ನನಗೆ ಅವಕಾಶ ಕೊಟ್ರೆ ಸಾವರ್ಕರ್ ಫೋಟೋವನ್ನು ಇವತ್ತೇ ತೆಗೀತೀನಿ: ಪ್ರಿಯಾಂಕ ಖರ್ಗೆ
ನನಗೆ ಈಗಲೂ ಅವಕಾಶ ಸಿಕ್ಕಿದರೆ ಬೆಳಗಾವಿ ವಿಧಾನಸೌಧದಲ್ಲಿರುವ ಸಾವರ್ಕರ್ ಫೊಟೋವನ್ನು ತೆಗೆದು ಹಾಕುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಡಿ.07): ಬೆಳಗಾವಿಯ ಸುವರ್ಣ ಸೌಧದಲ್ಲಿ ಅಳವಡಿಕೆ ಮಾಡಲಾಗಿರುವ ಸಾವರ್ಕರ್ ಫೋಟೋವನ್ನು ತೆಗೆದು ಹಾಕಿದರೆ ಸೂಕ್ತ. ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ ಕಾಣುವುದಿಲ್ಲವೋ ಅದನ್ನು ನಾನು ಒಪ್ಪುವುದಿಲ್ಲ. ನನ್ನನ್ನು ಬಿಟ್ಟರೆ ಇವತ್ತೇ ನಾನು ಸುವರ್ಣ ಸೌಧದಲ್ಲಿರುವ ಸಾವರ್ಕರ್ ಫೋಟೋ ತೆಗೆದು ಹಾಕುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆಯುವುದು ಸೂಕ್ತವೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವ ತತ್ವ ಸಿದ್ಧಾಂತದಲ್ಲಿ ಸಮಾನತೆ ಕಾಣಲ್ಲ ಅದನ್ನ ನಾನು ಒಪ್ಪಲ್ಲ.ಯಾವ ತತ್ವ ಸಿದ್ಧಾಂತದ ಪ್ರೇರಿತವಾಗಿ ಗಾಂಧೀಜಿ ಹತ್ಯೆಯಾಗಿದೆ ಅದನ್ನ ಒಪ್ಪಲ್ಲ. 'ನನ್ನ ಬಿಟ್ರೆ ಇವತ್ತೆ ತೆಗೀತೀನಿ'. ನಿಯಮಾನುಸಾರವಾಗಿ ಮಾಡಬೇಕು. ಸ್ಪೀಕರ್ ಅವರ ನಿರ್ಧಾರ ನೋಡೊಣ. ನಾನು ಸಂವಿಧಾನ ನಂಬಿರೋ ವ್ಯಕ್ತಿ ಎಂದು ಹೇಳಿದರು.
ತನ್ವೀರ್ ಪೀರಾಗೆ ಐಸಿಎಸ್ ಲಿಂಕ್: ಯತ್ನಾಳ್‌ಗೆ ತಲೆ ಕಟ್ಟಿದೆ, ರೌಡಿಶೀಟರ್ ಕೇಸ್ ಹಾಕಿ, ಮುಸ್ಲಿಂ ನಾಯಕರ ಆಕ್ರೋಶ
ಕಳೆದ ಬಾರಿ ಸಾವರ್ಕರ್ ಫೋಟೋ ಹಾಕಿದಾಗ ಬಿಜೆಪಿಯವರಿಗೆ ಪ್ರಶ್ನೆ ಕೇಳಿದ್ದೆ ಇದುವರೆಗೂ ಅವರು ಉತ್ತರ ಕೊಟ್ಟಿಲ್ಲ. ವೀರ್ ಸಾವರ್ಕರ್ ಹೆಸರಿಗೆ ವೀರ್ ಹೇಗೆ ಬಂತು? ಬ್ರಿಟೀಷರ ಬಳಿ ಸಾವರ್ಕರ್ ಪಿಂಚಣಿ ಪಡೆಯುತ್ತಿರಲಿಲ್ವಾ? ಅವರ ಮನೆಯವರು ಕ್ಷಮಾಪಣೆ ಅರ್ಜಿ ಹಾಕಿದ್ರಾ ಇಲ್ಲವಾ? ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಮಾಡಿದ್ರು, ಅದಕ್ಕೆ ನೊಂದಣಿ ಮಾಡಿಕೊಳ್ಳಲು ಸೇರಿದ್ರಾ ಇಲ್ಲವಾ ಸಾವರ್ಕರ್ ಅವರಿಗೆ ಗೋ ಮಾತಾ ಅಭಿಪ್ರಾಯ ಏನಿತ್ತು? ನಾನು ಅವರ ಐಡಿಯಾಲಜಿ ವಿರುದ್ಧ ಇದ್ದೇನೆ. ಅವರ ತತ್ವದ ಮೇಲೆ ನನಗೆ ನಂಬಿಕೆ ಇಲ್ಲ. ಅವರ ಫೋಟೋ ತೆಗೆಯೋ ಬಗ್ಗೆ ಸಿಎಂ ಗೂ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಸಾವರ್ಕರ್ ಫೋಟೋ ತೆಗೆದು, ನೆಹರು ಫೋಟೋ ಹಾಕ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ.. ಹೌದು ನೆಹರೂ ಅವರ ಫೊಟೋ ಹಾಕಲೇಬೇಕು. ಅವರು 3,000 ದಿನ ಜೈಲಲ್ಲಿ ಇದ್ದವರು. ದೇಶದ ಮೊದಲ ಪ್ರಧಾನಿ ಆಗಿದ್ದಾರೆ. 16 ವರ್ಷ ದೇಶವನ್ನ ಆಳಿದ್ದಾರೆ. ನಾವು ಆರ್ಥಿಕವಾಗಿ ಸದೃಢವಾಗಿದ್ದೇವೆ ಅಂತ ಹೇಳ್ತಿದ್ದಾರಲ್ಲ. ಮೋದಿ ವಿಶ್ವಗುರು ಅಂತ ಹೇಳ್ತಿದ್ದಾರಲ್ಲ. ಅದಕ್ಕೆ ಅಡಿಪಾಯ ಹಾಕಿದ್ದೇ ನೆಹರು. ದೇಶದಲ್ಲಿರುವ ಎನ್‌ಐಎಲ್, ಐಐಟಿ, ಐಐಎಂ, ಇಸ್ರೋ ಎಲ್ಲವನ್ನೂ ಸ್ಥಾಪಿಸಿದ್ದೇ ನೆಹರು. ಚಂದ್ರಯಾನ, ಸೂರ್ಯಯಾನ ಅಂತ ಬೆನ್ನು ತಟ್ಟಿಕೊಂಡು ಓಡಾಡ್ತಿದ್ದಾರಲ್ಲಾ? ಇಸ್ರೋ ಸ್ಥಾಪಿಸಿದ್ದು ಯಾರು? ಹೀಗಾಗಿ, ನೆಹರು ಅವರ ಫೊಟೋ ಹಾಕಲೇಬೇಕು ಎಂದು ಹೇಳಿದರು.
ಊಟಕ್ಕೆ ಮೊದಲು ರಫ್ ಅಂತ ಬಾರಿಸ್ತಿದ್ದ ಹೊಟೇಲ್: ಗ್ರಾಹಕರಿಗೆ ನೀಡ್ತಿತ್ತು ಏಟಿಗೂ ಬಿಲ್: ಈಗ ಬಂದ್
ನಮ್ಮ ಮುಂದೆ ಪ್ರಸ್ತಾವನೆ ಬಂದಿಲ್ಲ:
ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದುಹಾಕುವಂತಹ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಪ್ರಸ್ತಾಪವನೆ ಬಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಸಂಖ್ಯೆ ಬಲ ಬಂದಿದೆ ಸಾವರ್ಕರ್ ಫೋಟೋ ತಗೆಯುತ್ತವೆ ಎಂದಿರುವ ಪ್ರಿಯಾಂಕ್ ಖರ್ಗೆ ಹೇಳಿರಬಹುದು. ನನಗೆ ಮಂತ್ರಿಗಳು ಒಂದೇ ವಿಪಕ್ಷದವರು ಒಂದೇ. ಅವರ ಅವರ ವ್ಯಯಕ್ತಿಕವಾಗಿ ಹೇಳಿಕೆ ನಿಡಲಿಕ್ಕೆ ಸ್ವತಂತ್ರ ಇದೆ. ಆದರೆ ನಮ್ಮ ಮುಂದೆ ಪ್ರಸ್ತಾಪವಾನೆ ಬಂದಾಗ ತಿರ್ಮಾನ ಮಾಡುತ್ತೇವೆ.
- ಯು.ಟಿ. ಖಾದರ್, ವಿಧಾನಸಭಾ ಸ್ಪೀಕರ್