02:09 PM (IST) Feb 22

Karnataka News Live 22 February 2026ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್ 2ರವರರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಸಹಾಯಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚೆಕ್ ಡ್ಯಾಂ ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಪಡೆಯುವಾಗ ಇವರು ಸಿಕ್ಕಿಬಿದ್ದಿದ್ದಾರೆ.

Read Full Story
11:57 AM (IST) Feb 22

Karnataka News Live 22 February 2026ಸುಚಿ ಆಂಟಿಯ ಕಮಲಾಕರ ಭಟ್‌ನ ಮತ್ತೊಂದು ಕರಾಳ ಮುಖ ಬಯಲು; ಜ್ಯೋತಿಷಿ ಹೊಲಸು ಕೆಲಸ ರಿವೀಲ್?

ವಸಂತ್ ನಾಯ್ಕ್ ಕೊ*ಲೆ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಟನ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಇದು ಆತನಿಗೆ ಜಾಮೀನು ಸಿಗುವ ಸಾಧ್ಯತೆಯನ್ನು ಕ್ಷೀಣಿಸಿದೆ.

Read Full Story
11:13 AM (IST) Feb 22

Karnataka News Live 22 February 2026ಮಂಗಳಮುಖಿ, ಪ್ರಿಯಕರನ ಸಾವಿಗೆ ಬಿಗ್‌ ಟ್ವಿಸ್ಟ್; ಐದಾರು ವರ್ಷದ ಪ್ರೇಮಕಥೆಗೆ ದುರಂತ ಅಂತ್ಯ!

ಬಳ್ಳಾರಿಯಲ್ಲಿ ಮಂಗಳಮುಖಿ ಸುಹಾಸಿನಿ ಮತ್ತು ಆಕೆಯ ಪ್ರಿಯಕರ ಶೇಖರ್ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಣಕಾಸು ಮತ್ತು ಮದುವೆ ವಿಚಾರವಾಗಿ ನಡೆದ ಜಗಳದ ನಂತರ ಶೇಖರ್, ಸುಹಾಸಿನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 

Read Full Story
10:20 AM (IST) Feb 22

Karnataka News Live 22 February 2026ಮಹಿಳೆಯರ ಮುಂದೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ಹಾಕಿದ ಶಿಕ್ಷಕ; ರುಂಡವಿಲ್ಲದ ಬೆತ್ತಲೆ ಮೃತದೇಹ ಪತ್ತೆ

ಮಹಿಳೆಯರ ಮುಂದೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕನೊಬ್ಬ ವ್ಯಕ್ತಿಗೆ ಚಾಕು ಇರಿದಿದ್ದಾನೆ. ಮತ್ತೊಂದೆಡೆ, ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಶವ ಪತ್ತೆಯಾಗಿದ್ದು, ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read Full Story
09:45 AM (IST) Feb 22

Karnataka News Live 22 February 2026ಬೆಂಗಳೂರಿನ ರಸ್ತೆಗೆ ₹2,671 ಕೋಟಿ; ವಿಶ್ವಬ್ಯಾಂಕ್‌ನಿಂದ ₹1600 ಕೋಟಿ ಸಾಲ ಪಡೆದು ರಾಜಕಾಲುವೆ ನಿರ್ಮಾಣ

ಮಳೆಗಾಲದ ವೇಳೆಗೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ₹2,671 ಕೋಟಿ ವೆಚ್ಚದ ಕಾಮಗಾರಿಗಳನ್ನು ಘೋಷಿಸಿದ್ದಾರೆ. ವಿಶ್ವಬ್ಯಾಂಕ್ ಸಾಲದೊಂದಿಗೆ ರಾಜಕಾಲುವೆ ನಿರ್ಮಾಣ, ಇ-ಖಾತಾ ವಿತರಣೆ, ಮತ್ತು ಬೆಂಗಳೂರು ಬಿಸಿನೆಸ್ ಕಾರಿಡಾರ್‌ನಂತಹ ಪ್ರಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.

Read Full Story
09:13 AM (IST) Feb 22

Karnataka News Live 22 February 2026ರಸ್ತೆ ಬದಿಯ ಎಗ್ ರೈಸ್ ಅಂಗಡಿಗಳ ಮೇಲೆ ದಾಳಿ; ಬಂದ್ ಮಾಡುವ ಎಚ್ಚರಿಕೆ ನೀಡಿದ ಅಧಿಕಾರಿಗಳು

ನಗರದ ರಸ್ತೆಗಳ ಇಕ್ಕೆಲದಲ್ಲಿ ಎಗ್ ರೈಸ್ ಮಾರಾಟ ಮಾಡುತ್ತಿದ್ದ ಬೀದಿಬದಿ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮುಂದುವರಿಸಿದರೆ ಅಂಗಡಿಗಳನ್ನು ಮುಚ್ಚಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

Read Full Story
09:04 AM (IST) Feb 22

Karnataka News Live 22 February 2026ಮಾಜಿ ಶಾಸಕ ಸುರೇಶ್ ಗೌಡರ ಕಾರ್‌ ಅಪಘಾತ; ಮದುವೆಗೆ ತೆರಳುತ್ತಿದ್ದಾಗ ಪಲ್ಟಿಯಾದ ಕಾರ್

ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡರು ಪ್ರಯಾಣಿಸುತ್ತಿದ್ದ ಕಾರು ಮಂಡ್ಯದ ಬೊಂತೆಕೊಪ್ಪಲು ಬಳಿ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಸುರೇಶ್ ಗೌಡರ ಕೈಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story
08:36 AM (IST) Feb 22

Karnataka News Live 22 February 2026ಲೂಡೊ ಕಾಯಿ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು; ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಪತ್ತೆ

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ, ಎಂಟು ವರ್ಷದ ಬಾಲಕಿ ತನ್ನ ಸಹೋದರರೊಂದಿಗೆ ಲೂಡೊ ಆಡುವಾಗ ಆಟಿಕೆಯ ಕಾಯಿಯನ್ನು ನುಂಗಿದ್ದಾಳೆ. ಇದರಿಂದ ಉಸಿರುಗಟ್ಟಿ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. 

Read Full Story
08:22 AM (IST) Feb 22

Karnataka News Live 22 February 2026ಎಂಜಿನಿಯರಿಂಗ್ ಕಾಲೇಜು ಕಟ್ಟಡದ 4ನೇ ಮಹಡಿಯ ಕಿಟಕಿಯಿಂದ ಧುಮುಕಿದ ಮು‍‍ಳ್ಳು ಹಂದಿ ಸಾವು

ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ನಾಯಿಗಳ ಭಯದಿಂದ ನುಗ್ಗಿದ ಮುಳ್ಳುಹಂದಿಯೊಂದು, ನಾಲ್ಕನೇ ಮಹಡಿಯಿಂದ ಕೆಳಕ್ಕೆ ಜಿಗಿದು ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಯತ್ನಿಸಿದರೂ, ಭಯಭೀತಗೊಂಡ ಪ್ರಾಣಿ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದೆ.
Read Full Story
08:10 AM (IST) Feb 22

Karnataka News Live 22 February 2026ರಾಜ್ಯದಲ್ಲಿ ಒಣಹವೆ ನಡುವೆಯೂ ಮಳೆ; ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ವರುಣನ ಅಬ್ಬರ

ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು, ಚಳಿ ಕಡಿಮೆಯಾಗುತ್ತಿದೆ. ಆದರೆ, ಹವಾಮಾನ ಇಲಾಖೆಯ ಪ್ರಕಾರ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಕೊಡಗು ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ.

Read Full Story
07:49 AM (IST) Feb 22

Karnataka News Live 22 February 2026ಕಾವ್ಯಾ ಗೌಡ ಮನೆಯ ರಹಸ್ಯ - ಸಿಸಿಟಿವಿ ಹೇಳಿದ ಸತ್ಯ ಏನು? ಕ್ರೂರ ಮುಖಗಳು ಅಂತ ಹೇಳಿದ್ಯಾರಿಗೆ?

ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಮೇಲಿನ ಆರೋಪಗಳಿಗೆ ಪ್ರತ್ಯುತ್ತರವಾಗಿ ಮನೆಯ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ಪತಿಯ ಅಣ್ಣನ ಪತ್ನಿ ಪ್ರೇಮಾ ಮತ್ತು ಅವರ ಸಹೋದರಿ ಹಲ್ಲೆಗೆ ಯತ್ನಿಸುತ್ತಿರುವುದು ಸೆರೆಯಾಗಿದೆ.

Read Full Story