ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏನಿದು ಹೊಸ ಫೇಸ್ ರಕಗ್ನೀಶನ್ ನಿಯಮ, ಪೋಷಕರು ಏನು ಮಾಡಬೇಕು, ಸರ್ಕಾರದ ಸುತ್ತೋಲೆಯಲ್ಲಿ ಏನಿದೆ? 

ಬೆಂಗಳೂರು (ಫೆ.16) ಕರ್ನಾಟಕ ಸರ್ಕಾರ ಇದೀಗ ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರಕಗ್ನೀಶನ್ ಕಡ್ಡಾಯ ಮಾಡಲಾಗಿದೆ. ಎಐ ಆಧಾರಿತ ವಿದ್ಯಾರ್ಥಿಗಳ ಮುಖದ ಹಾಜರಾತಿ ಮಾನಿಟರಿಂಗ್ ಸಿಸ್ಟಮ್ ಮೂಲಕ ದಾಖಲಾತಿ ನಡೆಯಲಿದೆ ಎಂದಿದೆ. ಈ ಕುರಿತು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಹಾಜರಾತಿ ತಪ್ಪದಂತೆ ಎಐ ತಂತ್ರಾಂಶದಲ್ಲಿ ದಾಖಲಿಸಲು ಸೂಚನೆ ನೀಡಲಾಗಿದೆ. ಈ ಬಾರಿಯ ಶೈಶಕ್ಷಣಿಕ ವರ್ಷದಿಂದಲೇ ಜಾರಿಯಾಗುತ್ತಿದೆ.

Add Asianetnews Kannada as a Preferred SourcegooglePreferred

ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಡ್ಡಾಯ

2026-27ನೇ ಸಾಲಿನಿಂದಲೇ ಫೇಸ್ ರಕಗ್ನೀಶನ್ ತಂತ್ರಜ್ಞಾನ ಜಾರಿ ಮಾಡಲಾಗಿದೆ. ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಬರೋಬ್ಬರಿ ಒಟ್ಟು 2.16 ಕೋಟಿ ವೆಚ್ಚದಲ್ಲಿ ಫೇಸ್ ರಕಗ್ನೀಶನ್ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗಿದೆ. ಮೇ ತಿಂಗಳೊಳಗೆ ಎಲ್ಲಾ ಶಾಲೆಗಳಲ್ಲಿ ಎಐ ಮೊಬೈಲ್ ಆ್ಯಪ್ ಅನುಷ್ಠಾನ ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ. SATS ತಂತ್ರಾಂಶದ ಮೂಲಕ ಮಕ್ಕಳ ಪೋಷಕರು ಹಾಜರಾತಿ ಪರಿಶೀಲನೆ ಮಾಡಬಹುದು ಎಂದಿದೆ.

ಶಿಕ್ಷಕರ ಹಾಜರಾತಿಗೂ ಫೇಸ್ ರಕಗ್ನೀಶನ್

ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇನ್ಮುಂದೆ‌ ಶಿಕ್ಷಕರ ಹಾಜರಾತಿಗೂ ಫೇಸ್ ರಕಗ್ನೀಶನ್ ತಂತ್ರಜ್ಞಾನ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕ ಖುದ್ದು ಹಾಜರಾಗದೇ ಹಾಜರಾತಿ ಮಾಡಲು ಸಾಧ್ಯವಿಲ್ಲ. ಈ ಮೂಲಕ ಕೆಲವೆಡೆ ನಡೆಯುತ್ತಿದ್ದ ಕಳ್ಳಾಟಗಳು ಬಯಲಾಗಲಿದೆ. ಮಕ್ಕಳಂತೆ ಶಿಕ್ಷಕರು ಕೂಡ ಫೇಸ್ ರಕಗ್ನೀಶನ್ ತಂತ್ರಜ್ಞಾನ ಮೂಲಕ ಹಾಜರಾತಿ ಹಾಕಬೇಕು.

ಸರ್ಕಾರದ ಆದೇಶದಲ್ಲಿ ಏನಿದೆ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು ಎಐ ಆಧಾರಿತ ವಿದ್ಯಾರ್ಥಿಗಳ ಮುಖದ ಹಾಜರಾತಿ ಮಾನಿಟರಿಂಗ್ ಸಿಸ್ಟಮ್ ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ "ನಿರಂತರ" ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.