'1985 ರಿಂದಲೂ ಯೋಗ ಮಾಡುತ್ತಿದ್ದೇನೆ ಆರೋಗ್ಯ ಗುಟ್ಟು ಬಿಚ್ಚಿಟ್ಟ ಸಚಿವ ಮಹದೇವಪ್ಪ!
ಸಂತೋಷದಿಂದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನಾನು 1985ರಿಂದಲೂ ಯೋಗವನ್ನು ಮಾಡುತ್ತಿದ್ದೇನೆ ಎಂದು ಮೈಸೂರಿನಲ್ಲಿ ಸಚಿವ ಎಚ್‌ಸಿ ಮಹದೇವಪ್ಪ ನುಡಿದರು.
ಬೆಂಗಳೂರು (ಜೂ.21): ಸಂತೋಷದಿಂದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನಾನು 1985ರಿಂದಲೂ ಯೋಗವನ್ನು ಮಾಡುತ್ತಿದ್ದೇನೆ ಎಂದು ಮೈಸೂರಿನಲ್ಲಿ ಸಚಿವ ಎಚ್‌ಸಿ ಮಹದೇವಪ್ಪ ನುಡಿದರು.
ಇಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆವತಿಯಿಂದ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು 1985ರಿಂದಲೂ ಯೋಗಾಭ್ಯಾಸ ಮಾಡಿಕೊಂಡು ಬಂದಿದ್ದೇನೆ ಹೀಗಾಗಿ ಈ ವಯಸ್ಸಿನಲ್ಲೂ ಆರೋಗ್ಯವಾಗಿದ್ದೇನೆ. ಯೋಗಾಭ್ಯಾಸ ಪ್ರತಿಯೊಬ್ಬರೂ ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ಯೋಗ ಬಹಳ ಒಳ್ಳೆಯದು ಎಂದರು.
ತೋರಣಗಲ್ ಅಂತಾರಾಷ್ಟ್ರೀಯ ಯೋಗ ದಿನಾಚಣೆಯಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಭಾಗಿ
ಪೆಟ್ರೋಲ್, ಡಿಸೇಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ವಿಪಕ್ಷಗಳು ಟೀಕೆ ಮಾಡುತ್ತಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸಚಿವರು, ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದ್ರೂ ಕೂಡ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿಲ್ಲ. ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆನೇ ಇದೆ. ಆದರೆ ವಿಪಕ್ಷಗಳು ಸುಖಾ ಸುಮ್ಮನೆ ಟೀಕೆ ಮಾಡುತ್ತಿವೆ ಅಷ್ಟೇ. ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮಾಡಿರುವುದೇ
ಇದಕ್ಕೆಲ್ಲ ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧವೇ ದೂರಿದರು.
ಇನ್ನು ಗ್ಯಾರಂಟಿ ಯೋಜನೆ ಮಾಡುವ ವದಂತಿ ವಿಚಾರ ಅಲ್ಲಗಳೆದ ಸಚಿವರು, ನಾವು ಗ್ಯಾರಂಟಿ ಯೋಜನೆಗಳನ್ನ ರಾಜಕೀಯ ಉದ್ದೇಶಕ್ಕಾಗಿ ಜಾರಿಗೆ ತಂದಿಲ್ಲ. ಬಡವರ ಆರ್ಥಿಕ ಸುಧಾರಣೆಗಾಗಿ ಯೋಜನೆ ಜಾರಿಗೆ ತಂದಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಕೆಲವರು ಟೀಕೆ ಟಿಪ್ಪಣಿ ಮಾಡುತ್ತಾರೆ, ನಿಲ್ಲಿಸುತ್ತಾರೆಂಬ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಜನರು ಇಂತಹ ಮಾತುಗಳಿಂದ ಆತಂಕ ಪಡಬಾರದು ಗ್ಯಾರಂಟಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ ಎಂದು ಪುನರುಚ್ಚರಿಸಿದರು.
'ವಿಶ್ವ ಸ್ವಾಸ್ಥ್ಯಕ್ಕೆ ‘ಯೋಗ’ವೇ ಮದ್ದು' - ಬಿವೈ ವಿಜಯೇಂದ್ರ ಅವರ ವಿಶೇಷ ಲೇಖನ
ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ರಕ್ಷಿಸಲು ಕೆಲವರು ಸಚಿವರ ಒತ್ತಡವಿದೆ ಎಂಬ ಮಾತು ಕೇಳಿಬಂದಿದೆ. ಆದರೆ ನೀವು ತಿಳಿದಹಾಗೆ ಸಚಿವ ಸಂಪುಟದಲ್ಲಿ ಯಾವುದೇ ಚರ್ಚೆಯೂ ನಡೆದಿಲ್ಲ. ಯಾರ ಒತ್ತಡವೂ ಬಂದಿಲ್ಲ. ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗುತ್ತದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ಸಂಸದ ಯದುವೀರ್, ಎಂಎಲ್ಸಿ ಮಂಜೇಗೌಡ, ಡಿ ಸಿ ಡಾ.ಕೆ.ವಿ ರಾಜೇಂದ್ರ, ಪೋಲಿಸ್ ಕಮಿಷನರ್ ರಮೇಶ್,ಜಿ ಪಂ ಗಾಯಿತ್ರಿ ಮತ್ತಿತರರು ಭಾಗಿಯಾದರು.