07:40 PM (IST) Feb 23

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಮನೆಗೆ ರಾಜ್ಯಪಾಲ ವಿಜಯ್ ಶಂಕರ್ ಭೇಟಿ

ಖ್ಯಾತ ರಂಗಭೂಮಿ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜ್ಯೋಗತಿಯವರ ಮನೆಗೆ ಮೆಘಾಲಯದ ರಾಜ್ಯಪಾಲ ವಿಜಯ್ ಶಂಕರ್ ಭೇಟಿ ನೀಡಿದ್ದಾರೆ. ಜೋಗತಿ ನೃತ್ಯದ ಮೂಲಕ ರಾಜ್ಯಪಾಲರನ್ನು ಸ್ವಾಗತಿಸಲಾಗಿದೆ. ಇದೇ ವೇಳೆ ಮೇಘಾಲಯದ ರಾಜ್ಯಪಾಲರು ವಿಜಯ್ ಶಂಕರ್ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂಜಮ್ಮ ಜೋಗತಿ ಮನವಿ ಸಲ್ಲಿಸಿದ್ದಾರೆ.

07:04 PM (IST) Feb 23

ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ, ಮಹಿಳೆ ಸ್ಥಳದಲ್ಲೆ ಸಾವು

ತುಮಕೂರು ಜಿಲ್ಲೆಯಲ್ಲಿ ಮಧುಗಿರಿ‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

06:06 PM (IST) Feb 23

ಕಾಂಗ್ರೆಸ್ ಶಾಸಕರಿಂದಲೇ ಜಾತಿ ಜನಗಣತಿಗೆ ಭಾರಿ ವಿರೋಧ

ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಜಾತಿ ಗಣತಿ ವಿರುದ್ದ ಸಿಡಿದೆದ್ದಿದ್ದಾರೆ. ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ, ನಮ್ಮ‌ ಮನೆಗೆ ಬಂದು ಜಾತಿ ಗಣತಿ ಮಾಡಿಲ್ಲ. ಎಲ್ಲೋ ಕೂತು ಜಾತಿಗಣತಿ ಮಾಡಿದರೆ ಹೇಗೆ ಒಪ್ಪೋದು ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ. 

05:27 PM (IST) Feb 23

ಕಾಂಗ್ರೆಸ್ ಪಂಚ ಗ್ಯಾರೆಂಟಿಗೆ ಸ್ವಾಮೀಜಿ ಅಸಮಾಧಾನ

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಕುರಿತು ರಂಭಾಪುರಿ ಸ್ವಾಮೀಜಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಾಜಿ ಅಸಮಾಧಾನ ವ್ಯಕ್ತಪಪಡಿಸಿದ್ದಾರೆ. ಕಾಂಗ್ರೆಸ್ ಒಳಗೆ ಈ ಗ್ಯಾರೆಂಟಿಗೆ ಒಮ್ಮತವಿಲ್ಲ ಎಂದಿದ್ದಾರೆ. 

04:32 PM (IST) Feb 23

ಇಂಡೋ ಪಾಕ್ ಹೈವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕೇಂದ್ರ ಸಚಿವ ಕುಮಾರಸ್ವಾಮಿ

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಈ ಹೋರಾಟವನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವೀಕ್ಷಿಸುತ್ತಿದ್ದಾರೆ.ಟಿವಿ ಮೂಲಕ ಪಂದ್ಯ ವೀಕ್ಷಿಸಿದ್ದಾರೆ.

04:08 PM (IST) Feb 23

ದೆಹಲಿಗೆ ತೆರಳುತ್ತಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ಚಾಯ್ತು ಕುತೂಹಲ

ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಕೇಂದ್ರ ಜಲಶಕ್ತಿ ಮಂತ್ರಿ ಸಿ ಆರ್ ಪಾಟೀಲ್ ಮತ್ತು ಅಧಿಕಾರಿಗಳ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಳೆದ ವಾರವಷ್ಟೇ ಜಲಶಕ್ತಿ ಸಚಿವ ರನ್ನು ಮಾಜಿ ಪ್ರಧಾನಿ ದೇವೇಗೌಡರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

04:06 PM (IST) Feb 23

ಭಾರತದ ದಾಳಿಯಿಂದ ಚೇತರಿಸಿಕೊಂಡ ಪಾಕ್, ರಿಜ್ವಾನ್-ಶಕೀಲ್ ಜೊತೆಯಾಟ

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿದೆ. ಆರಂಭದಲ್ಲಿ 2 ವಿಕೆಟ್ ಕಬಳಿಸಲು ಯಶಸ್ವಿಯಾದ ಭಾರತ ಮೇಲುಗೈ ಸಾಧಿಸಿತ್ತು.ಆದರೆ ರಿಜ್ವಾನ್ ಹಾಗೂ ಶಕೀಲ್ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿದೆ. ಸದ್ಯ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 75 ರನ್ ಸಿಡಿಸಿದೆ. 

03:04 PM (IST) Feb 23

ಕರ್ನಾಟಕ ನ್ಯೂಸ್ ಲೈವ್: ಪರಮೇಶ್ವರ್ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ರಾ?

Minister HK Patil: ಸಿಎಂ ಬದಲಾವಣೆ ಕಪೋಲಕಲ್ಪಿತವಾದ ವಿಷಯ. ಇದ್ಯಾವುದಕ್ಕೂ ನಾನು ಪ್ರತಿಕ್ರಿಯಿಸಲ್ಲ ಎಂದು ಹೆಚ್‌ಕೆ ಪಾಟೀಲ್ ಹೇಳಿದ್ದಾರೆ. ಗೃಹ ಸಚಿವ ಪರಮೇಶ್ವರರಿಂದ ರಾಜೀನಾಮೆ ಇಂಗಿತ ವಿಚಾರಕ್ಕೆ, ನನಗೆ ಗೊತ್ತಿಲ್ಲ, ಅದರ ಬಗ್ಗೆ ಉತ್ತರ ಕೊಡಲ್ಲ. ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಬಳಿಕ ಜನ ಭಯದಿಂದ ಹೊರಬಂದಿದ್ದಾರೆ. ಕೆಟ್ಟ ರೀತಿಯಲ್ಲಿ ಸಾಲ ವಸೂಲಿ ಮಾಡೋ ಪ್ರಯತ್ನ ಮಾಡೋರಿಗೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಸಚಿವರು ಹೇಳಿದರು. 

02:33 PM (IST) Feb 23

ಕರ್ನಾಟಕ News Live: ತವರು ಮನೆಯಿಂದ ಜಮೀನು ಕೊಡದ್ದಕ್ಕೆ ಗಂಡನಿಂದ ಪತ್ನಿ ಮೇಲೆ ಚಾಕುವಿನಿಂದ ದಾಳಿ

Raichur News: ಪತ್ನಿ ಪೋಷಕರು ಜಮೀನು ನೀಡದ್ದಕ್ಕೆ ವ್ಯಕ್ತಿಯೋರ್ವ ಮನಬಂದಂತೆ ಚಾಕುವಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ರಾಯಚೂರು ತಾಲೂಕಿನ ಶಕ್ತಿನಗರದ ಕೆಪಿಸಿ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆಯನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ವರ್ಷದ ರೇಖಾ ಗಂಡ ಸೂಗಪ್ಪನಿಂದ ಹಲ್ಲೆಗೊಳಗಾದ ಮಹಿಳೆ. ಘಟನೆ ಬಳಿಕ ಪತಿ ಪರಾರಿಯಾಗಿದ್ದು, ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

02:26 PM (IST) Feb 23

ಕರ್ನಾಟಕ ನ್ಯೂಸ್ ಲೈವ್, Bengaluru Traffic: ಆಫೀಸಿಗೆ ಹೊರಟ ಟೆಕ್ಕಿಗೆ ಕಾರಿನಲ್ಲೇ ಹೃದಯಾಘಾತ

Bengaluru Techie Death: ಟೆಕ್ಕಿಯೊಬ್ಬರು ಬೆಳಗ್ಗೆ ಎಂದಿನಂತೆ ಕಾರಿನಲ್ಲಿ ಆಫೀಸಿಗೆ ಹೋಗುವಾಗ ದಿಢೀರನೇ ಹೃದಯಾಘಾತ ಆಗಿದ್ದು, ಕೂಡಲೇ ಟ್ರಾಫಿಕ್‌ಜಾಮ್‌ನಲ್ಲಿಯೂ ಕಾರನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಆದರೆ, ಕಾರನ್ನು ಇಳಿದು ಬೇರೆಯವರ ಸಹಾಯ ಕೋರುವ ಮೊದಲೇ ಹೃದಯಸ್ತಂಬನಕ್ಕೆ ಟೆಕ್ಕಿ ಸಾವಿಗೀಡಾಗಿದ್ದಾನೆ. ಟ್ರಾಫಿಕ ಇರುವ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಲು ಬಂದ ಪೊಲೀಸರಿಗೆ ಕಾರಿನಲ್ಲಿದ್ದವರು ಸತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

02:07 PM (IST) Feb 23

ICC Champions Trophy, 2025 INDvsPAK ಟಾಸ್ ಗೆದ್ದ ಪಾಕ್, ಬ್ಯಾಟಿಂಗ್ ಆಯ್ಕೆ

ICC Champions Trophy, 2025 INDvsPAK ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ

Scroll to load tweet…
01:37 PM (IST) Feb 23

ICC Champions Trophy, 2025 INDvsPAK ಇಂಡೋ-ಪಾಕ್ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಹವಾಮಾನ ವರದಿ ಏನು?

01:28 PM (IST) Feb 23

ಕರ್ನಾಟಕ ನ್ಯೂಸ್ ಲೈವ್: ಬೆಂಗಳೂರಿನ ಈ ಭಾಗದಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್

Bengaluru Traffic Jam: Nelamangala Toll: ನೆಲಮಂಗಲ ಟೋಲ್ ಯಿಂದ ಬೆಂಗಳೂರು ನಗರ ಪ್ರವೇಶಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಜ್ಯಪಾಲರು ಕುಣಿಗಲ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿರೋ ಹಿನ್ನೆಲೆ ಪೊಲೀಸರು ವಾಹನಗಳನ್ನು ತಡೆದಿರೋ ಕಾರಣ ಟ್ರಾಫಿಕ್ ಉಂಟಾಗಿದೆ. ಉರಿ ಬಿಸಿಲಿನಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ.

01:05 PM (IST) Feb 23

ಕರ್ನಾಟಕ ನ್ಯೂಸ್ ಲೈವ್ , Bengaluru Pagal Premi | ಓಂ ಸಿನಿಮಾ ಸ್ಟೈಲ್‌ನಲ್ಲಿ ಟಾರ್ಚರ್‌ ಕೊಡ್ತಿದ್ದ ಪಾಗಲ್‌

Bengaluru News 

YouTube video player

12:44 PM (IST) Feb 23

ICC Championstrophy 2025: ಪಾಕ್ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಅಚ್ಚರಿ ಚೇಂಜ್?

12:29 PM (IST) Feb 23

ಕರ್ನಾಟಕ News Live: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ: ಹೆಸರೇನು?

Chitradurga Renukaswamy Son Naming Ceremony: ಚಿತ್ರದುರ್ಗದ ರೇಣುಕಾಸ್ವಾಮಿ ಮಗನಿಗೆ "ಶಶಿಧರ್ ಸ್ವಾಮಿ" ಎಂದು ನಾಮಕಾರಣ ಮಾಡಲಾಗಿದೆ. ರೇಣುಕಾಸ್ವಾಮಿ ಸಹೋದರಿ ಸುಚೇತಾ ಅವರು, ಮಗುವಿಗೆ ಜೇನುತುಪ್ಪ ತಿನ್ನಿಸಿ, ಕಿವಿಯಲ್ಲಿ ಹೆಸರು ಹೇಳಿ ನಾಮಕರಣ ಶಾಸ್ತ್ರ ನೆರವೇರಿಸಿದರು. ನಂತರ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ, ಸೊಂಟಕ್ಕೆ ಬೆಳ್ಳಿ ಉಡುದಾರ ಹಾಕಿ ತೊಟ್ಟಲಿಗೆ ಹಾಕಲಾಯ್ತು. ತೊಟ್ಟಿಲು‌ ಶಾಸ್ತ್ರದಲ್ಲಿ ಕುಟುಂಬಸ್ಥರು, ಸಂಬಂಧಿಕರು ಭಾಗಿಯಾಗಿದ್ದರು.

ಇದನ್ನೂ ಓದಿ: ದರ್ಶನ್​​ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್​​;ಒಂದಾದ ಅಣ್ಣ-ತಮ್ಮ,ತಾಯಿ-ಮಗ

11:59 AM (IST) Feb 23

ICC Champions Trophy, 2025 INDvsPAK ಬೆಂಗಳೂರಿನಲ್ಲಿ ಭಾರತ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಕೆ

Bengaluru News: ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದಲ್ಲಿಂದು ಭಾರತದ ಗೆಲುವಿಗಾಗಿ‌ ವಂದೇ ಮಾತರಂ ಸಂಘಟನೆಯಿಂದ ಪೂಜೆ ಸಲ್ಲಿಕೆ ಮಾಡಲಾಗಿದೆ. 101 ತೆಂಗಿನಕಾಯಿ ಒಡೆಯುವ ಮೂಲಕ ಗೆಲುವಿಗಾಗಿ ದೇವರಲ್ಲಿ ಪಾರ್ಥನೆ ಸಲ್ಲಿಸಲಾಗಿದೆ. ಪ್ರತಿ ಮ್ಯಾಚ್ ವೇಳೆಯಲ್ಲೂ ವಿಶೇಷ ಪೂಜೆ ಸಲ್ಲಿಸುತ್ತೇವೆ. ಭಾರತ ತಂಡಕ್ಕೆ ಯಾವುದೇ ದೃಷ್ಟಿ ಬಿದ್ದಿದ್ರು ಹೋಗಬೇಕು ಅಂತ ಪೂಜೆ ಸಲ್ಲಿಸುತ್ತೇವೆ. ಪಾಕಿಸ್ತಾನ ನಮ್ಮ ಬದ್ದವೈರಿ ತಂಡ. ಪಾಕಿಸ್ತಾನವನ್ನ ಭಾರತ ತಂಡ ಸೋಲಿಸಬೇಕು ಅಂತ ಪೂಜೆ ಸಲ್ಲಿಸುತ್ತಿದ್ದೇವೆ. 101 ತೆಂಗಿನಕಾಯಿ, ನಿಂಬೆಹಣ್ಣು ಒಡೆಯುವ ಮೂಲಕ ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ಕ್ರಿಕೆಟ್ ಪ್ರೇಮಿ ಶಿವಕುಮಾರ್ ನಾಯ್ಕ್ ಹೇಳಿದ್ದಾರೆ. 

11:37 AM (IST) Feb 23

ICC Championstrophy 2025: ಭಾರತ ಎದುರು ಸೋತರೂ ಪಾಕಿಸ್ತಾನಕ್ಕಿದೆ ಸೆಮೀಸ್‌ಗೇರುವ ಚಾನ್ಸ್! ಇಲ್ಲಿದೆ ನಾಕೌಟ್ ಲೆಕ್ಕಾಚಾರ

Scroll to load tweet…
11:01 AM (IST) Feb 23

ಕರ್ನಾಟಕ ನ್ಯೂಸ್ ಲೈವ್, Ballary Politics: ಹೈಕಮಾಂಡ್‌ ಹೇಳುವ ಮೊದಲೇ ಶ್ರೀರಾಮುಲು ಮಹತ್ವದ ನಿರ್ಧಾರ

Former Minister B Sriramulu Padayatra And Ballary Politics

Scroll to load tweet…
10:28 AM (IST) Feb 23

Kalaburgi News: ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ, ಹತ್ತಿ ಬಿಟ್ಟು ಹೊಲಿಗೆ ಹಾಕಿದ ಜಿಮ್ಸ್ ಆಸ್ಪತ್ರೆಯ ವೈದ್ಯರು

Kalaburgi: ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ವೈದ್ಯರು ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ, ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ಫೆಬ್ರವರಿ 5 ರಂದು ಭಾಗ್ಯಶ್ರೀ ಎಂಬವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಬಟ್ಟೆ ಉಂಡೆ ಹಾಗು ಹತ್ತಿ ಹೊಟ್ಟೆ ಒಳಗೆ ಬಿಟ್ಟು ಹೊಲಿಗೆ ಹಾಕಲಾಗಿದೆ. ಒಂದು ವಾರದ ಬಳಿಕ ಹೊಟ್ಟೆ ಮಹಿಳೆ ಬಂದಾಗ ಸ್ಕ್ಯಾನಿಂಗ್ ವೇಳೆ ವೈದ್ಯರ ಯಡವಟ್ಟು ಬೆಳಕಿಗೆ ಬಂದಿದೆ. ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಪ್ರಾಥಮಿಕ‌ ಕೇಂದ್ರದಲ್ಲಿ ಮಹಿಳೆ ಮರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೊಟ್ಟೆಯಲ್ಲಿದ್ದ ಬಟ್ಟೆ ಉಂಡೆ ಹಾಗೂ ಹತ್ತಿ ತೆಗೆಯಲಾಗಿದೆ. ಜಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಮಹಿಳೆಯ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ.