08:00 AM (IST) Sep 29

Karnataka News Live 29 September 2026 ಗಣಪತಿಗೆ ಹೂವಿನ ಹಾರ, ಕರ್ಪೂರ ತಂದು ಮುಸ್ಲಿಂ ಮಹಿಳೆಯರಿಂದ ವಿಶೇಷ ಪೂಜೆ - ಭಾವೈಕ್ಯತೆಗೆ ಸಾಕ್ಷಿಯಾದ ಮಲ್ಲಿಗೆ ನಗರ!

ಹೂವಿನಹಡಗಲಿಯ ಇಸ್ಲಾಂಪೇಟೆಯಲ್ಲಿ ಗಣೇಶ ವಿಸರ್ಜನೆಗೆ ಎದುರಾಗಿದ್ದ ವಿವಾದ ಸುಖಾಂತ್ಯ ಕಂಡಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು.
Read Full Story
07:48 AM (IST) Sep 29

Karnataka News Live 29 September 2026 Udupi - ಕ್ರಿಕೆಟ್ ಆಡಿದ 60 ಮಂದಿ ಕ್ರೈಸ್ತ ಧರ್ಮಗುರುಗಳು, ಡಿಕನ್‌ರು; ಹೇಗಿತ್ತು ಪಂದ್ಯ?

ಉಡುಪಿಯ ಕನ್ನರ್ಪಾಡಿಯಲ್ಲಿ ಭಾನುವಾರದ ಪೂಜೆಯ ಬಳಿಕ 60 ಮಂದಿ ಕ್ರೈಸ್ತ ಧರ್ಮಗುರುಗಳು ಮತ್ತು ಡಿಕನ್‌ರು ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು. ವಿಯಾನ್ನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
Read Full Story
07:41 AM (IST) Sep 29

Karnataka News Live 29 September 2026 ನಡುರಸ್ತೆಯಲ್ಲಿ 70 ವರ್ಷದ ವೃದ್ಧ ತಾಯಿಯನ್ನು ಬಿಟ್ಟು ಹೋದ ತಮಿಳುನಾಡಿನ ವ್ಯಕ್ತಿ

ಬ್ರಹ್ಮಾವರದಲ್ಲಿ ಮಗನೊಬ್ಬ ತನ್ನ 70 ವರ್ಷದ ವೃದ್ಧ ತಾಯಿಯನ್ನು ಅಪರಿಚಿತ ಸ್ಥಳದಲ್ಲಿ ಅಮಾನವೀಯವಾಗಿ ಬಿಟ್ಟು ಹೋಗಿದ್ದಾನೆ. ಶಾಲೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಈಕೆಯನ್ನು ಸಮಾಜಸೇವಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read Full Story
07:38 AM (IST) Sep 29

Karnataka News Live 29 September 2026 ಬೆಂಗಳೂರು ದಿಢೀರ್ ಮಳೆಯಿಂದ ಅವಾಂತರ - ಇಂದಿನಿಂದ ಈ ಮೂರು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ!

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿ.. ಇದರ ಬೆನ್ನಲ್ಲೇ ಅಕ್ಟೋಬರ್ 4ರವರೆಗೆ ಕರಾವಳಿ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯ ನಡುವೆಯೂ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗುವ ಆತಂಕ.

Read Full Story
07:18 AM (IST) Sep 29

Karnataka News Live 29 September 2026 ಕನಕಪುರ ರಸ್ತೆ ಅಪಘಾತದಲ್ಲಿ ದೇಹದಿಂದ ಬೇರ್ಪಟ್ಟುರಸ್ತೆ ಮೇಲೆ ಮಿಡಿಯುತ್ತಿದ್ದ ಹೃದಯ!

ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆಯಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಶಿಕ್ಷಕಿ ನಾಗರತ್ನ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಅವರ ಹೃದಯ ದೇಹದಿಂದ ಬೇರ್ಪಟ್ಟು ರಸ್ತೆಯಲ್ಲಿ ಬಡಿದುಕೊಳ್ಳುತ್ತಿದ್ದ ಭೀಕರ ದೃಶ್ಯ ಕಂಡುಬಂದಿದೆ. ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Read Full Story