ಬಿಟ್‌ಕಾಯಿನ್ ಕ್ರಿಯೇಟರ್ ಸತೋಶಿ ನಕಾಮೊಟೊ ಬೆಂಗಳೂರಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಚಿನ್ನದ ಮುಖವಾಡ, ಬ್ಲಾಕ್ ಹೂಡಿ ಡ್ರೆಸ್ ಧರಿಸಿ ಬರ್ತ್‌ಡೇ ಆಚರಿಸಲಾಗಿದೆ.  

ಬೆಂಗಳೂರು(ಏ.06) ಬಿಟ್‌ಕಾಯಿನ್ ಮೂಲಕ ಭಾರಿ ಜನಪ್ರಿಯತೆ ಪಡೆದಿರುವ ಸತೋಶಿ ನಕಾಮೊಟೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದೇ ಗುರುತಿಸಿಕೊಂಡಿರುವ ಸತೋಶಿ ತಮ್ಮ 50ನೇ ಹುಟ್ಟು ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಕಪ್ಪು ಬಣ್ಣದ ಹೂಡಿ, ಚಿನ್ನದ ಮುಖವಾಡ ಧರಿಸಿ ಬೆಂಗಳೂರಿನಲ್ಲಿ ಹಲವರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಸತೋಶಿ ನಕಾಮೊಟೊ ಎಂಬ ಹೆಸರಿನಿಂದ ಮಾತ್ರ ಪರಿಚಿತರಾಗಿರುವ ಬಿಟ್‌ಕಾಯಿನ್‌ನ ಸೃಷ್ಟಿಕರ್ತ ಗೌಪ್ಯವಾಗಿ ಉಳಿದುಕೊಂಡಿದ್ದೇ ಹೆಚ್ಚು. ಇದೀಗ ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಈಗಲೂ ತಮ್ಮ ಮುಖ ಬಹಿರಂಗಪಡಿಸದೆ ವಿಶೇಷ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿದ್ದಾರೆ. 

ಬಿಟ್‌ಕಾಯಿನ್ ಸೃಷ್ಟಿಸಿದ ಸತೋಶಿ ನಕಾಮೊಟೊ:
ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯನ್ನು ಜನವರಿ 2009 ರಲ್ಲಿ ಪರಿಚಯಿಸಿದ ನಂತರ ಸತೋಶಿ ನಕಾಮೊಟೊ ಅವರನ್ನು ಯಾರೂ ಎಲ್ಲಿಯೂ ನೋಡಲು ಸಾಧ್ಯವಾಗಲಿಲ್ಲ. ಅವರು ರಹಸ್ಯ ವ್ಯಕ್ತಿಯಾಗಿಯೇ ಉಳಿದಿದ್ದಾರೆ. ಸತೋಶಿ ನಕಾಮೊಟೊ ಅವರ ಜನ್ಮದಿನದ ಬಗ್ಗೆ ಜಗತ್ತಿಗೆ ತಿಳಿದಿದೆ. ಬಿಟ್‌ಕಾಯಿನ್ ಫೌಂಡೇಶನ್ P2PFoundation ಪ್ರಾರಂಭಿಸಿದಾಗ, ಸತೋಶಿ ನಕಾಮೊಟೊ ನೋಂದಾಯಿಸಿದ ವರದಿಯಲ್ಲಿ, ಅವರು ತಮ್ಮ ಜನ್ಮದಿನವನ್ನು 1975, ಏಪ್ರಿಲ್ 5 ಎಂದು ಉಲ್ಲೇಖಿಸಿದ್ದಾರೆ. ಇದರಿಂದ ಅವರ ಜನ್ಮದಿನದ ಬಗ್ಗೆ ಜಗತ್ತಿಗೆ ತಿಳಿಯಿತು. ಅಂದಿನಿಂದ, ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ಉತ್ಸಾಹಿಗಳು ಈ ದಿನವನ್ನು ಸತೋಶಿ ನಕಾಮೊಟೊ ಅವರ ಅಧಿಕೃತ ಜನ್ಮದಿನವಾಗಿ ಆಚರಿಸುತ್ತಾರೆ.

ಖರ್ಚಿಲ್ಲದೆ ನೀವು ಕೋಟ್ಯಾಧಿಪತಿಯಾಗ್ಬಹುದು! ಏನಿದು ಜಿಯೋಕಾಯಿನ್ ಮ್ಯಾಜಿಕ್

ಬಿಟ್‌ಕಾಯಿನ್ ಮಾರುಕಟ್ಟೆ ಸ್ಥಿತಿಗತಿ:
ಮಾರುಕಟ್ಟೆ ಸ್ಥಿತಿಯ ಪ್ರಕಾರ, ಏಪ್ರಿಲ್ 6 ರಂದು ಮಧ್ಯಾಹ್ನ 12.50ಕ್ಕೆ ಬಿಟ್‌ಕಾಯಿನ್ ಒಂದಕ್ಕೆ 83,068 ಡಾಲರ್‌ಗೆ ವಹಿವಾಟು ನಡೆಸಲಾಯಿತು. ಮಾರುಕಟ್ಟೆ ಬಂಡವಾಳ 1.64 ಟ್ರಿಲಿಯನ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ ಮಾತ್ರ 13.57 ಡಾಲರ್ ಬಿಲಿಯನ್‌ನಷ್ಟು ವಹಿವಾಟು ನಡೆದಿದೆ.

ಬೆಂಗಳೂರಿನಲ್ಲಿ Satoshi Nakamoto ಜನ್ಮದಿನ ಆಚರಣೆ?
ಕ್ರಿಪ್ಟೋ ಸಂಸ್ಥಾಪಕ ಸತೋಶಿ ನಕಾಮೊಟೊ ಅವರ 50 ನೇ ಹುಟ್ಟುಹಬ್ಬವನ್ನು ಆಚರಿಸಲು, ಕ್ರಿಪ್ಟೋ ಹೂಡಿಕೆ ವೇದಿಕೆಯಾದ ಮುಡ್ರೆಕ್ಸ್ ಬೆಂಗಳೂರಿನಲ್ಲಿ ಆಯೋಜಿಸಿತ್ತು ಎನ್ನಲಾಗಿದೆ. ಈ ಬಗ್ಗೆ ಮುಡ್ರೆಕ್ಸ್ ಸಂಸ್ಥೆಯ ಉದ್ಯೋಗಿ ರಿಚಾ ಮಿಶ್ರಾ LinkedInನಲ್ಲಿ, ''ಸತೋಶಿ ನಕಾಮೊಟೊ ಜೀವಂತವಾಗಿರುವುದು ಅಮೂಲ್ಯವಾದ ಸಂತೋಷವನ್ನು ನೀಡುತ್ತದೆ. ಸತೋಶಿ ನಕಾಮೊಟೊ ಬೆಂಗಳೂರಿನ ಬೀದಿಗಳಲ್ಲಿ ನಡೆದಾಡಿದರು. ಇಡೀ ನಗರವೇ ಅವರನ್ನು ನೋಡಿತು. ಕಪ್ಪು ಬಣ್ಣದ ಹೂಡಿ ಧರಿಸಿ, ಚಿನ್ನದ ಮುಖವಾಡವನ್ನು ಹಾಕಿಕೊಂಡಿದ್ದರು. ಅವರು ಧರಿಸಿದ್ದ ಹೂಡಿಯಲ್ಲಿ ಬಿಟ್‌ಕಾಯಿನ್ ಲೋಗೋ ಇತ್ತು. ಆದರೆ, ಅವರು ಒಂದು ಮಾತನ್ನೂ ಆಡಲಿಲ್ಲ. ಅವರೊಂದಿಗೆ ಅನೇಕರು ಫೋಟೋ ತೆಗೆದುಕೊಂಡರು'' ಎಂದು ಮಿಶ್ರಾ ಉಲ್ಲೇಖಿಸಿದ್ದಾರೆ.

Mudrex ಆಫರ್ ಘೋಷಣೆ:
ವೇದಿಕೆಯಲ್ಲಿ ನೋಂದಾಯಿಸಿಕೊಂಡು, ತಮ್ಮ KYC ಅನ್ನು ಪೂರ್ಣಗೊಳಿಸಿ, ತಮ್ಮ BTC ವ್ಯಾಲೆಟ್‌ನಲ್ಲಿ ರೂ. 5,000 ಠೇವಣಿ ಮಾಡಿದ ಹೊಸ ಬಳಕೆದಾರರಿಗೆ Mudrex ಒಂದು ದಿನದ ಆಫರ್ ನೀಡಿತ್ತು. 24 ಗಂಟೆಗಳ ಒಳಗೆ ರೂ. 500 ಮೌಲ್ಯದ ಉಚಿತ BTC ಅನ್ನು ಅವರ ವ್ಯಾಲೆಟ್‌ನಲ್ಲಿ ಕ್ರೆಡಿಟ್ ಮಾಡುವುದಾಗಿ ಘೋಷಿಸಿತ್ತು.

ಸತೋಶಿ ನಕಾಮೊಟೊ ಯಾರು?
ಬಿಟ್‌ಕಾಯಿನ್ ಸಂಬಂಧಿಸಿದಂತೆ 2008 ರಲ್ಲಿ ಒಂದು ಬಿಳಿ ವರದಿ ಪ್ರಕಟವಾದ ನಂತರ, ಜನವರಿ 2009 ರಲ್ಲಿ ಬಿಟ್‌ಕಾಯಿನ್ ಪ್ರಾರಂಭವಾಯಿತು. ಅಂದಿನಿಂದ, ಅನೇಕರು ಸೃಷ್ಟಿಕರ್ತನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಸತೋಶಿ ನಕಾಮೊಟೊ ಬಗ್ಗೆ ಪ್ರಮುಖ ಊಹೆ:
* 2014 ರಲ್ಲಿ, ಅಮೆರಿಕದ ಪ್ರಕಟಣೆಯಾದ ನ್ಯೂಸ್‌ವೀಕ್, ಬಿಟ್‌ಕಾಯಿನ್ ಬಿಡುಗಡೆ ಮಾಡಿದ್ದು ಭೌತಶಾಸ್ತ್ರಜ್ಞ ಡೋರಿಯನ್ ನಕಾಮೊಟೊ ಎಂದು ಹೇಳಿತು, ಆದರೆ ಆ ವ್ಯಕ್ತಿಯೇ ಅದನ್ನು ನಿರಾಕರಿಸಿದರು.
* 2015 ರಲ್ಲಿ, ನ್ಯೂಯಾರ್ಕ್ ಟೈಮ್ಸ್ (NYT) ಕಂಪ್ಯೂಟರ್ ವಿಜ್ಞಾನಿ ನಿಕ್ ಸಾಬೊ ಅವರನ್ನು ರಹಸ್ಯ ಸೃಷ್ಟಿಕರ್ತ ಎಂದು ತೋರಿಸಿತು.
* 2016 ರಿಂದ, ಆಸ್ಟ್ರೇಲಿಯಾದ ಕಂಪ್ಯೂಟರ್ ವಿಜ್ಞಾನಿ ಕ್ರೇಗ್ ರೈಟ್ ತನ್ನನ್ನು ನಕಾಮೊಟೊ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಮಾರ್ಚ್ 2024 ರಲ್ಲಿ, ಯುಕೆ ನ್ಯಾಯಾಧೀಶರು ಅವರು ಸತೋಶಿ ನಕಾಮೊಟೊ ಅಲ್ಲ ಎಂದು ತೀರ್ಪು ನೀಡಿದರು ಮತ್ತು ಅವರ ಹೇಳಿಕೆಗಳನ್ನು ಯುಕೆ ವಕೀಲರ ಮುಂದೆ ಸುಳ್ಳು ಸಾಕ್ಷಿ ಹೇಳಿದ್ದಾರೆ ಎಂದು ಶಿಫಾರಸು ಮಾಡಿದರು.

ಹೀಗೆ ನಿಗೂಢತೆಗಳಿಂದ ತುಂಬಿರುವ ಸತೋಶಿ ನಕಾಮೊಟೊ ಬೆಂಗಳೂರಿನಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿದ್ದು ಅಚ್ಚರಿ ಮೂಡಿಸಿದೆ.

ಟ್ರಂಪ್ ಕ್ರಿಪ್ಟೋಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಟ್‌ಕಾಯಿನ್ ಮೈನಿಂಗ್ ಷೇರುಗಳು ಏರಿಕೆ