ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, ರಸ್ತೆ ಅಭಿವೃದ್ಧಿ ಹಾಗೂ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದ್ದು, 6 ತಿಂಗಳಲ್ಲಿ DPR ಸಿದ್ಧವಾಗಲಿದೆ.
- Home
- News
- State
- Karnataka News Live: ಆಗುಂಬೆ ಘಾಟ್ ಭೀಕರ ತಿರುವುಗಳಿಗೆ ಮುಕ್ತಿ - ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು!
Karnataka News Live: ಆಗುಂಬೆ ಘಾಟ್ ಭೀಕರ ತಿರುವುಗಳಿಗೆ ಮುಕ್ತಿ - ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು!

ಬೆಳಗಾವಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬ್ಯಾಲೇಟ್ ಪೇಪರ್ ಬಳಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರ ಹಾಸ್ಯಾಸ್ಪದವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮತದಾರರು ಇವಿಎಂಗಳ ಮೂಲಕವೇ 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಉಪಚುನಾವಣೆಗಳಲ್ಲಿ ಮತಚಲಾಯಿಸಿದರು. ಆಗ ಫಲಿತಾಂಶಗಳು ಕಾಂಗ್ರೆಸ್ಸಿಗರಿಗೆ ಅನುಕೂಲಕರವಾಗಿದ್ದಾಗ ಇವಿಎಂ ಯಂತ್ರಗಳನ್ನು ಪ್ರಶ್ನಾತೀತವಾಗಿ ಸ್ವೀಕರಿಸಿದ್ದರು. ಆದರೆ, ಏಕಾಏಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳು ಇದ್ದಕ್ಕಿದ್ದಂತೆ ಹೇಗೆ ವಿಶ್ವಾಸಾರ್ಹವಲ್ಲ ಎನಿಸಿದವು? ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಪದೇ ಪದೇ ಇವಿಎಂಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ. ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಅಮಾನ್ಯ ಮತಗಳು, ವಿಳಂಬಿತ ಎಣಿಕೆ ಮತ್ತು ಕುಶಲತೆಯಿಂದ ಕೂಡಿದ ಯುಗದಿಂದ ದೂರ ಸರಿಯುವುದು ಭಾರತದ ಉದ್ದೇಶವಾಗಿತ್ತು. ಸಂಪೂರ್ಣ ಜಗತ್ತು ಅಭಿವೃದ್ಧಿಯನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಮಾತ್ರ ದಿನದಿಂದ ದಿನಕ್ಕೆ ಹಿಂದೆ ಹೋಗುತ್ತಿದೆ ಎಂದು ದೂರಿದರು.
Karnataka News Live 10 February 2026 ಆಗುಂಬೆ ಘಾಟ್ ಭೀಕರ ತಿರುವುಗಳಿಗೆ ಮುಕ್ತಿ - ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು!
Karnataka News Live 10 February 2026 2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!
'ಜೋಶ್' ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಪತಿ ಶಾನಿದ್ ಆಸಿಫ್ ಮತ್ತು ಮಗನೊಂದಿಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದಾರೆ.
Karnataka News Live 10 February 2026 Bengaluru power cut ಬೆಂಗಳೂರಿನ ಹಲವೆಡೆ ಫೆ.11ರಂದು ಕತ್ತಲು ಭಾಗ್ಯ, ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿಕೊಳ್ಳಿ
ಫೆಬ್ರವರಿ 11 ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೋರಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
Karnataka News Live 10 February 2026 ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ!
Karnataka News Live 10 February 2026 ನಾನು ಠಾಕೂರ್ ನನಗೆ ಆ ಬಗ್ಗೆ ಗರ್ವ ಇದೆ - ವಿವಾದದ ಬಳಿಕ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ HDFC ಉದ್ಯೋಗಿ
ಗ್ರಾಹಕರಿಗೆ ತಮ್ಮ ಜಾತಿಯ ದೌಲತ್ತಿನಿಂದ ಧಮ್ಕಿ ಹಾಕಿದ್ದಾರೆ ಎನ್ನಲಾದ ಹೆಚ್‌ಡಿಎಫ್‌ಸಿ ಉದ್ಯೋಗಿ ಆಸ್ತಾ ಸಿಂಗ್ ಅವರ ವೀಡಿಯೋ ವೈರಲ್ ಆಗಿತ್ತು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅವರು, ಆ ವೀಡಿಯೋದಲ್ಲಿರುವುದು ಗ್ರಾಹಕರಲ್ಲ, ಬದಲಿಗೆ ಸಹೋದ್ಯೋಗಿ ಹಾಗೂ ಅದು ವೈಯಕ್ತಿಕ ಜಗಳವಾಗಿತ್ತು ಎಂದು ಹೇಳಿದ್ದಾರೆ.
Karnataka News Live 10 February 2026 ಪ್ರಯಾಣಿಕರ ಗಮನಕ್ಕೆ, ಫೆಬ್ರವರಿ 11 ಮತ್ತು 12 ರಂದು ಹುಬ್ಬಳ್ಳಿ-ಉಣಕಲ್ ರೈಲು ಸಂಚಾರದಲ್ಲಿ ವ್ಯತ್ಯಯ
Karnataka News Live 10 February 2026 ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಬೀದಿ ರಂಪಾಟಕ್ಕೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ!
ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿರುವ ನಿಖಿಲ್ ಕುಮಾರಸ್ವಾಮಿ, ಬೀದಿ ರಂಪಾಟ ಮಾಡದಂತೆ ಎಚ್ಚರಿಸಿದ್ದಾರೆ. ಶಾಸಕ ಎ. ಮಂಜು ಕೂಡ ಪ್ರೀತಂ ಗೌಡರ ವಿರುದ್ಧ ಹತಾಶೆಯ ಮಾತುಗಳೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಶಿವಲಿಂಗೇಗೌಡರ ಅಸಂವಿಧಾನಿಕ ಪದ ಬಳಕೆಯನ್ನು ಖಂಡಿಸಿದ್ದಾರೆ.
Karnataka News Live 10 February 2026 ಭ್ರಷ್ಟರ ಬೇಟೆ - ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಹಾಗೂ ಅಕೌಂಟೆಂಟ್!
ವಿಜಯನಗರ ಜಿಲ್ಲೆಯಲ್ಲಿ, ಗುತ್ತಿಗೆದಾರನ ಬಿಲ್ ಪಾವತಿಸಲು ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮತ್ತು ಅಕೌಂಟೆಂಟ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರರ ದೂರಿನ ಮೇರೆಗೆ ಪಿಡಬ್ಲ್ಯೂಡಿ ಕಚೇರಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
Karnataka News Live 10 February 2026 ಮಲೆ ಮಹದೇಶ್ವರ ಪಾದಯಾತ್ರಿಗಳ ಮತ್ತೆ ಮೇಲೆ ಚಿರತೆ ದಾಳಿ; ಬಾಲಕನ ಪ್ರಾಣ ಕಾಪಾಡಿದ ಅರಣ್ಯ ಸಿಬ್ಬಂದಿ!
Karnataka News Live 10 February 2026 ಬೀದರ್ ಹಾಸ್ಟೆಲ್ ನಲ್ಲಿ ವಿಚಿತ್ರ ಆಕೃತಿ ನೋಡಿ ಬೆಚ್ಚಿಬಿದ್ದ ಮಕ್ಕಳು! ವಿದ್ಯಾರ್ಥಿನಿಯರಿಗೆ ಸಾಯಬೇಕೆನ್ನುವ ಕೆಟ್ಟ ಕನಸು!
Karnataka News Live 10 February 2026 ʻಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್ಗೆ ಗಂಡು ಮಗು - ಅಪ್ಪನ ಮರುಹುಟ್ಟು ಎಂದ ನಟಿ
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ, 'ಕರಾವಳಿ ಹೆಣ್ಣು ಹುಲಿ' ಎಂದೇ ಪ್ರಸಿದ್ಧರಾದ ನಟಿ ಸುಷ್ಮಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.
Karnataka News Live 10 February 2026 ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'
ಬೆಂಗಳೂರು: ಕರ್ಣ ಸೀರಿಯಲ್ ಮೂಲಕ ಕನ್ನಡಿಗರ ಮನೆಮಗನಾಗಿ ಗುರುತಿಸಿಕೊಂಡಿರುವ ಕಿರಣ್ ರಾಜ್ ಅವರಿಗೆ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಕಿರಣ್ ರಾಜ್ ತಮ್ಮ ಸೆಲಿಬ್ರಿಟಿ ಕ್ರಶ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಕಿರಣ್ ರಾಜ್ ಈ ಬಗ್ಗೆ ಹೇಳಿದ್ದೇನು?
Karnataka News Live 10 February 2026 ಬೆಂಗಳೂರಲ್ಲಿ ಮತ್ತೆ ಜೆಸಿಬಿ ಘರ್ಜನೆ - ಗುಬ್ಬಲಾಳದಲ್ಲಿ ₹3 ಕೋಟಿ ಮೌಲ್ಯದ ಒತ್ತುವರಿ ಆಸ್ತಿ ತೆರವು!
ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಉತ್ತರಹಳ್ಳಿ ಉಪವಿಭಾಗದ ಗುಬ್ಬಲಾಳ ಗ್ರಾಮದಲ್ಲಿ ಪಾರ್ಕ್‌ಗಾಗಿ ಮೀಸಲಿಟ್ಟಿದ್ದ ಜಾಗದ ಒತ್ತುವರಿ ತೆರವುಗೊಳಿಸಿದೆ. ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ, 3 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಅನಧಿಕೃತ ಬೇಲಿ ತೆಗೆದುಹಾಕುವ ಮೂಲಕ ವಶಕ್ಕೆ ಪಡೆಯಲಾಗಿದೆ.
Karnataka News Live 10 February 2026 ಸಾಲ ಕೊಡಿಸುವ ನೆಪದಲ್ಲಿ ಉದ್ಯಮಿಗಳೇ ಟಾರ್ಗೆಟ್, ಕೋಟ್ಯಂತರ ರೂ ವಂಚನೆ, ಬೆಂಗಳೂರಿನ ಡ್ಯಾಡಿ ನಿವಾಸಕ್ಕೆ ಸಿಐಡಿ ದಾಳಿ!
ಸಾಲ ಕೊಡಿಸುವ ನೆಪದಲ್ಲಿ ಹಲವು ಉದ್ಯಮಿಗಳಿಗೆ ವಂಚಿಸಿದ ಆರೋಪದ ಮೇಲೆ ಪೀಟರ್ ಡ್ಯಾಡಿ ಎಂಬಾತನ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದೆ. ಆರೋಪಿಯು ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಹೆಸರಿನಲ್ಲಿ ಹಣ ಪಡೆದು, ಹಣ ಕೇಳಿದವರ ಮೇಲೆ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದನು.
Karnataka News Live 10 February 2026 Bhagyalakshmi Serial - ಎಲ್ಲರ ಅಂದಾಜು ಮೀರಿ ದುಡುಕಿದ ತಾಂಡವ್; ಹೀಗೆ ಮಾಡ್ತಾನೆ ಅಂತ ನಂಬ್ತೀರಾ?
ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಹಾಗೆ.. ಭಾಗ್ಯಲಕ್ಷ್ಮೀ ಧಾರಾವಾಹಿ ತಾಂಡವ್ ಸ್ಥಿತಿ ಆಗಿದೆ. ಅಷ್ಟು ವರ್ಷಗಳ ಕಾಲ ಪತ್ನಿ ಭಾಗ್ಯಗೆ ತೊಂದರೆ ಕೊಟ್ಟು, ಹಿಂಸೆ ಮಾಡಿದ್ದ ತಾಂಡವ್, ಈಗ ಅದನ್ನೆಲ್ಲ ಅನುಭವಿಸುತ್ತಿದ್ದಾನೆ. ಶ್ರೇಷ್ಠಳನ್ನು ಬಿಟ್ಟು ಭಾಗ್ಯ ಮನೆಗೆ ಬಂದ ಅವನಿಗೆ ತೊಂದರೆ ಶುರು ಆಗಿದೆ.
Karnataka News Live 10 February 2026 ಮೆಟ್ರೋ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಅಷ್ಟೇ! ರಾಜಕೀಯ ನಾಯಕರ ಟಾಕ್ ವಾರ್ ನಿಲ್ಲಿಸಲು BMRCL ಮಹಾಪ್ಲ್ಯಾನ್!
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ವಿರೋಧದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಈ ಪ್ರಸ್ತಾವನೆಯ ಬಗ್ಗೆ, ಹೊಸ ದರ ನಿಗದಿ ಸಮಿತಿ ರಚನೆ ಸೇರಿದಂತೆ ಅಂತಿಮ ನಿರ್ಧಾರವನ್ನು ಮುಂಬರುವ BMRCL ಬೋರ್ಡ್ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ.
Karnataka News Live 10 February 2026 ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್ ಹಾಕಿದ ಚೈತ್ರಾ ಕುಂದಾಪುರ
Bigg Boss Kannada 12: ಬಿಗ್ ಬಾಸ್ ಆಟ ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ಮುಗಿಯುತ್ತಿಲ್ಲ. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಅವರು ಆಟದ ವಿಚಾರವಾಗಿ ಜಗಳ ಆಡುತ್ತಿದ್ದಾರೆ. ಈಗ ಚೈತ್ರಾ ಪೋಸ್ಟ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.
Karnataka News Live 10 February 2026 ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್ ರಿವೀಲ್ ಮಾಡಿದ ನಟಿ Rukmini Vasanth
'ಸಪ್ತ ಸಾಗರದಾಚೆ ಎಲ್ಲೋ' ಮತ್ತು 'ಕಾಂತಾರ' ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ ರುಕ್ಮಿಣಿ ವಸಂತ್, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ದೇವಸ್ಥಾನವೇ ತಮ್ಮ ವೃತ್ತಿಜೀವನದ ಯಶಸ್ಸಿಗೆ ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.
Karnataka News Live 10 February 2026 BCCI ಕೇಂದ್ರಿಯ ಗುತ್ತಿಗೆ ಪ್ರಕಟ - ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? ಈ ಲಿಸ್ಟ್‌ನಲ್ಲಿದೆ ಒಂದು ಅಚ್ಚರಿ ಹೆಸರು
ನವದೆಹಲಿ: 2025-26ನೇ ಸಾಲಿನ ವಾರ್ಷಿಕ ಕೇಂದ್ರಿಯ ಗುತ್ತಿಗೆಯನ್ನು BCCI ಘೋಷಿಸಿದೆ. ಈ ಬಾರಿ ಒಟ್ಟು 30 ಆಟಗಾರರು ಎ, ಬಿ, ಸಿ ದರ್ಜೆಯ ಗುತ್ತಿಗೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಪ್ರಮುಖ ಮೂವರು ಆಟಗಾರರನ್ನು ಕೈಬಿಡಲಾಗಿದ್ದು, ಇವರ ಕ್ರಿಕೆಟ್ ಭವಿಷ್ಯ ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿವೆ.