ಅರಣ್ಯ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ನದಿ ಮೂಲಗಳ ಮೂಲಕ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
- Home
- News
- State
- Karnataka News Live: ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬದ್ಧ - ಸಚಿವ ಈಶ್ವರ್ ಖಂಡ್ರೆ ಭರವಸೆ
Karnataka News Live: ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬದ್ಧ - ಸಚಿವ ಈಶ್ವರ್ ಖಂಡ್ರೆ ಭರವಸೆ

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಗೆ ಭಾನುವಾರ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂಪೂರ್ಣ ದೇವಳದ ಪರಿಸರ ಜಾತ್ರೆಯ ಸಂಭ್ರಮ ನೆನಪಿಸುವಂತಿತ್ತು. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಸೇರಿದಂತೆ ಎಲ್ಲೆಡೆ ಭಕ್ತರು ತುಂಬಿದ್ದರು. ಹಲವರು ವಿಶೇಷವಾಗಿ ಆಶ್ಲೇಷಾಬಲಿ, ನಾಗಪ್ರತಿಷ್ಠೆ ಹಾಗೂ ಸರ್ಪಸಂಸ್ಕಾರ ಸೇವೆ ಸಲ್ಲಿಸಿದರು.

ಕಳೆದೊಂದು ತಿಂಗಳಿನಿಂದಲೂ ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರ ನಿಯಂತ್ರಣಕ್ಕಾಗಿ ದೇವಸ್ಥಾನದ ಸಿಬ್ಬಂದಿ ಮೆಗಾಫೋನ್ ಬಳಸುತ್ತಿದ್ದಾರೆ.ಥಬೀದಿ ಪಕ್ಕದ ಪ್ರದೇಶ ಸೇರಿದಂತೆ ಕ್ಷೇತ್ರದ ಸುತ್ತಲಿನ ಪಾರ್ಕಿಂಗ್ ಸ್ಥಳಗಳು ಸಂಪೂರ್ಣ ಭರ್ತಿಯಾಗಿದ್ದವು.
Karnataka News Live 25 May 2026ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬದ್ಧ - ಸಚಿವ ಈಶ್ವರ್ ಖಂಡ್ರೆ ಭರವಸೆ
Karnataka News Live 25 May 2026ರಾಜ್ಯ ಕೈಗಾರಿಕಾ ರಂಗದಲ್ಲಿ ಹೊಸ ಕ್ರಾಂತಿ - ‘ಕ್ವಿನ್ ಸಿಟಿ’ಗೆ ಎಂಟ್ರಿ ಕೊಟ್ಟ ಟೊಯೋಟಾದಿಂದ ₹1,200 ಕೋಟಿ ಬೂಸ್ಟರ್ ಡೋಸ್
Karnataka News Live 25 May 2026ಅಯ್ಯೋ ದುರ್ವಿಧಿಯೇ.. ಬೇಸಿಗೆ ರಜೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವು!
ಬೇಸಿಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
Karnataka News Live 25 May 2026Premanand Maharaj - ನಾನಿರಲಿ, ಇಲ್ಲದಿರಲಿ... ಅಂತ ಪ್ರೇಮಾನಂದ ಮಹಾರಾಜ್ ಹೇಳಿದ್ದೇಕೆ? ಭಾವುಕ ಸಂದೇಶ ವೈರಲ್
ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಭಕ್ತರಿಗೆ ಭಾವುಕ ಮನವಿಯೊಂದನ್ನು ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.
Karnataka News Live 25 May 2026ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಸಂಗೀತ-ನೃತ್ಯ ಪರೀಕ್ಷೆ, ಕರಾವಳಿಯಲ್ಲಿ ದಾಖಲೆ ಮಂದಿ ಹಾಜರ್!
Karnataka News Live 25 May 2026Shocking- Bigg Boss - ಅಯ್ಯೋ, ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆ ಮೇಲೆಯೇ ಭಾರೀ ಅವಮಾನ; ಅದ್ಯಾಕೆ ಹಾಗೆಲ್ಲಾ ಮಾಡಿದ್ದು?
ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!
Karnataka News Live 25 May 2026ಈ ಜಿಲ್ಲೆಯಲ್ಲಿ ಈ ವರ್ಷ 80ಕ್ಕೂ ಅಧಿಕ ಸರ್ಕಾರಿ ಶಾಲೆ ಬಂದ್? ಕಾರಣವೇನು?
ಜಿಲ್ಲೆಯಲ್ಲಿ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆ ಮಾಡಬಹುದು. ಸಮೀಪದ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನಗೊಳಿಸಬಹುದು ಎಂಬ ಬಗ್ಗೆ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿ ಕೊಳ್ಳಲಾಗಿದೆ.
Karnataka News Live 25 May 2026ಕೆಆರ್‌ಎಸ್ ಟ್ರಯಲ್ ಬ್ಲಾಸ್ಟ್ ನಡೆಯದಿದ್ದರೂ 1.11 ಕೋಟಿ ರೂ. ಬಿಲ್, ಹಗರಣ ನಡೆದ ಬಗ್ಗೆ ದೊಡ್ಡ ಅನುಮಾನ!
ವರದಿ:ಮಂಡ್ಯ ಮಂಜುನಾಥ
ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸದೆಯೇ,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 1.11ಕೋಟಿ ರೂ ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮೂರು ಬಾರಿ ಸ್ಫೋಟಕ್ಕೆ ಯತ್ನ ವಿಫಲವಾದರೂ ಇಷ್ಟು ದೊಡ್ಡ ಮೊತ್ತದ ಖರ್ಚು,ತೆರಿಗೆ ವಂಚನೆ ಅನುಮಾನಗಳಿಗೆ ಕಾರಣ.
Karnataka News Live 25 May 2026ಕಿಚ್ಚ ಸುದೀಪ್ ಅವರನ್ನು ಬೆಳೆಸಿದಂತೆ ನನ್ನನ್ನೂ ಬೆಳೆಸಿ - ಸಂಚಿತ್ ಸಂಜೀವ್ ಮನವಿ ಮಾಡಿದ್ದೇನು?
ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ "ಮ್ಯಾಂಗೋ ಪಚ್ಚ" ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್..
Karnataka News Live 25 May 2026ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ? - ಸಂಕಷ್ಟದಲ್ಲಿ ವೃದ್ಧರು, ಅಂಗವಿಕಲರ ಜೀವನ!
ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.
Karnataka News Live 25 May 2026ಮೈಸೂರಿನಿಂದ ಐತಿಹಾಸಿಕ ರೈಲು ಪಯಣ - ಒಡಿಶಾಗೆ ದೇಶೀಯ ಖನಿಜ ರವಾನೆಯ ಮೊದಲ ರೈಲು ಯಶಸ್ವಿ ಪ್ರಾಯೋಗಿಕ ಚಾಲನೆ!
Karnataka News Live 25 May 2026BREAKING - ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್
Karnataka News Live 25 May 2026ಭಟ್ಕಳದಲ್ಲಿ 11 ಮಂದಿಯ ಸಾವಿಗೆ ಕಾರಣವಾದ ಕಳಿನಡ ಹೆಕ್ಕುವ ಹವ್ಯಾಸ, ಇದರ ಖಾದ್ಯ ಸಖತ್ ಫೇಮಸ್!
Karnataka News Live 25 May 2026ರಕ್ಷಿಸಬೇಕಾದ ಎಪಿಎಂಸಿಗಳಲ್ಲಿಯೇ ರೈತರಿಗೆ ಅನ್ಯಾಯ - ಸಿ.ಟಿ.ರವಿ ಎಚ್ಚರಿಕೆ
ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಇಲ್ಲವಾದರೆ, ಹೋರಾಟ ಅನಿವಾರ್ಯವಾಗಲಿದೆ ಎಂದು ಸಿ.ಟಿ.ರವಿ ಎಚ್ಚರಿಸಿದ್ದಾರೆ.
Karnataka News Live 25 May 2026ಗದಗದಲ್ಲಿ ಇಂಧನಕ್ಕೆ ಹಾಹಾಕಾರ, ಬಂಕ್‌ಗಳೇ ಖಾಲಿ, ರೈತರು ಮತ್ತು ಸವಾರರ ಕಿಲೋಮೀಟರ್ ಉದ್ದದ ಕ್ಯೂ!
Karnataka News Live 25 May 2026ವೈಭವ್ ಸೂರ್ಯವಂಶಿ ಗುರಿ ಕೇಳಿ ಬೆಚ್ಚಿಬಿದ್ದ ಪೀಟರ್ಸನ್; ಒಂದು ಚಾನ್ಸ್ ಸಿಕ್ಕರೆ ಟಿ-20ಯಲ್ಲಿ 200 ರನ್ ಹೊಡಿತೇನೆ!
ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಟಿ20 ಪಂದ್ಯವೊಂದರಲ್ಲಿ 200 ರನ್ ಗಳಿಸುವ ಮೂಲಕ ಕ್ರಿಸ್ ಗೇಲ್ ಅವರ 175 ರನ್‌ಗಳ ದಾಖಲೆಯನ್ನು ಮುರಿಯುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಕೆವಿನ್ ಪೀಟರ್ಸನ್ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ಮತ್ತಷ್ಟು ಗುರಿ ರಿವೀಲ್ ಮಾಡಿದ್ದಾರೆ.
Karnataka News Live 25 May 2026ಭಟ್ಕಳದಲ್ಲಿ ಮತ್ತೆ ಉದ್ವಿಗ್ನತೆ - ಮೂರಿನ ಕಟ್ಟೆ ವಿವಾದ ತೀವ್ರ, ಮೂರು ದಿನ ನಿಷೇಧಾಜ್ಞೆ, ಮುಂದೇನು?
ಜಿಲ್ಲೆಯ ಭಟ್ಕಳ ಮತ್ತೆ ಹಿಂದು ಮುಸ್ಲಿಂ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ. ಹಿಂದು ಧಾರ್ಮಿಕತೆಯ ಸಂಕೇತವಾದ ಮೂರಿನ ಕಟ್ಟೆ ಮರು ನಿರ್ಮಾಣ ಹಾಗೂ ಮುಸ್ಲಿಮರಿಂದ ಮೂರಿನ ಕಟ್ಟೆ ಧ್ವಂಸ ವಿಚಾರ ಈಗ ತಾರಕಕ್ಕೇರಿದೆ.
Karnataka News Live 25 May 2026ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್! ಕೇವಲ 'ಪ್ರೋಟೀನ್ ಬಾರ್'ಗಾಗಿಯೇ ₹2 ಲಕ್ಷ ಖರ್ಚು ಮಾಡಿದ ಗ್ರಾಹಕ!
Karnataka News Live 25 May 2026ಬೆಂಗಳೂರಿಗೆ ಆಲಿಕಲ್ಲು ಸಹಿತ ಮಳೆ ಮುನ್ಸೂಚನೆ; ಸಂಜೆ ವೇಳೆ ಬೇಗನೆ ಮನೆ ಸೇರಿಕೊಳ್ಳಿ ಎಂದ ಹವಾಮಾನ ಇಲಾಖೆ!
ನೈಋತ್ಯ ಮುಂಗಾರು ಕರ್ನಾಟಕದತ್ತ ವೇಗವಾಗಿ ಮುನ್ನುಗ್ಗುತ್ತಿದ್ದು, ರಾಜ್ಯಾದ್ಯಂತ ಮುಂದಿನ ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ 27ರಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Karnataka News Live 25 May 202660 ವರ್ಷದ ಇತಿಹಾಸ.. ಓಬೇರಾಯನ ಕಾಲದ ಪ್ರವಾಸಿಮಂದಿರ ಅಧೋಗತಿ - ಸಾರ್ವಜನಿಕರ ಆಕ್ರೋಶ
ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ..