ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏನಿದು ಹೊಸ ಫೇಸ್ ರಕಗ್ನೀಶನ್ ನಿಯಮ, ಪೋಷಕರು ಏನು ಮಾಡಬೇಕು, ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?
Karnataka News Live: ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್ಮ್ಯಾನ್ ಹುದ್ದೆಯನ್ನು ‘ಫೈರ್ ಫೈಟರ್’ ಮತ್ತು ಲೀಡಿಂಗ್ ಫೈರ್ಮ್ಯಾನ್ ಹುದ್ದೆಯನ್ನು ‘ಲೀಡಿಂಗ್ ಫೈಯರ್ ಫೈಟರ್’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಗೃಹ ಮಂತ್ರಾಲಯದ ಸ್ಟ್ಯಾಂಡಿಂಗ್ ಫೈರ್ ಅಡ್ವೈಸರಿ ಕಮಿಟಿ(ಎಸ್ಎಫ್ಎಸಿ) ಸಭೆಯ ತೀರ್ಮಾನದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಎರಡೂ ಹುದ್ದೆಗಳ ಹೆಸರನ್ನು ಬದಲಿಸಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ(ವೃಂದ ಮತ್ತು ನೇಮಕಾತಿ) ನಿಯಮಗಳು 2013ರ ಸಮಗ್ರ ಪರಿಷ್ಕರಣೆ ವೇಳೆ ಈ ಮರು ನಾಮಕರಣವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ
Karnataka News Live 16 february 2026 ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ
Karnataka News Live 16 february 2026 Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್ - ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್
Karnataka News Live 16 february 2026 ಶಿವಮೊಗ್ಗದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ - ಬೈಕ್‌ನಿಂದ ಬಿದ್ದು ಮೊಬೈಲ್ ಶೋರೂಮ್ ಉದ್ಯೋಗಿ ಸಾವು!
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ, ಗುರುತುಗಳಿಲ್ಲದ ರಸ್ತೆ ಉಬ್ಬಿನಲ್ಲಿ ಬೈಕ್ ಹಾರಿಬಿದ್ದ ಪರಿಣಾಮ 28 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು. ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
Karnataka News Live 16 february 2026 ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್ ಕೊಟ್ಟ Nivedita Gowda!
ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ಆರ್ಥಿಕವಾಗಿ ಸದೃಢಳಾಗಲು ಯಾವುದೇ ಪಾತ್ರಕ್ಕೂ ಸೈ ಎಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಾಂಪತ್ಯ ಜೀವನದ ಬಗ್ಗೆ ಟಿಪ್ಸ್ ನೀಡಿರುವ ಅವರ ವಿಡಿಯೋ ವೈರಲ್ ಆಗಿದೆ.
Karnataka News Live 16 february 2026 ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್ - 7ನೇ ಕ್ಲಾಸ್ ಬಾಲಕ ಸಾವು
ಭೋಪಾಲ್‌ನಲ್ಲಿ, ಸ್ನಾನಕ್ಕೆ ನೀರು ಬಿಸಿ ಮಾಡಲು ಇಮ್ಮರ್ಶನ್ ರಾಡ್ ಬಳಸುತ್ತಿದ್ದ 13 ವರ್ಷದ ಬಾಲಕ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾನೆ. ನೀರು ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ವಿದ್ಯುತ್ ಸಂಪರ್ಕ ಇರುವಾಗಲೇ ಬಕೆಟ್‌ಗೆ ಕೈ ಹಾಕಿದಾಗ ಈ ದುರಂತ ಸಂಭವಿಸಿದೆ.
Karnataka News Live 16 february 2026 ಈ ವಾರದಲ್ಲಿ ಆರ್‌ಸಿಬಿ ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ?
ಈ ವಾರದಲ್ಲಿ ಆರ್‌ಸಿಬಿ ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ? ಆರ್‌ಸಿಬಿ ಮಾಲೀಕರಾಗಲು ಉದ್ಯಮಿಗಳು, ಕೆಲ ಸಂಸ್ಥೆಗಳು ಆಸಕ್ತಿ ತೋರಿದೆ. ಈ ವಾರ ಹರಾಜು ನಡೆಯಲಿದೆ. 9-10 ಬಿಡ್ಡರ್ ಪೈಕಿ ವಿಜಯ್ ಮಲ್ಯ ಬಿಡ್ಡಿಂಗ್ ಲಿಸ್ಟ್‌ನಲ್ಲಿದ್ದಾರ?
Karnataka News Live 16 february 2026 ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ - ರಕ್ಷಣೆ ಕೋರಿ ಮನವಿ
ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಸೋದರಿಯರು, ಹಿಂದೂ ಸೋದರ ಸಂಬಂಧಿಗಳನ್ನು ವಿವಾಹವಾಗಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಅವರು ಪೊಲೀಸ್ ರಕ್ಷಣೆ ಕೋರಿ ವೀಡಿಯೋ ಬಿಡುಗಡೆ ಮಾಡಿದ್ದಾರೆ.
Karnataka News Live 16 february 2026 ಉತ್ತರ ಕರ್ನಾಟಕಕ್ಕೆ ಸಂತಸದ ಸುದ್ದಿ, ಬಳ್ಳಾರಿ–ಹೊಸಪೇಟೆ ನಡುವೆ 3ನೇ ಮತ್ತು 4ನೇ ರೈಲ್ವೆ ಮಾರ್ಗಕ್ಕೆ ಕೇಂದ್ರ ಅನುಮೋದನೆ
Karnataka News Live 16 february 2026 Yash Movie ಕೆಜಿಎಫ್ ಬಗ್ಗೆ ವಿಡಿಯೋ ಮಾಡಿದ್ದ ಬಳಿಕ ಆಗಿದ್ದೇನು? ಧ್ರುವ್ ರಾಠಿ ಬಿಚ್ಚಿಟ್ಟ ಅಚ್ಚರಿಯ ಸತ್ಯ!
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಧ್ರುವ್ ರಾಠಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕುರಿತು ತಾವು ಮಾಡಿದ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ಜನರು ತಮ್ಮ ನೆಚ್ಚಿನ ನಟರು ಮತ್ತು ಸಿನಿಮಾಗಳ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Karnataka News Live 16 february 2026 ಶೀಘ್ರದಲ್ಲೇ ಜಯನಗರದ 42 ರಸ್ತೆಗಳಲ್ಲಿ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ಜಾರಿ, ಎಲ್ಲೆಲ್ಲಿ? ಎಷ್ಟು ಟಿಕೆಟ್?
ಜಯನಗರದಲ್ಲಿ ಶೀಘ್ರದಲ್ಲೇ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 42 ರಸ್ತೆಗಳಲ್ಲಿ ಕಾರು, ದ್ವಿಚಕ್ರ ವಾಹನಗಳಿಗೆ ಶುಲ್ಕ ಸಹಿತ ನಿಲುಗಡೆ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅಕ್ರಮ ಪಾರ್ಕಿಂಗ್ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
Karnataka News Live 16 february 2026 ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!!
Karnataka News Live 16 february 2026 ಲೈಕ್ಸ್ ಮತ್ತು ವ್ಯೂವ್ಸ್‌ಗೆ ರೈಲ್ವೆ ಹಳಿ ಬಳಿ ರೀಲ್ಸ್ ಮಾಡಿ, ಪೊಲೀಸರ ಅತಿಥಿಯಾದ ಇನ್‌ಸ್ಟಾಗ್ರಾಮ್ ರಾಜ!
ಬಳ್ಳಾರಿಯಲ್ಲಿ, ರೈಲ್ವೆ ಬ್ರಿಡ್ಜ್ ಮೇಲೆ ಅಪಾಯಕಾರಿಯಾಗಿ ರೀಲ್ಸ್ ಮಾಡುತ್ತಿದ್ದ ವಿಶ್ವನಾಥ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ, ಬ್ರೂಸ್‌ಪೇಟೆ ಪೊಲೀಸರು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಕ್ರಮ ಕೈಗೊಂಡಿದ್ದಾರೆ.
Karnataka News Live 16 february 2026 ಹಕ್ಕುಪತ್ರ ದರ್ಖಾಸ್ತು ಮಂಜೂರಾತಿ - ಕಡಬ ತಾಲೂಕು ರಾಜ್ಯಕ್ಕೇ ಪ್ರಥಮ, ಬೆಳ್ತಂಗಡಿ ದ್ವಿತೀಯ, ಕಾರ್ಕಳಕ್ಕೆ ಆರನೇ ಸ್ಥಾನ
Karnataka News Live 16 february 2026 ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್
ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್ ಸಿಗಲಿದೆ. ಕನ್ನಡ ಮಾತ್ರವಲ್ಲ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಯಶ್ ಟಾಕ್ಸಿಕ್ ತಂಡ ಇದೇ ತಿಂಗಳಲ್ಲಿ ಸಿಹಿ ಸುದ್ದಿ ನೀಡುತ್ತಿದೆ.
Karnataka News Live 16 february 2026 ಶಿವನ ದರ್ಶನಕ್ಕಾಗಿ ಜನ ಕ್ಯೂ ನಿಂತಿರುವ ಈ ನೆಲ ಭಾರತದಲ್ಲ - ಶಿವನ ಆರಾಧಕರಿರುವ ಆ ವಿದೇಶಿ ನೆಲ ಯಾವುದು?
ನಿನ್ನೆ ಮಹಾಶಿವರಾತ್ರಿಯನ್ನು ದೇಶದೆಲ್ಲೆಡೆಯ ಜನ ಸಂಭ್ರಮ ಸಡಗರದಿಂದ ಆಚರಿಸಿದ್ರು, ಸರತಿ ಸಾಲಿನಲ್ಲಿ ನಿಂತು ಜನ ದೇವರ ದರ್ಶನ ಪಡೆದರು. ಸನಾತನ ಧರ್ಮದ ಗಂಧಗಾಳಿ ಇಲ್ಲದ ದೂರದ ದೇಶದಲ್ಲೂ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Karnataka News Live 16 february 2026 Rajpal Yadav Bail - ಕೊನೆಗೂ ಹೋರಾಟಕ್ಕೆ ಫಲ; ನಟ ರಾಜ್‌ಪಾಲ್ ಯಾದವ್‌ಗೆ ಸಿಕ್ತು ಮಧ್ಯಂತರ ಜಾಮೀನು!
Karnataka News Live 16 february 2026 ಶಿವಮೊಗ್ಗ ವಿಮಾನ ನಿಲ್ದಾಣ ಲೈಸೆನ್ಸ್ ನವೀಕರಣ ಪೂರ್ಣ - ನೈಟ್ ಲ್ಯಾಂಡಿಂಗ್ ಕಾಮಗಾರಿ ಈ ವಾರ ಆರಂಭ
Karnataka News Live 16 february 2026 Bhagyalakshmi Serial - ಎಲ್ರಿಗೂ ಶಾಕ್ ನೀಡುವಂಥ ನಿರ್ಧಾರ ತಗೊಂಡ ಭಾಗ್ಯ; ಮೂಕವಿಸ್ಮಿತರಾದ ಮನೆಯವ್ರು
Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಮುಂದೆ ತಾಂಡವ್ ಕ್ಷಮೆ ಕೇಳಿದ್ದೂ ಆಯ್ತು, ಶ್ರೇಷ್ಠ ಬಂದು ಇನ್ನೊಂದಿಷ್ಟು ರಾಮಾಯಣ ಮಾಡಿದ್ದೂ ಆಯ್ತು. ಅಷ್ಟೇ ಯಾಕೆ? ಶ್ರೇಷ್ಠಾಳಿಗೆ ತಾಂಡವ್ ಬಾರಿಸಿದ್ದೂ ಆಯ್ತು.
Karnataka News Live 16 february 2026 ಆ ಗುಟ್ಟು ರಟ್ಟು! ಫಿಕ್ಸ್ ಆಯ್ತಾ ಗಿಲ್ಲಿ ನಟ -ಕಾವ್ಯ ಕಲ್ಯಾಣ? ಏನಿದು ಹೊಸ ಸುದ್ದಿ?
Karnataka News Live 16 february 2026 ಏನ್ ಶರೀಫ್ ಭಾಯ್, ಶಿವರಾತ್ರಿ ದಿನ ನನ್ನ ಅಪವಿತ್ರ ಮಾಡ್ಬಿಟ್ಟೆಲ್ಲಾ..! ವೆಜ್ ಬಿರಿಯಾನಿಗೆ ಚಿಕನ್ ಕೊಟ್ಟಿದ್ದು ಸರಿನಾ?
ಮಹಾಶಿವರಾತ್ರಿ ದಿನ 'ಶರೀಫ್ ಭಾಯ್ ಬಿರಿಯಾನಿ'ಯಿಂದ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು ಪತ್ತೆಯಾಗಿದೆ. 'ವೆಜ್' ಎಂದು ಲೇಬಲ್ ಮಾಡಿದ್ದರೂ ಮಾಂಸದ ತುಂಡು ಸಿಕ್ಕಿರುವುದು ಗ್ರಾಹಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.