ರಾಜ್ಯದ 10,110 ಕಿ.ಮೀ ಜಿಲ್ಲಾ ರಸ್ತೆಗಳಿಗೆ ಹೆದ್ದಾರಿ ಭಾಗ್ಯ

ರಾಜ್ಯದ ಗ್ರಾಮೀಣ ಹಾಗೂ ಜಿಲ್ಲಾ ರಸ್ತೆಗಳ ಉನ್ನತ್ತೀಕರಣಕ್ಕೆ ಕೂನೆಗೂ ರಾಜ್ಯ ಸರ್ಕಾರ ಮುಂದಾಗಿದ್ದು, ಸಾವಿರಾರು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡಲಿದೆ

Karnataka Govt To Develop More than 10 thousand KM District Road snr

ವರದಿ : ಕಾಗತಿ ನಾಗರಾಜಪ್ಪ

ಬೆಂಗಳೂರು (ಅ.09):  ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಾಜ್ಯದ ಗ್ರಾಮೀಣ ಹಾಗೂ ಜಿಲ್ಲಾ ರಸ್ತೆಗಳ ಉನ್ನತ್ತೀಕರಣಕ್ಕೆ ಕೂನೆಗೂ ರಾಜ್ಯ ಸರ್ಕಾರ ಮುಂದಾಗಿದ್ದು ಬರೋಬ್ಬರಿ 16,760.00 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ, 10,110 ಕಿ.ಮೀ ಉದ್ದದ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ ಮಹತ್ವಕಾಂಕ್ಷಿ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ರಾಜ್ಯದ ಸವಾಂಗೀಣ ಅಭಿವೃದ್ದಿ ದೃಷ್ಠಿಯಿಂದ ರಸ್ತೆಗಳನ್ನು ಕಾಲಕಾಲಕ್ಕೆ ವಾಹನಗಳ ಸಾಂದ್ರತೆ, ವಾಣಿಜ್ಯ ವ್ಯಾಪಾರ ಮಾರುಕಟ್ಟೆ, ಕೈಗಾರಿಕಾ ಪ್ರದೇಶಗಳ ವಿಸ್ತರಣೆ, ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕೊಂಡಿಯಾಗಿ ರಸ್ತೆಗಳ ಉನ್ನತ್ತೀಕರಣ ಅವಶ್ಯಕವಾಗಿರುವುದನ್ನು ಮನಗಂಡು ಸರ್ಕಾರ ಗ್ರಾಮೀಣ, ಜಿಲ್ಲಾ ರಸ್ತೆಗಳ ಮೇಲ್ದರ್ಜೇಗೇರಿಸಲು ಪಿಆರ್‌ಎಎಂಸಿ ಪ್ರಧಾನ ಇಂಜನಿಯರ್ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು ಈ ಕುರಿತು ಸರ್ಕಾರದ ಅಧಿಕೃತ ಆದೇಶವನ್ನು ಲೋಕೋಪಯೋಗಿ ಇಲಾಖೆ ಸರ್ಕಾರದ ಅಪರ ಕಾರ್ಯದಶಿ ಕೃಷ್ಣಮೂರ್ತಿ ಬಿ.ಕಲಕರ್ಣಿ ಹೊರಡಿಸಿದ್ದಾರೆ.

ಸಚಿವ ಸುಧಾಕರ್ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಭಾರಿ ಅಭಿವೃದ್ಧಿ ಕಾರ್ಯ

ರಸ್ತೆಗಳ ಉತ್ತೀಕರಣಕ್ಕೆ ಮಾನದಂಡವೇನು?

     ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದರೂ ಐಆರ್‌ಸಿ ಮಾನದಂಡಗಳನ್ವಯ ನಿರ್ವಹಣೆ ಮಾಡಿದಿರುವುದರಿಂದ ಆಗಾಗ್ಗೆ ದುರಸ್ಥಿಗೆ ಒಳಪಡಿಸುತ್ತಿದ್ದು ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತಿತ್ತು. ಅಲ್ಲದೇ ಡಾ.ನಂಜುಂಡಪ್ಪ ವರದಿ ಆಧಾರಿತ ಅತ್ಯಂತ ಹಿಂದುಳಿದ , ಅತಿ ಹಿಂದುಳೀದ ತಾಲೂಕುಗಳಲ್ಲಿ ರಸ್ತೆ ಜಾಲ ವಿಸ್ತರಿಸುವುದು, ರಸ್ತೆಗಳ ಕಾಲ ವಿಸ್ತರಿಸಿ ಉನ್ನತ್ತೀಕರಿಸುವ ಮೂಲಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳ ಅಭಿವೃದ್ದಿಗೆ ಪೂರಕವಾಗಿ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಮಾದರಿಯಲ್ಲಿ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಅದೇ ಪ್ರಮಾಣದಲ್ಲಿ ಉನ್ನತ್ತೀಕರಿಸಬೇಕೆಂಬ ರಾಜ್ಯದ ಅನೇಕ ಶಾಸಕರ, ಸಚಿವರ ಒತ್ತಾಯದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ 15,510 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೆ, 9,601 ಕಿ,ಮೀ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿ ರಸ್ತೆಗಳಾಗಿ ಉನ್ನತ್ತೀಕರಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಮೀರಿ ಒಟ್ಟು 26,870 ಕಿ.ಮೀ ಉದ್ದದ ರಸ್ತೆಗಳ ಮೇಲ್ದರ್ಜೇಗೆ ರಾಜ್ಯ ಸರ್ಕಾರ ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಅನುಮೋದನೆ ನೀಡುವ ಮೂಲಕ ರಾಜ್ಯ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ದಿಗೆ ಕಡೆಗೆ ಮಹತ್ವದ ಹೆಜ್ಜೆ ಇರಿಸಿದೆ.

ನಡುರಸ್ತೆಯಲ್ಲಿ 36 ಲಕ್ಷ ರೂ ನಗದು; ನೋಡಿದ ಜನರು ಮಾಡಿದ್ದೇನು ಗೊತ್ತಾ?
 
ರಾಜ್ಯದ  ಪ್ರಸ್ತುತ ರಸ್ತೆ ಮಾರ್ಗಗಳ ಕಿ.ಮೀ ಲೆಕ್ಕಾಚಾರ

  ರಾಜ್ಯದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದ ಉದ್ದಗಲಕ್ಕೂ 7,252 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ, 19,500 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ, 49,603 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಸುಮಾರು 1,93,081 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳು ರಾಜ್ಯದೊಳಗೆ ಇದ್ದು ಪ್ರಮುಖ ವಾಣಿಜ್ಯ ಕೇಂದ್ರ, ಪ್ರವಾಸಿ ತಾಣ, ಮಾರುಕಟ್ಟೆಗಳಿಗೆ ಸಂಪರ್ಕ ಜಾಲ ಹೊಂದಿವೆ.

 

ಸಿಎಂ, ಡಿಸಿಎಂ ಜಿಲ್ಲೆಗಳಿಗೆ ಸಿಂಹಪಾಲು


ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಿರುವ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲ್ದರ್ಜೆಗೇರಿಸುವ ರಸ್ತೆಗಳಲ್ಲಿ ಸಿಎಂ ಪ್ರತಿನಿಧಿಸುವ ಶಿವಮೊಗ್ಗ, ಡಿಸಿಎಂ ಕಾರಜೋಳ ಪ್ರತಿನಿಧಿಸುವ ಬಾಗಲಕೋಟೆ ಸೇರಿದಂತೆ ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಕಾರವಾರ, ವಿಜಯಪುರ, ಬೀದರ್ ಜಿಲ್ಲೆಗಳು ಸಿಂಹಪಾಲು ಪಡೆದುಕೊಂಡಿವೆ. 

Latest Videos
Follow Us:
Download App:
  • android
  • ios