ಗೂಗಲ್ ಪಿಕ್ಸೆಲ್ ತಮಿಳನಾಡಿಗೆ ಹೋದ್ರೆ ರಾಜ್ಯಕ್ಕೆ ಫಾಕ್ಸ್ ಕಾನ್ ಬಂದಿದೆಯಲ್ಲ? -ಎಂಬಿ ಪಾಟೀಲ್

 ನಾಲ್ಕು ವರ್ಷ ಬಿಜೆಪಿ ಬಂಡವಾಳ ಹೂಡಿಕೆ ಮಾಡಿಸಲಿಲ್ಲ. ರಾಜ್ಯದಲ್ಲಿ ಒಂದು ಮನೆನೂ ಕಟ್ಟಲಿಲ್ಲ, ಯಾವ ಇಲಾಖೆಯಲ್ಲೂ ಬಿಜೆಪಿ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಎಂಬಿ ಪಾಟೀಲ್ ಹರಿಹಾಯ್ದರು.

Karnataka minister MB Patil reacts about Google logs into Tamil Nadu for drone unit rav

ಬೆಂಗಳೂರು (ಮೇ.30):  ನಾಲ್ಕು ವರ್ಷ ಬಿಜೆಪಿ ಬಂಡವಾಳ ಹೂಡಿಕೆ ಮಾಡಿಸಲಿಲ್ಲ. ರಾಜ್ಯದಲ್ಲಿ ಒಂದು ಮನೆನೂ ಕಟ್ಟಲಿಲ್ಲ, ಯಾವ ಇಲಾಖೆಯಲ್ಲೂ ಬಿಜೆಪಿ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಎಂಬಿ ಪಾಟೀಲ್ ಹರಿಹಾಯ್ದರು.

ಗೂಗಲ್ ಪಿಕ್ಸ್ ಕಂಪನಿ ತಮಿಳನಾಡಿಗೆ ಹೋದ ವಿಚಾರಕ್ಕೆ ಬಿಜೆಪಿ ಟೀಕಿಸಿರುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿದ ಸಚಿವರು, ಗೂಗಲ್ ಅಲ್ಲಿ ಹೋಗಿದೆ, ಫಾಕ್ಸ್‌ಕಾನ್ ಇಲ್ಲಿಗೆ ಬಂದಿದೆ ಇದು ಸ್ವಾಭಾವಿಕ ನಿರ್ಧಾರಗಳು. ಫಾಕ್ಸ್ ಕಾನ್ ಕಂಪನಿಯ ಕೆಲಸ ರಾಜ್ಯದಲ್ಲಿ ಈಗಾಗಲೇ ಆರಂಭವಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ನಾನು ಮಾಡಿದ ಕೆಲಸದ ಬಗ್ಗೆ ನಾನು ಡೀಟೇಲ್ಸ್ ಮಾಹಿತಿ ಕೊಡುತ್ತೇನೆ. ಎಲ್ಲೆಲ್ಲಿ ಹೋಗಿ ಬಂಡವಾಳ ತರುತ್ತಿದ್ದೇವೆ ಅಂತ ಹೇಳ್ತೇನೆ. ಇದರ ಪಟ್ಟಿ ಶೀಘ್ರವಾಗಿ ಬಿಡುಗಡೆ ಮಾಡುತ್ತೇನೆ ಎಂದರು.

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಆರ್ ಅಶೋಕ್ ತೀವ್ರ ವಾಗ್ದಾಳಿ

ಇನ್ನು ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಆ ಕುರಿತು ಸಚಿವ ನಾಗೇಂದ್ರ ಈಗಾಗಲೇ ಹೇಳಿದ್ದಾರೆ. ಈ ಹಗರಣದಲ್ಲಿ ನನಗೆ ಯಾವುದೇ ಸಂಬಂಧ ಇಲ್ಲ ಅಂತಾ. ಅಧಿಕಾರಿಗಳು ಮಾಡಿದ ಹಗರಣ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ. ಎಷ್ಟೋ ಸಲ ಅಧಿಕಾರಿಗಳು ಮಾಡಿದ್ದು ಗೊತ್ತಾಗಲ್ಲ. ಇದರ ಅನುಭವ ನನಗೂ ಆಗಿದೆ. ನನ್ನ ಇಲಾಖೆಯಲ್ಲಿ ಈ ರೀತಿ ಅಕ್ರಮ ಕಂಡುಬರ್ತಿದ್ದ ಹಾಗೆ ತನಿಖೆ ಮಾಡಿಸಿದ್ದೇನೆ. ಕೆಲವೊಬ್ರು ಅಧಿಕಾರಿಗಳು ದಾರಿ ತಪ್ಪಿಸುತ್ತಾರೆ ಎಂದು ಅಧಿಕಾರಿಗಳ ಮೇಲೆಯೇ ಗೂಬೆ ಕೂರಿಸಿದ ಸಚಿವರು.

ನಮ್ಮ ಸರ್ಕಾರ ಬಂದಮೇಲೆ ಪರೀಕ್ಷಾ ಪಾವಿತ್ರ್ಯ ಕಾಪಾಡಿದ್ದೇವೆ: ಮಧು ಬಂಗಾರಪ್ಪ

ಇನ್ನು ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯರನ್ನ ಕಡೆಗಣಿಸಿದ ವಿಚಾರದ ಬಗ್ಗೆ ಎಲ್ಲವೂ ಚರ್ಚೆ ಆಗುತ್ತದೆ. ಹಿಂದೆ 9 ಜನರ ಕಮಿಟಿ ಇತ್ತು. ಸಮ್ಮಿಶ್ರ ಸರ್ಕಾರದಲ್ಲೂ ಮೋ-ಆರ್ಡಿನೇಷನ್ ಕಮಿಟಿ ಇತ್ತು ಈ ವಿಚಾರದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ದೇಶಪಾಂಡೆ ಎಲ್ಲಾ ಕುಳಿತು ಚರ್ಚೆ ಮಾಡ್ತೇವೆ. 4 ಗೋಡೆಗಳ ನಡುವೆ ಮಾತನಾಡಿ, ಬಗೆಹರಿಸ್ತೇವೆ ಎಂದರು. ಇದೇ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ನಾನೇನು ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭ ಕೂಡ ಇದಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ನಂತರ ಎಲ್ಲಾ ಚರ್ಚೆಗೆ ಬರುತ್ತದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಸಚಿವ ರಾಜಣ್ಣ ಕೂಡ  ಹೇಳಿದ್ದಾರೆ. ಹೈಕಮಾಂಡ್ ಬಯಸಿದರೆ ಎಲ್ಲವೂ ಆಗುತ್ತದೆ. ಅದೆಲ್ಲವೂ ಲೋಕಸಭಾ ಚುನಾವಣೆ ನಂತರ ಎಲ್ಲಾ ನಿರ್ಧಾರ ಆಗುತ್ತದೆ. ಹೈಕಮಾಂಡ್ ಬಯಸಿದ್ರೆ ಸಂಪುಟ ಪುನಾರಚನೆ ಕೂಡ ಆಗುತ್ತದೆ. ಆದರೆ ಸಿಎಂ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಗೆ ಬರೊಲ್ಲ ಎಂದರು.

Latest Videos
Follow Us:
Download App:
  • android
  • ios