ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಅಮನ್‌ದೀಪ್ ಕೌರ್, 17 ಗ್ರಾಂ ಹೆರಾಯಿನ್ ಜೊತೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ನ್ಯಾಯಾಲಯವು ಆಕೆಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಡ್ರಗ್ಸ್ ಮತ್ತು ಆಸ್ತಿ ವ್ಯವಹಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಸಹಚರ ಬಲ್ವಿಂದರ್ ಸಿಂಗ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ತರಹೇವಾರಿ ರೀಲ್ಸ್ ಮಾಡುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ ಅಮನ್‌ದೀಪ್ ಕೌರ್ 17 ಗ್ರಾಂ ಹೆರಾಯಿನ್ ಜೊತೆ ಸಿಕ್ಕಿಬಿದ್ದು ಕೆಲಸ ಕಳೆದುಕೊಂಡಿದ್ದಾಳೆ. ಜೊತೆಗೆ, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿದಾಗ ಪುನಃ 2 ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸ್ ಡ್ರೆಸ್‌ನಲ್ಲಿ ತನ್ನ ದೇಹ ಸೌಂದರ್ಯವನ್ನು ತೋರಿಸುತ್ತಾ ವಿವಿಧ ಹಾಡುಗಳಿಗೆ ಹಾಗೂ ಡೈಲಾಗ್‌ಗಳಿಗೆ ರೀಲ್ಸ್ ಮಾಡುತ್ತಿದ್ದ ಅಮನ್‌ದೀಪ್ ಕೌರ್‌ಗೆ ಲಕ್ಷಾಂತರ ಫಾಲೋವರ್ಸ್‌ಗಳಿದ್ದಾರೆ. ಆದರೆ, ಈಕೆ ಮೈಮೈಲೆ ಸಮಾಜ ರಕ್ಷಣೆ ಮಾಡುವ ಖಾಕಿ ಹಾಕಿಕೊಂಡಿದ್ದರೂ ಮಾಡುವುದೆಲ್ಲಾ ಸಮಾಜ ಬಾಹಿರ ಕೆಲಸಗಳೇ ಎಂಬ ಸತ್ಯ ಇದೀಗ ಹೊರಬಿದ್ದಿದೆ. ಪೊಲೀಸ್ ಆಗಿದ್ದರೂ 17.71 ಗ್ರಾಂ ಹೆರಾಯಿನ್ ಮಾಲ್ ಸಮೇತ ಸಿಕ್ಕಿಬಿದ್ದಿದ್ದಳು. ಕೂಡಲೇ ಆಕೆಯನ್ನು ಬಂಧಿಸಿದ ಪೊಲೀಸರು, ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ನಂತರ, ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದಾಗ ಪುನಃ 2 ದಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಡ್ರಗ್ಸ್ ಮತ್ತು ಆಸ್ತಿ ವ್ಯವಹಾರಗಳ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಈ ತನಿಖೆಗಳನ್ನು ಪೂರ್ಣಗೊಳಿಸಲು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವುದು ಅಗತ್ಯ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ಕಚೇರಿಯಲ್ಲಿ ಇಶಾ ಅಂಬಾನಿ ಬಾಸ್, ನಾನು ಡಿ ದರ್ಜೆಯವನು ಮುಕೇಶ್ ಅಂಬಾನಿ ಹೇಳಿಕೆ ವೈರಲ್!
ಏಪ್ರಿಲ್ 2 ರಂದು ಸಂಜೆ ಹಿರಿಯ ಕಾನ್ಸ್ಟೆಬಲ್ ಅಮನ್‌ದೀಪ್ ಕೌರ್ ಅವರನ್ನು ಬಂಧಿಸಲಾಯಿತು. ಆಕೆಯ ಬಳಿ 17.71 ಗ್ರಾಂ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿಯ ಹೆಸರನ್ನು ಹೇಳಿ ಪೊಲೀಸರ ಮೇಲೆ ಪ್ರಭಾವ ಬೀರಲು ಆರೋಪಿ ಪ್ರಯತ್ನಿಸಿದ್ದಾರೆಂದು ಕೋರ್ಟ್‌ನಲ್ಲಿ ಹೇಳಲಾಗಿದೆ. ಅಮನ್‌ದೀಪ್ ಬಗ್ಗೆ ನಡೆಸಿದ ತನಿಖೆಯಲ್ಲಿ, ಪರಿಚಿತ ವ್ಯಕ್ತಿಗಳು ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾದ ಕೆಲವು ಆಸ್ತಿಗಳ ವಿವರಗಳನ್ನು ಅಧಿಕಾರಿಗಳು ಪಡೆದಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಹೆಚ್ಚಿನ ಡ್ರಗ್ಸ್ ವ್ಯವಹಾರಗಳನ್ನು ನಿರಾಕರಿಸಿದರೂ, ಡ್ರಗ್ಸ್ ವ್ಯವಹಾರದ ಮಾರ್ಗವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ. ಬೆಲೆಬಾಳುವ ವಾಚ್‌ಗಳು, ಕನ್ನಡಕಗಳು ಮತ್ತು ಇತರ ಆಕ್ಸೆಸರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರಿಂದ ತಪ್ಪಿಸಿಕೊಂಡಿರುವ ಆತನ ಸಹಚರ ಬಲ್ವಿಂದರ್ ಸಿಂಗ್‌ಗಾಗಿ ತನಿಖಾ ತಂಡವು ಹುಡುಕಾಟ ನಡೆಸುತ್ತಿದೆ. ಪೊಲೀಸ್ ಸಮವಸ್ತ್ರದಲ್ಲಿ ರೀಲ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಅಮನ್‌ದೀಪ್ ಸುತ್ತ ವಿವಾದಗಳು ಇದ್ದವು.
ಇದನ್ನೂ ಓದಿ: ಘಿಬ್ಲಿ ಫೋಟೋ ಬಳಸ್ತಿದ್ದೀರಾ? ಗೋಳೋ ಎಂದು ಅಳುವ ಮೊದ್ಲು ಸೈಬರ್ ಕ್ರೈಂನವರ ಈ ಎಚ್ಚರಿಕೆ ಕೇಳಿಬಿಡಿ...
