ಫೆಬ್ರವರಿ 11 ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೋರಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಬೆಂಗಳೂರು: ನಿರ್ವಹಣಾ ಮತ್ತು ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಈ ವಾರ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ವಿದ್ಯುತ್ ವಿತರಣಾ ಸಂಸ್ಥೆ ತಿಳಿಸಿದೆ. ಬುಧವಾರ, ಫೆಬ್ರವರಿ 11ರಂದು ನಿಗದಿತ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

Add Asianetnews Kannada as a Preferred SourcegooglePreferred

ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ

ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಲಕ್ಷ್ಮೀ ಲೇಔಟ್, ಸೌತ್ ಸಿಟಿ ಅಪಾರ್ಟ್‌ಮೆಂಟ್, ಕಮ್ಮನಹಳ್ಳಿ, ಶಾಂತಿನಿಕೇತನ ಶಾಲೆ ಸುತ್ತಮುತ್ತಲಿನ ಪ್ರದೇಶಗಳು, ಎಲೆಕ್ಟ್ರಾನಿಕ್ಸ್ ಸಿಟಿ ಹಂತ–1, ದೊಡ್ಡತೋಗೂರು, ಬೊಮ್ಮನಹಳ್ಳಿ, ಎನ್‌ಜೆಆರ್ ಲೇಔಟ್, ಚಿಕ್ಕತೋಗೂರು, ಹೊಂಗಸಂದ್ರ, ಕೊಣ್ಣಪ್ಪನ ಅಗ್ರಹಾರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ

ಇದೇ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಮತ್ತಷ್ಟು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಯೋಜಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕೋರಮಂಗಲ, ನೇತ್ರಾವತಿ ಬ್ಲಾಕ್, ಜ್ಯೋತಿನಿವಾಸ್ ಕಾಲೇಜು ಪ್ರದೇಶ, ಗೋದಾವರಿ ಬ್ಲಾಕ್, ಎಸ್‌ಟಿ ಬೆಡ್, ಜುಡಿಷಿಯಲ್ ಬ್ಲಾಕ್, ಕೆಎಂಎಲ್ ವಿಲೇಜ್, ಕಪಿಲಾ ಬ್ಲಾಕ್, ರಹೇಜಾ ಟವರ್, ಪ್ರೆಸ್ಟೀಜ್ ಸ್ಟಾರ್ ಟೆಕ್ ಪಾರ್ಕ್, ಬಿ ನಾಗಸಂದ್ರ, ಎನ್‌ಎಎಲ್ ರಸ್ತೆ, ಎಸ್‌ಆರ್ ಲೇಔಟ್, ಎನ್‌ಆರ್ ಲೇಔಟ್, ಪಿಆರ್ ಲೇಔಟ್, ಅಮರಜ್ಯೋತಿ ಲೇಔಟ್ (ವೆಸ್ಟ್ ವಿಂಗ್), ವಿನಾಯಕನಗರ, ವಿಂಗ್ ಟನಲ್ ರಸ್ತೆ, ಕೋರಮಂಗಲ ಕೈಗಾರಿಕಾ ಪ್ರದೇಶದ 5ನೇ ಬ್ಲಾಕ್, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕ ಆಡುಗೋಡಿ, ಸೇಂಟ್ ಜಾನ್ ಸಿಬ್ಬಂದಿ ವಸತಿ ಪ್ರದೇಶ, ಜೋಗಿ ಕಾಲೋನಿ, ಸಿಎಆರ್ ಪೊಲೀಸ್ ಕ್ವಾರ್ಟರ್ಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ಸ್ ಆಸ್ಪತ್ರೆ, ಮಾರುತಿ ನಗರ, ಡಾಲರ್ ಸ್ಕೀಮ್ ಕಾಲೋನಿ, 100 ಅಡಿ ರಿಂಗ್ ರಸ್ತೆ, ಒರಾಕಲ್ ಕ್ಯಾಂಪಸ್ ಸುತ್ತಮುತ್ತಲಿನ ಪ್ರದೇಶಗಳು, ಬನ್ನೇರುಘಟ್ಟ ರಸ್ತೆ, ಬಿಜಿ ರಸ್ತೆ, ಕೆಎಚ್‌ಬಿ ಕಾಲೋನಿ, ಮೈಕೋ ಲೇಔಟ್‌ನ 3 ಮತ್ತು 7ನೇ ಬ್ಲಾಕ್‌ಗಳು, ಕೋರಮಂಗಲದ 3ರಿಂದ 6ನೇ ಬ್ಲಾಕ್‌ಗಳು, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಕೃಷ್ಣ ನಗರ ಕೈಗಾರಿಕಾ ಲೇಔಟ್, ಎಸ್‌ಜಿ ಪಾಳ್ಯ, ಮಡಿವಾಳ ಮಾರುಕಟ್ಟೆ, ಸಿದ್ಧಾರ್ಥ ಕಾಲೋನಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.

ನಾಗರಿಕರಿಗೆ ಮುನ್ನೆಚ್ಚರಿಕೆ

ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ನಾಗರಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಸಹಕರಿಸುವಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜನ್ನು ಪುನಃ ಸಹಜ ಸ್ಥಿತಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.