- Home
- News
- State
- Karnataka News Live: ‘ಧರೆ’ಯ ಹಬ್ಬವಾದ ದಸರಾ, ಚಾಮುಂಡೇಶ್ವರಿಯೇ ನಮ್ಮ ಮನೆ ಬೆಳಗುತ್ತಾಳೆ - ಗವಿಸಿದ್ಧೇಶ್ವರ ಶ್ರೀ
Karnataka News Live: ‘ಧರೆ’ಯ ಹಬ್ಬವಾದ ದಸರಾ, ಚಾಮುಂಡೇಶ್ವರಿಯೇ ನಮ್ಮ ಮನೆ ಬೆಳಗುತ್ತಾಳೆ - ಗವಿಸಿದ್ಧೇಶ್ವರ ಶ್ರೀ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಾವೇರಿ ನೀರು ಹಂಚಿಕೆಯಲ್ಲಿನ ಬಾಕಿ ನೀರು ಬಿಡುಗಡೆಗೆ ಕರ್ನಾಟಕ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತಮಿಳುನಾಡು ಆಕ್ಷೇಪಿಸಿದ್ದು, ಸೋಮವಾರವೂ ಬಾಕಿ ನೀರು ಬಿಡುಗಡೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುವ ಸಾಧ್ಯತೆಯಿದೆ. ನೀರಿನ ಕೊರತೆಯಿಂದಾಗಿ ನಾವು ಈಗಾಗಲೇ ಖಾರಿಫ್ ಬೆಳೆಯಾದ ಕುರ್ವೈ ಬೆಳೆಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ, ಸುಪ್ರೀಂಕೋಟ್೯ ತೀರ್ಪಿನಂತೆ ಬಾಕಿ ನೀರನ್ನು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ವಾದಿಸುವ ನಿರೀಕ್ಷೆಯಿದೆ.
Karnataka News Live 12 October 2026 ‘ಧರೆ’ಯ ಹಬ್ಬವಾದ ದಸರಾ, ಚಾಮುಂಡೇಶ್ವರಿಯೇ ನಮ್ಮ ಮನೆ ಬೆಳಗುತ್ತಾಳೆ - ಗವಿಸಿದ್ಧೇಶ್ವರ ಶ್ರೀ
Karnataka News Live 12 October 2026 ₹18 ಲಕ್ಷದ ಬೀದಿದೀಪ ಕಾಮಗಾರಿಗೆ ₹9 ಲಕ್ಷಕ್ಕೆ ಟೆಂಡರ್ - ಶೇ. 50ರಷ್ಟು ಕಡಿಮೆ ಬಿಡ್
Karnataka News Live 12 October 2026 ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜೊತೆ ಸಿಎಂ ಡಿಕೆಶಿ ಭೇಟಿ - ಹೆಚ್‌ಡಿಕೆ ಆರೋಪ
ರಾಜ್ಯದ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಮಾಡಿದ ವ್ಯಕ್ತಿಯೊಂದಿಗೆ ಪಂಚತಾರಾ ಹೋಟೆಲ್‌ನಲ್ಲಿ ಚರ್ಚಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.