DGCA ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಟ್ರಾನ್ಸ್ಜಂಡರ್ ಫೈಲಟ್
ಕಾಲ ಎಷ್ಟೇ ಮುಂದುವರಿದರು ಸಮಾಜದಲ್ಲಿ ಮಂಗಳಮುಖಿಯರ ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅವರನ್ನು ಇನ್ನೂ ಕೀಳಾಗಿಯೇ ಸಮಾಜದಲ್ಲಿ ಕಾಣಲಾಗುತ್ತದೆ. ಸಮಾಜದಲ್ಲಿ ಎಷ್ಟೇ ಸಾಧನೆ ಮಾಡಿದರೂ ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟೇ ಎಂಬಂತೆ ಕೊಂಕಿನಿಂದಲೇ ನೋಡಲಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಕೇರಳದ ಟ್ರಾನ್ಸ್ ಜಂಡರ್ ಪೈಲಟ್ ಆದಂ ಹ್ಯಾರಿ ಅವರ ಬದುಕು.
ಹ್ಯಾರಿ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಟ್ರೈನಿ ಪೈಲಟ್. ಆದರೆ ಅವರು ಕೂಡ ಟ್ರಾನ್ಸ್ ಫೋಬಿಯಾಕ್ಕೆ ಬಲಿಯಾಗುತ್ತಿದ್ದಾರೆ. ಬಾಲ್ಯದಿಂದಲೂ ಪೈಲಟ್ ಆಗುವ ಕನಸು ಕಂಡಿದ್ದ ಕೇರಳದ ಪ್ರಸ್ತುತ 23 ವರ್ಷದ ಆಡಮ್ ಹ್ಯಾರಿ ಪೈಲಟ್ ಆಗಲು ಸ್ಕೈಲಾರ್ಕ್ ಏವಿಯೇಷನ್ ಅಕಾಡೆಮಿಯಲ್ಲಿ (Skylark Aviation Academy ) ತರಬೇತಿ ಪಡೆಯಲು 2016 ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಿದರು. ಆದಾಗ್ಯೂ, ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ತಾನು ಟ್ರಾನ್ಸ್ಜಂಡರ್ ಎಂದು ಹೇಳಿಕೊಂಡಾಗ ಅವರ ಪೋಷಕರು ಆರ್ಥಿಕವಾಗಿ ಅವರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದರು. ಹೀಗಾಗಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಜೋಹಾನ್ಸ್‌ಬರ್ಗ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರು, ಆದರೆ ಬೆಂಬಲದ ಕೊರತೆಯಿಂದಾಗಿ ಅವರು ತವರಿಗೆ ಮರಳಬೇಕಾಯಿತು.
2020 ರಲ್ಲಿ ಅದೇ ಲಿಂಗದಡಿ ತರಬೇತಿ ಪಡೆಯಲು ಮತ್ತು ವಾಣಿಜ್ಯ ಪೈಲಟ್ ಆಗಲು ಕೇರಳ ಸರ್ಕಾರದ ಬೆಂಬಲವನ್ನು ಪಡೆದರು. ಕೋರ್ಸ್‌ಗೆ ಸೇರಲು ಅವರು 2020 ರಲ್ಲಿ ವೈದ್ಯಕೀಯ ಪರೀಕ್ಷೆಯನ್ನು ತೆಗೆದುಕೊಂಡರು. ಆದರೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅವರಿಗೆ ಅನುಮತಿ ನಿರಾಕರಿಸಿತು. ನಾನು ಟ್ರಾನ್ಸ್‌ಜಂಡರ್ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ನನ್ನ ಪೋಷಕರು ನನ್ನನ್ನು ನಿಂದಿಸಲಾರಂಭಿಸಿದರು. ಪರಿವರ್ತನೆ ಚಿಕಿತ್ಸೆಗೆ ಒತ್ತಾಯಿಸಿದರು. ಅಲ್ಲದೇ ನನ್ನನ್ನು ತುಂಬಾ ಸಮಯದವರೆಗೆ ಕೋಣೆಯೊಳಗೆ ಬೀಗ ಹಾಕಿ ಬಂಧಿಸಿಡಲಾಗಿತ್ತು. ಅಂತಿಮವಾಗಿ, ನಾನು 2019 ರಲ್ಲಿ ನನ್ನ ಮನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಆದೆ ಎಂದು ಹ್ಯಾರಿ ಮಾಧ್ಯಮಗಳಿಗೆ ತಾವು ಪಟ್ಟ ಪಾಡನ್ನು ಹೇಳಿಕೊಂಡಿದ್ದಾರೆ.
ಬೆಂಗಳೂರು: ಮಂಗಳಮುಖಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್
ಇದಾದ ಬಳಿಕ ಬದುಕು ಸಾಗಿಸಲು ಅವರು ಕೇರಳದ ಎರ್ನಾಕುಲಂನಲ್ಲಿ, ವಿವಿಧ ಉದ್ಯೋಗಗಳನ್ನು ಮಾಡಲು ಆರಂಭಿಸಿದರು. ಆಹಾರ ವಿತರಣೆಯಿಂದ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರೆಗೆ ಬದುಕು ನಿಭಾಯಿಸಲು ಹಲವು ಕೆಲಸಗಳನ್ನು ಅವರು ಮಾಡಿದ್ದಾರೆ. ಈ ಮಧ್ಯೆ ಮಾಧ್ಯಮವೊಂದರ ಪತ್ರಕರ್ತರನ್ನು ಅವರು ಭೇಟಿಯಾಗಿದ್ದು, ಇವರ ಈ ಕತೆವ್ಯಥೆಯನ್ನು ಅವರು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಸಾಮಾಜಿಕ ನ್ಯಾಯ ಇಲಾಖೆಯನ್ನು ಸಂಪರ್ಕಿಸಲು ಹ್ಯಾರಿಗೆ ನೆರವಾಗಿದ್ದಾರೆ.
ಅವರು ಜ್ಯೂಸ್ ಅಂಗಡಿಯನ್ನು ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆಯ ನೆರವು ಕೇಳಿದಾಗ, ಕೇರಳ ಸರ್ಕಾರವು (Kerala Govt) ರಾಜೀವ್ ಗಾಂಧಿ ಏವಿಯೇಷನ್ ಅಕಾಡಮಿಯಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಕಲ್ಯಾಣ ನಿಧಿಯಡಿಯಲ್ಲಿ ಅವರ ಪೈಲಟ್ ತರಬೇತಿಯನ್ನು ಪಡೆಯಲು ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಿತು. ನಂತರ 2020ರಲ್ಲಿ, ಹ್ಯಾರಿ ಏವಿಯೇಷನ್ ಇನ್ಸ್ಟಿಟ್ಯೂಟ್‌ಗೆ ಸೇರಿದರು . ಆದರೆ ವಿದ್ಯಾರ್ಥಿ ಪೈಲಟ್ ಪರವಾನಗಿಗೆ ಅರ್ಹರಾಗಲು ಕ್ಲಾಸ್ 2 ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಯಿತು. DGCA ಯ ವೈದ್ಯಕೀಯ ಪರೀಕ್ಷೆಯ ಅರ್ಜಿಯಲ್ಲಿ ಲಿಂಗದ ಆಯ್ಕೆ ಇದ್ದು, ಇಲ್ಲಿ ಗಂಡು ಹಾಗೂ ಹೆಣ್ಣು ಲಿಂಗಕ್ಕೆ ಮಾತ್ರ ಅವಕಾಶವಿದೆ. ಹೀಗಾಗಿ ಹ್ಯಾರಿಗೆ ಸ್ತ್ರೀ ಲಿಂಗವನ್ನು ಆಯ್ಕೆ ಮಾಡುವಂತೆ ಕೇಳಲಾಯಿತು.
ಕೇವಲ ಎರಡು ಆಯ್ಕೆಗಳು ಮಾತ್ರ ಇವೆ ಎಂದು ನನಗೆ ಹೇಳಿದರು. ತೃತೀಯಲಿಂಗಿ (transgender) ಎಂದು ಪರೀಕ್ಷೆಯನ್ನು ನೀಡಲು ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ. ಹೀಗಾಗಿ ನಾನು ಪರೀಕ್ಷೆಯಲ್ಲಿ ತೇರ್ಗಡೆ ಗೊಂಡಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರು ತಿಂಗಳ ಕಾಲ ನನ್ನ ಹಾರ್ಮೋನ್ ಚಿಕಿತ್ಸೆಯನ್ನು ನಿಲ್ಲಿಸಬೇಕಾಯಿತು. ಇದು ನನ್ನನ್ನು ದೈಹಿಕ ಹಾಗೂ ಭಾವನಾತ್ಮಕವಾಗಿ ಬರಿದು ಮಾಡಿತ್ತು. ಇದೆಲ್ಲದರ ಹೊರತಾಗಿ ನನ್ನ ಟೆಸ್ಟೋಸ್ಟೆರಾನ್ ಮಟ್ಟವು ತೀವ್ರವಾಗಿ ಹೆಚ್ಚಾಗಿತ್ತು. ಹೀಗಾಗಿ ನಾನು ಪರೀಕ್ಷೆಯನ್ನು ತೆಗೆದುಕೊಳ್ಳಲಾಗಲಿಲ್ಲ ಎಂದು ಹ್ಯಾರಿ ಹೇಳಿದರು.
ವಿಜಯಪುರದಲ್ಲೊಂದು ವಿಶಿಷ್ಟ ಆಚರಣೆ: ಮಂಗಳಮುಖಿಯರಿಗೆ ಉಡಿ ತುಂಬಿದ ಹುಲಜಂತಿ ಭಕ್ತರು..!
ಜೆಂಡರ್ ಡಿಸ್ಫೊರಿಯಾ ಮತ್ತು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ಟಿ) ಕಾರಣದಿಂದಾಗಿ ನಾನು ವಿಮಾನ ಚಲಾಯಿಸಲು ಅರ್ಹನಲ್ಲ ಎಂದು ಅವರು ಹೇಳಿದರು. ಅಲ್ಲದೇ ನನಗೆ ಸೈಕೋಮೆಟ್ರಿಕ್ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಲಾಯಿತು. ಆದರೆ ಪೈಲಟ್ ಆಗಲು ಬಯಸುವ ಎಲ್ಲರಿಗೆ ಈ ಪರೀಕ್ಷೆಗಳಿರುವುದಿಲ್ಲ. ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನ ಅಧಿಕಾರಿಗಳು ಟ್ರಾನ್ಸ್‌ಫೋಬಿಕ್ ಆಗಿದ್ದಾರೆ ಎಂದು ಹ್ಯಾರಿ ಬೇಸರ ವ್ಯಕ್ತಪಡಿಸಿದರು.
ಅವರು ನನಗೆ ಪರವಾನಗಿ ನೀಡಿದರೆ, ಅದು ಅನೇಕ ಜನರ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು ಅವರು ನನಗೆ ಹೇಳಿದರು. ಸ್ತ್ರೀ ವರ್ಗದ ಅಡಿಯಲ್ಲಿ ಪರೀಕ್ಷೆಯನ್ನು ತೆರವುಗೊಳಿಸಲು ನಾನು ಹೇಗಾದರೂ ನನ್ನ ಹಾರ್ಮೋನ್ ಚಿಕಿತ್ಸೆಯನ್ನು ತ್ಯಜಿಸಬೇಕಾಗುತ್ತದೆ. ನಾನು ದೇಶದಲ್ಲಿ ಹಾರಲು ಪರವಾನಗಿ ಪಡೆಯದಿದ್ದರೆ ಅದರಿಂದ ಏನು ಪ್ರಯೋಜನ? ನಾನು ಭಾರತದಲ್ಲಿ ಎಂದಿಗೂ ವಿಮಾನವನ್ನು ಹಾರಿಸಿಲ್ಲ. ಆದರೆ ನಾನು ಯುಎಸ್ಎ ಅಥವಾ ದಕ್ಷಿಣ ಆಫ್ರಿಕಾ ಅಥವಾ ಯುಕೆಯಲ್ಲಿ ಹಾರಲು ಅರ್ಹನಾಗಿದ್ದೇನೆ. ಆದರೆ ಏನು ಪ್ರಯೋಜನ? ಉದ್ಯೋಗ ಪಡೆಯುವ ನನ್ನ ಮೂಲಭೂತ ಹಕ್ಕಿನಲ್ಲಿ ನನಗೇಕೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
DGCA ದೇಹಗಳನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಬದಲಿಗೆ, ವ್ಯಕ್ತಿಯ ಅರ್ಹತೆಯನ್ನು ನೋಡಿ. ಇನ್ನೊಬ್ಬರ ವೃತ್ತಿಪರ ಕನಸನ್ನು ಕಸಿದುಕೊಳ್ಳಬೇಡಿ ಎಂದು ಅವರು ಹೇಳಿದರು. ಇದೆಲ್ಲಾ ಆಗಿ ಎರಡು ವರ್ಷಗಳ ನಂತರ, ಇಂದು ತ್ರಿಶೂರ್ ಮೂಲದ ಹ್ಯಾರಿ ಕೇರಳ ಹೈಕೋರ್ಟ್‌ನಲ್ಲಿ ಹಾರ್ಮೋನ್ ಥೆರಪಿಯಿಂದಾಗಿ ತಾನು ಹಾರಲು ಅನರ್ಹ ಎಂದು ಹೇಳಿರುವ DGCA ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.