ಎಸಿಬಿ ವಿರುದ್ಧ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ತರಾಟೆ

  • ಎಸಿಬಿ ಬಾಸ್‌ಗೆ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ತರಾಟೆ
  • ನ್ಯಾಯಾಂಗ ಸಮರ, ಬಿ ರಿಪೋರ್ಚ್‌ಗಳ ಬಗ್ಗೆ ಅಪೂರ್ಣ ಮಾಹಿತಿಗೆ ಗರಂ
  • ಎಡಿಜಿಪಿ ಮೇಲಿನ ಸಿಬಿಐ ತನಿಖೆ ವಿವರಕ್ಕೆ ನ್ಯಾ.ಸಂದೇಶ್‌ ಸೂಚನೆ
Karnataka HC   again take class against ACB gow

ಬೆಂಗಳೂರು (ಜು.8): ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ (ಲೋಕಾಯುಕ್ತ ವಿಶೇಷ ನ್ಯಾಯಾಲಯ) ಸಲ್ಲಿಸಿರುವ ‘ಬಿ ವರದಿ’ಗಳ ಬಗ್ಗೆ ಅಪೂರ್ಣ ಮಾಹಿತಿ ನೀಡಿರುವ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ಕಾರ್ಯ ವೈಖರಿಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದ್ದು, 2016ರಿಂದ ಈವರೆಗೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ‘ಬಿ ವರದಿ’ಗಳ ವರ್ಷವಾರು ಮಾಹಿತಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ಗೆ (ನ್ಯಾಯಾಂಗ) ನಿರ್ದೇಶಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಲಂಚ ಪ್ರಕರಣದ ಆರೋಪಿ ಉಪ ತಹಶೀಲ್ದಾರ್‌ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರು ಈ ಆದೇಶ ಮಾಡಿದ್ದಾರೆ.

ಅಲ್ಲದೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2013ರ ಏ.5ರಂದು ಅಂದಿನ ಬಳ್ಳಾರಿ ಜಿಲ್ಲಾ ಎಸ್ಪಿ ಆಗಿದ್ದ, ಹಾಲಿ ಎಸಿಬಿ ಎಡಿಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದರು.

ಎಸಿಬಿ ದಾಳಿ ನಿರಂತರ ಪ್ರಕ್ರಿಯೆ: ಸಿಎಂ ಬೊಮ್ಮಾಯಿ

ಈ ಮಧ್ಯೆ ಜಿಲ್ಲಾಧಿಕಾರಿಗಳ ಲಂಚ ಪ್ರಕರಣದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ, ಸೂಕ್ತ ಮಾಹಿತಿ ನೀಡಿಲ್ಲ ಎಂದು ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ನ್ಯಾಯಮೂರ್ತಿಗಳು ಮತ್ತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ವಿಚಾರಣೆ ವೇಳೆ ಎಸಿಬಿ ಪರ ವಕೀಲರು, 2016ರಿಂದ 2022ರ ಜೂ.29ರವರೆಗೆ ಒಟ್ಟು 105ಬಿ ರಿಪೋರ್ಚ್‌ ಸಲ್ಲಿಸಲಾಗಿದೆ. 2022ರಲ್ಲಿ ಯಾವುದೇ ‘ಬಿ ವರದಿ’ ಸಲ್ಲಿಸಿಲ್ಲ. 891 ಸಚ್‌ರ್‍ ವಾರಂಟ್‌ ಪಡೆದಿದ್ದು, 28 ಸಚ್‌ರ್‍ ವಾರಂಟ್‌ ಕಾರ್ಯಗತಗೊಳಿಸಲಾಗಿಲ್ಲ ಎಂದು ವಿವರಿಸಿದರು. ವರದಿ ಪರಿಶೀಲಿಸಿದ ನ್ಯಾಯಮೂರ್ತಿಗಳು, 2022ರಲ್ಲಿ ಯಾವೊಂದು ‘ಬಿ ವರದಿ’ ಸಲ್ಲಿಸಿಲ್ಲ ಎಂದು ಎಸಿಬಿ ಹೇಳಿದೆ. ಆದರೆ ಬೆಂಗಳೂರು ಜಿಲ್ಲೆಯಲ್ಲಿ ಎಸಿಬಿ ದಾಖಲಿಸಿದ ನಾಲ್ಕು ಪ್ರಕರಣಗಳಿಗೆ ‘ಬಿ ವರದಿ’ ಸಲ್ಲಿಸಲಾಗಿದೆ ಎಂದು ದಾಖಲೆ ಸಮೇತ ಹೇಳಿದರು. ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಾಲದಲ್ಲಿ ಸಲ್ಲಿಸಿದ ‘ಬಿ ವರದಿ’ಗಳ ಬಗ್ಗೆ ವಿವರ ನೀಡದೆ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂದು ಕಿಡಿಕಾರಿದರು.

 

 DGCA ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಟ್ರಾನ್ಸ್ಜಂಡರ್ ಫೈಲಟ್

ಎಡಿಜಿಪಿಗೆ ಚಾಟಿ: ಇದೇ ವೇಳೆ ಎಡಿಜಿಪಿ ಬಗ್ಗೆ ತಮಗೆ ವೈಯುಕ್ತಿಕ ದ್ವೇಷವಿಲ್ಲ. ಆದರೆ, ಅವರ ಬಗ್ಗೆ ಅನುಮಾನಗಳು ಬರಲು ಕಾರಣಗಳಿವೆ. ಸಾಕಷ್ಟುದಾಖಲೆ ಇದ್ದರೂ ಕೋರ್ಚ್‌ ಸೂಚಿಸುವವರೆಗೂ ಜಿಲ್ಲಾಧಿಕಾರಿಗಳ ವಿರುದ್ಧ ಕೇಸ್‌ ದಾಖಲಿಸಿ ಆರೋಪಿಯಾಗಿ ಮಾಡಿ ಬಂಧಿಸಲಿಲ್ಲ. ಬದಲಾಗಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಅದನ್ನು ರದ್ದು ಕೋರಿ ಜಿಲ್ಲಾಧಿಕಾರಿ ಹೈಕೋರ್ಟ್ ಮೆಟ್ಟಿಲೇರಲು ಎಸಿಬಿ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಅವರ ಪರ ಯಾವುದೇ ಆದೇಶ ನೀಡಲು ಕೋರ್ಚ್‌ ನಿರಾಕರಿಸಿದಾಗ ಎಸಿಬಿ ಅವರನ್ನು ಬಂಧಿಸಿದೆ. ಎಡಿಜಿಪಿ ಅವರು ಜಿಲ್ಲಾಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅಸಮರ್ಥರಾಗಿದ್ದಾರೆ ಎಂದು ನ್ಯಾಯಮೂರ್ತಿಗಳು ನುಡಿದರು.

ಸರ್ಕಾರ ಮತ್ತು ಎಸಿಬಿ ವಿರುದ್ಧ ಅತೃಪ್ತಿ: ಪ್ರಕರಣದ ಎರಡನೇ ಆರೋಪಿ ಜಿಲ್ಲಾಧಿಕಾರಿ ಆಪ್ತ ಸಹಾಯಕ, ಜಿಲ್ಲಾಧಿಕಾರಿ ಕಚೇರಿಯ ನೌಕರನೇ ಅಲ್ಲ ಎಂದು ಸರ್ಕಾರ ಮತ್ತು ಎಸಿಬಿ ಹೇಳಿದೆ. ಆದರೆ, ಮೊದಲನೆ ಆರೋಪಿಯಾದ ಅರ್ಜಿದಾರ (ಉಪ ತಹಶೀಲ್ದಾರ್‌ ಮಹೇಶ್‌) ಎರಡನೇ ಆರೋಪಿ ಜಿಲ್ಲಾಧಿಕಾರಿ ಕಚೇರಿಯ ಅಪೀಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾರೆ. ಖುದ್ದು ಎರಡನೇ ಆರೋಪಿ ಸಹ ಇದನ್ನು ಒಪ್ಪಿಕೊಂಡಿದ್ದಾನೆ. ಖಾಸಗಿ ವ್ಯಕ್ತಿ ಹೇಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios