ಸಾರಾಂಶ
ಬೆಂಗಳೂರು: ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಮರುಪರಿಶೀಲನೆಗೆ ಇದ್ದ ಕಾಲಾವಕಾಶವನ್ನು ಮತ್ತೆ ಅ.31ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಬಾಕಿ ಇರುವ ಫಲಾನುಭವಿಗಳು ಕೂಡಲೇ ಅಗತ್ಯ ದಾಖಲೆಗಳನ್ನು ನೀಡಿ ಮರು ಪರಿಶೀಲನೆ ಮಾಡಿಸಬೇಕು. ಇಲ್ಲದಿದ್ದರೆ ಯೋಜನೆ ಕಡಿತದ ಎಚ್ಚರಿಕೆ ನೀಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಮೊದಲು ಯೋಜನೆಯ ಮರು ಪರಿಶೀಲನೆಗೆ ಸೆ.30 ಕೊನೆಯ ದಿನವಾಗಿತ್ತು. ಜು.1ರಿಂದ ಆರಂಭವಾಗಿದ್ದ ಮನೆ ಮನೆ ಪರಿಶೀಲನಾ ಕಾರ್ಯ ಸೆ.30ರ ಗಡುವು ಮುಗಿದರೂ ಶೇ.100ರಷ್ಟು ಪೂರ್ಣಗೊಂಡಿರಲಿಲ್ಲ. ಯೋಜನೆಯ ಸೌಲಭ್ಯ ಪಡೆಯುತ್ತಿರುವವರ ಪೈಕಿ ಶೇ.98ರಷ್ಟು ಫಲಾನುಭವಿಗಳು ಮರು ಪರಿಶೀಲನೆ ಮಾಡಿಸಿದ್ದಾರೆ. ಇನ್ನುಳಿದ ಶೇ.2ರಷ್ಟು ಫಲಾನುಭವಿಗಳಿಗಾಗಿ ಮತ್ತೆ ಮಾಸಾಂತ್ಯದ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ಸೂಕ್ತ ದಾಖಲೆಗಳ ಮೂಲಕ ಮರುಪರಿಶೀಲನೆ ಪ್ರಕ್ರಿಯೆ ಮಾಡಿಸಬೇಕೆಂದು ಸೂಚಿಸಲಾಗಿದೆ
Karnataka News Live 13 October 2026 ವಂದೇ ಮಾತರಂ ಸಂಪೂರ್ಣ ಹಾಡಿದ್ದಕ್ಕೆ ಕಾಂಗ್ರೆಸ್ ಖಂಡನೆ..! ಶಿವಮೊಗ್ಗ ದಸರಾದಲ್ಲಿ ನಡೆದಿದ್ದೇನು?
ಶಿವಮೊಗ್ಗದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ದಸರಾ ಕಾರ್ಯಕ್ರಮವನ್ನು ಜಿಲ್ಲಾಡಳಿತವೇ ವಹಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.
Read Full StoryKarnataka News Live 13 October 2026 ಸ್ಟಿಂಗ್ ಪಾರ್ಟ್-2 ಗೊತ್ತಾದ ಮೇಲೆ ಹೇಳ್ತೇನೆ ಅಂದ್ರು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಅಹಿಂದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಆದರೆ ಎಸ್‌ಐಆರ್ ಹೋರಾಟ ಮುಗಿಯುವವರೆಗೆ ಯಾವುದೇ ಡಿನ್ನರ್ ಸಭೆ ನಡೆಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳು ಕೇವಲ ಎಚ್ಚರಿಕೆ ನೀಡಿದ್ದಾರೆಯೇ ಹೊರತು ಯಾವುದೇ ಸ್ಟಿಂಗ್ ಆಪರೇಷನ್ ಬಗ್ಗೆ ಹೇಳಿಲ್ಲ ಎಂದು ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
Read Full StoryKarnataka News Live 13 October 2026 Yuva Dasara 2026 - ಇಂದು ಯುವ ದಸರಾಕ್ಕೆ ನಟ ಪ್ರಭುದೇವರಿಂದ ಉದ್ಘಾಟನೆ, ಇಂದಿನ ಕಾರ್ಯಕ್ರಮ, ಸಮಯ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಇಂದಿನಿಂದ 'ಯುವ ದಸರಾ' ಕಾರ್ಯಕ್ರಮಗಳು ನಡೆಯಲಿದ್ದು, ಬಹುಭಾಷಾ ನಟ ಪ್ರಭುದೇವ ಇಂದು ಯುವ ದಸರಾ ಉದ್ಘಾಟಿಸಲಿದ್ದಾರೆ. ಇಂದು ಸಂಜೆ ಆರು ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮಗಳ ವಿವರ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ.
Read Full StoryKarnataka News Live 13 October 2026 ಕಾರಂತ ಬಡಾವಣೆ ಸೈಟ್ ಅರ್ಜಿ ಸಲ್ಲಿಕೆಯಲ್ಲಿ ಮಹತ್ವದ ಬದಲಾವಣೆ? ಠೇವಣಿ ಮೊತ್ತ ದುಬಾರಿ!
ಬಿಡಿಎ ನಿರ್ಮಿಸುತ್ತಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ಅರ್ಜಿ ಸಲ್ಲಿಕೆ ಅವಧಿಯನ್ನು 15 ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ನಿವಾಸಿ ದೃಢೀಕರಣ ಪತ್ರದ ಗೊಂದಲ ಹಾಗೂ ದುಬಾರಿ ಠೇವಣಿ ಮೊತ್ತದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.
Read Full StoryKarnataka News Live 13 October 2026 ರೈಲ್ವೆ ಅಭಿವೃದ್ಧಿ ಕಾಮಗಾರಿಗೆ ₹9000 ಕೋಟಿ, 2 ತಿಂಗಳೊಳಗಾಗಿ ಹೊಸ ಟೆಂಡರ್ ಆಹ್ವಾನ
ಕೇಂದ್ರ ಸರ್ಕಾರವು ಕೊಂಕಣ ರೈಲ್ವೆ ಮತ್ತು ರಾಜ್ಯದ ಇತರ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಬೃಹತ್ ಅನುದಾನ ಮಂಜೂರು ಮಾಡಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಕಾಮಗಾರಿಯ ಹಳೆಯ ಟೆಂಡರ್ ರದ್ದುಪಡಿಸಿ, ಶೀಘ್ರದಲ್ಲೇ ಹೊಸ ಟೆಂಡರ್ ಕರೆಯಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
Read Full StoryKarnataka News Live 13 October 2026 ವೈದ್ಯಕೀಯ ಸಚಿವರೇ ಇಲ್ಲಿ ನೋಡಿ! ರಾಯಚೂರು ಟ್ರಾಮಾ ಸೆಂಟರ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಯ ತಲೆತುಂಬಾ ರಾಶಿ ರಾಶಿ ಹುಳು!
ರಾಯಚೂರಿನ ಓಪೆಕ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯ ತಲೆಯಲ್ಲಿ ಹುಳುಗಳು ಬೆಳೆದಿವೆ. ಮೂರು ದಿನಗಳಿಂದ ಐಸಿಯುನಲ್ಲಿದ್ದರೂ ಸರಿಯಾದ ಚಿಕಿತ್ಸೆ ನೀಡದ ಕಾರಣ ಈ ಅಮಾನವೀಯ ಘಟನೆ ನಡೆದಿದೆ.
Read Full StoryKarnataka News Live 13 October 2026 ಅ. 16ರಿಂದ 19ರವರೆಗೆ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ 400 ಹೆಚ್ಚುವರಿ ಬಸ್
ದಸರಾ, ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 400 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಅಕ್ಟೋಬರ್ 16ರಿಂದ 19ರವರೆಗೆ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಂದ ವಿವಿಧ ಜಿಲ್ಲೆಗಳಿಗೆ ಈ ವಿಶೇಷ ಬಸ್‌ಗಳು ಸಂಚರಿಸಲಿವೆ.
Read Full StoryKarnataka News Live 13 October 2026 ವಿವಿಧ ಕಾಮಗಾರಿಗಳ 80 ಫೈಲ್ಸ್ 2 ತಿಂಗಳಿನಿಂದ ಸಚಿವರ ಬಳಿಯಲ್ಲಿರೋದು ಯಾಕೆ? NR ರಮೇಶ್
ಸಚಿವರು 27 ವಿಧಾನಸಭಾ ಕ್ಷೇತ್ರಗಳ 80ಕ್ಕೂ ಹೆಚ್ಚು ಕಾಮಗಾರಿ ಕಡತಗಳನ್ನು 2 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಕಡತಗಳ ಅನುಮೋದನೆಗೆ ಶೇ.5ರಷ್ಟು ಕಮಿಷನ್ ಕೇಳಲಾಗುತ್ತಿದೆ ಹಾಗೂ ಸಚಿವರ ಬೆಂಬಲಿಗರು ಸರ್ಕಾರಿ ಜಾಗ ಕಬಳಿಸಿದ್ದಾರೆ ಎಂದು ಅವರು ಬಹಿರಂಗ ಪತ್ರದಲ್ಲಿ ದೂರಿದ್ದಾರೆ.
Read Full StoryKarnataka News Live 13 October 2026 ಕೋಡಿಂಗ್ ಇಲ್ಲದೇ ಮೊಬೈಲ್ ನಲ್ಲೇ ವೆಬ್‌ಸೈಟ್ ನಿರ್ಮಿಸಿದ ಹುಬ್ಬಳ್ಳಿಯ ಉದ್ಯಮಿಗಳು!
ಹುಬ್ಬಳ್ಳಿಯ ರೋಟರಿ ಕ್ಲಬ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಉದ್ಯಮಿಗಳು ಕೋಡಿಂಗ್ ಜ್ಞಾನವಿಲ್ಲದೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಮೊಬೈಲ್‌ನಲ್ಲೇ ವೆಬ್‌ಸೈಟ್ ನಿರ್ಮಿಸುವುದನ್ನು ಕಲಿತರು. ಮನೀಷ್ ಐ. ಜೈನ್ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ 'ಲವಬಲ್' ಎಐ ವೇದಿಕೆ ಮೂಲಕ ಸಣ್ಣ ಉದ್ಯಮಿಗಳು ತಮ್ಮ ಡಿಜಿಟಲ್ ಗುರುತು ರೂಪಿಸಿಕೊಳ್ಳುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಲಾಯಿತು.
Read Full StoryKarnataka News Live 13 October 2026 ಬೆಂಗಳೂರಿನ ಸಮಸ್ಯೆಗಳಿಗೆ ಮುಕ್ತಿ ನೀಡಲು ಹೊಸ ತಂತ್ರಜ್ಞಾನ - Digital Twin Technology
ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕೃತಕ ಬುದ್ಧಿಮತ್ತೆ ಆಧಾರಿತ 'ಡಿಜಿಟಲ್ ಟ್ವಿನ್' ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ರಸ್ತೆ, ಚರಂಡಿ, ಪ್ರವಾಹ ನಿರ್ವಹಣೆ ಸೇರಿದಂತೆ ವಿವಿಧ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಮತ್ತು ಭವಿಷ್ಯದ ಸಮಸ್ಯೆಗಳನ್ನು ಮುಂಚಿತವಾಗಿ ಅರಿಯಲು ಈ 3ಡಿ ವರ್ಚುವಲ್ ಮಾದರಿ ನೆರವಾಗಲಿದೆ.
Read Full StoryKarnataka News Live 13 October 2026 ಬಿಡಿಎ ವಿರುದ್ಧ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ಸೈಟ್‌ದಾರರ ಹೋರಾಟ
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎಗೆ ತಮ್ಮ ಜಾಗ ನೀಡಿದ 17 ಗ್ರಾಮಗಳ ಕಂದಾಯ ನಿವೇಶನದಾರರು ಬದಲಿ ನಿವೇಶನಕ್ಕಾಗಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಿರಾಶ್ರಿತರಾಗಿರುವ ಇವರು, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ವಕೀಲರ ಮೊರೆ ಹೋಗಲು ನಿರ್ಧರಿಸಿದ್ದಾರೆ.
Read Full StoryKarnataka News Live 13 October 2026 ಬೆಳಗಾವಿ ಉ.ವಿಧಾನಸಭಾ ಕ್ಷೇತ್ರದಲ್ಲಿಒಂದೇ ಮನೆಯಲ್ಲಿ 389 ಮತದಾರರು! ದಿಲ್ಲಿಲೀ ಹೋರಾಟ ಮಾಡೋ ಸಿಎಂ, ಈಗ ಏನ್ ಮಾಡ್ತಾರೆ?
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಮನೆಯಲ್ಲಿ 389 ಮತದಾರರ ಹೆಸರಿದ್ದು, ನಕಲಿ ಮತದಾರರ ಬಗ್ಗೆ ದೂರು ನೀಡಲು ಹೋದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Read Full Story