Asianet Suvarna News Asianet Suvarna News

ಸಿಎಂ ಮಹತ್ವದ ಸಭೆ: 5 ಹಂತದಲ್ಲಿ ರಾಜ್ಯ ಅನ್‌ಲಾಕ್‌ ಸಾಧ್ಯತೆ!

* ಇಂದು ಸಿಎಂ ಮಹತ್ವದ ಸಭೆ, 5 ಹಂತದಲ್ಲಿ ರಾಜ್ಯ

* ಪಾಸಿಟಿವಿಟಿ ಶೇ.5ಕ್ಕಿಂತ ಕಮ್ಮಿ ಇದ್ದ ಜಿಲ್ಲೆ ಈಗ ಅನ್‌ಲಾಕ್‌

* ಉಳಿದ ಜಿಲ್ಲೆಗಳಲ್ಲಿ ಜೂ.20ರವರೆಗೆ ಲಾಕ್ಡೌನ್‌ ವಿಸ್ತರಣೆ?

Karnataka CM to discuss future of lockdown restrictions on thursday pod
Author
Bangalore, First Published Jun 10, 2021, 7:47 AM IST

ಬೆಂಗಳೂರು(ಜೂ.10): ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಮುಖ ಆಗುತ್ತಿದ್ದಂತೆ ಲಾಕ್‌ಡೌನ್‌ ಸಡಿಲಿಸಲು ಸಿದ್ಧತೆ ಆರಂಭವಾಗಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳನ್ನು ಪರಿಗಣಿಸಿ 4-5 ಹಂತಗಳಲ್ಲಿ ಜಿಲ್ಲಾವಾರು ಅನ್‌ಲಾಕ್‌ ಮಾಡಲು ಚಿಂತನೆ ನಡೆದಿದೆ. ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೂ ಅವಕಾಶ ನೀಡುವ ಬದಲು ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಆಗುವ ಸಾಧ್ಯತೆ ಇದೆ. ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಈ ಬಗ್ಗೆ ಸುಳಿವು ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆಯಲಿದ್ದು ಯಾವ ರೀತಿಯಲ್ಲಿ ಅನ್‌ಲಾಕ್‌ ಮಾಡಬೇಕು ಎಂಬ ಬಗ್ಗೆ ಅಂತಿಮ ರೂಪುರೇಷೆ ಸಿದ್ಧವಾಗುವ ಸಾಧ್ಯತೆ ಇದೆ.

ಜೂ.12ರ ವೇಳೆಗೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಜೂ.14ರಿಂದ ಅನ್‌ಲಾಕ್‌ ಆಗುವ ಸಾಧ್ಯತೆಯಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್‌ ಮತ್ತೊಂದು ವಾರ (ಜೂ.20) ವಿಸ್ತರಣೆಯಾಗಬಹುದು. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದಂತೆ ಅಂತಹ ಜಿಲ್ಲೆಗಳನ್ನು ಮುಂದಿನ ಹಂತದಲ್ಲಿ ಅನ್‌ಲಾಕ್‌ ಮಾಡಲಾಗುವುದು. ಮುಂದಿನ ಎರಡು ವಾರದೊಳಗೆ 4-5 ಹಂತಗಳಲ್ಲಿ ಎಲ್ಲಾ ಜಿಲ್ಲೆಗಳೂ ಅನ್‌ಲಾಕ್‌ ಆಗಲಿವೆ ಎಂದು ಮೂಲಗಳು ತಿಳಿಸಿವೆ.

ಅನ್‌ಲಾಕ್ ಹೇಗೆ ಮಾಡಲಾಗುತ್ತದೆ?

5 ಹಂತದಲ್ಲಿ ಸಡಿಲಿಕೆ?:

ಈ ವೇಳೆ, ಮೊದಲ ಹಂತದಲ್ಲಿ ಅನ್‌ಲಾಕ್‌ ಮಾಡುವ ಜಿಲ್ಲೆಗಳಲ್ಲಿ ಮೊದಲು ವಾಣಿಜ್ಯ ಹಾಗೂ ಉದ್ಯೋಗ ಅವಕಾಶಗಳ ಚಟುವಟಿಕೆಗೆ ಮಾತ್ರ ಸಂಪೂರ್ಣ ಅನುಮತಿ ನೀಡಲಾಗುವುದು. ಮದುವೆ-ಮುಂಜಿ, ಹುಟ್ಟುಹಬ್ಬದಂತಹ ಕಾರ್ಯಕ್ರಮಗಳಿಗೆ ಸ್ವಲ್ಪ ಮಟ್ಟಿಗೆ ಮಾತ್ರ ಸಡಿಲಗೊಳಿಸಲಾಗುವುದು. ಉತ್ಸವ, ಜಾತ್ರೆ, ರಾಜಕೀಯ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧ ಇರಲಿದ್ದು, ಇವು ಹಂತ ಹಂತವಾಗಿ ಸಡಿಲಿಕೆ ಆಗಲಿವೆ. ಉಳಿದಂತೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಜೂ.20ರವರೆಗೆ ಲಾಕ್ಡೌನ್‌ ವಿಸ್ತರಣೆಯಾಗಲಿದೆ. ಜತೆಗೆ ಸೋಂಕು ನಿಯಂತ್ರಣ ಸಂಬಂಧ ಮತ್ತಷ್ಟುಕಠಿಣ ನಿರ್ಬಂಧಗಳನ್ನು ಕೈಗೊಳ್ಳಲಿದ್ದು, ಸೋಂಕು ಹೆಚ್ಚಿರುವ ಜಿಲ್ಲೆಗಳಿಂದ ಸಂಚಾರವನ್ನೂ ನಿರ್ಬಂಧಿಸಬೇಕು ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

"

ಬೆಂಗಳೂರಿನಲ್ಲಿ ಪಾಸಿಟಿವಿಟಿ ಕಡಿಮೆಯಾಗಿದ್ದರೂ ಸಾವು ಹೆಚ್ಚಿರುವುದರಿಂದ ಸಂಪೂರ್ಣ ಅನ್‌ಲಾಕ್‌ ಮಾಡುವ ಬದಲು ಹಂತ-ಹಂತವಾಗಿ ಅನ್‌ಲಾಕ್‌ ಮಾಡುವ ಸಾಧ್ಯತೆ ಇದೆ. ದಿನಸಿ, ತರಕಾರಿ, ಮದ್ಯದಂಗಡಿಗಳಿಗೆ ಬೆಳಗ್ಗೆ 10 ಗಂಟೆವರೆಗೆ ಇರುವ ಅನುಮತಿಯನ್ನು ಮಧ್ಯಾಹ್ನ 1 ಗಂಟೆವರೆಗೆ ವಿಸ್ತರಣೆ, ಉದ್ಯಾನಗಳಲ್ಲಿ ಬೆಳಗಿನ ನಡಿಗೆಗೆ ಅನುಮತಿ ಸೇರಿದಂತೆ ಕೆಲವು ಸಡಿಲಿಕೆಗಳು ಆಗುವ ಸಾಧ್ಯತೆ ಇದೆ. ಈ ಬಗ್ಗೆ ಪಾಲಿಕೆಯ ಮುಖ್ಯ ಆಯುಕ್ತರು ಅನ್‌ಲಾಕ್‌ ನೀಲನಕ್ಷೆ ಸಿದ್ಧಪಡಿಸಿದ್ದು, ಗುರುವಾರ ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಮ್ಮೆಲೆ ಎಲ್ಲ ಚಟುವಟಿಕೆಗೆ ಅವಕಾಶ ನೀಡಲು ಅಸಾಧ್ಯ
ಏಕಾಏಕಿ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಸೋಂಕು ಹೆಚ್ಚಬಹುದು. ಹಾಗಾಗಿ, ಕೆಲವು ಚಟುವಟಿಕೆಗಳಿಗೆ ನಿರ್ಬಂಧ, ಇನ್ನು ಕೆಲವಕ್ಕೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು. ಅವರು ಎಲ್ಲರೊಂದಿಗೆ ಚರ್ಚಿಸಿ ಅನ್‌ಲಾಕ್‌ ಬಗ್ಗೆ ತೀರ್ಮಾನಿಸುತ್ತಾರೆ. ಪಾಸಿಟಿವಿಟಿ ಶೇ.5ಕ್ಕಿಂತ ಕಡಿಮೆ, 5000ಕ್ಕಿಂತ ಕಡಿಮೆ ಪ್ರಕರಣ ಇದ್ದ ಕಡೆ ಅನ್‌ಲಾಕ್‌ ಮಾಡಬಹುದು ಎಂಬ ಅಭಿಪ್ರಾಯ ಇದೆ.

- ಡಾ| ಕೆ.ಸುಧಾಕರ್‌, ಆರೋಗ್ಯ ಸಚಿವ

ಬೆಂಗಳೂರಲ್ಲಿ 5 ಹಂತದಲ್ಲಿ ಲಾಕ್‌ಡೌನ್‌ ಸಡಿಲಿಕೆ

ಒಮ್ಮೆಲೆ ಸಡಿಲಿಕೆ ಮಾಡಿದರೆ ಸೋಂಕು ಮತ್ತೆ ಉಲ್ಬಣಿಸುವ ಭೀತಿ ಇದೆ. ಹಾಗಾಗಿ, ಬೆಂಗಳೂರಿನಲ್ಲಿ ಸೋಂಕು, ಸಾವು ಇಳಿದಿದ್ದರೂ, ಜೂ.14ರ ಬಳಿಕ 5 ಹಂತದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಸಡಿಲಿಸಬಹುದು. ಹಿರಿಯ ನಾಗರಿಕರಿಗೆ ಪಾರ್ಕ್ನಲ್ಲಿ ವಾಕಿಂಗ್‌ಗೆ ಅವಕಾಶ ನೀಡಬಹುದು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಸೋಂಕು ಹೆಚ್ಚಿದರೆ ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತೇವೆ.

- ಆರ್‌.ಅಶೋಕ್‌, ಕಂದಾಯ ಸಚಿವ

ಸಂಭಾವ್ಯ ಸಡಿಲಿಕೆ: 

- ಮಧ್ಯಾಹ್ನ 1 ಅಥವಾ ಸಂಜೆ 6ರವರೆಗೆ ಅಂಗಡಿಗಳ ಸಮಯ ವಿಸ್ತರಣೆ ಸಾಧ್ಯತೆ

- ಶೇ.30 ಅಥವಾ ಶೇ.50 ರಷ್ಟುಸಿಬ್ಬಂದಿಯೊಂದಿಗೆ ಕಂಪನಿ/ಕೈಗಾರಿಕೆ ಆರಂಭ

- ಆಟೋ, ಟ್ಯಾಕ್ಸಿ ಸೇವೆಗೆ ಷರತ್ತು ಬದ್ಧ ಅನುಮತಿ

- ಶೇ.50ರಷ್ಟುಪ್ರಯಾಣಿಕರೊಂದಿಗೆ ಸಾರ್ವಜನಿಕ ಸಾರಿಗೆ ಸಂಚಾರ

- ಸೆಮಿಲಾಕ್‌ ಡೌನ್‌ ಸಡಿಲಿಕೆಯಾದ ಜಿಲ್ಲೆಗಳಲ್ಲಿ ರಾತ್ರಿ ಕಫä್ರ್ಯ

- ದೇವಾಲಯ, ಮಸೀದಿ, ಚಚ್‌ರ್‍ಗೆ ಷರತ್ತು ಬದ್ಧ ಅನುಮತಿ

- ಶಾಲಾ, ಕಾಲೇಜುಗಳಲ್ಲಿ ಕಚೇರಿ ಕಾರ‍್ಯ, ಅಡ್ಮಿಷನ್‌ಗೆ ಅನುಮತಿ

ಅನ್‌ಲಾಕ್ ಮುನ್ನವೇ ಜನಜಾತ್ರೆ

ಸಂಭಾವ್ಯ ನಿರ್ಬಂಧ

- ಮಾಲ್‌, ಚಿತ್ರಮಂದಿರ, ಜಿಮ್‌, ಮಲ್ಟಿಪೆಕ್ಸ್‌, ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ

- ಜಾತ್ರೆ, ರಥೋತ್ಸವ, ರಾರ‍ಯಲಿ, ರಾಜಕೀಯ ಸಮಾವೇಶಗಳಿಗೆ ನಿಷೇಧ

Follow Us:
Download App:
  • android
  • ios