮರಿಂದ ರಾಮನವಮಿ ಪೂಜೆ

ದೇಶಾದ್ಯಂತ ರಾಮನವಮಿ ಆಚರಿಸಲಾಗಿದೆ. ವಿಶೇಷ ಪೂಜೆ ಸೇರಿದಂತೆ ಭಜನೆಗಳು ನಡೆದಿದೆ. ಇದರ ನಡುವೆ ವಾರಣಾಸಿಯ ಮುಸ್ಲಿಮ್ ಮಹಿಳೆಯರು ಶ್ರೀರಾಮನಿಗೆ ರಾವಮನವಮಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕಾರಣವನ್ನು ಹೇಳಿದ್ದಾರೆ.

ಪೂರ್ತಿ ಓದಿ
09:08 PM (IST) Apr 06

ಕೂಡಲ ಸಂಗಮದಲ್ಲಿ ಬಸವ ಜಯಂತಿ ವಿಶೇಷ ಆಚರಣೆಗೆ ನಿರ್ಧಾರ: ಕಾರ್ಯಕ್ರಮಕ್ಕೆ ಸಿಎಂ ಚಾಲನೆ!

ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಬಸವ ಜಯಂತಿ ನಿಮಿತ್ಯ ಅನುಭವ ಮಂಟಪ, ಬಸವಾದಿ ಶರಣರ ವೈಭವ ಹೆಸರಿನಲ್ಲಿ ಏ.29 ಮತ್ತು 30 ರಂದು ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು. 

ಪೂರ್ತಿ ಓದಿ
09:02 PM (IST) Apr 06

'ಇನ್ಸ್ಟಾ ಕ್ವೀನ್ ಪೋಲೀಸಮ್ಮ' ಹಿಂದಿದೆ ಮಾದಕ ಕಥೆ; 17 ಗ್ರಾಂ ಹೆರಾಯಿನ್ ಸಮೇತ ಸಿಕ್ಕಿಬಿದ್ದ ಮಹಾನ್ 'ಕಿ'ಲೇಡಿ!

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ 17 ಗ್ರಾಂ ಹೆರಾಯಿನ್ ಜೊತೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪೂರ್ತಿ ಓದಿ
09:00 PM (IST) Apr 06

ನೌಕರರ ನಾಯಿಯಂತೆ ನಡೆಸಿದ ವಿಡಿಯೋಗೆ ಟ್ವಿಸ್ಟ್, ಸಚಿವಾಲಯ ತನಿಖೆಯಲ್ಲಿ ಸತ್ಯ ಬಯಲು

ಮಾರ್ಕೆಟಿಂಗ್ ಕಂಪನಿ ಟಾರ್ಗೆಟ್ ರೀಚ್ ಆದ ಉದ್ಯೋಗಿಗಳನ್ನು ನಾಯಿಯಂತ ನಡೆಸಿಕೊಂಡಿದ್ದಾರೆ ಅನ್ನೋ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಈ ವಿಡಿಯೋಗೆ ಟ್ವಿಸ್ಟ್ ಎದುರಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ, ತನಿಖೆಯಲ್ಲಿ ಬಯಲು.

ಪೂರ್ತಿ ಓದಿ
08:53 PM (IST) Apr 06

ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!

ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಪಂಚಭೂತಗಳಲ್ಲಿ ಲೀನವಾಗಿ ಹೋಗಿದ್ದಾರೆ. ಅವರ ಸಾವಿನ ವಿಚಾರ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದರೆ ಸಾವಿಗೂ ಮುನ್ನ ಅವರು ತಮ್ಮ ಪತ್ನಿಗೆ ಬರೆದಿರುವ ಪತ್ರ ಮಾತ್ರ ಎಂತಹ ಕಲ್ಲು ಹೃದಯವನ್ನು ಕರಗುವಂತೆ ಮಾಡಿದೆ. 

ಪೂರ್ತಿ ಓದಿ
08:52 PM (IST) Apr 06

ತೆಳುವಾದ ಐಬ್ರೋ ನಿಮ್ಮದಾಗಿದೆಯೇ? ದಪ್ಪ ಹುಬ್ಬುಗಳಿಗೆ ಇಲ್ಲಿದೆ ಮನೆಮದ್ದುಗಳು!

ದಪ್ಪ ಮತ್ತು ಸುಂದರವಾದ ಹುಬ್ಬುಗಳನ್ನು ಪಡೆಯಲು ಅಲೋವೆರಾ ಜೆಲ್, ಈರುಳ್ಳಿ ರಸ, ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ, ಮತ್ತು ಹಸಿ ಹಾಲನ್ನು ಬಳಸಿ. ಈ ಮನೆಮದ್ದುಗಳು ಹುಬ್ಬುಗಳನ್ನು ನೈಸರ್ಗಿಕವಾಗಿ ದಪ್ಪವಾಗಿಸಲು ಸಹಾಯ ಮಾಡುತ್ತವೆ.

ಪೂರ್ತಿ ಓದಿ
08:38 PM (IST) Apr 06

ನನ್ನ ಕಚೇರಿಯಲ್ಲಿ ಇಶಾ ಅಂಬಾನಿ ಬಾಸ್, ನಾನು ಡಿ ದರ್ಜೆಯವನು ಮುಕೇಶ್ ಅಂಬಾನಿ ಹೇಳಿಕೆ ವೈರಲ್!

ಮುಖೇಶ್ ಅಂಬಾನಿ ಅವರು ಇಶಾ ಅಂಬಾನಿ ತಮ್ಮ ಕಚೇರಿಯಲ್ಲಿ ಬಾಸ್ ಎಂದು ಹೇಳಿದ್ದಾರೆ. ಸಭೆಗಳಲ್ಲಿ ಇಶಾ ತಮ್ಮ ಕಾರ್ಯಕ್ಷಮತೆಗೆ ಫೀಡ್‌ಬ್ಯಾಕ್ ನೀಡುತ್ತಾರೆ ಮತ್ತು ಶ್ರೇಯಾಂಕಗಳನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ವ್ಯವಹಾರದಲ್ಲಿ ಮಹಿಳೆಯರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಮುಖೇಶ್ ಅಂಬಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ
08:35 PM (IST) Apr 06

ಬಿಜೆಪಿ ವಿರುದ್ಧ ತಿರುಗಿಬಿದ್ದ ಕೊಡಗು ಕಾಂಗ್ರೆಸ್: ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಪ್ರತಿಭಟನೆಗೆ ವೇದಿಕೆಯಾಗಿದ್ದ ಕೊಡಗು, ಭಾನುವಾರ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. 

ಪೂರ್ತಿ ಓದಿ
08:29 PM (IST) Apr 06

ಬಂಡೀಪುರ ಉಳಿಸಿ ಅಭಿಯಾನ: 'ನಮ್ಮ ನಡಿಗೆ ಬಂಡಿಪುರದ ಕಡೆಗೆ' ಬೃಹತ್ ಪಾದಯಾತ್ರೆಗೆ ಚಾಲನೆ

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡೀಪುರ ಉಳಿಸಿ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಇಂದು ನಡೆದ ನಮ್ಮ ನಡಿಗೆ ಬಂಡೀಪುರದ ಕಡೆಗೆ ಪಾದಯಾತ್ರೆ ಸಾಕ್ಷಿಯಾಯ್ತು. 

ಪೂರ್ತಿ ಓದಿ
08:24 PM (IST) Apr 06

ಮೈಸೂರು ಶೈಲಿಯ ಟೊಮೆಟೊ ರಸಂ: ನಾಲಿಗೆಗೂ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್

ಮನೆಯಲ್ಲಿಯೇ ಮೈಸೂರು ಶೈಲಿಯ ಟೊಮೆಟೊ ರಸಂ ತಯಾರಿಸಿ. ಇದು ರುಚಿಕರ ಮಾತ್ರವಲ್ಲದೆ, ತಯಾರಿಸಲು ಕೆಲವೇ ನಿಮಿಷಗಳು ಬೇಕಾಗುತ್ತದೆ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಪೂರ್ತಿ ಓದಿ