ನಮ್ಮ ಸರ್ಕಾರ ಬಂದಮೇಲೆ ಪರೀಕ್ಷಾ ಪಾವಿತ್ರ್ಯ ಕಾಪಾಡಿದ್ದೇವೆ: ಮಧು ಬಂಗಾರಪ್ಪ
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಗೆ ಬಹುಮತ ಕಡಿಮೆಯಾಗಿದೆ ಹೀಗಾಗಿ ಮೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಶಿವಮೊಗ್ಗ (ಮೇ.30): ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಗೆ ಬಹುಮತ ಕಡಿಮೆಯಾಗಿದೆ ಹೀಗಾಗಿ ಮೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಕಡಿಮೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಎಂಎಲ್ಸಿಗಳಿದ್ದರೆ ಬಿಲ್ ಪಾಸ್ ಮಾಡಬಹುದು ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಆರ್ ಅಶೋಕ್ ತೀವ್ರ ವಾಗ್ದಾಳಿ
ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗೃಹ ಸಚಿವ ಪರಮೇಶ್ವರ್ ಕುಟುಂಬದವರನ್ನ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಪ್ರಕರಣದ ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕುಟುಂಬ ಭೋವಿ ಸಮಾಜಕ್ಕೆ ಸೇರಿದ್ದು ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದರು.
ಇನ್ನು ರಾಜ್ಯದಲ್ಲಿ ಶಾಲೆಗಳು ಪುನಾರಂಭಗೊಂಡಿವೆ. ರಾಜ್ಯಾದ್ಯಂತ 600 kps ಶಾಲೆಗಳನ್ನು ಗುರುತಿಸಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ಪರೀಕ್ಷೆ ಪವಿತ್ರತೆ ಕಾಪಾಡಿದ್ದೇವೆ, ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ಪರೀಕ್ಷಾ ಅಕ್ರಮ ತಡೆಗಟ್ಟಿದ್ದೇವೆ ಎಂದರು. ಇದೇ ವೇಳೆ 20% ಗ್ರೇಸ್ ಮಾರ್ಕ್ಸ್ ಕೊಟ್ಟಿಲ್ಲ. ಪ್ರೈವೇಟ್ ಸಂದರ್ಭದಲ್ಲಿ 10% ಇತ್ತು. ಅದಕ್ಕೆ 10% ಸೇರ್ಪಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿನ ಶಿಕ್ಷಣ ಸಚಿವರು ಮಾಡಿದ್ದ ಹೊಲಸನ್ನು ನಾನು ಈಗ ಸರಿ ಮಾಡಬೇಕಿದೆ. ಸುರೇಶ್ ಕುಮಾರ್ 20 - 21ರಲ್ಲಿ 1994 ನೇಮಕ ಮಾಡಿದ್ರು. 2018 ರಲ್ಲಿ ಮಹೇಶ್ ರವರು 1727 ನೇಮಕ ಮಾಡಿದ್ರು. ಅದೇ ನನ್ನ ಅಧಿಕಾರ ಅವಧಿಯಲ್ಲಿ 13000 ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂದರು.
ಶಾಲೆಗಳಿಗೆ ಉಚಿತ ವಿದ್ಯುತ್, ನೀರು ವ್ಯವಸ್ಥೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಸಂಜೆ ವೇಳೆ ಕ್ಲಾಸ್ ನಡೆಸುತ್ತಿದ್ದಾರೆ. ಮಕ್ಕಳು ಪುನಃ ಪರೀಕ್ಷೆಗಳನ್ನು ಕಟ್ಟಬೇಕು ಆಗ ಸರ್ಕಾರ ಮಾಡಿದ ಪ್ರಯತ್ನಕ್ಕೆ ಸಾರ್ಥಕತೆ ಸಿಗುತ್ತದೆ. ಫೇಲ್ ಆದ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ಗಳನ್ನು ತೆಗೆದು ಕೊಳ್ಳಲಾಗುತ್ತದೆ. ಬಿಜೆಪಿ ಪಕ್ಷದ ಅಧ್ಯಕ್ಷ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ವಾಲ್ಮೀಕಿ ಹಣ ವರ್ಗಾವಣೆ ಹಗರಣ: ಸಚಿವ ನಾಗೇಂದ್ರ ರಾಜೀನಾಮೆಗೆ ಕಾರಜೋಳ ಆಗ್ರಹ
ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಬಿಐ ತನಿಖೆಗೆ ಆಗ್ರಹಿಸುವುದೇ ಅವರ ಕೆಲಸ. ವಾಲ್ಮೀಕಿ ಅಭಿವೃದ್ಧಿ ಹಣ ತೆಲಂಗಾಣಕ್ಕೆ ಹೋಗಿದೆ ಎಂಬ ಬಿಜೆಪಿ ಆರೋಪ ಮಾಡಿದ್ದಾರೆ. ಹಾಗಾದರೆ ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಬೀಳಿಸಿದ್ದಾರಲ್ಲ ಅವಾಗ ಇದನ್ನೇ ಮಾಡಿದ್ದರಾ? ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಯತ್ನಾಳ್ ಹೇಳಿಕೆಗಳಿಗೆ ನೀವು ಉತ್ತರ ಕೊಡಿ ಅಷ್ಟೇ ಸಾಕು ನಂತರ ಹೇರ್ ಸ್ಟೈಲ್, ಬಟ್ಟೆ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.