ರಾಜ್ಯದ ಪ್ರಪ್ರಥಮ ವಿಧಾನಸಭಾ ಶಾಸಕರ ಕುಟುಂಬಕ್ಕೆ ತುತ್ತು ಅನ್ನಕ್ಕೂ ಗತಿಯಿಲ್ಲ: ಸರಳ್ಳತನಕ್ಕಿಳಿದ ಮೊಮ್ಮಗ

ಒಮ್ಮೆ ಶಾಸಕನಾದರೆ ಸಾಕು ಹತ್ತಾರು ತಲೆಮಾರಿಗೆ ಆಸ್ತಿ ಮಾಡಿಡುವವರ ನಡುವೆ ರಾಜ್ಯದ ಪ್ರಪ್ರಥಮ ವಿಧಾನಸಭಾ ಶಾಸಕರ ಮೊಮ್ಮಗ ತುತ್ತು ಅನ್ನಕ್ಕೂ ಪರದಾಡುತ್ತಾ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

Karnataka Ex Mla TG Thimmegowda Grand son Abhi was Chain Snatching at Bengaluru sat

ಬೆಂಗಳೂರು (ಡಿ.07): ಒಮ್ಮೆ ಶಾಸಕನಾದರೆ ಸಾಕು ಹತ್ತಾರು ತಲೆಮಾರಿಗೆ ಆಸ್ತಿ ಮಾಡಿಡುವವರ ನಡುವೆ ರಾಜ್ಯದ ಪ್ರಪ್ರಥಮ ವಿಧಾನಸಭಾ ಶಾಸಕರ ಮೊಮ್ಮಗ ತುತ್ತು ಅನ್ನಕ್ಕೂ ಪರದಾಡುತ್ತಾ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಹೌದು, ಒಮ್ಮೆ ರಾಜಕಾರಣದಲ್ಲಿ ಶಾಸಕನಾದರೆ ಕೋಟಿ ಕೋಟಿ ಹಣವನ್ನು ಗಳಿಸಿ ಹತ್ತಾರು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನು ಮಾಡಿಕೊಳ್ಳುತ್ತಾರೆ. ಆದರೆ, ರಾಜ್ಯದ ಪ್ರಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಟಿ.ಜಿ.ತಿಮ್ಮೇಗೌಡ ಅವರ ಮೊಮ್ಮಗನಿಗೆ ಈಗ ತಿನ್ನಲೂ ಆಹಾರವಿಲ್ಲದೆ ಸರಗಳ್ಳತನಕ್ಕೆ ಮುಂದಾಗಿದ್ದಾನೆ. ಬೆಂಗಳೂರಿನಲ್ಲಿ ಸರಗಳ್ಳತನ ಮಾಡಿ ಪೊಲೀಸರಿಗೆ ಬಂಧಿಯಾಗಿದ್ದು, ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾನೆ.

ರಾಜಕಾರಣ ಎಂದರೆ ಸಮಾಜ ಸೇವಾ ಮನೋಭಾವನೆ ಎಂಬ ಉದ್ದೇಶದಿಂದಲೇ ಬರುವ ಕಾಲವೊಂದಿತ್ತು. ಆಗ ರಾಜಕಾರಣ ಮಾಡುತ್ತಾರೆಂದರೆ ಅವರನ್ನು ಊರಿಗೆ ಉಪಕಾರಿ ಮನೆಗೆ ಮಾರಿ ಎಂದು ಕರೆಯುತ್ತಿದ್ದುದೂ ಉಂಟು. ಅದೇ ರೀತಿ ತಿಪಟೂರು ತಾಲೂಕಿಗೆ ಉಪಕಾರಿ ಆಗಿದ್ದ ಟಿ.ಟಿ. ತಿಮ್ಮೇಗೌಡರು ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಯಾವ ಆಸ್ತಿಯನ್ನೂ ಮಾಡಲಿಲ್ಲ. ಆದ್ದರಿಂದ ತಿಮ್ಮೇಗೌಡರ ತರುವಾಯ ಅವರ ಕುಟುಂಬಸ್ಥರು ರಾಜಕಾರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಂಪೂರ್ಣವಾಗಿ ರಾಜಕೀಯದಿಂದ ದೂರ ಸರಿಯಲಾಗುತ್ತು. ಆದರೆ, ಬರ ಬರುತ್ತಾ ಕುಟುಂಬ ಬೆಳೆದಂತೆ ಆಸ್ತಿ ವಿಭಜನೆಯಾಗಿದ್ದು, ಕೆಲವರು ಆಸ್ತಿಯನ್ನು ಕೂಡ ಮಾರಾಟ ಮಾಡಿಕೊಂಡಿದ್ದಾರೆ. ಆದರೆ, ಈಗ ಮಾಜಿ ಶಾಸಕರ ಕುಟುಂಬಸ್ಥರಾದ ನಮಗೆ ತಿನ್ನಲು ಆಹಾರಕ್ಕೂ ಗತಿಯಿಲ್ಲ ಎಂದು ಸರಗಳ್ಳತನ ಮಾಡಿ ಸಿಕ್ಕಿಬಿದ್ದಿರುವ ಮೊಮ್ಮಗ ಅಭಿ ಹೇಳಿಕೊಂಡಿದ್ದಾನೆ.

ನನಗೆ ಅವಕಾಶ ಕೊಟ್ರೆ ಸಾವರ್ಕರ್ ಫೋಟೋವನ್ನು ಇವತ್ತೇ ತೆಗೀತೀನಿ: ಪ್ರಿಯಾಂಕ ಖರ್ಗೆ

ಬೆಂಗಳೂರಿನಲ್ಲಿ ಸರಗಳ್ಳತನ ಮಾಡ್ತಿದ್ದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಇದರಲ್ಲಿ ತಿಪಟೂರಿನ ಕಾಂಗ್ರೆಸ್‌ ಮಾಜಿ ಶಾಸಕ ತಿಮ್ಮೇಗೌಡರ ಮೊಮ್ಮಗ ಅಭಿ ಸೇರಿದಂತೆ ಮೂವರು ಆರೋಪಿಗಳ ಬಂಧನವಾಗಿದೆ. ಸೋಲದೇವನಹಳ್ಳಿ ಪೊಲೀಸರಿಂದ ಅಭಿ,ರಾಕೇಶ್,ಸಲ್ಮಾನ್ ಬಂಧನ ಆಗಿದೆ. ಬೆಂಗಳೂರಿನ 4 ವಿವಿಧ ಪೊಲೀಸ್ ಠಾಣೆಗಳ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸರಗಳ್ಳತನಕ್ಕೆ ಬೈಕ್ ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕೃತ್ಯ ಮಾಡುತ್ತಿದ್ದರು. ಆರೋಪಿಗಳ ಚಲನವಲನ ದೃಶ್ಯ ಏರಿಯಾದ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಈಗ ಸಿಸಿ ಕ್ಯಾಮಾರ ದೃಶ್ಯಾವಳಿ ಲಭ್ಯವಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಮಾಜಿ ಶಾಸಕರ ಕುಟುಂಬದ ಬಡತನದ ಬಗ್ಗೆ ಬಹಿರಂಗ ಆಗಿದೆ.

ಮಾಜಿ ಶಾಸಕ ಟಿ.ಜಿ. ತಿಮ್ಮೇಗೌಡ ಅವರು 2015ರಲ್ಲಿಯೇ ನಿಧನರಾಗಿದ್ದಾರೆ. ದೇಶದ ಸ್ವಾತಂತ್ರ್ಯಾ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನಸಭೆಯ ತಿಪಟೂರು ತಾಲ್ಲೂಕಿನ ಪ್ರಥಮ ಶಾಸಕರಾಗಿದ್ದರು. 1947ರಲ್ಲಿ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ 1952ರ ವರೆಗೂ ಸೇವೆ ಸಲ್ಲಿಸಿದ್ದರು. ನಂತರ 1952ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದರು.

ಸಿಎಂ ಸಿದ್ದರಾಮಯ್ಯ ಒಂದು ಸಮುದಾಯದ ಓಲೈಕೆ ಸರಿಯಲ್ಲ: ಯಡಿಯೂರಪ್ಪ

ಇನ್ನು ರಾಜ್ಯದ ವಿಧಾನಸಭೆಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ನಡೆದಿದ್ದ ಸಂಭ್ರಮ ಸಮಾರಂಭದಲ್ಲಿ ಮಾಜಿ ಶಾಸಕ ತಿಮ್ಮೇಗೌಡ ಅವರನ್ನೂ ಗೌರವಿಸಲಾಗಿತ್ತು. ಅಂದಿನ ಸನ್ಮಾನಿತರ ಪೈಕಿ ಜೀವಂತವಾಗಿದ್ದ ಮೂವರು ಮಾಜಿ ಶಾಸಕರಲ್ಲಿ ಇವರೂ ಒಬ್ಬರಾಗಿದ್ದರು. ಆದರೆ, ಈಗ ಅವರ ಕುಟುಂಬಕ್ಕೆ ಇಂತಹ ಕಷ್ಟ ಬಂದಿದೆ ಎನ್ನುವುದು ಮರುಕ ಪಡುವಂತಾಗಿದೆ. ಆದರೆ, ಅಪರಾಧ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯವೇ ಇಲ್ಲ.

Latest Videos
Follow Us:
Download App:
  • android
  • ios