12:00 AM (IST) Aug 22

Karnataka News Live 21st August: ವಿಧಾನಸಭೆಯಲ್ಲಿ ಸಾರಾಯಿ ಅಂಗಡಿ ಕುರಿತ ಚರ್ಚೆ,ಭಾರೀ ಗದ್ದಲ

ಕಲಬುರಗಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿರುವ ಮದ್ಯದಂಗಡಿಯ ವಿರುದ್ಧ ವಿಧಾನಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ತೆರವಾದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
Read Full Story
11:35 PM (IST) Aug 21

Karnataka News Live 21st August: ಕ್ಲಸ್ಟರ್ ವಿವಿಗಳ ಗೊಂದಲ - ಉಪಕುಲಪತಿ ನೇಮಕ ವಿಳಂಬವೇಕೆ? ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ರಾಜ್ಯ ವಿಧಾನಸಭೆಯಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕಾತಿ ವಿಳಂಬ ಕುರಿತು ಚರ್ಚೆ ನಡೆಯಿತು. ಅಶ್ವಥನಾರಾಯಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿ, ವಿವಿಗಳ ಹಿತಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

Read Full Story
10:34 PM (IST) Aug 21

Karnataka News Live 21st August: ನೀನು ಹಿಂದಿನ ಚುನಾವಣೆ ಗೆದ್ದಿಲ್ಲ, ನಿನಗೆ ಗೊತ್ತಿಲ್ಲ ಕೂತ್ಕೊ ಎಂದ ಸಿಎಂ, ಬಿಜೆಪಿ ಶಾಸಕ ಗಪ್ ಚುಪ್!

ತುಮಕೂರಿನಲ್ಲಿ ಕಾಂಗ್ರೆಸ್‌ ಭವನಕ್ಕೆ ಕಡಿಮೆ ಬೆಲೆಯಲ್ಲಿ ಭೂಮಿ ಮಾರಾಟ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
Read Full Story
10:14 PM (IST) Aug 21

Karnataka News Live 21st August: ಚಿನ್ನಸ್ವಾಮಿ ದುರಂತದ ಬಳಿಕ ಮಹತ್ವದ ನಿರ್ಧಾರ, ತುಮಕೂರಿನಲ್ಲಿ 42 ಏಕರೆಯಲ್ಲಿ ಸ್ಟೇಡಿಯಂ

ಚಿನ್ನಸ್ವಾಮಿ ದುರಂತದ ಬಳಿಕ ರಾಜ್ಯ ಸರ್ಕಾರ ಇದೀಗ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಮಾಡಿದೆ. ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ 60 ಸಾವಿರ ಸಾಮರ್ಥ್ಯ ಹೊಂದಿದ್ದು, 42 ಏಕರೆಯಲ್ಲಿ ತಲೆ ಎತ್ತಲಿದೆ.

Read Full Story
09:32 PM (IST) Aug 21

Karnataka News Live 21st August: ಪ್ರಪೋಸಲ್‌ಗೆ ಗೆಳತಿ ಯೆಸ್ ಹೇಳುತ್ತಿದ್ದಂತೆ ಪರ್ವತದದಿಂದ ಜ್ವಾಲಾಮುಖಿ ಸ್ಫೋಟ, ವಿಡಿಯೋ

ಪ್ರವಾಸದ ನಡುವೆ ಗೆಳೆಯ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಗೆಳತಿಗೆ ಒಂದು ಕ್ಷಣ ಅಚ್ಚರಿಯಾಗಿದೆ. ಜೊತೆಗೆ ಭಾವುಕಳಾಗಿದ್ದಾಳೆ. ಗೆಳತಿ ಯೆಸ್ ಹೇಳುತ್ತಿದ್ದಂತೆ ಹಿಂಭಾಗದ ಪರ್ವತ ಶ್ರೇಣಿಯಿಂದ ಜ್ವಾಲಾಮುಖಿ ಸ್ಫೋಟಗೊಂಡ ಘಟನೆ ನಡೆದಿದೆ.

Read Full Story
08:39 PM (IST) Aug 21

Karnataka News Live 21st August: ಹಾಗಲಕಾಯಿ ತರಲು ಮಾರ್ಕೆಟ್‌ಗೆ ಹೋಗಬೇಕಿಲ್ಲ, ಮನೆಯಲ್ಲೇ ಹೀಗೆ ಸುಲಭವಾಗಿ ಬೆಳೆಸಿ!

ಬೀಜ ನಾಟಿ ಮಾಡುವಾಗ ಸುಮಾರು 12 ಇಂಚು ಅಂತರ ಇರಲಿ. 2-3 ದಿನಗಳಲ್ಲಿ ಮೊಳಕೆಯೊಡೆಯುತ್ತದೆ, 5-6 ವಾರಗಳಲ್ಲಿ ಹೂ ಬಿಡಲು ಶುರುವಾಗುತ್ತದೆ.

Read Full Story
08:37 PM (IST) Aug 21

Karnataka News Live 21st August: ರಾಜಸ್ಥಾನ ಗ್ರಾಮದಲ್ಲಿ ಡೈನೋಸರ್ ರೀತಿಯ ದೈತ್ಯ ಪ್ರಾಣಿ ಮೂಳೆ ಪತ್ತೆ, ಮಹತ್ವದ ಕುರುಹು

ರಾಜಸ್ಥಾನದ ಗ್ರಾಮವೊಂದು ಇದೀಗ ಡೈನೋಸರ್ ಕಾಲದ ಪಳೆಯುಳಿಕೆ ಪತ್ತೆಯಾಗುವ ಮೂಲಕ ಭಾರತದಲ್ಲಿನ ಪ್ರಾಣಿ ಸಂಕುಲದ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಡೈನೋಸರ್ ಪ್ರಾಣಿಗೆ ಹೋಲುವ ದೈತ್ಯ ಗಾತ್ರದ ಮೂಳೆ ಇಲ್ಲಿ ಪತ್ತೆಯಾಗಿದೆ.

Read Full Story
08:34 PM (IST) Aug 21

Karnataka News Live 21st August: ಇಸ್ಪೀಟ್ ಆಡ್ತಿದ್ದ ಡಿಕೆಶಿ, ಸಿದ್ದರಾಮಯ್ಯ ಓಡೋದ್ರು; ನೋಡ್ತಾ ನಿಂತಿದ್ದ ಪರಮೇಶ್ವರ ಸಿಕ್ಕಾಕೊಂಡ್ರು; ಕಥೆ ಕಟ್ಟಿದ ಅಶೋಕ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಸ್ಪೀಟ್ ಆಟದ ಕಥೆಯನ್ನು ಹೇಳಿದರು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ಪೀಟ್ ಆಟದಿಂದ ತಪ್ಪಿಸಿಕೊಂಡರೆ, ಪರಮೇಶ್ವರ್ ಸಿಕ್ಕಿಬಿದ್ದರು ಎಂದರು.

Read Full Story
08:10 PM (IST) Aug 21

Karnataka News Live 21st August: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿರುದ್ಧ ಪ್ರತಿಭಟನೆ ಪುನೀತ್ ಕೆರೆಹಳ್ಳಿ ವಶಕ್ಕೆ, ಪೊಲೀಸರೊಂದಿಗೆ ಮಾತಿನ ಚಕಮಕಿ!

ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಬಂಧಿಸಿರುವುದಕ್ಕೆ ಪ್ರತಿಭಟನಾಕಾರರು ಸ್ವಾಗತ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುನೀತ್ ಕೆರೆಹಳ್ಳಿಯವರನ್ನು ಕೊಡಗಿನಿಂದ ಹೊರಗೆ ಕಳುಹಿಸಿ ನೊಟೀಸ್ ಜಾರಿ ಮಾಡಲಾಗಿದೆ.

Read Full Story
08:00 PM (IST) Aug 21

Karnataka News Live 21st August: ಚಿತ್ರದುರ್ಗ ವರ್ಷಿತಾ ಕೊಲೆ ಕೇಸ್ ರಿವೀಲ್ - 3ನೇ ಸ್ಟೇಜ್ ಕ್ಯಾನ್ಸರ್ ರೋಗಿ ಪ್ರೀತಿ ಮಾಡದಿದ್ದಕ್ಕೆ ಮರ್ಡರ್!

ಚಿತ್ರದುರ್ಗದಲ್ಲಿ ನಡೆದ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 3ನೇ ಸ್ಟೇಜ್ ಕ್ಯಾನ್ಸರ್ ಪೇಷಂಟ್‌ನ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

Read Full Story
07:52 PM (IST) Aug 21

Karnataka News Live 21st August: AIIMS ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುವುದು ಹೇಗೆ? OPD ಯಿಂದ ಕೀಮೋವರೆಗಿನ ಸಂಪೂರ್ಣ ವೆಚ್ಚದ ಮಾಹಿತಿ ಇಲ್ಲಿದೆ

AIIMSನಲ್ಲಿ ಕ್ಯಾನ್ಸರ್ ಚಿಕಿತ್ಸೆಯು ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯ. ಬಡ ರೋಗಿಗಳಿಗೆ ಆರ್ಥಿಕ ಸಹಾಯ ಯೋಜನೆಗಳೂ ಲಭ್ಯ.
Read Full Story
07:52 PM (IST) Aug 21

Karnataka News Live 21st August: ಜಿಯೋ ಧಮಾಕ, ₹349ಕ್ಕೆ 5ಜಿ ಡೇಟಾ, ಮನೆ ವೈಫೈ,ಕ್ಲೌಡ್ ಸ್ಟೋರೇಜ್ ಸೇರಿ 2600 ರೂ ಪ್ರಯೋಜನ

ಜಿಯೋ ಧಮಾಕ ಆಫರ್ ನೀಡಿದೆ. ಕೇವಲ 349 ರೂ ರೀಚಾರ್ಜ್ ಮಾಡಿದರೆ ಸಾಕು, ಬರೋಬ್ಬರಿ 2,600 ರೂಪಾಯಿ ಪ್ರಯೋಜನ ನೀಡಿದೆ. 5ಜಿ ಡೇಟಾ, ಜಿಯೋ ಹಾಟ್‌ಸ್ಟಾರ್, ಹೋಮ್ ವೈಫೈ, ಕ್ಲೌಡ್ ಸ್ಟೋರೇಜ್ ಸೇರಿಂತೆ ಹತ್ತು ಹಲವು ಉಚಿತ ಆಫರ್ ನೀಡಿದೆ.

Read Full Story
07:43 PM (IST) Aug 21

Karnataka News Live 21st August: ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ , ಹೈ ಬಿಪಿ ಸಮಸ್ಯೆಗೆ ಮಾತ್ರೆ ನೀಡಿದ ವೈದ್ಯರು

ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಕೀಲರು ಜಾಮೀನು ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story
07:40 PM (IST) Aug 21

Karnataka News Live 21st August: ರಮ್ಯಾ ನಮ್ಮನೆ ವಿಷ್ಯಾ ಮಾತಡ್ಬೇಕಾ? ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಸಂದರ್ಶನವೊಂದರಲ್ಲಿ ಸಿನಿಮಾ ಮತ್ತು ನಟಿಯರ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story
07:29 PM (IST) Aug 21

Karnataka News Live 21st August: ಬರೋಬ್ಬರಿ 70 ವರ್ಷ ಬಳಿಕ ಸೂರ್ಯನ ಜ್ವಾಲೆ ಸ್ಫೋಟದ ರಹಸ್ಯ ಬಿಡಿಸಿದ ನಾಸಾ

ಸೂರ್ಯನ ಕುರಿತು ಅಧ್ಯಯನಕ್ಕೆ ಇಸ್ರೋ ಆದಿತ್ಯ ನೌಕೆ ಉಡಾವಣೆ ಮಾಡಿದೆ. ಇತ್ತ ನಾಸಾ ಕಳೆದ 7 ದಶಕಗಳಿಂದ ಅಧ್ಯಯನ, ಸಂಶೋಧನೆ ನಡೆಸಿ ಇದೀಗ ಸೌರ ಜ್ವಾಲೆ ಹಾಗೂ ಸ್ಫೋಟದ ರಹಸ್ಯ ಬಿಚ್ಚಿಟ್ಟಿದೆ.

Read Full Story
07:22 PM (IST) Aug 21

Karnataka News Live 21st August: ರಾಪಿಡೋಗೆ ₹10 ಲಕ್ಷ ದಂಡ - ಗ್ರಾಹಕರ ದಿಕ್ಕು ತಪ್ಪಿಸಿದ್ದಕ್ಕೆ CCPA ದಿಟ್ಟ ಕ್ರಮ! ಏನಿದು ಪ್ರಕರಣ?

ಐದು ನಿಮಿಷಗಳಲ್ಲಿ ಆಟೋ ಸೇವೆ ಅಥವಾ ₹50 ಹಣ ವಾಪಸು ಎಂಬ ಜಾಹೀರಾತಿನ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸಿದ್ದಕ್ಕಾಗಿ ರಾಪಿಡೋಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ₹10 ಲಕ್ಷ ದಂಡ ವಿಧಿಸಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ ಎಂದು CCPA ಖಚಿತಪಡಿಸಿದೆ.
Read Full Story
06:57 PM (IST) Aug 21

Karnataka News Live 21st August: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡ ಪಾವತಿಸಲು ಶೇ.50 ಡಿಸ್ಕೌಂಟ್; 20 ದಿನ ಮಾತ್ರ ಅವಕಾಶ!

ಸೆಪ್ಟೆಂಬರ್ 12 ರವರೆಗೆ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ ಘೋಷಿಸಲಾಗಿದೆ. ಫೆಬ್ರವರಿ 11, 2023 ರವರೆಗಿನ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತದೆ. ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಕಚೇರಿಗಳಲ್ಲಿ ದಂಡ ಪಾವತಿಸಬಹುದು.
Read Full Story
06:33 PM (IST) Aug 21

Karnataka News Live 21st August: ಆನ್‌ಲೈನ್ ಗೇಮಿಂಗ್ ಕಂಪೆನಿಗಳ ಕರಾಳ ಮುಖ ತೆರೆದಿಟ್ಟ ರೇಡಿಯೋ ಜಾಕಿ, ಗಂಡನಿಗೆ ನೀಡಿತ್ತು ಚಿತ್ರಹಿಂಸೆ

ಆನ್‌ಲೈನ್ ಗೇಮಿಂಗ್ ಕಂಪನಿಗಳಲ್ಲಿನ ವಿಷಕಾರಿ ವಾತಾವರಣ, ಮೋಸದ ವ್ಯವಹಾರ ಮಾದರಿಗಳು ಮತ್ತು ಅವುಗಳು ಆಟಗಾರರ ಮೇಲೆ ಬೀರುವ ವಿನಾಶಕಾರಿ ಪರಿಣಾಮಗಳನ್ನು ಈ ಲೇಖನವು ಬೆಳಕಿಗೆ ತರುತ್ತದೆ. ಸರ್ಕಾರದ ಹೊಸ ಮಸೂದೆಯು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಚರ್ಚಿಸುತ್ತದೆ.
Read Full Story
06:33 PM (IST) Aug 21

Karnataka News Live 21st August: ಧರ್ಮಸ್ಥಳ ಪ್ರಕರಣದಲ್ಲಿ RSS ನಾಯಕನ ಹೆಸ್ರು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಸೊರಕೆ

Congress Leader Vinay kumar Sorake: ಧರ್ಮಸ್ಥಳ ಪ್ರಕರಣದಲ್ಲಿ ಕಾಣದ ಕೈಯೊಂದು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.

Read Full Story
06:28 PM (IST) Aug 21

Karnataka News Live 21st August: ತಾಯಿ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ನೋವು ತೋಡಿಕೊಂಡ ಪುತ್ರಿ ಪೂಜಾ ಬೇಡಿ

ದೇವರ ಸ್ಥಳದಿಂದ ಕೊನೆಯ ಪತ್ರ ಬಂದಿತ್ತು. ಬಳಿಕ ತಾಯಿ ಬಗ್ಗೆ ಸುಳಿವಿಲ್ಲ. ಇಷ್ಟು ವರ್ಷವಾದರೂ ತಾಯಿಯ ಮೃತದೇಹವೂ ಪತ್ತೆಯಾಗಿಲ್ಲ ಎಂದು ಪುತ್ರಿ ಪೂಜಾ ಬೇಡಿ ನೋವು ತೋಡಿಕೊಂಡಿದ್ದಾರೆ. ಪೂಜಾ ಬೇಡಿಗೆ ಏನಾಗಿತ್ತು? ಕೊನೆಯ ಪತ್ರದಲ್ಲಿ ಏನಿತ್ತು?

Read Full Story