ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಮನೆಯಲ್ಲಿ 389 ಮತದಾರರ ಹೆಸರಿದ್ದು, ನಕಲಿ ಮತದಾರರ ಬಗ್ಗೆ ದೂರು ನೀಡಲು ಹೋದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು (ಅ.13): ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರಿದ್ದು, ಒಂದೇ ಮನೆಯಲ್ಲಿ 389 ಮತದಾರರ ಹೆಸರಿದೆ ಎಂದು ಆ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಆರೋಪಿಸಿದ್ದಾರೆ.
ಫಾರ್ಮ್ ನಂಬರ್ 7 ಕೊಡಲು ಹೋದರೆ ಬೆದರಿಕೆ!
ಸೋಮವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಫಾರ್ಮ್ ನಂಬರ್ 7 ಕೊಡಲು ಹೋದರೆ ಬೆದರಿಸುವ ಕೆಲಸ ನಡೆದಿದೆ. ಆದರೆ, ಪಕ್ಷದ ಬಿಎಲ್‌ಎ 2ಗಳು ಇದಕ್ಕೆ ಹೆದುರುವುದಿಲ್ಲ. ಬೇರೆ ಬೇರೆ ಕ್ಷೇತ್ರದ ಹಲವು ಬೂತ್‌ಗಳಲ್ಲಿ ನಾವು ಹತ್ತತ್ತು ಫಾರ್ಮ್ ಕೊಟ್ಟಿದ್ದೇವೆ. ಎಫ್ಐಆರ್ ಆಗುವ ಆತಂಕದಿಂದ ಇದೀಗ ಬಿಎಲ್ಒಗಳು ನಮ್ಮಿಂದ ಅರ್ಜಿ ಪಡೆಯಲು ಸಿದ್ಧರಿಲ್ಲ ಎಂದು ಆರೋಪಿಸಿದರು.
ಎಸ್‌ಐಆರ್ ಸಿಎಂ ದಿಲ್ಲಿಯಲ್ಲಿ ಹೋರಾಟ ಮಾಡ್ತಾರೆ, ಇಲ್ಲಿ ಬೋಗಸ್ ಮತದಾರರು ಕಾಣಲ್ವ?
ರಾಜ್ಯದ ಮುಖ್ಯಮಂತ್ರಿಗಳು, ಕಾಂಗ್ರೆಸ್ ರಾಜ್ಯಾಧ್ಯಕ್ಷರು ದಿಲ್ಲಿಯೊಳಗೆ ಹೋರಾಟ ಮಾಡುತ್ತಾರೆ. ನಾವು ಬೋಗಸ್ ಮತದಾರರಿರುವ ಬೂತ್ ನಂಬರ್ 196, 197 ನಲ್ಲಿ ತಕರಾರು ಮಾಡಿದಾಗ ಅರ್ಜಿ ಪಡೆಯುತ್ತಿಲ್ಲ
ಒಂದೇ ಮನೆಯಲ್ಲಿ 389 ಮತದಾರರು
ಕ್ಷೇತ್ರದಲ್ಲಿ ಒಂದು ಕಡೆ ಒಂದೇ ಮನೆಯಲ್ಲಿ 389 ಮತದಾರರ ಹೆಸರಿದೆ. ಇನ್ನೊಂದು ಮನೆಯಲ್ಲಿ 20, ಮತ್ತೊಂದು ಕಡೆ 15 ನಕಲಿ ಮತದಾರರ ಹೆಸರು ಸೇರಿಸಿದ್ದನ್ನು ಅವರು ವಾರ್ಡ್, ಬೂತ್ ಸಂಖ್ಯೆಗಳ ವಿವರ ನೀಡಿ ಗಮನಕ್ಕೆ ತಂದರೂ ಈಗ ಫಾರ್ಮ್ 7 ಪಡೆದ ಬಿಎಲ್ಒಗಳಿಗೆ ಎಆರ್‌ಒಗಳು ಅಮಾನತು ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.


