ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್‌ಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿದೆ.
- Home
- News
- State
- Karnataka News Live: ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ
Karnataka News Live: ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ. ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್ ಬಯಸಿದೆ. ಹೀಗಾಗಿ ಆ ಹುದ್ದೆಯನ್ನು ಪಡೆಯಲು ಸತೀಶ್ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಪಕ್ಷಕ್ಕೆ ದೀರ್ಘಕಾಲದಿಂದ ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಕಾಂಗ್ರೆಸ್ ವರಿಷ್ಠರಲ್ಲಿದೆ. ಆದ ಕಾರಣ ಹರಿಪ್ರಸಾದ್ ಹೆಸರನ್ನು ಕೆಲ ವರಿಷ್ಠ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಹಾಗೂ ಹರಿಪ್ರಸಾದ್ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Karnataka News Live 2 June 2026ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ
Karnataka News Live 2 June 2026ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪೀಕ್ ಹವರ್‌ನಲ್ಲಿ 7 ನಿಮಿಷಕ್ಕೊಂದು ಯೆಲ್ಲೋ ಟ್ರೈನ್
ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಪೀಕ್ ಹವರ್‌ನಲ್ಲಿ ಯೆಲ್ಲೋ ಲೈನ್‌ನಲ್ಲಿ ಕಾಯುವಿಕೆ ಅವಧಿ ಕಡಿತಗೊಂಡಿದೆ.
Karnataka News Live 2 June 202614 ಸಚಿವರ ಸೇರ್ಪಡೆ ಕುರಿತು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮೀಟಿಂಗ್, ಯಾರು ಹೆಸರು ಫೈನಲ್?
ಕರ್ನಾಟಕ ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಡಿಕೆಶಿ ಜೊತೆ ಸಚಿವ ಸಂಪುಟ ಸೇರುತ್ತಿರುವ ಕುರಿತು ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ನಡೆಯುತ್ತಿದೆ. 14+1 ಆಯ್ಕೆ ಕುರಿತು ರಾಹುಲ್ ನೀಡಿದ ಸೂಚನೆ ಏನು?
Karnataka News Live 2 June 2026ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ನನ್ನ ಅದೃಷ್ಟ - ಶಾಸಕ ಇಕ್ಬಾಲ್ ಹುಸೇನ್
ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ ಪಾಲಿನ ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.
Karnataka News Live 2 June 2026₹100 ಕೋಟಿ ಸಿನಿಮಾ... ಆದರೆ OTT ಹಕ್ಕು ಕೇವಲ ₹7 ಕೋಟಿ - ಕನ್ನಡ ಚಿತ್ರರಂಗದಲ್ಲಿ ಏನಾಗುತ್ತಿದೆ?
ಕನ್ನಡದ ಸ್ಟಾರ್ ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್ ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು.
Karnataka News Live 2 June 2026Eye Care Routine - ಕಾಂತದಂತೆ ಸೆಳೆಯುವ ಕಣ್ಣುಗಳು ನಿಮ್ಮದಾಗಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಒಬ್ಬರ ಮುಖದಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಕಣ್ಣುಗಳು. ಡಲ್ ಆದ ಕಣ್ಣು, ಕಪ್ಪು ವರ್ತುಲ, ಕಣ್ಣಿನ ಕೆಳಗೆ ಊತ... ಇವೆಲ್ಲಾ ಮುಖದ ಅಂದವನ್ನೇ ಹಾಳು ಮಾಡುತ್ತೆ. ಕೆಮಿಕಲ್ ತುಂಬಿದ ಐ-ಕ್ರೀಮ್‌ಗಳ ಬದಲು, ನ್ಯಾಚುರಲ್ ಆಗಿ ಕಣ್ಣುಗಳನ್ನು ಕಾಂತದಂತೆ ಸೆಳೆಯುವಂತೆ ಮಾಡಲು ಇಲ್ಲಿವೆ ಕೆಲವು ಸೂಪರ್ ಟಿಪ್ಸ್!
Karnataka News Live 2 June 2026ಸಾನ್ವಿಯ ಮದುವೆ ಮಾಡಲ್ಲ - ಬಹುದೊಡ್ಡ ಗುಟ್ಟು ರಿವೀಲ್ ಮಾಡಿದ ಅಮ್ಮ ಪ್ರಿಯಾ ಸುದೀಪ್ ಹೇಳಿದ್ದೇನು
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ 'ಜಿಮ್ಮಿ' ಚಿತ್ರದ ಮೂಲಕ ಗಾಯಕಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ನಟನೆ ಮತ್ತು ಸಿನಿಮಾ ಮೇಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸಾನ್ವಿ, , ತಮಗೆ ಪುಷ್ಪರಾಜ್‌ನಂತಹ ಗಂಡ ಬೇಕು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
Karnataka News Live 2 June 2026Karna Serial ನಿಧಿಗೆ ಡಬಲ್ ಧಮಾಕಾ - ಒಂದೇ ಬಾರಿ ಎರಡೆರಡು ಅವಾರ್ಡ್ ಪಡೆದ ಭವ್ಯಾ ಗೌಡ
ಕರ್ಣ ಸೀರಿಯಲ್‌ನಲ್ಲಿ ಕರ್ಣನೊಂದಿಗೆ ನಿಧಿ ಪಾತ್ರಧಾರಿ ಭವ್ಯಾ ಗೌಡರ ಮದುವೆಯಾಗಿದೆ. ಇತ್ತೀಚೆಗೆ SITSA ಅವಾರ್ಡ್ಸ್ 2026ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಚಿತ್ತಾರ ಅವಾರ್ಡ್ ಪಡೆದ ಇವರು, ಮಾಹಿತಿ ಹಂಚಿಕೊಂಡಿದ್ದಾರೆ.
Karnataka News Live 2 June 2026ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಠಾಣೆಗೂ ಮುತ್ತಿಗೆ - ಬಿ.ವೈ.ವಿಜಯೇಂದ್ರ ಎಚ್ಚರಿಕೆ
ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್ ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.
Karnataka News Live 2 June 2026ಜೂನ್ 4 ರಿಂದ ಈ ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಅಲರ್ಟ್
ಜೂನ್ 4 ರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಾಳಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಅಲರ್ಟ್ ನೀಡಲಾಗಿದೆ.
Karnataka News Live 2 June 2026ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ; ಬಿಜೆಪಿ ಕಾರ್ಯಕರ್ತರಿಗೆ ರೇಣುಕಾಚಾರ್ಯ ಕರೆ
ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.
Karnataka News Live 2 June 2026ಕರಾವಳಿಗೆ ಖುಷಿ, ಸೂರತ್-ಮಂಗಳೂರು ಸ್ಪೆಷಲ್ ರೈಲು ಶಾಶ್ವತ ಸೇವೆಗೆ ಪರಿವರ್ತಿಸಿದ ರೈಲ್ವೆ ಇಲಾಖೆ, ಗೋವಾ ಈಗ ಹತ್ತಿರ!
Karnataka News Live 2 June 2026ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಸಮೀಕ್ಷೆ ಸರಿಯಲ್ಲ - ಗುಡುಗಿದ ಕೆ.ಎಸ್.ಈಶ್ವರಪ್ಪ
ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು.
Karnataka News Live 2 June 2026Viral Video - ಮೂಡ್ ಆಫ್ ಆಗಿದೆಯಾ? ಈ ಅಪ್ಪ-ಮಗಳ ವಿಡಿಯೋ ಒಮ್ಮೆ ನೋಡಿ!
ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಮನಗೆದ್ದಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಿದೆ.
Karnataka News Live 2 June 2026ಮಂಗಳೂರು ಪಾಲಿಕೆ ಚುನಾವಣೆ ವಿಳಂಬ, 15 ತಿಂಗಳಾದರೂ ಚುನಾವಣೆ ನಡೆಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Karnataka News Live 2 June 2026ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ - ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿ ಅಂತಿಮ, ಇಲ್ಲಿದೆ ಸಂಪುಟ ಪಟ್ಟಿ!
Karnataka News Live 2 June 2026ಬಿಜೆಪಿ, ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಸೇರಿದ್ಯಾಕೆ? ಟ್ರೋಲರ್ಸ್‌ಗೆ ಬಿಗ್‌ಬಾಸ್ ಜಾಹ್ನವಿ ಕೊಟ್ರು ಖಡಕ್ ಉತ್ತರ
ಖ್ಯಾತ ನಿರೂಪಕಿ ಜಾಹ್ನವಿ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಒಂದು ಮಣ್ಣಿನ ಪಕ್ಷವಾಗಿದ್ದು, ದೇವೇಗೌಡರ ಸಾಧನೆ ಮತ್ತು ಕುಮಾರಸ್ವಾಮಿಯವರ ರೈತ ಹಾಗೂ ಮಹಿಳಾ ಪರ ಕಾಳಜಿಯಿಂದ ಪ್ರೇರಿತರಾಗಿ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
Karnataka News Live 2 June 2026ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
Karnataka News Live 2 June 2026ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ - ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ರಜೆ ಘೋಷಣೆ!
ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಜೂ.3 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಇದೇ ವೇಳೆ, ವಿಧಾನಸಭೆ ಸಚಿವಾಲಯದ ನೌಕರರಿಗಾಗಿ ಸಭಾಧ್ಯಕ್ಷರು ವಿಶೇಷ ಭೋಜನ ಆಯೋಜಿಸಿದ್ದಾರೆ.