Asianet Suvarna News Asianet Suvarna News

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಆರ್ ಅಶೋಕ್ ತೀವ್ರ ವಾಗ್ದಾಳಿ

ಈ ಸರ್ಕಾರ ಕೊಲೆಗಡುಕರ ಸರ್ಕಾರ, ಇಲ್ಲಿ ಹೆಣ್ಣುಮಕ್ಕಳಿಗೂ ಗ್ಯಾರಂಟಿ ಇಲ್ಲ, ಶಾಲೆ ಮಕ್ಕಳಿಗೂ ಗ್ಯಾರಂಟಿ ಇಲ್ಲ, ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.

Suicide of Valmiki Corporation official R Ashok outraged against congress government rav
Author
First Published May 30, 2024, 3:15 PM IST

ಬೆಂಗಳೂರು (ಮೇ.30): ಈ ಸರ್ಕಾರದ ಒಂದು ಸಾಧನೆ ಎಂದರೆ ಎಸ್‌ಟಿ ಗೆ ಸೇರಬೇಕಿದ್ದ 180 ಕೋಟಿ ಹಣ ಗುಳುಂ ಮಾಡಿದ್ದು, ಚುನಾವಣೆಗೆ ಮುನ್ನ ದಲಿತರ ಉದ್ದಾರ ಮಾಡ್ತಿವಿ ಅಂತಾ ಹೇಳಿದ್ದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಚುನಾವಣೆ ಮುಗಿದಿದೆ. ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಗಳನ್ನು ಕಂಡರೂ ಈ ಕಾಂಗ್ರೆಸ್ ಗೆ ಆಗಲ್ಲ. ವಾಲ್ಮೀಕಿ ಹೆಸರಲ್ಲಿ ಇದ್ದ ನಿಗಮದ ಹಣವನ್ನು ಹೊಡೆದಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇಂದು ಮಾಧ್ಯಮಗಳ ಮುಂದೆ ಅಧಿಕಾರಿ ಬರೆದಿಟ್ಟ ಡೆತ್ ನೋಟ್ ಓದಿದ ಹೇಳಿದ ಆರ್‌ ಅಶೋಕ್, ಈ ಸರ್ಕಾರ ಕೊಲೆಗಡುಕರ ಸರ್ಕಾರ, ಇಲ್ಲಿ ಹೆಣ್ಣುಮಕ್ಕಳಿಗೂ ಗ್ಯಾರಂಟಿ ಇಲ್ಲ, ಶಾಲೆ ಮಕ್ಕಳಿಗೂ ಗ್ಯಾರಂಟಿ ಇಲ್ಲ, ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ. ಸಚಿವರ ಮೌಖಿಕ ಆದೇಶದ ಹಿನ್ನಲೆ ಉಪಖಾತೆ ತೆರೆಯಲು ಸೂಚನೆ ನೀಡಿದ್ದರು ಎಂದು ಡಿಟೈಲ್ ಆಗಿ ಬರೆದಿದ್ದಾರೆ. ಇಷ್ಟು ಕ್ಲಿಯರ್ ಆಗಿ ಡೆತ್ ನೋಟ್ ಬರೆದಿರುವ ಅಧಿಕಾರಿಯನ್ನು ನಾನು‌ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಅವರು ಕಂಪ್ಲೀಟ್ ಡೀಟೈಲ್ಸ್ ಬರೆದಿದ್ದಾರೆ. ಲೂಟಿ ಮಾಡಿರೋದು ಕಂಡು ಬಂದಿದೆ, 'ಇದರಲ್ಲಿ ನನ್ನ ತಪ್ಪೇನು ಇಲ್ಲ. ಮತ್ತೊಮ್ಮೆ ನನ್ನ ಪರಿಸ್ಥಿತಿಗೆ ಇವ್ರು ಎಲ್ಲರು ಕಾರಣ. ಈ ನಿಗಮಕ್ಕೆ ನಾನು ಏನು ವಂಚನೆ ಮಾಡಿರುವುದಿಲ್ಲ' ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ವಾಲ್ಮೀಕಿ ಹಣ ವರ್ಗಾವಣೆ ಹಗರಣ: ಸಚಿವ ನಾಗೇಂದ್ರ ರಾಜೀನಾಮೆಗೆ ಕಾರಜೋಳ ಆಗ್ರಹ

ಇದರಲ್ಲಿ ಒಬ್ಬನೇ ಮಂತ್ರಿ ತಿಂದಿಲ್ಲ. ಎಲ್ಲಾ ಮಂತ್ರಿಗಳು ತಿಂದಿದ್ದಾರೆ. ಈ ಪ್ರಕರಣದಲ್ಲಿ ಇಡಿ ಸರಕಾರ ಭಾಗಿಯಾಗಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಟ್ರಾನ್ಸ್ ಫರ್ ಆಗಿದೆ. 25 ಕೋಟಿ ಟಕಾ ಟಕ್ ಟ್ರಾನ್ಸಫರ್. ಹೀಗೆ ಟಕಾ ಟಕ್ ಆಗಿ ಖಾತೆಗೆ ಹಣ ಹಾಕಿ ಭ್ರಷ್ಟಾಚಾರ ಮಾಡಿದ್ದಾರೆ. 25 ಸಾವಿರ ಕೋಟಿ ಟಕಾ ಟಕ್ ಆಗಿ ದಲಿತರ ಹಣ ಮಾಯವಾಗಿದೆ. ಕ್ರೈಂ ರೇಟ್ ಟಕಾ ಟಕ್ ಮೇಲೆರಿದೆ. ಭಯೋತ್ಪಾದನೆ ಟಕಾ ಟಕ್ ಜಾಸ್ತಿ ಆಗಿದೆ. ಇದು ರಾಹುಲ್ ಗಾಂಧಿಯವರ ಟಕಾ ಟಕ್ ಮಾದರಿ ಕರ್ನಾಟಕ ಎಂದು ವಾಗ್ದಾಳಿ ನಡೆಸಿದರು.

 

ವಾಲ್ಮೀಕಿ ಕೇಸ್‌: ಬ್ಯಾಂಕ್‌ನಲ್ಲಿ ಹಣ ವರ್ಗ ಆಗಿದ್ದು ಹೇಗೆ?

Latest Videos
Follow Us:
Download App:
  • android
  • ios